1. ಅಗ್ರಿಪಿಡಿಯಾ

ಈ ರಾಜ್ಯದಲ್ಲಿ ನಾಳೆಯಿಂದ ರೇಷನ್‌ ಜೊತೆ ಟೊಮೆಟೋ ವಿತರಣೆ

Maltesh
Maltesh
Distribution of tomato along with ration in this state from tomorrow

ಈ ವರ್ಷ ಬೇಸಿಗೆಯಲ್ಲಿ ತೀವ್ರ ಬಿಸಿಲಿನ ತಾಪ ಹಾಗೂ ಈ ಹಿಂದೆ ಸಾಕಷ್ಟು ಬೆಲೆ ಇಲ್ಲದ ಕಾರಣ ರೈತರು ಈ ಹಂಗಾಮಿನಲ್ಲಿ ಟೊಮೆಟೊ ಬೆಳೆಯಲು ಆಸಕ್ತಿ ತೋರಿಲ್ಲ . ಅದೇ ಸಮಯದಲ್ಲಿ, ನೆರೆಯ ರಾಜ್ಯಗಳಿಂದ ಟೊಮೆಟೊ ಪೂರೈಕೆ ಕಡಿಮೆಯಾದ ಕಾರಣ ಕಳೆದ ಎರಡು ವಾರಗಳಲ್ಲಿ ಟೊಮೆಟೊ ಬೆಲೆ ಗಗನಕ್ಕೇರಿದೆ.

ಇನ್ನು ಹೊರಾಂಗಣ ಮಾರುಕಟ್ಟೆಗಳಲ್ಲಿ ಕಿಲೋ ಟೊಮೆಟೊ ಬೆಲೆ 100ರಿಂದ 130 ರೂ. ಇದರಿಂದ ಬಡ ಮತ್ತು ಮಧ್ಯಮ ವರ್ಗದ ಜನರು ಹೆಚ್ಚು ತೊಂದರೆ ಅನುಭವಿಸುತ್ತಿದ್ದಾರೆ. ಈ ಸಮಸ್ಯೆ ಗಂಭೀರತೆಯನ್ನು ಪರಿಗಣಿಸಿದ ತಮಿಳುನಾಡು ಸರ್ಕಾರವು ಟೊಮೆಟೊವನ್ನು ಸಾರ್ವಜನಿಕರಿಗೆ ಸಮಂಜಸವಾದ ಬೆಲೆಯಲ್ಲಿ ಲಭ್ಯವಾಗುವಂತೆ ಮಾಡಲು ಹೊಸ  ಕ್ರಮ ಕೈಗೊಂಡಿದೆ.

ದರಂತೆ ಪ್ರಸ್ತುತ ಸರ್ಕಾರದ ವತಿಯಿಂದ 62 ಕೃಷಿ ಹಸಿರು ಗ್ರಾಹಕ ಅಂಗಡಿಗಳು ಮತ್ತು 3 ಸಂಚಾರಿ ಕೃಷಿ ಹಸಿರು ಗ್ರಾಹಕ ಅಂಗಡಿಗಳ ಮೂಲಕ 60 ರೂ.ಗೆ  ಒಂದು ಕೆಜು ಟೊಮೆಟೊ ಮಾರಾಟ ಮಾಡಲಾಗುವುದು ಎಂದು  ತಮಿಳುನಾಡು ಸಹಕಾರಿ ಸಚಿವ ಪೆರಿಯಕರುಪ್ಪನ್ ತಿಳಿಸಿದ್ದಾರೆ.

ಟೊಮೇಟೊ ಬೆಲೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ನಾಳೆಯಿಂದ ಪಡಿತರ ಅಂಗಡಿಗಳಲ್ಲಿ ಟೊಮೇಟೊ ಮಾರಾಟ ಮಾಡಲಾಗುವುದು ಎಂದು ಸಹಕಾರಿ ಸಚಿವ ಪೆರಿಯಕರುಪ್ಪನ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕಳೆದ 10 ದಿನಗಳಿಂದ ಟೊಮೇಟೊ ಬೆಲೆ ಹೆಚ್ಚಾಗಿದೆ. ಅದರ ಆಧಾರದ ಮೇಲೆ ಟೊಮೇಟೊ ಬೆಲೆ ಇಳಿಕೆ ಹಾಗೂ ಬೆಲೆ ಏರಿಕೆ ನಿಯಂತ್ರಣಕ್ಕೆ ಮುಖ್ಯಮಂತ್ರಿಗಳ ಸಲಹೆ ಪಡೆದು ಮುಂದುವರಿಯುತ್ತಿದ್ದೇವೆ. ಕಳೆದ ವಾರ ನಡೆದ ಸಮಾಲೋಚನಾ ಸಭೆಯಲ್ಲಿ ಕೈಗೊಂಡ ನಿರ್ಧಾರದ ಆಧಾರದ ಮೇಲೆ ಕೃಷಿ ಹಸಿರು ಅಂಗಡಿಗಳಲ್ಲಿ 60 ರೂ.ಗೆ ಟೊಮೆಟೊ ಮಾರಾಟ ಮಾಡುತ್ತಿದ್ದೇವೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಕೇಂದ್ರ ಸಚಿವ ಪಿಯೂಷ್ ಗೋಯಲ್ ಕೂಡ ಈ ಬೆಲೆ ಏರಿಕೆ ಬಗ್ಗೆ ಮಾಹಿತಿ ನೀಡಿದ್ದಾರೆ. ಸಾರ್ವಜನಿಕರಿಗೆ ಸುಲಭವಾಗಿ ಟೊಮೇಟೊ ಸಿಗುವ ನಿಟ್ಟಿನಲ್ಲಿ ನಾಳೆಯಿಂದ ಒಟ್ಟು 82 ಸಮಂಜಸ ಬೆಲೆ ಅಂಗಡಿಗಳಲ್ಲಿ ಟೊಮೇಟೊ ಮಾರಾಟ ಆರಂಭವಾಗಲಿದ್ದು, ಆರಂಭದಲ್ಲಿ ಉತ್ತರ ಚೆನ್ನೈನ 32 ಪಡಿತರ ಅಂಗಡಿಗಳು, ದಕ್ಷಿಣ ಚೆನ್ನೈನ 25 ಪಡಿತರ ಅಂಗಡಿಗಳು ಮತ್ತು ಸೆಂಟ್ರಲ್ ಚೆನ್ನೈನ 25 ಪಡಿತರ ಅಂಗಡಿಗಳಲ್ಲಿ ಟೊಮೇಟೊ ಮಾರಾಟ ಆರಂಭವಾಗಲಿದೆ.  

ಕೃಷಿ ಹಸಿರು ಅಂಗಡಿಗಳಲ್ಲಿ ಟೊಮ್ಯಾಟೊ ಮಾರಾಟ ಮುಂದುವರಿಯುತ್ತದೆ. ಪ್ರತಿ ಪಡಿತರ ಅಂಗಡಿಯಲ್ಲಿ ಬೇಡಿಕೆಗೆ ಅನುಗುಣವಾಗಿ 50 ರಿಂದ 100 ಕೆಜಿ ಟೊಮೆಟೊ ಮಾರಾಟಕ್ಕೆ ಸಿದ್ಧವಾಗಿದೆ ಎಂದು ತಿಳಿಸಿದರು. ಒಬ್ಬರಿಗೆ ಸಿಗುವ ಕನಿಷ್ಠ ಪ್ರಮಾಣದ ಟೊಮೆಟೊಗಳ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಆದರೆ, ಅಂಗಡಿಯಲ್ಲಿನ ಲಭ್ಯತೆ ಆಧರಿಸಿ ಟೊಮೇಟೊ ಮಾರಾಟ ನಡೆಯಲಿದೆ ಎಂದು ಪಡಿತರ ಅಂಗಡಿ ಮೂಲಗಳು ತಿಳಿಸಿವೆ.

ಸದ್ಯ ನಾವು ಮೊದಲ ಹಂತವಾಗಿ ಚೆನ್ನೈನಲ್ಲಿ ಆರಂಭಿಸಲಿದ್ದೇವೆ. ಇದನ್ನು ಟೊಮೇಟೊ ಬೆಲೆಗೆ ಅನುಗುಣವಾಗಿ ಬೇರೆ ಜಿಲ್ಲೆಗಳಿಗೂ ವಿಸ್ತರಿಸಲಿದ್ದೇವೆ ಎಂದು ಸಚಿವರು ತಿಳಿಸಿದರು. ಇನ್ನು ಕೆಲವೇ ವಾರಗಳಲ್ಲಿ ಟೊಮೇಟೊ ಬೆಲೆ ನಿಯಂತ್ರಣಕ್ಕೆ ಬರಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.

Published On: 04 July 2023, 12:22 PM English Summary: Distribution of tomato along with ration in this state from tomorrow

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.