1. ಪಶುಸಂಗೋಪನೆ

ಕೋಳಿ ಸಾಕಾಣಿಕೆ ಘಟಕ ಸ್ಥಾಪನೆಗೆ ಸಹಾಯಧನ ನೀಡಲು ಅರ್ಜಿ ಆಹ್ವಾನ

Ramlinganna
Ramlinganna
poultry rearing

ಕೋಳಿ ಸಾಕಾಣಿಕೆಗೆ ಘಟಕ ಸ್ಥಾಪಿಸಲು ರಾಯಚೂರು ಜಿಲ್ಲೆಯ ಅರ್ಹ ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ಸಹಾಯಧನ ನೀಡಲು ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ. ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ಸ್ವಾವಲಂಬಿಯಾಗಿ ಜೀವನ ಸಾಗಿಸಲು ಕೃಷಿಯೊಂದಿಗೆ ಉಪಕಸುಬು ಮಾಡಿಕೊಂಡು ಜೀವನ ಸಾಗಿಸಲು ಪ್ರೋತ್ಸಾಹ ಧನ ನೀಡಲು ಅರ್ಜಿ ಕರೆಯಲಾಗಿದೆ.

ಕೋಳಿ ಸಾಕಾಣಿಕೆ ಘಟಕ ಸ್ಥಾಪಿಸಲು ವಿದ್ಯುತ್ ಸಂಪರ್ಕ ಹೊಂದಿರಬೇಕು. ಫಲಾನುಭವಿಗಳು ಆರೋಗ್ಯ ಹಾಗೂ ಪಶುಸಂಗೋಪನೆ ಇಲಾಖೆ ಅನುಮತಿ ಪಡೆದಿರಬೇಕು. ಜಮೀನು ಹೊಂದಿರುವ ಕೃಷಿಕರಿಗೆ ಮೊದಲ ಆದ್ಯತೆ ನೀಡಲಾಗುವುದು. ನಿವೇಶನ ಹಾಗೂ ನೀರಿನ ಸೌಲಭ್ಯ ಹೊಂದಿರಬೇಕು. ಸ್ಥಳೀಯಚ ಗ್ರಾಪಂ ನಿರಪೇಕ್ಷಣಾ ಪತ್ರ ಪಡೆದಿರಬೇಕು.

ಕೋಳಿ ಸಾಕಾಣಿಕೆ ಘಟಕ ಸ್ಥಾಪಿಸಲಿಚ್ಚಿಸುವ ಫಲಾನುಭವಿಗಳು ಅರ್ಜಿಯನ್ನು ಸಂಬಂಧಪಟ್ಟ ತಾಲೂಕು ಸಮಾಜ ಕಲ್ಯಾಣ ಇಲಾಖೆ ಕಚೇರಿಗಳಲ್ಲಿ ಪಡೆದು ಭರ್ತಿಮಾಡಿ ಜುಲೈ 20ರೊಳಗೆ ಅರ್ಜಿ ಸಲ್ಲಿಸಬೇಕೆಂದು ಕೋರಲಾಗಿದೆ.

ಕೋಳಿ ಸಾಕಾಣಿಕೆಗೆ ಶೆಡ್ ನಿರ್ಮಿಸಲು ಸ್ಥಳಾವಕಾಶ ಬೇಕು. ನೀರಿನ ವ್ಯವಸ್ಥೆ ಕಲ್ಪಿಸಿರಬೇಕು. ಬೆಳಕಿನ ವ್ಯವಸ್ಥೆ ಮಾಡಿರಬೇಕು.  ಸಾಕಾಣಿಕೆಯಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ರೋಗನಿರೋಧಕ ಲಸಿಕೆಯನ್ನು ಮರೆಯಬಾರದು.  ಈಗಾಗಲೇ ಕೋಳಿ ಸಾಕಾಣಿಕೆ ಮಾಡುವವರ ಸಂಪರ್ಕ ಪಡೆದು ನೇರ ಅನುಭವ ಪಡೆಯುವುದು ಇನ್ನೂ ಉತ್ತಮ.ಕೋಳಿ ಮರಿಗಳು ಮತ್ತು  ಕೋಳಿಗಳ ಪಾಲನೆ ಪೋಷಣೆ ಚೆನ್ನಾಗಿ ಮಾಡಿದರೆ ಕೋಳಿ ಸಾಕಾಣಿಕೆ ಲಾಭದಾಯಕವಾಗಿರುತ್ತದೆ.

ಕೋಳಿ ತಳಿಗಳ ಆಯ್ಕೆ

ಬ್ರಾಯ್ಲರ್ ಕೋಳಿ ಸಾಕಾಣಿಕೆ ಮಾಡುತ್ತಿದ್ದೀರೋ ಅಥವಾ ನಾಟಿ ಕೊಳಿ ಸಾಕಾಣಿಕೆ ಮಾಡುತ್ತಿದ್ದೀರೋ ಎಂಬುದನ್ನು ನಿರ್ಧರಿಸಿಕೊಳ್ಳಬೇಕು. ಬ್ರಾಯ್ಲರ್ ಕೋಳಿ ಮಾಂಸಕ್ಕಾಗಿಯೇ ಬಳಸುತ್ತಾರೆ. ನಾಟಿ ಕೋಳಿ ಮಾಂಸ ಮತ್ತು ಮೊಟ್ಟೆಗಾಗಿ ಸಾಕಬಹುದು. ಇದರಲ್ಲಿಯೂ ಸಹ ಉತ್ತಮ ತಳಿಯ ಆಯ್ಕೆ ಮುಖ್ಯವಾಗಿರುತ್ತದೆ.

ಸ್ವರ್ಣ ಧಾರಾ: ಸ್ವರ್ಣ ಧಾರಾ ಕೊಳಿಯೂ ಹೆಚ್ಚು ಹೆಸರು ಮಾಡಿದೆ. ಸ್ವರ್ಣಧಘಾರ ಕೋಳಿಯನ್ನು ಮಾಂಸ ಮತ್ತು ಮೊಟ್ಟೆಗಾಗಿ ಸಾಕಲಾಗುತ್ತದೆ. ಗಿರಿರಾಜ ಕೋಳಿ ನಾಟಿ ಕೋಳಿಯಂತೆ ಕಾಣುತ್ತದೆ.  ಗಿರಿರಾಜ ತಳಿಗೆ ಹೋಲಿಸಿದರೆ ಸ್ವರ್ಣಧಾರ ತಳಿಯು ಹಗುರ ದೇಹದ ತೂಕದೊಂದಿಗೆ ಗಾತ್ರದಲ್ಲಿ ಚಿಕ್ಕದಾಗಿರುತ್ತದೆ.

;

ಮಾಂಸದ ಕೋಳಿಗಳ ತಳಿಗಳು:  ಕಾಬ್ ರಾಸ್, ಹಬ್ಬರ್ಡ್, ಅನಕ್-40, ಅನಕ್ 2000, ಕೆಗ್ ಬ್ರೋ, ಸ್ಟ್ರಾರ್ ಬ್ರೋ, ಐಟಿಬಿ 82, ಇತ್ಯಾದಿ.

ಮೊಟ್ಟೆ ತಳಿಗಳು: ಡಿಕಾಲ್ಡ್, ಬಿವಿ-300, ಕಿಸ್ಟೋನ್, ಪೂನಾವರ್ಲ, ಎಚ್ಎಚ್ 280, ಹೈಲೈನ್, ರಾಣಿಶೇವರ್, ಮೈಚಿಕ್ಸ್ ಇತ್ಯಾದಿ

ಕೋಳಿ ಗೊಬ್ಬರವೂ ಉಪಯೋಗಕಾರಿ: ಕೋಳಿ ಗೊಬ್ಬರ ಹೆಚ್ಚು ಸಾರಜನಕ ಹೊಂದಿದೆ. ಇದನ್ನು ಕಾಂಪೋಸ್ಟ್ ಮಾಡಿ ಕೃಷಿಗೂ ಬಳಸಿದರೆ ಬೆಳೆಯಲ್ಲಿ ಇಳುವರಿ ಹೆಚ್ಚಾಗುತ್ತದೆ. ಭೂಮಿಯ ಫಲವತ್ತತೆ ಹೆಚ್ಚಾಗುತ್ತದೆ.

Share your comments

Latest feeds

More News
Krishi Jagran Kannada Magazine Subscription Online Subscription
Krishi Jagran Kannada Subscription

CopyRight - 2021 Krishi Jagran Media Group. All Rights Reserved.