1. ಇತರೆ

Kharchikayi | ಅಪರೂಪದ ಔಷಧೀಯ ಗುಣ ಹೊಂದಿರುವ “ಕರ್ಚಿಕಾಯಿ”!

KJ Staff
KJ Staff
"Kharchikayi" with rare medicinal properties!

ನೋಡಲು ಚಿಕ್ಕ ಹಾಗಲಕಾಯಿ ತರ ಕಾಣುವ ಅಪರೂಪದಲ್ಲೇ ಅಪರೂಪದ ಔಷಧಿ ಗುಣಗಳನ್ನು ಹೊಂದಿರುವುದು ಕರ್ಚಿಕಾಯಿ. ಇದರಿಂದ ಆರೋಗ್ಯಕ್ಕೆ ಆಗುವ ಅನುಕೂಲಗಳ ಕುರಿತು ತಿಳಿಸಿಕೊಟ್ಟಿದ್ದಾರೆ ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲೂಕಿನ ಹಟ್ಟಿ ಪಟ್ಟಣದವರಾದ ಬುರ್ರಕಥಾ ಕಮಲಮ್ಮನವರು.

ಇದನ್ನೂ ಓದಿರಿ: ಪ್ರತಿಯೊಬ್ಬರು ತಯಾರಿಸಬಹುದಾದ ರಾಗಿ ಹಾಲಿನ ಕಿಲ್ಸ

ಬಡವಬಲ್ಲಿದರಿಗೆನ್ನದೇ ಎಲ್ಲರಿಗೂ ಕೂಡ ಸರಿಸಮಾನವಾಗಿ ರುಚಿ ಕೊಡುವ ಕಾಯಿ ಕರ್ಚಿಕಾಯಿ. ಅಡವಿ, ಹೊಲ, ಎರೆಮಣ್ಣಿನಲ್ಲಿ ಇದು ಹುಟ್ಟುತ್ತದೆ. ಬಿತ್ತನೆಯಿಲ್ಲದ, ಕುಂಟಿಯಿಲ್ಲದ, ಮಡಿಕಿಯಿಲ್ಲದ, ಎಣ್ಣೆ-ಗೊಬ್ಬರವಿಲ್ಲದ, ರೈತ ಬೆಳೆಸಿದ್ದೂ ಅಲ್ಲ ಉಚಿತವಾಗಿ ತಂತಾನೇ ಕೇವಲ ಮಳೆ ನೀರಿಗೆ ಹುಲುಸಾಗಿ ಬೆಳೆಯುವ ಬೆಳೆಯೇ ಈ ಕರ್ಚಿಕಾಯಿ.

ಈ ಕಾಯಿಯನ್ನು ಹರಿದುಕೊಂಡು ಬಂದು ಹಂಚಿನ‌ ಮೇಲೆ ಹುರಿದು ಪಲ್ಯ ಮಾಡಿಕೊಂಡು ತಿನ್ನುತ್ತಾರೆ. ಆದರೆ ಇದರ ರುಚಿ ಬಿಳಿಜೋಳದ ರೊಟ್ಟಿಯೊಂದಿಗೆ ತುಂಬಾ ಹೊಂದಾಣಿಕೆಯಾಗುತ್ತದೆ.

ಇದರ ರುಚಿ ತಿಂದವರೇ ಬಲ್ಲರು. ಕಹಿಕಹಿ ಇರುತ್ತದೆ ಆದರೂ ಇದು ಕಹಿಯ ಕಾಯಿಯಲ್ಲ. ದೇಹದೊಳಗೆ ರೋಗವಿದ್ರೆ ಪರಿಹಾರವಾಗುವ ಕಾಯಿ ಕರ್ಚಿಕಾಯಿ. ಇದನ್ನು ತಿಂದರೆ ಮೈಯಲ್ಲಿ ಯಾವುದೇ ರೋಗವೇ ಬರುವುದಿಲ್ಲ ಎನ್ನುತ್ತಾರೆ ಸಾಕಷ್ಟು ಗ್ರಾಮೀಣ ಪ್ರದೇಶದ ಹಿರಿಯರು.

ಸಾಮಾಜಿಕ ಜಾಲತಾಣದಲ್ಲಿ ಗುಲ್ಲೆಬ್ಬಿಸಿದ ಹೊಸ ನಮೂನೆಯ ʼಕಡ್ಡಿ ಇಡ್ಲಿʼ ! ಫಿದಾ ಆದ ನೆಟ್ಟಿಗರು..

ಕರ್ಚಿಕಾಯಿ ಪ್ರಮುಖ ಉಪಯೋಗವೆಂದರೆ,

  • ೧. ಹೊಟ್ಟೆಯಲ್ಲಿನ ಕಲ್ಲು ಕರಗುತ್ತವೆ
  • ೨. ರೋಗ-ರುಜಿನಗಳಿಗೂ ರಾಮಬಾಣ
  • ೩. ಈ ಕಾಯಿಯ ಗೆಡ್ಡೆಯನ್ನು (ಗೆಣಸು ತರಹವಿರುವ, ಕರ್ಚಿಕಾಯಿಯ ಗೆಡ್ಡೆ) ಹರಿದುಕೊಂಡು ಮೆಣಸು, ಒಂಟಿ ಬಳ್ಳುಳ್ಳಿಯನ್ನು (ಬಳ್ಳೊಳ್ಳಿ ಅಂದ್ರೆ ಬಳ್ಳೊಳ್ಳಿಯಲ್ಲ, ಒಂಟಿ ಬಳ್ಳುಳ್ಳಿ) ಅರೆದುಕೊಂಡು (ಕುಡಿಯಬಹುದು) ತಿಂದರೆ ಗರ್ಭೀಣಿಯೊಳಗಿನ‌ (3, 4, 5 ತಿಂಗಳು) ಪಿಂಡಾಣವೂ ಸಹ ಕರಗಿ ಹೋಗುವುದು. ಆದರೆ ಇದನ್ನು ಸೂಕ್ತ ನಾಟಿ ಔಷಧಿ ತಜ್ಞರ ಸಲಹೆಯ ಮೇರೆಗೆ ಮಾತ್ರ ಈ ತರ ಬಳಸಬೇಕು.

ಅದ್ಭುತ ಕಸೂತಿ ಕಲೆಯಿಂದ ಆಕರ್ಷಕ ಆಭರಣ ತಯಾರಿಸುವ ಸಮುದಾಯದ ತಲ್ಲಣ

ಈ ಬಳ್ಳಿಯ ಒಳಗಡೆ ಅಂದ್ರೆ, ನೆಲದಲ್ಲಿ ಗೆಡ್ಡೆ ಇರುತ್ತದೆ. ಮೇಲೆ ಬಳ್ಳಿ ಹಬ್ಬಿರುತ್ತದೆ ಆಲೂಗಡ್ಡೆ ತರಹ ಗೆಡ್ಡೆ  ಭೂಮಿಯ ಒಳಗಡೆ ಇರುತ್ತದೆ. ಆದರೂ ಈಗಲೂ ಜನ ಬಹಳ ಇಷ್ಟಪಟ್ಟು ಸೇವಿಸುತ್ತಾರೆ.

ಲೇಖನ ಮಾಹಿತಿ : ಬುರ್ರಕಥಾ‌ ಕಮಲಮ್ಮ

ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲೂಕಿನ ಹಟ್ಟಿ ಪಟ್ಟಣದವರಾದ ಬುರ್ರಕಥಾ ಕಮಲಮ್ಮ ಜಾನಪದ ಗಾಯಕಿ ಅಷ್ಟೇ ಅಲ್ಲ, ಜನಪದ ವೈದ್ಯಯೂ ಕೂಡ ಹೌದು. ಇವರಿಗೆ ಜಾನಪದ ಕ್ಷೇತ್ರದಲ್ಲಿ 2022 ರ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.
Published On: 13 February 2023, 12:32 PM English Summary: "Kharchikayi" with rare medicinal properties!

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.