1. ಅಗ್ರಿಪಿಡಿಯಾ

ಮಲ್ಲಿಗೆಯಲ್ಲಿ ಬರುವ ರೋಗಗಳು ಮತ್ತು ಅವುಗಳ ಸಮಗ್ರ ನಿರ್ವಹಣೆ

ಮಲ್ಲಿಗೆಯು ಒಲಿಯೇಸಿ ಕುಟುಂಬದ ಜಾಸ್ಮಿನ್  ಉಪವರ್ಗಕ್ಕೆ ಸೇರಿದ್ದು, ಪೊದೆ ಮತ್ತು ಬಳ್ಳಿ ರೀತಿಯ 200ಕ್ಕೂ ಹೆಚ್ಚು ಪ್ರಭೇದಗಳನ್ನು ಹೊಂದಿದೆ.  ಮಲ್ಲಿಗೆಯಅತಿ ಸಾಮಾನ್ಯ ಪ್ರಭೇದಗಳೆಂದರೆ ಜಾಸ್ಮಿನಮ್ ಸ್ಯಾಂಬಾಕ್, ಜಾಸ್ಮಿನಮ್ ಗ್ರ್ಯಾಂಡಿಫ್ಲೋರಮ್, ಜಾಸ್ಮಿನಮ್ ಅರಿಕ್ಯುಲ್ಯಾಟಮ್, ಜಾಸ್ಮಿನಮ್ ಹ್ಯುಮಿಲೆ, ಜಾಸ್ಮಿನಮ್ ಮಲ್ಟಿಫ್ಲೋರಮ್, ಜಾಸ್ಮಿನಮ್ ಒಫಿಸಿನೇಲ್, ಜಾಸ್ಮಿನಮ್ ನುಡಿಫ್ಲೋರಮ್, ಜಾಸ್ಮಿನಮ್ ಮೆಸ್ನಿಯಿ, ಜಾಸ್ಮಿನಮ್ ಆಂಗ್ಯುಲೇರ್, ಜಾಸ್ಮಿನಮ್ ಅಂಗುಸ್ಟಿಫೋಲಿಯಮ್, ಜಾಸ್ಮಿನಮ್ ಪಾಲಿಯಂತಮ್,  ಜಾಸ್ಮಿನಮ್ ನಿಟಿಡಮ್‌ ಇತ್ಯಾದಿ.

 ಮಲ್ಲಿಗೆಯನ್ನು ವಿವಿಧ ಪ್ರಕಾರದ ವಾಯುಗುಣ ಮತ್ತು ಮಣ್ಣಿನಲ್ಲಿ ಬೆಳೆಯಬಹುದು. ಮಲ್ಲಿಗೆ ಬೇಸಾಯಕ್ಕೆ ಶುಷ್ಕ ಆರ್ದ್ರತೆಯಿಂದಕೂಡಿದ ಹವೆ ಉತ್ತಮ. ಸಮುದ್ರ ಮಟ್ಟದಿಂದ 600 ರಿಂದ 1,200ಮೀ. ಎತ್ತರದವರೆಗೆಇದನ್ನುಚೆನ್ನಾಗಿ ಬೆಳೆಯಬಹುದು. ನೀರು ಬಸಿದು ಹೋಗುವ ಮರಳು ಮಿಶ್ರಿತ ಗೋಡುಮಣ್ಣಿನ ಭೂಮಿ ಇದಕ್ಕೆತುಂಬಾ ಸೂಕ್ತ. ಮಣ್ಣಿನರಸಸಾರ (ಪಿ.ಎಚ್.) 5.5 ರಿಂದ 6.5 ರಷ್ಟಿದ್ದರೆಉತ್ತಮ. ಮಲ್ಲಿಗೆಯನ್ನು ಮುಡಿಯಲು, ಪೂಜೆಗೆ, ಅತಿಥಿ ಸತ್ಕಾರಕ್ಕೆ, ಸಭಾಂಗಣ ಅಲಂಕಾರಕ್ಕೆ ಉಪಯೋಗಿಸಲಾಗುತ್ತಿದೆ. ಇದಲ್ಲದೆ ಮಲ್ಲಿಗೆಯನ್ನು ಕಾಂತಿವರ್ಧಕ ಮತ್ತು ಸುಗಂಧ ದ್ರವ್ಯಗಳ ತಯಾರಿಕೆಯಲ್ಲಿ ಬಳಸುವ ಮಲ್ಲಿಗೆಯ ಕಾಂಕ್ರಿಟ್‌ ಉತ್ಪಾದನೆಯಲ್ಲಿ ಬಳಸಲಾಗುತ್ತದೆ.

ಜಾಸ್ಮಿನಮ್ ಸ್ಯಾಂಬಾಕ್‌ ಹೂವುಗಳು ಕ್ಯಾನ್ಸರ್‌ನ್ನು ತಡೆಯುವ ಶಕ್ತಿಯನ್ನು ಹೊಂದಿದ್ದು, ಇದನ್ನು ಹಸಿರು ಚಹಾದ ರೂಪದಲ್ಲಿ ಸೇವಿಸಬಹುದು. ಹೀಗೆ ಮಲ್ಲಿಗೆಯು ವಾಣಿಜ್ಯ ಹೂ ಬೆಳೆಗಳಲ್ಲಿ ಮುಖ್ಯವಾದ ಸ್ಥಾನವನ್ನು ಹೊಂದಿದೆ. ಆದರೆ ಮಲ್ಲಿಗೆಯಲ್ಲಿ ಹಲವು ಶಿಲೀಂಧ್ರ ಮತ್ತು ದುಂಡಾಣುಗಳು ರೋಗಗಳನ್ನು ಉಂಟುಮಾಡಿ ಬೆಳೆಯ ಇಳುವರಿಯನ್ನು ಕುಂಠಿತಗೊಳಿಸುತ್ತವೆ. ಹಾಗಾಗಿ ಮಲ್ಲಿಗೆ ಕೃಷಿಯು ಲಾಭದಾಯಕವಾಗಬೇಕಾದಲ್ಲಿ ಇವುಗಳ ಬಗ್ಗೆ ಅರಿತು ಹತೋಟಿ ಕ್ರಮಗಳನ್ನು ಕೈಗೊಳ್ಳುವುದು ಅತಿ ಅಗತ್ಯ. ಅವುಗಳಲ್ಲಿ ಬಹುಮುಖ್ಯವಾದವುಗಳನ್ನು ಈ ಕೆಳಗೆ ಸಂಕ್ಷಿಪ್ತವಾಗಿ ವಿವರಿಸಲಾಗಿದೆ.

ಬಹುಮುಖ್ಯ ರೋಗಗಳು ಹಾಗೂ ಅವುಗಳ ನಿರ್ವಹಣೆ

1) ಎಲೆ ಚುಕ್ಕೆ ರೋಗ:

ಈ ರೋಗವುಸರ್ಕೋಸ್ಪೋರ ಜಾಸ್ಮಿನಿಕೋಲಾ ಎಂಬ ಶಿಲೀಂಧ್ರ ವರ್ಗಕ್ಕೆ ಸೇರಿದ ಸೂಕ್ಷ್ಮ ಜೀವಿಯಿಂದಉಂಟಾಗುತ್ತದೆ. ಈ ಶಿಲೀಂಧ್ರವು ಮಲ್ಲಿಗೆಯಎಲ್ಲಾ ಪ್ರಭೇದಗಳಲ್ಲೂ ರೋಗವನ್ನುಉಂಟುಮಾಡುತ್ತದೆ.ವಾತಾವರಣದಲ್ಲಿ ತೇವಾಂಶ ಜಾಸ್ತಿ ಕಂಡುಬರುವಲ್ಲಿ ಈ ರೋಗವು ಸಾಮಾನ್ಯವಾಗಿಕಂಡು ಬರುತ್ತದೆ.ರೋಗಕ್ಕೆತುತ್ತಾದ ಗಿಡಗಳಲ್ಲಿ ಕಂದು ಬಣ್ಣದ ವೃತ್ತಾಕಾರದ ಅಥವಾ ನಿರ್ದಿಷ್ಟಆಕಾರವಿಲ್ಲದ ಸಣ್ಣ ಸಣ್ಣ 2-8 ಮಿ. ಮೀ. ವ್ಯಾಸವುಳ್ಳ ಚುಕ್ಕೆಗಳು ಕಂಡುಬರುತ್ತವೆ.ಮಳೆಯ ವಾತಾವರಣವು ಹೆಚ್ಚಾದಲ್ಲಿ ಚುಕ್ಕೆಗಳು ದೊಡ್ಡದಾಗಿ ಹರಡಿಕೊಂಡು ವಿಲೀನಗೊಳ್ಳುತ್ತವೆ. ಬಾಧೆಗೊಳಗಾದ ಎಲೆಗಳು ಮುದುರಿಕೊಂಡುತುದಿಯಿಂದ ಒಣಗುತ್ತಾ ಹೊಗುತ್ತವೆ. ಎಲೆಯ ಭಾಗವುಕ್ರಮೇಣ ಒಣಗುತ್ತವೆ.ರೋಗದ ತೀವ್ರತೆ ಜಾಸ್ತಿಯಾದಂತೆಲ್ಲಾ ಎಲೆಯ ಮೊಗ್ಗುಗಳು ಸಹ ಒಣಗುತ್ತವೆ. ಹೂಗಳ ಉತ್ಪಾದನೆಯು ಶೇ. 5 ರಷ್ಟುಕುಂಠಿತವಾಗುತ್ತದೆ. ಈ ರೋಗದ ಬೀಜಾಣುಗಳು ಗಾಳಿಯ ಮೂಲಕ ಒಂದು ಗಿಡದಿಂದ ಇನ್ನೊಂದುಗಿಡಕ್ಕೆ ಹರಡುತ್ತವೆ.

ನಿರ್ವಹಣೆ:

1)ಮಲ್ಲಿಗೆ ಬೆಳೆಯುವ ತೋಟವನ್ನು ಶುಚಿಯಾಗಿಡಬೇಕು.

2)ತೀವ್ರ ಬಾಧೆಗೆತುತ್ತಾದಗಿಡದ ಭಾಗಗಳನ್ನು ಕತ್ತರಿಸಿ ಸುಟ್ಟು ಹಾಕಬೇಕು.

3)ರೋಗದ ನಿಯಂತ್ರಣಕ್ಕೆ ಪ್ರತಿ ಲೀಟರ್ ನೀರಿನಲ್ಲಿ 2 ಗ್ರಾಂ. ನಷ್ಟು ಮ್ಯಾಂಕೋಜೆಬ್‌ಅಥವಾ 1 ಗ್ರಾಂಕಾರ್ಬೆಂಡಜಿಮ್‌ಅನ್ನು ಬೆರೆಸಿ ರೋಗಕ್ಕೆತುತ್ತಾದ ಭಾಗಗಳಿಗೆ ಸಿಂಪಡಿಸಬೇಕು.

2) ಆಲ್ರ‍್ನೇರಿಯಾ ಎಲೆಚುಕ್ಕೆ ರೋಗ:

ಈ ರೋಗವು ಆಲ್ರ‍್ನೇರಿಯಾ ಜಾಸ್ಮಿನೆ, ಆಲ್ರ‍್ನೇರಿಯಾ ಅಲ್ರ‍್ನೇಟಾ ಎಂಬ ಶಿಲೀಂಧ್ರ ವರ್ಗಕ್ಕೆ ಸೇರಿದ ಸೂಕ್ಷ್ಮಾ ಣುಜೀವಿಯಿಂದ ಉಂಟಾಗುತ್ತದೆ.ಬಾಧೆಗೊಳಗಾದ ಎಲೆಗಳ ಮೇಲೆ ಕಡುಕಂದು ಬಣ್ಣದ ಚುಕ್ಕೆಗಳು ಕಂಡುಬರುತ್ತವೆ. ಚುಕ್ಕೆಗಳ ನಡುವೆ ಸುರುಳಿ ಸುತ್ತಿನಂತಿರುವ ಚಿಹ್ನೆಗಳಿರುತ್ತವೆ. ವಾತಾವರಣವು ಅನುಕೂಲವಾದಂತೆಲ್ಲಾ ಚುಕ್ಕೆಗಳುಒಂದಕ್ಕೊಂದು ಸೇರಿಕೊಳ್ಳುತ್ತವೆ. ದೂರದಿಂದ ನೋಡಿದಾಗ ಬಳ್ಳಿಗಳು ಸುಟ್ಟುಹೋದ ರೀತಿಯಲ್ಲಿ ಭಾಸವಾಗುತ್ತದೆ. ನಂತರದ ಅವಧಿಯಲ್ಲಿ ಎಲೆಗಳು ಒಣಗಿ ಉದುರುತ್ತವೆ, ಉದ್ದ ಮೊಟ್ಟೆಯಾಕಾರದ ಚುಕ್ಕೆಗಳು ಕಾಂಡ, ಎಲೆ, ತೊಟ್ಟುಗಳು, ಹೂದಳಗಳ ಮೇಲೆ ಕಂಡುಬರುತ್ತದೆ. ಈ ರೋಗದ ಬೀಜಾಣುಗಳು ಗಾಳಿಯ ಮೂಲಕ ಒಂದುಗಿಡದಿಂದ ಇನ್ನೊಂದು ಗಿಡಕ್ಕೆ ಹರಡುತ್ತವೆ.

ನಿರ್ವಹಣೆ:

1) ಮಲ್ಲಿಗೆತೋಟವನ್ನು ಶುಚಿಯಾಗಿಡಬೇಕು.

2)ಬಾಧೆಗೊಳಗಾದ ಉದುರಿಬಿದ್ದಂತಹ ಎಲೆಗಳನ್ನು ಸಂಗ್ರಹಿಸಿ ಸುಡಬೇಕು.

3)ರೋಗದ ಶೀಘ್ರ ಹತೋಟಿಗೆ 2 ಗ್ರಾಂಕಾಪರ್‌ ಆಕ್ಸಿಕ್ಲೋರೈಡ್‌ನ್ನುಅಥವಾ 2 ಗ್ರಾಂ. ಮ್ಯಾಂಕೊಜೆಬ್ 1 ಲೀ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು ಮತ್ತು ಶೇ. 1ರ ಬೋರ್ಡೋದ್ರಾವಣದಿಂದ ಅತ್ಯಂತ ಪರಿಣಾಮಕಾರಿಯಾಗಿ ರೋಗವನ್ನು ನಿಯಂತ್ರಿಸಬಹುದು. 4)1 ಮಿ.ಲೀ. ಹೆಕ್ಸಕೊನಝೋಲ್‌ನ್ನು ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪರಣೆ ಮಾಡುವುದರಿಂದ ಕೂಡರೋಗವನ್ನು ನಿಯಂತ್ರಿಸಬಹುದು.

3) ಸೊರಗುರೋಗ

ಈ ರೋಗವು ಫ್ಯುಸೇರಿಯಂ ಸೊಲನಿ ಎಂಬ ಶಿಲೀಂಧ್ರದಿಂದ ಹರಡುತ್ತದೆ.ಸಾಮಾನ್ಯವಾಗಿ ಈ ಜೀವಿಯು ಮಣ್ಣು ಜನ್ಯವಾಗಿದ್ದು, ತೇವಾಂಶವಿರುವ ಜಾಗಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಆರಂಭದಲ್ಲಿ ಹಳೆಯ ಎಲೆಗಳು ಹಳದಿ ಬಣ್ಣಕ್ಕೆತಿರುಗುತ್ತವೆ, ಆದರೆ ಎಳೆಯ ಎಲೆಗಳು ಹಸಿರಾಗಿರುತ್ತವೆ. ಕ್ರಮೇಣವಾಗಿ ಎಳೆಯ ಎಲೆಗಳು ಕೂಡ ಬಾಧಿತಗೊಳ್ಳುತ್ತವೆ. ಈ ರೀತಿ ಬಾಧೆಗೊಳಗಾದ ಎಲೆಗಳು ಕ್ರಮೇಣಒಣಗಿ ಉದುರಿ ಹೋಗುತ್ತವೆ. ನಂತರಅAತಹ ಗಿಡಗಳು ಅಪೂರ್ಣವಾಗಿ ಸೊರಗಿ ಸಾಯುತ್ತವೆ. ಸೊರಗಿದ ಗಿಡಗಳ ಬೇರುಗಳನ್ನು ಸೀಳಿ ನೋಡಿದಾಗಕಂದು ಬಣ್ಣದ ಮಚ್ಚೆಗಳು ಕಂಡುಬರುತ್ತವೆ.

ನಿರ್ವಹಣೆ:

1)ಈ ರೋಗವು ಮಣ್ಣಿನ ಮೂಲಕ ಹರಡುದರಿಂದ ಭೂಮಿಯಲ್ಲಿ ನೀರುಚೆನ್ನಾಗಿ ಬಸಿದು ತೆಗೆಯಬೇಕು.

2)ಬಾಧೆಗೊಳಗಾದ ಗಿಡಗಳ ಬುಡಕ್ಕೆ ಶೇ. 1ರ ಕಾರ್ಬೆಂಡಜಿಮ್‌ ದ್ರಾವಣವನ್ನು ನೀರಿನಲ್ಲಿ ಹಾಕಬೇಕು ಹಾಗೂ ಶೇ. 1ರ ಬೋರ್ಡೋದ್ರಾವಣದ ಬಳಕೆಯು ಕೂಡಅತ್ಯಂತ ಪರಿಣಾಮಕಾರಿಯಾಗಿದೆ.

3)ರಾಸಾಯನಿಕಗೊಬ್ಬರ ಪ್ರಮಾಣಕಡಿಮೆ ಮಾಡಿಕೊಳ್ಳಬೇಕು, ಕಾಂಪೋಸ್ಟ್ಗೊಬ್ಬರ ಹಾಗೂ ಬೇವಿನ ಹಿಂಡಿಯನ್ನು ಹೆಚ್ಚಾಗಿ ಬಳಸಬೇಕು.

4) ತುಕ್ಕುರೋಗ

ಯುರೋಮೈಸಿಸ್ ಹಾಬ್ಸೋನಿ ಎಂಬ ಶಿಲೀಂಧ್ರದಿಂದ ತುಕ್ಕುರೋಗವು ಉಂಟಾಗುತ್ತದೆ. ರೋಗವು ಎಲ್ಲಾ ಎಲೆಗಳ ಮೇಲೆ ಹಾಗೂ ಹೂದಳಗಳ ಮೇಲೆ ಕಂಡುಬರುತ್ತದೆ. ಹಳದಿ ಮಿಶ್ರಿತ ಮೊಡವೆಯಾಕಾರದ ಚುಕ್ಕೆಗಳು ಎಲೆಯ ಕೆಳ ಭಾಗದಲ್ಲಿಕಾಣುತ್ತದೆ. ಅಲ್ಲದೆ ತೊಗಟೆಗಳು, ಹೂಗಳು ಹಾಗೂ ಮೊಗ್ಗುಗಳ ಮೇಲೆಯೂ ಕಾಣಬಹುದು. ಬಾಧೆಗೊಳಗಾದ ಗಿಡಗಳು ನಿರ್ನಾಮವಾಗುತ್ತವೆ.

ನಿರ್ವಹಣೆ:

1)ಬಾಧೆಗೊಳಗಾದ ಭಾಗಗಳನ್ನು ಕತ್ತರಿಸಿ ನಾಶಪಡಿಸಬೇಕು.

2)1 ಮಿ.ಲೀ. ಪ್ಲಾಂಟಾವ್ಯಾಕ್ಸ್ಅಥವಾ 0.5 ಮಿ.ಲೀ. ಟ್ರೆಂಡಮಾರ್ಫ ಅಥವಾ 1 ಗ್ರಾಂ. ಕಾರ್ಬೆಂಡಜಿಮ್ ಹಾಗೂ ಕಾಪರ್‌ಆಕ್ಸಿಕ್ಲೋರೈಡ್‌ನ್ನು 1 ಲೀ. ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು.

5) ಬೇರು ಕೊಳೆರೋಗ

ಈ ರೋಗ ಸ್ಕ್ಲಿರೋಷಿಯಂ ರಾಲ್ಪ್ಸಿ ಎಂಬ ಶಿಲೀಂಧ್ರದಿAದ ಹರಡುತ್ತದೆ.ಬೆಳವಣಿಗೆಯ ಎಲ್ಲಾ ಹಂತದಲ್ಲಿ ಗಿಡಗಳು ಹಾನಿಗೊಳಗಾಗುತ್ತವೆ. ಮೊದಲನೆಯದಾಗಿ ಹಳೆಯ ಎಲೆಗಳು ಹಳದಿ ಬಣ್ಣಕ್ಕೆತಿರುಗಿ ನಂತರ ಎಳೆಯ ಹಸಿರು ಎಲೆಗಳು ಹಳದಿ ಬಣ್ಣಕ್ಕೆ ತಿರುಗುತ್ತದೆ. ರೋಗ ಪೀಡಿತ ಸಸ್ಯದ ಬೇರುಗಳುಕಪ್ಪು ಬಣ್ಣಕ್ಕೆತಿರುಗಿರುತ್ತವೆ. ಸಸ್ಯದ ಬಾಧಿತ ಅಂಗಾಂಶಗಳು ಮತ್ತುಕಾಂಡವು ಶಿಲೀಂಧ್ರದ ಬಿಳಿಯ ಕವಕಜಾಲದಿಂದಆವರಿಸಲ್ಪಟ್ಟು, ಸಾಸಿವೆಯಾಕಾರದ ಸ್ಕ್ಲಿರೋಷಿಯಂದಿಂದ ಕೂಡಿರುವುದು ಕಂಡುಬರುತ್ತದೆ. ನೀರು ಸರಿಯಾಗಿ ಬಸಿಯದೇ ಹೋದಾಗ ಗಿಡಗಳು ಉಸಿರಾಡಲು ಗಾಳಿಯಿಲ್ಲದಂತಾಗುತ್ತದೆ. ಅತಿ ಹೆಚ್ಚು ಮಳೆ ಮತ್ತುಅತಿಯಾದ ನೀರಾವರಿಯು ಈ ರೋಗಕ್ಕೆಕಾರಣವಾಗಿದೆ. ಕಾಲ ಕ್ರಮೇಣ ಗಿಡಗಳು ಬಾಧೆ ತಾಳದೆ ಸಾಯುತ್ತವೆ.

ನಿರ್ವಹಣೆ:

1) ಮೊದಲನೆಯದಾಗಿ ನೀರು ನಿಲ್ಲದೆ ಬಸಿದು ಹೋಗುವ ಹಾಗೆ ನೋಡಿಕೊಳ್ಳಬೇಕು.

2) ಸ್ವಲ್ಪ ಸಮಯದವರೆಗೆ ಬುಡದಲ್ಲಿರುವ ಮಣ್ಣನ್ನು ಹೊರತೆಗೆಯಬೇಕು. ಆಗ ಬಾಧೆಗೊಳಗಾದ ಬೇರುಗಳು ಒಣಗುತ್ತವೆ, ನಂತರ ಮಣ್ಣನ್ನು ಶುದ್ಧೀಕರಿಸಿ ಅಥವಾ ಹೊಸ ಮಣ್ಣನ್ನು ಹಾಕಬೇಕು.

3) ಬಾಧೆಗೊಳಗಾದ ಭಾಗಗಳನ್ನು ಕತ್ತರಿಸಿ, ಸರಿಯಾದರೀತಿಯಲ್ಲಿ ಗಿಡಗಳಿಗೆ ಉಸಿರಾಡಲು ಅವಕಾಶ ಕಲ್ಪಿಸಿಕೊಡಬೇಕು.

4) 2 ಗ್ರಾಂ. ಕಾಪರ್‌ಆಕ್ಸಿಕ್ಲೋರೈಡ್‌ನ್ನು 1 ಲೀ. ನೀರಿನಲ್ಲಿ ಬೆರೆಸಿ ಮಣ್ಣು ನೆನೆಯುವಂತೆ ಬುಡಕ್ಕೆ ಹಾಕಬೇಕು.

5) ಅತೀ ಹೆಚ್ಚಿನ ಪ್ರಮಾಣದಲ್ಲಿಕೊಟ್ಟಿಗೆಗೊಬ್ಬರವನ್ನು ಬಳಸಬೇಕು. ಕೊಟ್ಟಿಗೆಗೊಬ್ಬರವನ್ನುಟ್ರೆಂಕೋಡರ್ಮಾ ವಿರಿಡೆಯೊಂದಿಗೆ ಮಿಶ್ರಣ ಮಾಡಿ ಉಪಯೋಗಿಸಿದ್ದಲ್ಲಿ ಉತ್ತಮ.

ಲೇಖನ: ಸ್ವಾತಿ ಶೆಟ್ಟಿ ವೈ, ಸಂಶೋಧನಾ ಸಹಾಯಕರು (RA) ಸಸ್ಯರೋಗ ಶಾಸ್ತ್ರ, ನೈಸರ್ಗಿಕ ಕೃಷಿ (ZBNF)) ZAHRS, ಬ್ರಹ್ಮಾವರ, ಉಡುಪಿ

Published On: 25 June 2021, 08:20 PM English Summary: Jasmine diseases and management

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.