1. ಇತರೆ

ಪ್ರತಿಯೊಬ್ಬರು ತಯಾರಿಸಬಹುದಾದ ರಾಗಿ ಹಾಲಿನ ಕಿಲ್ಸ

Kalmesh T
Kalmesh T
Millet milk kilsa which can be prepared from Millet

ಮಹಿಳೆಯರು ಕಿರುಧಾನ್ಯಗಳಿಂದ ವಿವಿಧ ತಿನಿಸುಗಳನ್ನು ತಯಾರಿಸಿ ಮಾರುಕಟ್ಟೆಯಲ್ಲಿ ಮಾರಾಟ ಮಾಡುವುದರಿಂದ ಹೆಚ್ಚಿನ ಲಾಭವನ್ನು ಪಡೆಯಬಹುದು. ಕಿರುಧಾನ್ಯಗಳಿಂದ ತಯಾರಿಸಿದ ಆಹಾರ ಪದಾರ್ಥಗಳ ಪೌಷ್ಠಿಕ ಗುಣಮಟ್ಟ ಅಕ್ಕಿ ಮತ್ತು ಗೋಧಿಯಿಂದ ತಯಾರಿಸಿದ ಆಹಾರ ಪದಾರ್ಥಗಳಿಗಿಂತ ಹೆಚ್ಚಾಗಿದೆಯೆಂದೇ ಹೇಳಬಹುದಾಗಿದೆ.

ಫಟಾಪಟ್ ರುಚಿಕರವಾದ ರಾಗಿ ದೋಸೆ ಮಾಡುವ ವಿಧಾನ ಇಲ್ಲಿದೆ

ರಾಗಿ ಹಾಲಿನ ಕಿಲ್ಸ : (Millet Milk Kilsa)

ಬೇಕಾಗುವ ಸಾಮಾಗ್ರಿಗಳು

ಪ್ರಮಾಣ (ಗ್ರಾಂ)

ರಾಗಿ

250

ಬೆಲ್ಲ

300

ಅಕ್ಕಿ

25

ಗೋಧಿ

25

ಏಲಕ್ಕಿ

2

ಗಸಗಸೆ

2 ಚಿಕ್ಕ ಚಮಚ

ಮಾಡುವ ವಿಧಾನ :

ರಾಗಿ, ಅಕ್ಕಿ ಮತ್ತು ಗೋದಿಯನ್ನು ಕಲ್ಲಿಲ್ಲದಂತೆ ಶುಚಿ ಮಾಡಿಕೊಂಡು ಇವೆಲ್ಲವನ್ನು ಒಟ್ಟಿಗೆ ಒಂದು ಪಾತ್ರೆಯಲ್ಲಿ ನೀರು ಹಾಕಿ 6 ರಿಂದ 8 ಗಂಟೆಗಳವರೆಗೆ ನೆನೆಯಲು ಬಿಡಬೇಕು. ನಂತರ ಇವೆಲ್ಲವನ್ನು ನೀರಿನಿಂದ ಬೇರ್ಪಡಿಸಿ ಸ್ವಲ್ಪ, ಸ್ವಲ್ಪವೇ ಮಿಕ್ಸಿಗೆ ಹಾಕಿ ಇಲ್ಲವೇ ಒಳಕಲ್ಲಿನಲ್ಲಿ ಹಾಕಿ ರುಬ್ಬಿಕೊಳ್ಳಬೇಕು.

ನಂತರ ಒಂದು ದೊಡ್ಡ ಪಾತ್ರೆಗೆ ಬಿಳಿ ಬಟ್ಟೆ ಕಟ್ಟಿ ರುಬ್ಬಿಟ್ಟ ಮಿಶ್ರಣವನ್ನು ಶೋಧಿಸಿಕೊಳ್ಳಬೇಕು. ಹಾಲು ತುಂಬಾ ಗಟ್ಟಿ ಇದ್ದರೆ ಸ್ವಲ್ಪ ನೀರು ಸೇರಿಸಬಹುದು.

ಆರೋಗ್ಯಕರ ರಾಗಿ ಮಾಲ್ಟ್ ತಯಾರಿಸುವ ವಿಧಾನ

ಬೆಲ್ಲವನ್ನು ಕಲ್ಲು, ಕಸದಿಂದ ಬೇರ್ಪಡಿಸಲು ಕಾಯಿಸಿ ಅದನ್ನು ಶೋಧಿಸಿಕೊಳ್ಳಬೇಕು. ಹಾಲು ಗಟ್ಟಿಯಾಗುತ್ತಾ ತಳ ಹತ್ತದಂತೆ ನೋಡಿಕೊಳ್ಳಬೇಕು. ಹಾಲು ಗಟ್ಟಿಯಾಗುತ್ತಾ ಗೋಧಿ ಬಣ್ಣಕ್ಕೆ ತಿರುಗುತ್ತದೆ ಮತ್ತು ಮಧ್ಯದಲ್ಲಿ ಗುಳ್ಳೆಗಳೆಳುತ್ತಾ ಗಟ್ಟಿಯಾಗತೊಡಗುತ್ತದೆ.

ನಂತರ ಏಲಕ್ಕಿ ಹಾಕಿ ಕೆಳಗಿಳಿಸಿ ನೀರು ಸವರಿದ ತಟ್ಟೆಗೆ ಹಾಕಿಕೊಂಡು ಅದರ ಮೇಲೆ ಹುರಿದ ಗಸಗಸೆ, ಬೇಕಾದರೆ ಒಣ ಕೊಬ್ಬರಿ ತುರಿ ಹಾಕಿ ಫ್ರೀಜ್‌ನಲ್ಲಿಟ್ಟು ತಿಂದರೆ ತುಂಬಾ ರುಚಿ ಮತ್ತು ಆರೋಗ್ಯಕ್ಕೆ ಒಳ್ಳೆಯದು.

ಲೇಖಕರು : ಡಾ. ಕವಿತಾ ಯು. ಉಳ್ಳಿಕಾಶಿ, ವಿಜ್ಞಾನಿ (ಗೃಹ ವಿಜ್ಞಾನ) ಐ.ಸಿ.ಎ.ಆರ್- ಕೃಷಿ ವಿಜ್ಞಾನ ಕೇಂದ್ರ, ಗಂಗಾವತಿ, ಕೊಪ್ಪಳ

Published On: 02 February 2023, 02:52 PM English Summary: Millet milk kilsa which can be prepared from Millet

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.