1. ಪಶುಸಂಗೋಪನೆ

ವೈಜ್ಞಾನಿಕವಾಗಿ ಜೇನು ಸಾಕಾಣಿಕೆ ತರಬೇತಿ ನೀಡಲು ರೈತರಿಂದ ಅರ್ಜಿ ಆಹ್ವಾನ

Ramlinganna
Ramlinganna
Honey

ವೈಜ್ಞಾನಿಕ ಜೇನು ಸಾಕಾಣಿಕೆ ತರಬೇತಿ ನೀಡಲು ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ. ಇದೇ ತಿಂಗಳ ಜುಲೈ 25 ರಂದು ತರಬೇತಿ ನೀಡಲಾಗುವುದು.

ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ರಾಯಚೂರು, ಐಸಿಎಆರ್ ಕೃಷಿ ವಿಜ್ಞಾನ ಕೇಂದ್ರ, ಕವಡಿಮಟ್ಟಿ (ಯಾದಗಿರಿ) ಸಂಯುಕ್ತಾಶ್ರಯದಲ್ಲಿ ಜುಲೈ 25 ರಿಂದ 28 ರವರೆಗೆ ನಾಲ್ಕು ದಿನಗಳ ಕಾಲ ಆನ್ಲೈನ್ ನಲ್ಲಿ ವೈಜ್ಞಾನಿಕ ಜೇನು ಸಾಕಾಣಿಕೆ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿದೆ.

ತರಬೇತಿಯನ್ನು ಕೃಷಿ ವಿಜ್ಞಾನ ಕೇಂದ್ರ ಕವಿಡಿಮಟ್ಟಿಯಲ್ಲಿ ಆಯೋಜಿಸಲಾಗಿದೆ. ತರಬೇತಿಗೆ 25 ರಿಂದ 30 ಅಭ್ಯರ್ಥಿಗಳಿಗೆ ಮಾತ್ರ ಅವಕಾಶವಿದ್ದು. ತರಬೇತಿಯಲ್ಲಿ ಭಾಗವಹಿಸುವ ಆಸಕ್ತ ರೈತರು ಈ ಕೆಳಕಂಡ ಮೊಬೈಲ್ಗೆ ಕರೆ ಮಾಡಿ ಹೆಸರು ನೋಂದಾಯಿಸಿಕೊಳ್ಳಬಹುದು.

ಆಸಕ್ತ ರೈತರು 9980459624, 99591555978, 9480696349 ಗೆ ಕರೆ ಮಾಡಿ ತಮ್ಮ ಹೆಸರು ನೋಂದಾಯಿಸಿಕೊಳ್ಳಬಹುದು.

ರೈತರಿಗೆ ಜೇನು ಸಾಕಾಣಿಕೆಯಲ್ಲಿ ವೈಜ್ಞಾನಿಕ ಪದ್ಧತಿಗಳ ಮಾಹಿತಿ ಹಾಗೂ ಪ್ರಾಯೋಗಿಕ ಅನುಭವಗಳನ್ನು ನೀಡಿ ಅವರ ಆದಾಯ ಹೆಚ್ಚಿಸಲು ತರಬೇತಿಯ ಉದ್ದೇಶವಾಗಿದ್ದು,  ತರಬೇತಿಗೆ 25 ರಿಂದ 30 ಅಭ್ಯರ್ಥಿಗಳಿಗೆ ಮಾತ್ರ ಅವಕಾಶವಿದೆ.

ಜೇನು ಸಾಕಾಣಿಯಕೆ ಮುಖ್ಯ ಉದ್ದೇಶ ಪರಾಗಸ್ಪರ್ಶ ಹೆಚ್ಚಿಸುವುದು. ಜೇನು ಮತ್ತು ಮೇಣ ಉತ್ಪಾದಿಸುವುದಾಗಿದೆ. ಜೇನು ನೊಣಗಳು ಸ್ನೇಹ ಜೀವಿಯಾಗಿದ್ದು, ಸಂಘಜೀವಿಯಾಗಿದೆ. ಗಿಡಬಳ್ಳಿಗಳಿಂದ ಮಕರಂದ ಮತ್ತು ಪರಾಗವನ್ನು ಸಂಗ್ರಹಿಸಿ ಜೇನು ಉತ್ಪಾದಿಸುತ್ತದೆ.

;

ವಿವಿಧ ಬಗೆಯ ಜೇನ್ನೋಣಗಳು

ನಮ್ಮ ದೇಶದಲ್ಲಿ ಐದು ಬಗೆಯ ಜೇನ್ನೊಣಗಳಿದ್ದು, ಅದರಲ್ಲಿ ನಾಲ್ಕು ದೇಶೀಯ ಜಾತಿಯವು ಮತ್ತು ಒಂದು ವಿದೇಶದ್ದಾಗಿದೆ. ಅವುಗಳೆಂದರೆ ಹೆಜ್ಜೇನು, ಮುಜಂಟಿ ಜೇನು, ಕೋಲು ಜೇನು ಹಾಗೂ ತುಡುವೆಜೇನು ಎಂಬ ದೇಶೀಯ ಜಾತಿಯವು ಮತ್ತು ಯುರೋಪಿಯನ್ ಜೇನು ಎನುವ ವಿದೇಸಿ ಜೇನು. ಇವುಗಳಲ್ಲಿ ತುಡುವೆ ಮತ್ತು ಯುರೋಪಿಯನ್ ಜೇನಗಳನ್ನು ಕೃಷಿ ಭೂಮಿಗಳಲ್ಲಿ ಜೇನು ಪೆಟ್ಟಿಗೆಗಳ ಸಹಾಯದಿಂದ ಸಾಕಬಹುದಾಗಿದೆ.

ಎಲ್ಲರಿಗೂ ಗೊತ್ತಿದ್ದ ಹಾಗೆ ಭೂಮಿಯ ಮೇಲೆ ಇರುವ ವಿವಿಧ ಬಗೆಡ ಕೀಟಗಳಲ್ಲಿ ಜೇನು ನೊಣಗಳು ಮಾನವನಿಗೆ ಬಹು ಉಪಕಾರಿಯಾಗಿದೆ.

Share your comments

Latest feeds

More News
Krishi Jagran Kannada Magazine Subscription Online Subscription
Krishi Jagran Kannada Subscription

CopyRight - 2021 Krishi Jagran Media Group. All Rights Reserved.