1. ಪಶುಸಂಗೋಪನೆ

ರೈತರಿಗೆ ಬೊಂಬಾಟ್‌ ನ್ಯೂಸ್‌: ಕುರಿ, ಮೇಕೆ ಸಾಕಾಣಿಕೆಗೆ ಸಹಾಯಧನಕ್ಕೆ ಅರ್ಜಿ ಆಹ್ವಾನ..ಇಂದೇ ಅರ್ಜಿ ಸಲ್ಲಿಸಿ

Maltesh
Maltesh
Apply for Subsidy for Sheep and Goat Farming..in this scheme of karnataka

ಕುರಿ ಮತ್ತು ಉಣ್ಣೆ ಅಭಿವೃದ್ದಿ ನಿಗಮ ನಿಯಮಿತ ವಿಜಯಪುರದಿಂದ ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪ ಯೋಜನೆಯಡಿ 2022-23ನೇ ಸಾಲಿಗೆ ಕುರಿ ಮೇಕೆ ಘಟಕ ಸಾಕಾಣಿಕೆಗಾಗಿ ಅರ್ಜಿ ಆಹ್ವಾನಿಸಲಾಗಿದೆ.

ಈ ಯೋಜನೆಗೆ ಇರುವ ಅರ್ಹತೆಗಳೇನು..?

ಅರ್ಜಿ ಸಲ್ಲಿಸಲು ಇಚ್ಚಿಸುವವರು ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ದಿ ನಿಗಮ ನಿಯಮಿತ ಬೆಂಗಳೂರ ಇಲ್ಲಿ ನೋಂದಾಯಿತ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘದ ಸದಸ್ಯರಾಗಿಬೇಕು.

18-60 ವಯೋಮಿತಿ ಮಹಿಳಾ ಸದಸ್ಯರು ಅರ್ಜಿ ಸಲ್ಲಿಸಬಹುದು. ಮಹಿಳಾ ಸದಸ್ಯರು ಲಭ್ಯವಿಲ್ಲದಿದ್ದಲ್ಲಿ ಪುರುಷ ಸದಸ್ಯರು ಅರ್ಜಿ ಸಲ್ಲಿಸಬಹುದು.

ಅರ್ಜಿಗಳನ್ನು ನೋಂದಾಯಿತ ಕುರಿ ಮತ್ತು ಉಣ್ಣೆ ಉತ್ಪಾದಕರ ಸಂಘದ ಅಧ್ಯಕ್ಷರು, ಕಾರ್ಯದರ್ಶಿಗಳ ಮುಖಾಂತರ ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ದಿ ನಿಗಮ ನಿಯಮಿತ ವಿಜಯಪುರಕ್ಕೆ ಜುಲೈ 28ರೊಳಗೆ ಸಲ್ಲಿಸಬೇಕು.

ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರು, ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ದಿ ನಿಗಮ ನಿಯಮಿತ, ವಿಜಯಪುರ ಅವರ ಕಚೇರಿ ದೂರವಾಣಿ ಸಂಖ್ಯೆ:9902363143 ಗೆ ಸಂಪರ್ಕಿಸಬಹುದು ಎಂದು ನಿಗಮದ ಪ್ರಕಟಣೆ ತಿಳಿಸಿದೆ.

15 ಲಕ್ಷಕ್ಕೆ ಮಾರಾಟವಾಯ್ತು ಈ ಮೇಕೆ..ಏನಿದರ ವಿಶೇಷತೆ.?

ದೇಶ-ವಿದೇಶಗಳಲ್ಲಿ ಪ್ರಾಣಿಗಳ ಹರಾಜು ಹೊಸದೇನಲ್ಲ ಈ ಪ್ರಕ್ರಿಯೇ ಯಾವಾಗಲು ನಡೆಯುತ್ತಲೆ ಇರುತ್ತದೆ.ಸದ್ಯ ಇದರಿಂದಾಗಿ ಆಸ್ಟ್ರೇಲಿಯಾದ ಮೇಕೆಯೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಬಹು ಚರ್ಚೆಗೆ ಗ್ರಾಸವಾಗಿದೆ. ಯಾಕೆ ಆ ಮೇಕೆ ಚರ್ಚೆಗೆ ಕಾರಣವಾಗಿದ ಎಂಬುದನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ.

ಯೆಸ್‌ ವಾಸ್ತವವಾಗಿ, ಮಾರಕೇಶ್ ಮೇಕೆ ಎಂದು ಕರೆಯಲ್ಪಡುವ ಮೇಕೆ ಆಸ್ಟ್ರೇಲಿಯಾದಲ್ಲಿ ಬರೋಬ್ಬರಿ 15.6 ಲಕ್ಷಕ್ಕೆ ಹರಾಜಾಯಿತು ಎಂದು ವರದಿಗಳಾಗಿವೆ. ವೆಸ್ಟ್ ನ್ಯೂ ಸೌತ್ ಆಸ್ಟ್ರೇಲಿಯಾದ ಕೋಬ್ರೆಯಲ್ಲಿ ಮೇಕೆಯನ್ನು ಹರಾಜು ಮಾಡಲಾಗಿದೆ. ಈ ಹಿಂದೆ ಭಾರತದಲ್ಲಿ ಬ್ರಾಕ್ ಎಂಬ ಮೇಕೆ 6.40 ಲಕ್ಷಕ್ಕೆ ಹರಾಜಾಗಿತ್ತು. ಸದ್ಯ ಈ ಮೇಕೆ ಈ ಎಲ್ಲಾ ಮೇಕೆಗಳಿಗಿಂತ ದುಬಾರಿ ಮೊತ್ತಕ್ಕೆ ಬಿಕರಿಯಾಗಿ ಸಾಕಷ್ಟು ಸುದ್ದಿಯಲ್ಲಿದೆ.

ಮಾಧ್ಯಮ ವರದಿಗಳ ಪ್ರಕಾರ, ಖರೀದಿದಾರನನ್ನು ಆಂಡ್ರ್ಯೂ ಮೊಸ್ಲಿ ಎಂದು ಗುರುತಿಸಲಾಗಿದೆ. ಅವರು ಹಸು ಸಾಕಾಣಿಕೆ ಮಾಡುತ್ತಿದ್ದು ಅವರೇ ಈ ಮೇಕೆಯನ್ನು ಖರೀದಿಸಿದ್ದಾರೆ ಎನ್ನಲಾಗಿದೆ. ಅವರು ಕುರಿ, ಮೇಕೆ ಮತ್ತು ಕೆಲವು ಜಾನುವಾರುಗಳನ್ನು ಸಹ ಸಾಕುತ್ತಾರೆ. ಇವರಿಗೆ ಮೇಕೆ ಸಾಕಾಣಿಕೆಯಲ್ಲಿಯೂ ಅಪಾರ ಆಸಕ್ತಿ.

"ಮೊರೊಕನ್ ಆಡುಗಳು ದುಬಾರಿಯಾಗಿದೆ ಏಕೆಂದರೆ ಅವು ಈ ಸಮಯದಲ್ಲಿ ತುಂಬಾ ಚಿಕ್ಕದಾಗಿರುತ್ತವೆ" ಎಂದು ಅವರು ಹೇಳಿದರು. ಈ ಮೇಕೆ ನೋಡಲು ತುಂಬಾ ಸುಂದರ ಮತ್ತು ಆರೋಗ್ಯಕರವಾಗಿರುತ್ತದೆ.

ಇದನ್ನೂ ಓದಿ:SBI ನಲ್ಲಿ ಹಣ ಇಟ್ಟವರಿಗೆ ಸಿಕ್ತು ಗುಡ್‌ನ್ಯೂಸ್‌.. FD ಮೇಲಿನ  ಬಡ್ಡಿದರದಲ್ಲಿ ಜಬರ್ಧಸ್ತ್‌ ಏರಿಕೆ..!

Published On: 19 July 2022, 10:20 AM English Summary: Apply for Subsidy for Sheep and Goat Farming..in this scheme of karnataka

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.