1. ಅಗ್ರಿಪಿಡಿಯಾ

ಬೆಳೆಯ ಸಿರಿ ಮೊಳಕೆಯಲ್ಲಿ ನೋಡು” ಎನ್ನುವಂತೆ ಬಿತ್ತನೆಗೆ ಉಪಯೋಗಿಸುವ ಬೀಜವು ಉತ್ತಮ ಗುಣಮಟ್ಟದ್ದಾಗಿರಬೇಕು

seeds

“ಬೆಳೆಯ ಸಿರಿ ಮೊಳಕೆಯಲ್ಲಿ ನೋಡು” ಎನ್ನುವಂತೆ ಬಿತ್ತನೆಗೆ ಉಪಯೋಗಿಸುವ ಬೀಜವು ಉತ್ತಮ ಗುಣಮಟ್ಟದ್ದಾಗಿರಬೇಕು. ಬಿತ್ತನೆ ಬೀಜವು ಕೃಷಿ ಉತ್ಪಾದನೆಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಉತ್ತಮ ಬೀಜ ಉತ್ತಮ ಬೆಳೆಯ ಸಂಕೇತ. ಯಾವುದೇ ಬೆಳೆಯಲ್ಲಿ ಬಿತ್ತನೆಗೆ ಉತ್ತಮ ಗುಣಮಟ್ಟದ ಶುದ್ಧ ಬೀಜ ಉಪಯೋಗಿಸದೇ ಇದ್ದರೆ ಕೃಷಿ ಸಾಮಗ್ರಿಗಳಿಗೆ ಮಾಡಿದ ವೆಚ್ಚದಿಂದ ಹೆಚ್ಚಿನ ಲಾಭ ಪಡೆಯಲು ಸಾಧ್ಯವಿಲ್ಲ. ಹಾಗೆಯೇ ಉತ್ತಮ ಬೀಜವನ್ನು ಆಯ್ಕೆ ಮಾಡಲು ಬರಿ ಕಣ್ಣಿನಿಂದ ನೋಡಿ ತೀರ್ಮಾನ ಮಾಡಲು ಸಾಧ್ಯವಿಲ್ಲ.

 ಬಿತ್ತನೆಗೆ ಬಳಸುವ ಬೀಜವನ್ನು ವ್ಯವಸ್ಥಿತ ಪರೀಕ್ಷೆಯ ಮೂಲಕ ಬೀಜದ ಶುದ್ಧತೆ, ಮೊಳಕೆಯ ಪ್ರಮಾಣ, ತೇವಾಂಶ, ರೋಗ ಮತ್ತು ಕೀಟದ ಅಂಶಗಳನ್ನು ಪರೀಕ್ಷಿಸಿ ಬೀಜದ ಗುಣಮಟ್ಟವನ್ನು ತೀರ್ಮಾನಿಸಬಹುದು. ಆದ್ದರಿಂದ ಯಾವುದೇ ಬೆಳೆಯನ್ನು ಬಿತ್ತನೆ ಮಾಡುವ ಮೊದಲು ಬಿತ್ತನೆ ಬೀಜವನ್ನು ಪರೀಕ್ಷೆಗೆ ಒಳಪಡಿಸಿ, ಅದು ಉತ್ತಮ ಗುಣಸತ್ವಗಳನ್ನು ಹೊಂದಿದೆಯೇ ಇಲ್ಲವೋ ಎಂದು ಖಾತ್ರಿ ಮಾಡಿಕೊಂಡು ಬಿತ್ತನೆ ಮಾಡಿದರೆ ಅತಿ ಹೆಚ್ಚಿನ ಇಳುವರಿ ಪಡೆಯಬಹುದು.

ಉತ್ತಮ ಗುಣಮಟ್ಟದ ಬೀಜದ ಗುಣಲಕ್ಷಣಗಳು :-

1) ಬೀಜಗಳ ತೇವಾಂಶ ನಿಗದಿತ ಪ್ರಮಾಣಕ್ಕಿಂತ ಅಧಿಕವಾಗಿರಬಾರದು.

ಅ) ಏಕದಳ ಬೀಜವಾದರೆ ಶೇ. 11 ರಿಂದ 12

ಆ) ದ್ವಿದಳ ಧಾನ್ಯದ ಬೀಜವಾದರೆ ಶೇ.9

ಇ) ಎಣ್ಣೆಕಾಳು ಬೀಜವಾದರೆ ಶೇ.8

ಈ) ತರಕಾರಿ ಬೀಜವಾದರೆ ಶೇ.5-6 ಕ್ಕಿಂತ ಹೆಚ್ಚು ತೇವಾಂಶವಿರಬಾರದು.

2)            ಬೀಜದಲ್ಲಿ ಕಸಕಡ್ಡಿ, ಮುರುಕು ಬೀಜ, ಜೊಳ್ಳು ನಿಗದಿತ ಪ್ರಮಾಣಕ್ಕಿಂತ ಅಧಿಕವಾಗಿರಬಾರದು.

3)            ಆಯ್ಕೆ ಮಾಡಿದ ಬಿತ್ತನೆ ಬೀಜದಲ್ಲಿ ಇತರೆ ಬೆಳೆ ಬೀಜಗಳಾಗಲೀ, ಕಳೆ ಬೀಜಗಳಾಗಲೀ ಇರಬಾರದು.

4)            ಬೀಜಗಳಲ್ಲಿ ಮೊಳೆಯುವಿಕೆಯ ಶಕ್ತಿ ಆಯಾ ಬೆಳೆಗಳಲ್ಲಿ ನಿಗದಿ ಮಾಡಿರುವ ಪ್ರಮಾಣಕ್ಕಿಂತ ಕಡಿಮೆ ಇರಬಾರದು.

 

ಕ್ರ.ಸಂ.

ಬೆಳೆ

ಪ್ರಮಾಣೀಕೃತ ಬೀಜದ ಕನಿಷ್ಠ ಮೊಳಕೆ  ಪ್ರಮಾಣ

ಕ್ರ.ಸಂ.

ಬೆಳೆ

ಪ್ರಮಾಣೀಕೃತ ಬೀಜದ ಕನಿಷ್ಠ ಮೊಳಕೆ ಪ್ರಮಾಣ

1

ರಾಗಿ

ಶೇ.75

6

ಅವರೆ   

ಶೇ.75

2

ಮುಸುಕಿನ ಜೋಳ

ಶೇ.90   

7

ಹುರುಳಿ

ಶೇ.80

3

ಭತ್ತ

ಶೇ.80

8

ಎಳ್ಳು

ಶೇ.80

4

ಅಲಸಂದೆ

ಶೇ.75   

9

ನೆಲಗಡಲೆ

ಶೇ.70

5

ತೊಗರಿ

ಶೇ.75

1-

ಹರಳು

ಶೇ.70

5)            ಬಿತ್ತನೆ ಬೀಜದಲ್ಲಿ ಬೆಳೆಯನ್ನು ನಾಶಪಡಿಸುವ ರೋಗಾಣುಗಳನ್ನಾಗಲೀ, ಕೀಟಗಳ ಮೊಟ್ಟೆ ಅಥವಾ ಕೋಶಗಳನ್ನಾಗಲೀ ಹೊಂದಿರಬಾರದು.

ರೈತರು ತಾವು ಬೆಳೆಯುವ ತಳಿ ಬೀಜಗಳನ್ನು ತಮ್ಮ ಬೆಳೆಯಿಂದ ಆಯ್ಕೆ ಮಾಡಿಕೊಂಡು ಬಿತ್ತನೆಗೆ ಬಳಸಬಹುದು. ಆದರೆ ತಾವು ಬೆಳೆದ ಬೆಳೆಯಿಂದ ಬಿತ್ತನೆಗೆ ಬಳಸುವ ಬೀಜವನ್ನು ಬೀಜ ಪರೀಕ್ಷಾಲಯಗಳಿಗೆ ಕಳುಹಿಸಿ ಬೀಜದ ಗುಣಮಟ್ಟವನ್ನು ತಿಳಿದುಕೊಂಡು ಬಿತ್ತನೆಗೆ ಬಳಸುವುದರಿಂದ, ಕಳಪೆ ಬಿತ್ತನೆಯಿಂದಾಗುವ ನಷ್ಟವನ್ನು ತಪ್ಪಿಸಬಹುದು. ಬೀಜದ ರಾಶಿಯನ್ನು ಸಂಪೂರ್ಣವಾಗಿ ಪ್ರತಿನಿಧಿಸುವಂತೆ ಬೀಜದ ರಾಶಿಯಿಂದ ಕ್ರಮಬದ್ಧವಾಗಿ ಸಣ್ಣ ಪ್ರಮಾಣದ ಬೀಜದ ಮಾದರಿಯನ್ನು ತೆಗೆದು ಸಂಪೂರ್ಣ ಮಾಹಿತಿಯೊಂದಿಗೆ ಬೀಜ ಪರೀಕ್ಷೆ ಪ್ರಯೋಗಾಲಯಕ್ಕೆ ಕಳುಹಿಸಿ ಈ ಸೇವೆಯನ್ನು ಪಡೆದುಕೊಳ್ಳಬಹುದು. ಹೆಚ್ಚಿನ ಮಾಹಿತಿಗೆ ತಮ್ಮ ಸಮೀಪದ ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರ ಅಥವಾ ಕೃಷಿ ವಿಜ್ಞಾನ ಕೇಂದ್ರವನ್ನು ಸಂಪರ್ಕಿಸಬಹುದು.

ಇವೆಲ್ಲಾ ಮುನ್ನೆಚ್ಚರಿಕೆ ವಹಿಸಿ ಬೀಜವನ್ನು ಆಯ್ಕೆ ಮಾಡಿಕೊಂಡರೂ ಸಹ ಕೆಲವೊಮ್ಮೆ ಬಿತ್ತನೆ ಬೀಜದ ಮೂಲಕ ಶಿಲೀಂಧ್ರದಿAದ ಹರಡುವ ರೋಗ ಹಾಗೂ ಕೆಲವು ಕೀಟಗಳು ಬೆಳೆಗೆ ಹಾನಿಯುಂಟು ಮಾಡುತ್ತವೆ. ಇದನ್ನು ಹೋಗಲಾಡಿಸಲು ಬೀಜೋಪಚಾರ ಮಾಡಿ ಬಿತ್ತನೆ ಮಾಡುವುದು ಅತ್ಯವಶ್ಯಕ.

ಮುಂಗಾರು ಹಂಗಾಮಿನ ಪ್ರಮುಖ ಬೆಳೆಗಳ ಬೀಜೋಪಚಾರ :

ಮುಂಗಾರು ಹಂಗಾಮಿನ ಪ್ರಮುಖ ಮಳೆಯಾಶ್ರಿತ ಬೆಳೆಗಳಾದ ನೆಲಗಡಲೆ, ಅಲಸಂದೆ, ತೊಗರಿ, ರಾಗಿ, ಅವರೆ ಮತ್ತು ನೀರಾವರಿ ಬೆಳೆಯಾದ ಭತ್ತದ ಬೆಳಗಳಲ್ಲಿ ಬೀಜೋಪಚಾರ ಮಾಡಿ ರೋಗರಹಿತ ಹಾಗೂ ಉತ್ತಮ ಗುಣಮಟ್ಟದ ಬೀಜವನ್ನು ಬಿತ್ತುವುದರಿಂದ ಹೆಚ್ಚಿನ ಇಳುವರಿ ಪಡೆಯಬಹುದು.

ಬೀಜೋಪಚಾರದ ಮಹತ್ವ: ಕೃಷಿ ಬೆಳೆಗಳಲ್ಲಿ ಪ್ರಮುಖವಾಗಿ ಬೀಜೋಪಚಾರವನ್ನು ರೋಗ ಮತ್ತು ಕೀಟಗಳ ಅಂಶ ಮುಕ್ತ ಬಿತ್ತನೆ ಬೀಜ ಬಳಸಲು, ಬೆಳೆಗಳಲ್ಲಿ ಪೋಷಕಾಂಶದ ಲಭ್ಯತೆಯನ್ನು ಹೆಚ್ಚು ಮಾಡಲು ಹಾಗೂ ಬೆಳೆಗಳಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಜೈವಿಕ ಗೊಬ್ಬರ ಅಥವಾ ಜೈವಿಕ ನಿಯಂತ್ರಕ ಜೀವಾಣುಗಳಿಂದ ಉಪಚರಿಸಿ ಬಿತ್ತನೆ ಮಾಡುವುದು ಅತ್ಯವಶ್ಯಕ.

ಬೀಜೋಪಚಾರ ಮಾಡುವ ವಿಧಾನ: ಬೀಜೋಪಚಾರ ವಿಧಾನ ತುಂಬಾ ಸರಳ ಮತ್ತು ಕಡಿಮೆ ಖರ್ಚಿನದ್ದಾಗಿದೆ, ಮುನ್ನೆಚ್ಚರಿಕೆ ವಹಿಸಿ ಬಿತ್ತನೆಯ ದಿನ ಶಿಫಾರಸ್ಸು ಮಾಡಿದ ಸೂಕ್ತ ಜೈವಿಕ / ರಾಸಾಯನಿಕ ಕ್ರಮಗಳಿಂದ ಉಪಚರಿಸಿ ಬಿತ್ತುವುದರಿಂದ ಬೆಳೆಗೆ ತಗಲಬಹುದಾದ ಕೀಟ ಮತ್ತು ರೋಗದ ಹಾವಳಿಯನ್ನು ಪೂರ್ವಭಾವಿಯಾಗಿ ತಪ್ಪಿಸುವುದಲ್ಲದೇ, ಬೆಳೆಗಳಲ್ಲಿ ಜೈವಿಕ ಗೊಬ್ಬರದಿಂದ ಉಪಚಾರ ಮಾಡಿದಾಗ ರಾಸಾಯನಿಕ ಗೊಬ್ಬರಗಳ ಮೇಲಿನ ಅವಲಂಬನೆಯನ್ನು (ಶೇ.25 ರಷ್ಟು) ಕಡಿಮೆ ಮಾಡಬಹುದಾಗಿದೆ. ಬೀಜೋಪಚಾರ ಮಾಡಲು ಸೀಡ್ ಡ್ರಮ್, ಮಣ್ಣಿನ ಮಡಿಕೆ ಅಥವಾ ಪಾಲಿಥೀನ್ ಚೀಲಗಳನ್ನು ಬಳಸುವುದು ಸೂಕ್ತ.

ಜೈವಿಕ ಗೊಬ್ಬರಗಳು :

ರೈಜೋಬಿಯಂ: ಇದು ದ್ವಿದಳ ಧಾನ್ಯದ ಬೆಳೆಗಳಲ್ಲಿ ಸಾರಜನಕ ಸ್ಥಿರೀಕರಿಸುವ ಪ್ರಮುಖ ಜೈವಿಕ ಗೊಬ್ಬರ. ಈ ಜೀವಾಣು ದ್ವಿದಳ ಧಾನ್ಯಗಳ ಬೇರುಗಳಲ್ಲಿ ಗಂಟುಗಳನ್ನು ಉತ್ಪತ್ತಿ ಮಾಡಿ ವಾತಾವರಣದಲ್ಲಿರುವ ಸಾರಜನಕವನ್ನು ಸ್ಥಿರೀಕರಿಸಿ ಬೆಳೆಗೆ ಒದಗಿಸುತ್ತದೆ. ರೈಜೋಬಿಯಂ ಉಪಚಾರದಿಂದ ಬೇಳೆಕಾಳುಗಳಲ್ಲಿ ಹೆಚ್ಚಿನ ಪ್ರೋಟೀನ್ ಹಾಗೂ ಎಣ್ಣೆಕಾಳುಗಳಲ್ಲಿ ಎಣ್ಣೆಯ ಅಂಶ ಹೆಚ್ಚಾಗುತ್ತದೆ.

ಅಜೋಸ್ಪಿರಿಲಂ: ಈ ಜೀವಿಯು ಬೆಳೆಯ ಬೇರಿನ ಸಮೀಪ ಹಾಗೂ ಬೇರುಗಳಲ್ಲಿ ಪ್ರವೇಶಿಸಿ ಸಾರಜನಕ ಸ್ಥಿರೀಕರಣ ಮಾಡುತ್ತದೆ. ಇದನ್ನು ಏಕದಳ ಧಾನ್ಯಗಳು, ಸೂರ್ಯಕಾಂತಿ, ಸಿರಿಧಾನ್ಯ, ತರಕಾರಿ ಇತ್ಯಾದಿ ಬೆಳೆಗಳಲ್ಲಿ ಬಳಸಬಹುದು.

ಅಜೊಟೋಬ್ಯಾಕ್ಟರ್: ಈ ಜೀವಿಯು ಎಲ್ಲಾ ಧಾನ್ಯದ ಬೆಳೆಗಳು, ತರಕಾರಿ ಬೆಳೆಗಳು, ಹಣ್ಣಿನ ಗಿಡಗಳು ಹಾಗೂ ತೋಟದ ಅಥವಾ ಪ್ಲಾಂಟೇಷನ್ ಬೆಳೆಗಳಲ್ಲಿ ಸಾರಜನಕ ಸ್ಥಿರೀಕರಣಕ್ಕೆ ಬಳಸಬಹುದಾದ ಪ್ರಮುಖ ಸಾರಜನಕ ಸ್ಥಿರೀಕರಿಸುವ ಜೈವಿಕ ಗೊಬ್ಬರವಾಗಿದೆ.

ರಂಜಕ ಕರಗಿಸುವ ಜೀವಾಣು: ಈ ಜೀವಾಣು ಮಣ್ಣಿನಲ್ಲಿ ಸ್ಥಿರೀಕರಣಗೊಂಡಿರುವ ರಂಜಕದ ಅಂಶವನ್ನು ಕರಗಿಸಿ ಬೆಳೆಗಳಿಗೆ ದೊರಕುವ ಹಾಗೆ ಮಾಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಇವುಗಳಲ್ಲಿ ಪ್ರಮುಖವಾಗಿ ಬ್ಯಾಸಿಲಸ್ ಮತ್ತು ಸೂಡೋಮೊನಾಸ್ ಪ್ರಭೇದದ ದುಂಡಾಣು ಹಾಗೂ ಶಿಲೀಂಧ್ರಗಳಾದ ಅಸ್ಪರ್‌ಜಿಲ್ಲಸ್ ಮತ್ತು ಪೆನ್ಸೀಲಿಯಂ ಪ್ರಭೇದಗಳು ಮುಖ್ಯವಾಗಿವೆ.

ಟ್ರೈಕೋಡರ್ಮಾ: ಈ ಶಿಲೀಂಧ್ರವು ಸಸ್ಯದ ಬೆಳವಣಿಗೆಯ ಪೋಷಣೆ, ರೋಗ ನಿರೋಧಕ (ಸೊರಗು ರೋಗ, ಕೊಳೆ ರೋಗ) ಶಕ್ತಿಯ ಹೆಚ್ಚಳ, ಸಾವಯವ ಅಂಶದ ಹೆಚ್ಚಳ ಹಾಗೂ ರಂಜಕ ಕರಗಿಸುವ ಗುಣಗಳನ್ನು ಹೊಂದಿದೆ. ಇದನ್ನು ಪ್ರಮುಖ ಜೈವಿಕ ರೋಗ ನಿಯಂತ್ರಕ ಜೀವಾಣುವಾಗಿ ಬಳಸಬಹುದು.

ಜೈವಿಕ ಗೊಬ್ಬರಗಳ ಬೀಜೋಪಚಾರ:

1               ಪ್ರತಿ ಎಕರೆಗೆ 200 ಗ್ರಾಂ. ನಿಂದ 400 ಗ್ರಾಂ. ಪುಡಿರೂಪದ ಜೈವಿಕ ಗೊಬ್ಬರಗಳನ್ನು ಪ್ರತಿ ಎಕರೆಗೆ ಶೀಫಾರಸ್ಸು ಮಾಡಿದ ಬಿತ್ತನೆ ಬೀಜಕ್ಕೆ ಉಪಚರಿಸಲು ಬಳಸಬೇಕು.

2              ಜೈವಿಕ ಗೊಬ್ಬರಗಳನ್ನು ಬೀಜಕ್ಕೆ ಲೇಪಿಸಲು ಅಂಟು ದ್ರಾವಣದ ಅವಶ್ಯಕತೆಯಿದೆ. ಅಂಟುದ್ರಾವಣ ತಯಾರಿಸಲು 70 ಗ್ರಾಂ. ಬೆಲ್ಲ ಅಥವಾ ಸಕ್ಕರೆಯನ್ನು 250 ಮಿ.ಲೀ. ನೀರಿನಲ್ಲಿ ಕರಗಿಸಿ 15 ನಿಮಿಷ ಕಾಲ ಕುದಿಸಿ ತಣ್ಣಗಾದ ಮೇಲೆ ಬಳಸಬೇಕು. ಒಂದು ಕಿ.ಗ್ರಾಂ. ಬಿತ್ತನೆ ಬೀಜಕ್ಕೆ 30-50 ಮಿ.ಲೀ. ಅಂಟು ದ್ರಾವಣ ಬೇಕಾಗುತ್ತದೆ.

3              ಒಂದು ಸಣ್ಣ ಪಾತ್ರೆಯಲ್ಲಿ ಅವಶ್ಯವಿದ್ದಷ್ಟು ದ್ರಾವಣ ಮತ್ತು ಜೈವಿಕ ಗೊಬ್ಬರದ ಪುಡಿಯನ್ನು ಹಾಕಿ ಮಿಶ್ರಣ ಮಾಡಿ ತದನಂತರ ಬಿತ್ತನೆ ಬೀಜವನ್ನು ಸುರಿದು ಪ್ರತಿ ಬೀಜಕ್ಕೂ ಸಮನಾಗಿ ಅಂಟುವAತೆ ಲೇಪನ ಮಾಡಬೇಕು.

4             ಈ ರೀತಿ ಸಂಸ್ಕರಿಸಿದ ಬೀಜವನ್ನು ಬಟ್ಟೆ ಅಥವಾ ಗೋಣಿ ಚೀಲದ ಮೇಲೆ ಹರಡಿ ನೆರಳಿನಲ್ಲಿ ಒಣಗಿಸಿದ ನಂತರ ಕೂಡಲೇ ಬಿತ್ತನೆ ಮಾಡಬೇಕು.

5              ಕೀಟನಾಶಕ ಅಥವಾ ಶಿಲೀಂಧ್ರನಾಶಕ ಲೇಪಿತ ಬೀಜಗಳಿಗೆ ಶಿಫಾರಸ್ಸಿನ ಎರಡು ಪಟ್ಟು ಹೆಚ್ಚು ಜೈವಿಕ ಗೊಬ್ಬರ ಬಳಸಬೇಕು.

ವಿವಿಧ ಬೆಳೆಗಳಲ್ಲಿ ಬೀಜೋಪಚಾರದ ಕ್ರಮಗಳು

 

ಬೆಳೆ

ಜೈವಿಕ ಗೊಬ್ಬರ

ಪ್ರಮಾಣ ಪ್ರತಿ ಎಕರೆ ಬಿತ್ತನೆ ಬೀಜಕ್ಕೆ (ಗ್ರಾಂ.)

ಕೀಟ ಅಥವಾ ರೋಗ ನಿಯಂತ್ರಣಕ್ಕೆ

ರಾಸಾಯನಿಕ ಅಥವಾ ಜೈವಿಕ ನಿಯಂತ್ರಕ

ಪ್ರಮಾಣ ಪ್ರತಿ ಕಿ.ಗ್ರಾಂ. ಬಿತ್ತನೆ ಬೀಜಕ್ಕೆ

1

ನೆಲಗಡಲೆ

ರೈಜೋಬಿಯಂ,

ರಂಜಕ ಕರಗಿಸುವ ಜೀವಾಣು

200

200

 

ಗೊಣ್ಣೆಹುಳು

ಕ್ಲೋರೋಫೈರಿಫಾಸ್ 20 ಇ.ಸಿ.

10 ಮಿ.ಲೀ.

2

ತೊಗರಿ 

ರೈಜೋಬಿಯಂ,

ರಂಜಕ ಕರಗಿಸುವ ಜೀವಾಣು

200

200

 

ಕತ್ತುಕೊಳೆ ರೋಗ

ಕಾರ್ಬೆಂಡೈಜಿಂ 50 ಡಬ್ಲ್ಯೂ ಯ.ಪಿ.

ಟ್ರೈಕೋಡರ್ಮಾ

 

2 ಗ್ರಾಂ.

5 ಗ್ರಾಂ

3

ಅಲಸಂದೆ

ರೈಜೋಬಿಯಂ,

ರಂಜಕ ಕರಗಿಸುವ ಜೀವಾಣು

200

200

 

ಸೊರಗು ರೋಗ

ಕಾರ್ಬೆಂಡೈಜಿಂ 50 ಡಬ್ಲ್ಯೂ ಯ.ಪಿ.

ಟ್ರೈಕೋಡರ್ಮಾ

 

2 ಗ್ರಾಂ.

5 ಗ್ರಾಂ

4

ಅವರೆ   

ರೈಜೋಬಿಯಂ,

ರಂಜಕ ಕರಗಿಸುವ ಜೀವಾಣು

200

200

 

ಸೊರಗು ರೋಗ

ಕಾರ್ಬೆಂಡೈಜಿಂ 50 ಡಬ್ಲ್ಯೂ ಯ.ಪಿ.

ಟ್ರೈಕೋಡರ್ಮಾ

 

2 ಗ್ರಾಂ.

5 ಗ್ರಾಂ

5

ರಾಗಿ

ಅಝೋಸ್ಪಿರಿಲಂ / ಅಜೊಟೋಬ್ಯಾಕ್ಟರ್         

200

200

 

ಬೆಂಕಿ ರೋಗ

ಕಾರ್ಬೆಂಡೈಜಿಂ 50 ಡಬ್ಲ್ಯೂ ಯ.ಪಿ.

ಟ್ರೈಕೋಡರ್ಮಾ

 

2 ಗ್ರಾಂ.

5 ಗ್ರಾಂ

6

ಭತ್ತ

ಅಝೋಸ್ಪಿರಿಲಂ / ಅಜೊಟೋಬ್ಯಾಕ್ಟರ್         

400

400

ಬೆಂಕಿ ರೋಗ

ಕಾರ್ಬೆಂಡೈಜಿಂ 50 ಡಬ್ಲ್ಯೂ ಯ.ಪಿ.

ಟ್ರೈಕೋಡರ್ಮಾ

 

4 ಗ್ರಾಂ.

5 ಗ್ರಾಂ

ಕೃಷಿ ಇಲಾಖೆ, ಕೃಷಿ ವಿಜ್ಞಾನ ಕೇಂದ್ರ ಮುಂಗಾರು ಹಂಗಾಮಿನ ಪ್ರಾರಂಭದಲ್ಲಿ ರೈತ ಭಾಂದವರಿಗೆ ಬೀಜೋಪಚಾರದ ಮಹತ್ವದ ಬಗ್ಗೆ ಆನ್‌ಲೈನ್ ತರಬೇತಿ, ಬೀಜೋಪಚಾರದ ಆಂದೋಲನ, ಕೃಷಿ ಅಭಿಯಾನ ಕಾರ್ಯಕ್ರಮದ ಮೂಲಕ ಅರಿವು ಮೂಡಿಸುತ್ತಿದ್ದು. ಈ ತಂತ್ರಜ್ಞಾನದ ಲಾಭವನ್ನು ಅರಿತು ರೈತರು ತಪ್ಪದೇ ಬಿತ್ತನೆ ಬೀಜದ ಬೀಜೋಪಚಾರ ಮಾಡಿ ಅಧಿಕ ಇಳುವರಿ ಪಡೆದು ಉತ್ತಮ ಆದಾಯಗಳಿಸಬಹುದಾಗಿದೆ.

ಲೇಖನ:ಡಾ. ದಿನೇಶ, ಎಂ.ಎಸ್., ಡಾ. ಸವಿತಾ, ಎಸ್.ಎಂ., ಡಾ. ಲತಾ ಆರ್. ಕುಲಕರ್ಣಿ ಮತ್ತು ಶ್ರೀಮತಿ. ಪ್ರೀತು, ಡಿ.ಸಿ.

ವಿಜ್ಞಾನಿಗಳು, ಕೃಷಿ ವಿಜ್ಞಾನ ಕೇಂದ್ರ, ಚಂದೂರಾಯನಹಳ್ಳಿ, ಕಲ್ಯಾ ಪೋಸ್ಟ್, ಮಾಗಡಿ ತಾಲ್ಲೂಕು, ರಾಮನಗರ ಜಿಲ್ಲೆ.

Published On: 25 June 2021, 08:34 PM English Summary: Good crop from good seed

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.