1. ಅಗ್ರಿಪಿಡಿಯಾ

ತ್ಯಾಜ್ಯ ವಿಭಜಕ- ಕೃಷಿ ತ್ಯಾಜ್ಯ ನಿರ್ವಹಣೆಗೊಂದು ಪರಿಣಾಮಕಾರಿ ಸಾಧನ

ರಾಷ್ಟ್ರೀಯ ಸಾವಯವ ಕೃಷಿ ಕೇಂದ್ರ (N.C.O.F) ಗಾಜಿಯಾಬಾದ್‌ನಿಂದ ಸಿದ್ದಪಡಿಸಿದ ತ್ಯಾಜ್ಯ ವಿಭಜಕ (Waste decomposer)ವು ಸಾವಯವ ತ್ಯಾಜ್ಯ ನಿರ್ವಹಣೆಯಲ್ಲಿ ಮುಖ್ಯ ಪಾತ್ರವಹಿಸುತ್ತದೆ. ಇದಲ್ಲದೆ ಮಣ್ಣಿನ ಆರೋಗ್ಯ ಉತ್ತಮ ಪಡಿಸಲು ಮತ್ತು ಸಸ್ಯ ಸಂರಕ್ಷಣೆಯಲ್ಲೂ ಮುಖ್ಯಪಾತ್ರವಹಿಸುತ್ತದೆ. ಇದು ಸೂಕ್ಮಾಣು ಜೀವಿಗಳ ಮಿಶ್ರಣವಾಗಿದ್ದು ಇದನ್ನು ನಾಟಿ (ದೇಸಿಯ) ಹಸುಗಳ ಸಗಣೆಯಿಂದ ಬೇರ್ಪಡಿಸಲಾಗಿದೆ.

ಈ ತ್ಯಾಜ್ಯ ವಿಭಜಕವು ಮಾರುಕಟ್ಟೆಯಲ್ಲಿ 30 ಗ್ರಾಂ ಬಾಟಲಿಯಲ್ಲಿ ರೂ. 20/- ದರದಲ್ಲಿ ನೇರವಾಗಿ ರಾಷ್ಟ್ರೀಯ ಅಥವಾ ಪ್ರಾದೇಶಿಕ ಸಾವಯವ ಕೃಷಿ ಕೇಂದ್ರಗಳಿಂದ ರೈತರು ಪಡೆಯಬಹುದು. ತ್ಯಾಜ್ಯ ವಿಭಜಕವನ್ನು ಭಾರತೀಯ ಕೃಷಿ ಅನುಸಂದಾನ ಸಂಸ್ಥೆಯು ಧೃಡೀಕರಿಸಿದ್ದು, ಒಂದು ಬಾಟಲಿ ತ್ಯಾಜ್ಯ ವಿಭಜಕದಿಂದ 10000 ಮೆಟ್ರಿಕ್ ಟನ್ ಜೈವಿಕ ತ್ಯಾಜ್ಯವನ್ನು 30ದಿನಗಳಲ್ಲಿ ಕರಗಿಸಬಹುದು.

ತ್ಯಾಜ್ಯ ವಿಭಜಕ ಮಿಶ್ರಣವನ್ನು ತಯಾರಿಸುವ ವಿಧಾನ:-

 1. 200 ಲೀಟರ್ ನೀರನ್ನು ಪ್ಲಾಸ್ಟಿಕ್ ಡ್ರಮ್ಮಿನಲ್ಲಿ ತೆಗೆದುಕೊಂಡು ಅದರಲ್ಲಿ 2 ಕೆ.ಜಿ ಬೆಲ್ಲವನ್ನು ಕರಗಿಸಬೇಕು.
 2. ಈ ಮೇಲಿನ ಮಿಶ್ರಣಕ್ಕೆ 30 ಗ್ರಾಂ (1 ಬಾಟಲಿ) ತ್ಯಾಜ್ಯ ವಿಭಜಕವನ್ನು ಮಿಶ್ರಣ ಮಾಡಬೇಕು.
 3. ನೀರಿನಲ್ಲಿ ಕರಗಿಸಿದ ಬೆಲ್ಲದ ಮತ್ತು ತ್ಯಾಜ್ಯ ವಿಭಜಕ ಮಿಶ್ರಣವನ್ನು ಒಂದು ಮರದ ಕೋಲಿನಿಂದ ಚನ್ನಾಗಿ ಬೆರೆಸಬೇಕು.
 4. ಮಿಶ್ರಣವಿರುವ ಡ್ರಮ್‌ನ್ನು ಮರದ ಹಲಗೆ ಅಥವಾ ಪೇಪರ್‌ನಿಂದ ಮುಚ್ಚಬೇಕು ಹಾಗೂ ಪ್ರತಿದಿನ ಒಂದು ಅಥವಾ ಎರಡು ಬಾರಿ ಕೋಲಿನಿಂದ ತಿರುಗಿಸಬೇಕು.
 5. ಡ್ರಮ್‌ನಲ್ಲಿ ತುಂಬಿರುವ ಮಿಶ್ರಣವು 5 ದಿನಗಳಲ್ಲಿ ನೊರೆಬರಲು ಪ್ರಾರಂಭಿಸುತ್ತದೆ. ಆಗ ಮಿಶ್ರಣವು ಉಪಯೋಗಿಸಲು ಸಿದ್ಧವಾಗಿದೆ ಎಂದು ಭಾವಿಸುವುದು.
 6. ಮೇಲೆ ತಯಾರಾಗಿರುವ ತ್ಯಾಜ್ಯ ವಿಭಜಕ ಮಿಶ್ರಣದಿಂದ 20 ಲೀಟರ್ ಮಿಶ್ರಣವನ್ನು ತೆಗೆದುಕೊಂಡು ಅದಕ್ಕೆ 2 ಕೆ.ಜಿ. ಬೆಲವನ್ನ್ಲು 20 ಲೀಟರ್ ನೀರಿನಲ್ಲಿ ಕರಗಿಸಿ, ಆ ಮಿಶ್ರಣದಲ್ಲಿ ಬೆರೆಸಿ ನಂತರ ಉಪಯೋಗಿಸಬಹುದು. ಹಾಗೂ ರೈತರು ತಮ್ಮ ತೋಟದಲ್ಲಿಯೆ ಈ ರೀತಿಯ ತ್ಯಾಜ್ಯ ವಿಭಜಕ ಮಿಶ್ರಣವನ್ನು ನಿರಂತರವಾಗಿ ಸಿದ್ಧಪಡಿಸಿಕೊಳ್ಳಬಹುದು.

ತ್ಯಾಜ್ಯ ವಿಭಜಕದ ಮುಖ್ಯ ವೈಶಿಷ್ಟ್ಯಗಳು:

 1. ಸುಲಭ ರೀತಿಯಲ್ಲಿ ತಯಾರಿಸಬಹುದು.
 2. ಕಡಿಮೆ ಸಮಯದಲ್ಲಿ (5 ದಿನಗಳಲ್ಲಿ) ತ್ಯಾಜ್ಯ ವಿಭಜಕ ಮಿಶ್ರಣವನ್ನು ಸಿದ್ಧ ಪಡಿಸಬಹುದು.
 3. ಒಂದು ಬಾರಿ ತಯಾರಿಸಿದ ಮಿಶ್ರಣವನ್ನು ದೀರ್ಘಕಾಲದವರೆಗೆ ಉಪಯೋಗಿಸಬಹುದು.
 4. ಈ ಮಿಶ್ರಣವನ್ನು ಎಲ್ಲಾ ರೀತಿಯ ಬೆಳೆಗಳಿಗೂ ಉಪಯೋಗಿಸಬಹುದು.
 5. ಈ ಮಿಶ್ರಣವನ್ನು ಎಲ್ಲಾ ರೀತಿಯ ಬೆಳೆಗಳಿಗೆ ಉಪಯೋಗಿಸುವುದರಿಂದ ಉತ್ತಮ ಫಲಿತಾಂಶ ಪಡೆಯಬಹುದು.
 6. ಕಡಿಮೆ ಬೆಲೆಯಲ್ಲಿ (1 ಬಾಟಲ್‌ಗೆ ರೂ 20/-) ದೊರೆಯುತ್ತದೆ.
 7. ಒಂದು ಬಾಟಲ್ ತ್ಯಾಜ್ಯ ವಿಭಜಕ ಮಿಶ್ರಣದಿಂದ ಒಂದು ಲಕ್ಷ ಮೆಟ್ರಿಕ್‌ಟನ್ ಸಾವಯವ ಗೊಬ್ಬರವನ್ನು ತಯಾರಿಸಬಹುದು.

ಗೊಬ್ಬರ ತಯಾರಿಸುವ ವಿಧಾನ:

 1. ಒಂದು ಟನ್ ಕಚ್ಚಗೊಬ್ಬರವನ್ನು ನೆರಳಿನಲ್ಲಿ ಪ್ಲಾಸ್ಟಿಕ್ ಹಾಳೆಯ ಮೇಲೆ ತೆಳುವಾಗಿ (18 ರಿಂದ 20ಸೆಂಟಿಮೀಟರ್ ದಪ್ಪ) ಹರಡುವುದು.
 2. ಮೇಲೆ ತೆಳುವಾಗಿ ಹರಡಿರುವ ಕಚ್ಚಗೊಬ್ಬರದ ಮೇಲೆ 20 ಲೀಟರ್ ತ್ಯಾಜ್ಯ ವಿಭಜಕ ಮಿಶ್ರಣವನ್ನು ಚಿಮುಕಿಸುವುದು.
 3. ಇದರ ಮೇಲೆ ಮತ್ತೊಂದು ಪದರ ಕಚ್ಚಗೊಬ್ಬರವನ್ನು ತೆಳುವಾಗಿ ಹರಡುವುದು.
 4. ಮೇಲಿನ 2ನೇ ಪದರದ ಕಚ್ಚಗೊಬ್ಬರದ ಮೇಲೆ 20ಲೀಟರ್ ತ್ಯಾಜ್ಯ ವಿಭಜಕ ಮಿಶ್ರಣವನ್ನು ಚಿಮುಕಿಸುವುದು.
 5. ಈ ಮೇಲೆ ತಯಾರಿಸಿಕೊಂಡಿರುವ 200ಲೀಟರ್ ಮಿಶ್ರಣವನ್ನು 10 ಪದರಗಳವರೆಗೂ ಉಪಯೋಗಿಸಬಹುದು.
 6. ಗೊಬ್ಬರ ಸಿದ್ಧವಾಗುವ ಸಮಯದವರೆಗೂ 60% ತೇವಾಂಶ ಇರುವಂತೆ ಎಚ್ಚರವಹಿಸಬೇಕು.
 7. ಈ ಮೇಲಿನ ರೀತಿಯಲ್ಲಿ ಸಿದ್ಧಪಡಿಸಿರುವ ಕಚ್ಛಾಗೊಬ್ಬರದ ರಾಶಿಯನ್ನು ಪ್ರತಿ 7 ದಿನಗಳಿಗೊಮ್ಮೆ ಮಿಶ್ರಣ ಮಾಡುವುದು. ಈ ವಿಧಾನದಿಂದ 30 ದಿನಗಳಲ್ಲಿ ಉತ್ತಮ ಗುಣಮಟ್ಟದ ಕಳಿತ ಗೊಬ್ಬರ ತಯಾರಾಗುತ್ತದೆ.

ಬೀಜ ಸಂಸ್ಕರಣೆ:

 1. ಒಂದು ಬಾಟಲ್ ತ್ಯಾಜ್ಯವಿಭಜಕ್ಕೆ 30ಗ್ರಾಂ ಬೆಲ್ಲವನ್ನು ಪುಡಿಮಾಡಿ ಬೆರಸಿ, ಈ ಮಿಶ್ರಣವನ್ನು 20ಕೆ.ಜಿ. ಬೀಜಗಳಿಗೆ ಬೆರಸುವುದು.
 2. ಮಿಶ್ರಣಮಾಡಿದ ಬೀಜಗಳನ್ನು ನೆರಳಿನಲ್ಲಿ 30ನಿಮಿಷಗಳವರೆಗೆ ಒಣಗಿಸಿ ನಂತರ ಬಿತ್ತನೆಗೆ ಉಪಯೋಗಿಸುವುದು.

ಜೈವಿಕ ಕೀಟನಾಶಕಗಳಾಗಿ ತ್ಯಾಜ್ಯ ವಿಭಜಕ ಮಿಶ್ರಣವನ್ನು ಬಳಸುವುದು.

ಸಿದ್ಧಪಡಿಸಿದ ತ್ಯಾಜ್ಯ ವಿಭಜಕ ಮಿಶ್ರಣವನ್ನು ನೀರಿನ ಜೊತೆ 1:3 ಅನುಪಾತದಲ್ಲಿ ಬೆರಸಿ ಕೀಟ ಮತ್ತು ರೋಗವಿರುವ ಗಿಡಗಳಿಗೆ ಸಿಂಪಡಿಸುವುದು. ಈ ಮಿಶ್ರಣವು ಎಲ್ಲಾ ತರಹದ ಮಣ್ಣಿನಿಂದ ಬರುವ ಕೀಟ ಮತ್ತು ರೋಗಗಳಿಗೆ ಉಪಯೋಗಿಸಬಹುದು. ಮಣ್ಣಿನ ಗುಣಮಟ್ಟವನ್ನು ಹೆಚ್ಚಿಸಲು ಸಹಬಳಸಬಹುದು.

ತ್ಯಾಜ್ಯ ವಿಭಜಕ ದೊರೆಯುವ ಸ್ಥಳಗಳು:

ತ್ಯಾಜ್ಯ ವಿಭಜಕವನ್ನು ನೇರವಾಗಿ ರಾಷ್ಟಿçÃಯ ಸಾವಯವ ಕೃಷಿಕೇಂದ್ರ, ಗಾಜಿಯಬಾದ್ ಮತ್ತು ಪ್ರಾದೇಶಿಕ ಸಾವಯವ ಕೃಷಿ ಕೇಂದ್ರ, ಬೆಂಗಳೂರಿನಿAದ ಪಡೆಯಬಹುದು. ಇದಲ್ಲದೆ ಇತ್ತೀಚಿನ ದಿನಗಳಲ್ಲಿ ಆನ್‌ಲೈನ್‌ನಲ್ಲಿಯೂ ಸಹ ಮಾರಾಟಕ್ಕೆ ಲಭ್ಯವಿದೆ. https://krushikendra.com ಮತ್ತು https://www.amazon.in. ಸಂಪರ್ಕಿಸಬಹುದು.

ಲೇಖನ : ಹರೀಶ್ ಕುಮಾರ್, ಕೆ., ಚಂದ್ರಶೇಖರ್, ಎಸ್. ವೈ. ಮತ್ತು ಪ್ರದೀಪ್ ಕುಮಾರ್, ಸಿ. ಎಂ. ತೋಟಗಾರಿಕಾ ಮಹಾವಿದ್ಯಾಲಯ, ಮೂಡಿಗೆರೆ

Published On: 25 June 2021, 08:44 PM English Summary: prepare manure from Waste decomposer

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.