1. ಪಶುಸಂಗೋಪನೆ

ಇಂದು ಆನ್ಲೈನ್ ಮೂಲಕ ಹೈನುಗಾರಿಕೆ ಕುರಿತು ತರಬೇತಿ

Ramlinganna
Ramlinganna

 ಜಿಲ್ಲಾ ಕೃಷಿ ತರಬೇತಿ ಕೇಂದ್ರ, ಅರಕಲಗೂಡು ಹಾಗೂ ಪಶು ವೈದ್ಯಕೀಯ ಮಹಾವಿದ್ಯಾಲಯ ಹಾಸನ ಸಹಯೋಗದಲ್ಲಿ ಜುಲೈ 20 ರಂದು ಮಧ್ಯಾಹ್ನ 3 ರಿಂದ 5 ರವರೆಗೆ online ಮೂಲಕ ಹೈನುಗಾರಿಕೆ ಕುರಿತು  ತರಬೇತಿ ಆಯೋಜಿಸಲಾಗಿದೆ.

ಹವಾಮಾನ ಹಾಗೂ ಆರ್ಥಿಕ ವೈಪರೀತ್ಯಗಳಲ್ಲಿ ಸುಸ್ಥಿರ ಪಶುಸಂಗೋಪನೆ ಕುರಿತು ತರಬೇತಿ ನಡೆಯಲಿದೆ. ಪಶು ವೈದ್ಯಕೀಯ ಮಹಾವಿದ್ಯಾಲಯ ಹಾಸನದ ಸಹಾಯಕ ಪ್ರಾಧ್ಯಾಪಕ ಡಾ. ಹೇಮಂತ್ ಗೌಡ ಕೆರವರು ತರಬೇತಿ ನೀಡಲಿದ್ದಾರೆ. ರೈತರು ಮನೆಯಲ್ಲಿಯೇ ಕುಳಿತು ತರಬೇತಿಯ ಸೌಲಭ್ಯ ಪಡೆಯಬಹುದು.

ಈ ತರಬೇತಿಯಲ್ಲಿ ಭಾಗವಹಿಸಲಿಚ್ಚಿಸುವ ರೈತರು ಗೂಗಲ್ ಮೀಟ್ App ಇನ್ಸ್ ಸ್ಟಾಲ್ ಮಾಡಿಕೊಂಡಿರಬೇಕು. ಒಂದು ವೇಳೆ ಇನ್ಸ್ ಟಾಲ್ ಮಾಡಿಕೊಳ್ಳದಿದ್ದರೆ ತರಬೇತಿಯ ಮುಂಚೆ ಇನ್ಸ್ ಸ್ಟಾಲ್ ಮಾಡಿಕೊಂಡ ನಂತರ ತರಬೇತಿಯಲ್ಲಿ ಭಾಗವಹಿಸಬಹುದು.

ತರಬೇತಿಯಲ್ಲಿ ಭಾಗವಹಿಸಲಿಚ್ಚಿಸುವ ರೈತರು ಮಧ್ಯಾಹ್ನ 2..50 ಗಂಟೆಗೆ meet.google.com/yhf-eezn-jgx ಲಿಂಕ್ ಮೇಲೆ ಕ್ಲಿಕ್ ಮಾಡಿ ತರಬೇತಿಯಲ್ಲಿ ಭಾಗವಹಿಸಬಹುದು.

ಗೂಗಲ್ ಮೀಟ್ ನಲ್ಲಿ ಹಾಜರಾದ ತಕ್ಷಣ ರೈತರು ಮೊಬೈಲ್ ನ್ನು ಮ್ಯೂಟ್ ಮಾಡಬೇಕು. ತರಬೇತಿ ನೀಡುವ ಸಂಪನ್ಮೂಲ ವ್ಯಕ್ತಿಗೆ ತೊಂದರೆಯಾಗುವುದಿಲ್ಲ. ಇನ್ನಿತರ ರೈತರಿಗೆ ಸರಿಯಾಗಿ ಕೇಳಿ ಬರುತ್ತದೆ.  ತರಬೇತಿ ಪ್ರಾರಂಭದಲ್ಲಿ ಯಾರು ತಮ್ಮ ಮೊಬೈಲ್ ನಲ್ಲಿ Present now button ಒತ್ತಬಾರದು. ಬದಲಿಗೆ ask to join ಬಟನ್ ಒತ್ತಬೇಕು.  ಹೆಚ್ಚಿನ ಮಾಹಿತಿಗಾಗಿ ರೈತರು ಜಿಲ್ಲಾ ಕೃಷಿ ತರಬೇತಿ ಕೇಂದ್ರ, ಅರಕಲಗೂಡು, ಹಾಸನ, ಸಹಾಯಕ ಕೃಷಿ ನಿರ್ದೇಶಕರ ಮೊ. ನಂಬರ್ 94484 21518 ಗೆ ಸಂಪರ್ಕಿಸಲು ಕೋರಲಾಗಿದೆ.

ದೇಶದ ಮೊದಲ ಪ್ರಾಣಿ ಕಲ್ಯಾಣ ಸಹಾಯವಾಣಿ  ಆರಂಭ

ಜಾನುವಾರು ಸಾಕಾಣಿಕೆದಾರರಿಗೆ ಕಾಲಕಾಲಕ್ಕೆ ಮಹತ್ವಹ ಮಾಹಿತಿಗಳನ್ನು ನೀಡಲು  ಹಾಗೂ  ಜಾನುವಾರು ಸಾಕಣೆದಾರರಿಗೆ ಉತ್ಪಾದಕತೆ ಹೆಚ್ಚಿಸುವ ನಿಟ್ಟಿನಲ್ಲಿ ರೈತರಿಗೆ ಮತ್ತಷ್ಟು ಹತ್ತಿರವಾಗಲು ನೆರವಾಗುವ ನಿಟ್ಟಿನಲ್ಲಿ ಪಶುಸಂಗೋಪನಾ ಇಲಾಖೆಯಿಂದ  ಪ್ರಾಣಿ ಕಲ್ಯಾಣ ಸಹಾಯವಾಣಿ (ವಾರ್ ರೂಮ್) ಆರಂಭಿಸಲಾಗಿದೆ.

;

ಹೆಬ್ಬಾಳದ ಪಶುಭವನದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪ್ರಾಣಿ ಕಲ್ಯಾಣ ಸಹಾಯವಾಣಿ ಕೇಂದ್ರವನ್ನು ಉದ್ಘಾಟಿಸಿದ ನಂತರ ಮಾತನಾಡಿ, ದೇಶದಲ್ಲಿಯೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಆರಂಭಗೊಂಡಿರುವ ಸುಸಜ್ಜಿತ ಪ್ರಾಣಿ ಕಲ್ಯಾಣ ಸಹಾಯವಾಣಿ (ವಾರ್ ರೂಂ) ರೈತರಿಗಾಗಿ ಆರಂಭಿಸಲಾಗಿದೆ ಎಂದರು.

ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ ಮಾತನಾಡಿ, ದಿನ 24 ಗಂಟೆಯೂ ಈ ಸಹಾಯವಾಣಿ ಕಾರ್ಯನಿರ್ವಹಿಸಲಿದೆ. 8277100200 ಸಹಾಯವಾಣಿಗೆ ರೈತರು ಕರೆ ಮಾಡಿ ಪಶುಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಪಡೆಯಬಹುದು.,  

Share your comments

Latest feeds

More News
Krishi Jagran Kannada Magazine Subscription Online Subscription
Krishi Jagran Kannada Subscription

CopyRight - 2021 Krishi Jagran Media Group. All Rights Reserved.