1. ಅಗ್ರಿಪಿಡಿಯಾ

ರೈತರೇ ಇಲ್ನೋಡಿ: ಈ ತಿಂಗಳ ಕೊನೆಯಲ್ಲಿ ಟೊಮೆಟೋ ಬೆಳೆದರೆ ಬಂಪರ್‌ ಆದಾಯ ಬರೋದು ಪಕ್ಕಾ!

Maltesh
Maltesh
Tomato

ಭಾರತದಲ್ಲಿ ಟೊಮೆಟೊ ಕೃಷಿಯು ಅತ್ಯಂತ ಲಾಭದಾಯಕ ಕೃಷಿ ವ್ಯಾಪಾರವಾಗಿದೆ. ಆಲೂಗಡ್ಡೆ ನಂತರ ಇದು ವಿಶ್ವದ ಎರಡನೇ ಪ್ರಮುಖ ಬೆಳೆಯಾಗಿದೆ. ಇದನ್ನು  ಕಚ್ಚಾ ಅಥವಾ ಬೇಯಿಸಿದ ರೂಪದಲ್ಲಿ ತಿನ್ನಲಾಗುತ್ತದೆ ಮತ್ತು ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿರುವ 'ಎ' ಮತ್ತು 'ಸಿ' ನಂತಹ ವಿಟಮಿನ್‌ಗಳನ್ನು ಹೊಂದಿರುತ್ತದೆ. ಈ ಪ್ರಯೋಜನಗಳಿಂದಾಗಿ, ವರ್ಷವಿಡೀ ಟೊಮೆಟೊ ಬೇಡಿಕೆ ಹೆಚ್ಚಾಗಿರುತ್ತದೆ.  

ಇತರ ಬೆಳೆಗಳಿಗಿಂತ ಟೊಮೆಟೊ ಬೆಳೆಯುವ ಪ್ರಯೋಜನಗಳು 

ಅಲ್ಪಾವಧಿಯ ತರಕಾರಿ ಬೆಳೆ.

ಟೊಮೆಟೊವನ್ನು ಹೊರಾಂಗಣದಲ್ಲಿ ಮತ್ತು ಒಳಾಂಗಣದಲ್ಲಿ ಬೆಳೆಯಬಹುದು.

ಟೊಮೆಟೊ ಬೇಸಾಯವು ಧಾನ್ಯಗಳು, ಧಾನ್ಯಗಳು, ದ್ವಿದಳ ಧಾನ್ಯಗಳು ಮತ್ತು ಎಣ್ಣೆಕಾಳುಗಳ ವಿವಿಧ ಬೆಳೆ ಪದ್ಧತಿಗಳಲ್ಲಿ ಉತ್ತಮವಾಗಿ ಹೊಂದಿಕೊಳ್ಳುತ್ತದೆ.

ಬೇಸಾಯವು ಹೆಚ್ಚಿನ ಇಳುವರಿಯನ್ನು ನೀಡುತ್ತದೆ ಆದ್ದರಿಂದ ಹೆಚ್ಚಿನ ಆರ್ಥಿಕ ಮೌಲ್ಯವನ್ನು ನೀಡುತ್ತದೆ.

ಹೆಚ್ಚಿನ ಖನಿಜ ಮತ್ತು ವಿಟಮಿನ್ ಅಂಶಕ್ಕಾಗಿ ಟೊಮ್ಯಾಟೋ ಪೌಷ್ಟಿಕಾಂಶದ ಮೌಲ್ಯಯುತವಾಗಿದೆ.ಬೇಸಿಗೆಯಲ್ಲಿ ಮಾವಿನ ಹಣ್ಣು ತಿನ್ನುವುದರಿಂದಾಗುವ ಲಾಭಗಳು!

ಟೊಮ್ಯಾಟೊ ನಮ್ಮ ರಾಜ್ಯದಲ್ಲಿ ಹೆಚ್ಚಾಗಿ ಬೆಳೆಯುವ ಜನಪ್ರಿಯ ತರಕಾರಿಯಾಗಿದೆ. ಇದನ್ನು ಎಲ್ಲ ವಿಧದ  ಮಣ್ಣುಗಳಲ್ಲಿ ಹಾಗೂ ಮೂರೂ ಕಾಲಗಳಲ್ಲಿ ಬೆಳೆಯಬಹುದು. ಇದು ಸೋಲೆನೆಸೀ (Solanaceae)  ಕುಟುಂಬಕ್ಕೆ ಸೇರಿದ್ದು ಇದರ ವೈಜ್ಞಾನಿಕ ಹೆಸರು ಲೈಕೊಪರ್ಸಿಕೊನ್ ಎಸ್ಕುಲೆಂಟಮ್ (Lycopersicon esculentum). ಚಳಿಗಾಲದಲ್ಲಿ  ಬಹಳಷ್ಟು  ರೈತರು ಬಿಸಾಡುವ ಬೆಲೆಯಲ್ಲಿ ತಮ್ಮ ಟೊಮ್ಯಾಟೊ ಮಾರಾಟ ಮಾಡುತ್ತಾರೆ. 

ಮತ್ತು ಗಣನೀಯ ಪ್ರಮಾಣದಲ್ಲಿ ಕೆಟ್ಟುಹೋಗುತ್ತವೆ ಏಕೆಂದರೆ ಟೊಮ್ಯಾಟೊ ಒಂದು ಅತೀ ಬೇಗ ಕೆಟ್ಟು ಹೋಗುವ ಹಣ್ಣು. ಇದನ್ನು ತಪ್ಪಿಸಲು, ಮನೆಯಲ್ಲಿ ವಿವಿಧ ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸಿ  ಬಳಸಬಹುದು. ಟೊಮ್ಯಾಟೊ ಹಣ್ಣಿನಿಂದ ಜಾಮ್, ಸಾಸ್, ಕೆಚಪ್, ಚಟ್ನಿ ಹೀಗೆ ಹಲವಾರು ಪದಾರ್ಥಗಳನ್ನು ತಯಾರಿಸಬಹುದು.

ಟೊಮ್ಯಾಟೊ ಆರೋಗ್ಯಕ್ಕೆ ಮುಖ್ಯವಾಗಿರುವ  ಜೀವಸತ್ವಗಳು ಮತ್ತು ಖನಿಜಗಳಿಂದ  ಸಮೃದ್ಧವಾಗಿದೆ:

ಲೈಕೊಪೆನ್ ಅಂಶವು ಕ್ಯಾನ್ಸರ್- ತಡೆಯುವ ಗುಣಲಕ್ಷಣಗಳನ್ನು ಹೊಂದಿವೆ.(ಟೊಮೆಟೊಗಳನ್ನು ಕೆಂಪು ಮಾಡುವ  ಪದಾರ್ಥ).

ರಕ್ತ ಶುದ್ಧೀಕರಣದಲ್ಲಿ ಸಹಾಯ ಮಾಡುವುದು

ದೇಹದಲ್ಲಿರುವ ವಿಷಕಾರಕ ಅಂಶಗಳನ್ನು ನಿರ್ಮೂಲನೆ ಮಾಡಿ ಶಕ್ತಿ ಉತ್ಪನ್ನ ಮಾಡುತ್ತದೆ

ಇದರಲ್ಲಿ ಹಾಲಿನ ಎರಡು ಪಟ್ಟು ಮತ್ತು ಮೊಟ್ಟೆ(ಬಿಳಿ ಭಾಗದ)ಯ ಐದು ಪಟ್ಟು ಪ್ರಮಾಣ ಕಬ್ಬಿಣಾಂಶ ಇರುವುದು.

ಕಣ್ಣಿಗೆ ಸಂಬಧಿಸಿದ ರೋಗಗಳನ್ನು ತಡೆಗಟ್ಟುವಲ್ಲಿ ಸಹಾಯ ಮಾಡುವುದು.White Bread& Brown Bread-ಬಿಳಿ ಬ್ರೆಡ್ ಹಾಗೂ ಕಂದು ಬ್ರೆಡ್..ಯಾವುದು ಉತ್ತಮ..?

ಲಾಭದಾಯಕ ಟೊಮೆಟೋ ಕೃಷಿಗೆ ಯಾವ ಸಮಯ ಸೂಕ್ತ..?

ಸಾಮಾನ್ಯವಾಗಿ ಫೆಬ್ರವರಿ 2ನೇ ವಾರದಿಂದ ನಾಲ್ಕನೇ ವಾರದೊಳಗೆ ನಾಟಿ ಮಾಡುವುದು. ಈ ಅವಧಿಯಲ್ಲಿ ಟೊಮೆಟೊ ಬೆಳೆಯಬೇಕು ಎಂಬ ಕಲ್ಪನೆ ರೈತರಿಗೆ ಇರುವುದಿಲ್ಲ.

ಟೊಮೆಟೋ ಗಿಡಗಳನ್ನು ಫೆಬ್ರವರಿ ಎರಡನೇ ವಾರದಿಂದ ಮಾರ್ಚ್ ಮೊದಲನೇ ವಾರದ ಒಳಗೆ ನಾಟಿ ಮಾಡಿದ್ರೆ ನಿರೀಕ್ಷೆಗೂ ಮೀರಿ ಲಾಭ ಸಿಗಲಿದೆ. ಫೆಬ್ರವರಿಯಲ್ಲಿ ಯಾಕೆ ಟೊಮೆಟೊ ಬೆಳೆಯಬೇಕು ಎಂಬುದಕ್ಕೆ ಕೆಲವು ರೈತರು ಕೊಟ್ಟಿರುವ ವೈಜ್ಞಾನಿಕ ಕಾರಣಗಳನ್ನು ಗಮನಿಸಿದರೆ ಈ ಸಮಯವೇ ಸೂಕ್ತ ಎನ್ನಿಸುತ್ತದೆ.

ಸಾಮಾನ್ಯವಾಗಿ ಟೊಮೆಟೊ ಗಿಡಗಳನ್ನು ನವೆಂಬರ್- ಡಿಸೆಂಬರ್ ತಿಂಗಳಿನಲ್ಲಿ ನಾಟಿ ಮಾಡಿ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಾರೆ.

ಸಾಮಾನ್ಯವಾಗಿ ಪ್ರತಿವರ್ಷ ಮೇ ಮತ್ತು ಜೂನ್ ತಿಂಗಳಲ್ಲಿ ಟೊಮೆಟೊ ಬೆಲೆ ಗಗನಕ್ಕೇರಿರುತ್ತದೆ. ಯಾಕೆಂದರೆ, ಕಳೆದ 10 ವರ್ಷದಿಂದ ಮುಂಗಾರು ಮಳೆ ಮತ್ತು ಬೇಸಿಗೆ ಮಳೆ ವಾಡಿಕೆ ಮೀರಿ ಸುರಿಯುತ್ತಿದೆ. ಹೀಗಾಗಿ ನೆರೆಯ ರಾಜ್ಯಗಳಾದ ಮಹಾರಾಷ್ಟ್ರ ಮತ್ತು ಆಂಧ್ರ ಪ್ರದೇಶದಲ್ಲಿ ಟೊಮೆಟೋ ಬೆಳೆ ಕ್ಷೀಣಿಸಿದೆ.

ಒಂದು ವೇಳೆ ನಾಟಿ ಮಾಡಿದರೂ ಅಲ್ಲಿನ ಉಷ್ಣಾಂಶ ತೀವ್ರತೆಯಿಂದ ಕರ್ನಾಟಕಕ್ಕೆ ಹೋಲಿಸಿದ್ರೆ ಹೆಚ್ಚು ಫಸಲು ಬರುವುದಿಲ್ಲ. ಬೇಸಿಗೆ ಹಾಗೂ ಮುಂಗಾರು ಪ್ರವೇಶದ ಮಳೆ ಸತತಾಗಿ ಪ್ರವಾಹ ಉಂಟು ಮಾಡುತ್ತಿದೆ. ಹೀಗಾಗಿ ಫೆಬ್ರವರಿ ಎರಡನೇ ವಾರದಲ್ಲಿ ಟೊಮೆಟೊ ನಾಟಿ ಮಾಡಿದ್ರೆ, ಮೇಲೆ ಜೂನ್ ತಿಂಗಳಲ್ಲಿ ಫಸಲು ಬರುತ್ತದೆ. ಈ ಅವಧಿಯಲ್ಲಿ ಆಂಧ್ರ ಪ್ರದೇಶ ಮತ್ತು ಮಹಾರಾಷ್ಟ್ರದಲ್ಲಿ ರೈತರು ಟೊಮೆಟೊ ಬೆಳೆಯುವುದಿಲ್ಲ. ಹೀಗಾಗಿ ರಾಜ್ಯದ ರೈತರಿಗೆ ಸಹಜವಾಗಿ ನಿರೀಕ್ಷೆಗೂ ಮೀರಿ ಲಾಭ ಸಿಗುತ್ತದೆ ಎಂಬುದು ಸಾಕಷ್ಟು ಆದಾಯ ಪಡೆದ ರೈತರ ಮಾತಾಗಿದೆ.ಬೇಸಿಗೆಯಲ್ಲಿ ಮಾವಿನ ಹಣ್ಣು ತಿನ್ನುವುದರಿಂದಾಗುವ ಲಾಭಗಳು!

Published On: 02 July 2022, 11:32 AM English Summary: Do Tomato Cultivation in this month end get more income

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.