1. ಅಗ್ರಿಪಿಡಿಯಾ

ಮಣ್ಣು ಪರೀಕ್ಷೆ ಎಂದರೇನು? ಇದನ್ನು ಮಾಡುವುದು ಹೇಗೆ? ಇದರಿಂದಾಗುವ ಉಪಯೋಗಗಳೇನು?

Kalmesh T
Kalmesh T
What is soil testing method? What are the types of tests for soil?

What is soil testing method? What are the types of tests for soil? : ಮನುಷ್ಯನ ಬದುಕು ನಿಂತಿರುವುದೇ ಮಣ್ಣಿನ ಮೇಲೆ, ಪ್ರತಿ ಮನುಕುಲದ ಆಹಾರದ ಅಗತ್ಯವನ್ನು ನೀಗಿಸುತ್ತಿರುವುದು ಮಣ್ಣು. ಮಣ್ಣು ಜೀವ ವೈವಿಧ್ಯದಲ್ಲಿ ವಹಿಸಿದ ಮಹತ್ತರ ಪಾತ್ರವನ್ನು ಗಮನಿಸಿ, ನಾವೆಲ್ಲರೂ ಸಹ ಮಣ್ಣಿನ ಸಂರಕ್ಷನೆಯತ್ತ ಹೆಜ್ಜೆ ಹಾಕಬೇಕು. ಸಸ್ಯಗಳ ಸರ್ವತೋಮುಖ ಬೆಳವಣಿಗೆಗಾಗಿ ಸಮತೋಲನ ಪ್ರಮಾಣದಲ್ಲಿ ಪೋಷಕಾಂಶಗಳನ್ನು ಒದಗಿಸುವುದು ಅತಿ ಅವಶ್ಯಕವಾಗಿದೆ. ಮುಖ್ಯ ಸಸ್ಯ ಪೋಷಕಾಂಶಗಳಾದ ಸಾರಜನಕ, ರಂಜಕ ಮತ್ತು ಪೊಟ್ಯಾಷ್‌ಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಒದಗಿಸುವುದರ ಜೊತೆಗೆ ಲಘು ಪೋಷಕಾಂಶಗಳನ್ನು ಕೂಡ ಬೆಳೆಗಳಿಗೆ ಪೂರೈಸುವದು ಅತೀ ಮಹತ್ವದ್ದಾಗಿದೆ.

ಭೂಮಿಯ ಮೇಲೆ ನಿರಂತರವಾಗಿ ಹಲವಾರು ಬೆಳೆಗಳನ್ನು ಬೆಳೆಯುವುದರಿಂದ ಬೆಳೆಯ ಅವಧಿಯ ಕಾಲದಲ್ಲಿ ಕೈಗೊಂಡ ಕೃಷಿ ಚಟುವಟಿಕೆಗಳಿಂದ ಭೂಮಿಯ ಮೇಲ್ಪದರು ಗಟ್ಟಿಯಾಗಿ ಭೂಮಿಯ ಭೌತಿಕ, ರಾಸಾಯನಿಕ ಹಾಗೂ ಜೈವಿಕ ಕ್ರಿಯೆಗಳಲ್ಲಿ ವ್ಯತ್ಯಾಸವಾಗಿ ಮಣ್ಣಿನ ಫಲವತ್ತತೆ ಕಡಿಮೆಯಾಗುತ್ತದೆ. ಮಣ್ಣಿನ ಪರೀಕ್ಷೆ ಮಾಡಿಸದೆ, ರಾಸಾಯನಿಕ ಗೊಬ್ಬರಗಳನ್ನು ಹಾಕುವುದರಿಂದ ಅವಶ್ಯಕತೆಗಿಂತ ಹೆಚ್ಚಿಗೆ ಖರ್ಚು ಮಾಡುವುದರೊಂದಿಗೆ ಭೂಮಿಯ ಗುಣಮಟ್ಟವನ್ನು ಹಾಳು ಮಾಡಲಾಗುತ್ತಿದೆ. ರಾಸಾಯನಿಕ ಗೊಬ್ಬರಗಳ ಬೆಲೆ ಅಧಿಕವಾಗಿರುವ ಈ ದಿನಗಳಲ್ಲಿ ಮಣ್ಣಿನ ಪರೀಕ್ಷೆಯ ಆಧಾರದ ಮೇಲೆ ಅವಶ್ಯವಿದ್ದಷ್ಟು ಗೊಬ್ಬರಗಳನ್ನು ಕೊಡುವುದು.

ಇಳುವರಿ ಹಾಗೂ ಆರ್ಥಿಕ ದೃಷ್ಟಿಯಿಂದ ಸೂಕ್ತ ಪದ್ಧತಿ ಮಣ್ಣು ಪರೀಕ್ಷೆಯಿಂದ ಮಣ್ಣಿನಲ್ಲಿ ಲಘುಪೋಷಕಾಂಶಗಳ (ಕಬ್ಬಿಣ, ಮ್ಯಾಂಗನೀಸ್, ತಾಮ್ರ, ಸತುವು, ಮಾಲಿಬ್ಡಿನಂ ಮತ್ತು ಬೋರಾನ್) ಕೊರತೆ ಇದ್ದರೆ ಅವುಗಳನ್ನು ನೀಗಿಸುವ ಕ್ರಮ ತೆಗೆದುಕೊಳ್ಳಬಹುದು. ಆದ್ದರಿಂದ ಭೂಮಿ ತಯಾರಿಕೆಯ ಮೊದಲ ಹೆಜ್ಜೆಯೇ ಮಣ್ಣು ಪರೀಕ್ಷೆ. ಮಾಗಿ ಉಳುಮೆಯನ್ನು ಮಾಡುವುದಕ್ಕಿಂತ ಮೊದಲು ಅಂದರೆ, ಬೇಸಿಗೆಯ ಪೈರುಕಟಾವಾದ ಮೇಲೆ ಮಣ್ಣು ಮಾದರಿಯನ್ನು ತೆಗೆದು ಪರೀಕ್ಷೆ ಮಾಡಿಸುವುದು ತುಂಬಾ ಸೂಕ್ತ. ಆದ್ದರಿಂದ ಪ್ರತಿಯೊಬ್ಬರೈತರು ಮಣ್ಣು ಪರೀಕ್ಷೆಯನ್ನು ಮಾಡಿಸಲೇಬೇಕು.

ಮಣ್ಣು ಪರೀಕ್ಷೆಯ ಉದ್ಧೇಶಗಳು

 1. ಭೂಮಿಯ ಭೌತಿಕ ಮತ್ತು ರಾಸಾಯನಿಕ ಗುಣಧರ್ಮಗಳನ್ನು ತಿಳಿಯುವುದು.
 2. ಕೃಷಿ ಮತ್ತು ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ಭೂಮಿಯು ಯೋಗ್ಯವಾಗಿದೆಯೋ ಅಥವಾ ಇಲ್ಲವೊ ಎಂಬುದನ್ನು ತಿಳಿಯುವುದು.
 3. ಭೂ ಫಲವತ್ತತೆಯನ್ನು ತಿಳಿಯುವದರ ಜೊತೆಗೆ ಗೊಬ್ಬರಗಳನ್ನು ಶಿಫಾರಸ್ಸು ಮಾಡುವುದು.
 4. ತೊಂದರೆದಾಯಕ ಭೂಮಿಗಳನ್ನು ತಿಳಿದು ಅವುಗಳಿಗೆ ಸೂಕ್ತ ಸಲಹೆಗಳನ್ನು ನೀಡುವುದು.

ಮಣ್ಣು ಪರೀಕ್ಷೆಗೆ ಮಾದರಿಗಳನ್ನು ಯಾವಾಗ ಸಂಗ್ರಹಿಸಬೇಕು | When to collect samples for soil testing.

ಮಣ್ಣಿನ ಮಾದರಿಗಳನ್ನು ಸಂಗ್ರಹಿಸುವುದಕ್ಕೆ ಕಟಾವಾದ ನಂತರದ ಸಮಯ ಒಳ್ಳೆಯದು. ಆಗ ಜಮೀನಿನಲ್ಲಿ ಮಾದರಿಯನ್ನು ತೆಗೆಯುವ ಉಪಕರಣಗಳನ್ನು ಬಳಸುವುದಕ್ಕೆ ಸಾಕಷ್ಟು ಹಸಿ ಇರುತ್ತದೆ. ಮಣ್ಣಿನ ಮಾದರಿಯ ಪರೀಕ್ಷೆಯ ಫಲಿತಾಂಶ ಮುಂದಿನ ಬೆಳೆಗೆ ಬಳಸುವದಕ್ಕೆ ಸಾಕಷ್ಟು ಕಾಲಾವಕಾಶ ಬರುತ್ತದೆ. ಹಣ್ಣಿನ ಗಿಡಗಳ ಜಮೀನಿನಲ್ಲಿ ಮಣ್ಣು ಮಾದರಿಗಳನ್ನು ಗೊಬ್ಬರ ಹಾಕಿದ ಮೂರು ತಿಂಗಳಾದ ಮೇಲೆ ಯಾವ ಕಾಲದಲ್ಲಾದರೂ ತೆಗೆದುಕೊಳ್ಳಬಹುದು. ಉಪಕರಣಗಳನ್ನು ಉಪಯೋಗಿಸುವದಕ್ಕೆ ಮಣ್ಣು ಬಹುಗಟ್ಟಿಯಾಗಿದ್ದ ಪಕ್ಷದಲ್ಲಿ ಉಳುಮೆ ನಂತರ ಮಣ್ಣಿನ ಮಾದರಿಯನ್ನು ತೆಗೆಯಬಹುದು.

ಮಣ್ಣಿನ ಮಾದರಿತೆಗೆಯುವ ವಿಧಾನ | Method of soil sampling

 • ಮಣ್ಣಿನ ಮಾದರಿ ತೆಗೆಯುವುದಕ್ಕಿಂತ ಮುಂಚೆ ಒಂದು ಬಾರಿ ಹೊಲದತುಂಬ ತಿರುಗಾಡಿ ಭೂಮಿಯ ಸಾಮಾನ್ಯ ಗುಣಧರ್ಮಗಳನ್ನು ತಿಳಿದುಕೊಳ್ಳಬೇಕು.
 • ಭೂಮಿಯ ಇಳಿಜಾರು, ಭೂಮಿಯ ಬಣ್ಣ, ಸವಳು, ಜವಳು, ಇತ್ಯಾದಿಗಳನ್ನು ಗಣನೆಗೆ ತೆಗೆದುಕೊಂಡು ಒಂದೇತೆರನಾಗಿ ಇರುವ ಭೂ-ಭಾಗಗಳನ್ನು ಬೇರೆ ಬೇರೆ ಉಪಭಾಗಗಳಾಗಿ ವಿಂಗಡಿಸಬೇಕು.
 • ಈ ಉಪಭಾಗಗಳಿಂದ ಬೇರೆ ಬೇರೆಯಾಗಿ ಮಣ್ಣಿನ ಮಾದರಿಗಳನ್ನು ತೆಗೆಯಬೇಕು.
 • ಈ ಪ್ರತಿಯೊಂದು ಉಪಭಾಗಗಳಲ್ಲಿ ಸುಮಾರು 8-10 ಸ್ಥಳಗಳನ್ನು ಗುರುತಿಸಿ, ಈ ಎಲ್ಲ ಸ್ಥಳಗಳಲ್ಲಿ V ಆಕಾರದಲ್ಲಿ 15-20 ಅಥವಾ 30 ಸೆಂ.ಮೀ. ವರೆಗೆ ನೆಲವನ್ನು ಅಗೆದು ಅದರಲ್ಲಿರುವ ಮಣ್ಣನ್ನು ತೆಗೆದು ಚೆಲ್ಲಬೇಕು. ನಂತರ ಈ V ಆಕಾರದ ಒಂದು ಬದಿಯಿಂದ ಮೇಲಿನಿಂದ ಕೆಳಗಿನವರೆಗೆ ಬರುವ ಹಾಗೆ ಸುಮಾರು 1 ಇಂಚು ದಪ್ಪವಾದ ಮಣ್ಣನ್ನು ತೆಗೆದು ಸಂಗ್ರಹಿಸಬೇಕು.
 • ಇದೇ ರೀತಿ ಎಲ್ಲ 8-10 ಸ್ಥಳಗಳಿಂದ ಮಣ್ಣನ್ನು ತೆಗೆದು ಒಂದು ಅಗಲವಾದ ಪ್ಲಾಸ್ಟಿಕ್ ಹಾಳೆಯ ಮೇಲೆ ಹಾಕಬೇಕು. ಅದರಲ್ಲಿರುವಎಲ್ಲ ಕಸ-ಕಡ್ಡಿ ಹರಳುಗಳನ್ನು ಆರಿಸಿ ತೆಗೆಯಬೇಕು. ನಂತರ ಈ ಎಲ್ಲ ಮಣ್ಣನ್ನು ಚನ್ನಾಗಿ ಮಿಶ್ರಣ ಮಾಡಿ ಹಾಳೆಯ ಮೇಲೆ ಹರಡಬೇಕು. ಇದರಲ್ಲಿ ಅಡ್ಡಲಾಗಿ (+) ಎರಡು ಗೆರೆಗಳನ್ನು ಹಾಕಿ ಸಮನಾದ ನಾಲ್ಕು ಭಾಗಗಳನ್ನು ಮಾಡಬೇಕು.
 • ಎದುರು ಬದರು ಇರುವ ಎರಡು ಭಾಗಗಳನ್ನು ಚಲ್ಲಬೇಕು ಹಾಗೂ ಉಳಿದ ಎರಡು ಭಾಗಗಳನ್ನು ಮತ್ತೆ ಚೆನ್ನಾಗಿ ಮಿಶ್ರಣ ಮಾಡಿ ಮೇಲೆ ತಿಳಿಸಿದ ಹಾಗೆ ಮಾಡಬೇಕು. ಇದೇ ರೀತಿ ಮಾಡುತ್ತಾ ಹೋಗಿ ಸುಮಾರು 0.5 ರಿಂದ 1.0 ಕಿ. ಗ್ರಾಂ. ಮಣ್ಣು ಉಳಿಯುವವರೆಗೆ ಮಾಡಬೇಕು.
 • ಈ ಮಣ್ಣನ್ನು ಪಾಲಿಥೀನ ಚೀಲ ಅಥವಾ ಹೊಸ ಬಟ್ಟೆಯ ಚೀಲದಲ್ಲಿ ಹಾಕಬೇಕು. ಮಣ್ಣನ್ನು ಶೇಕರಿಸಿಡಲು ಬೀಜ, ಗೊಬ್ಬರಚೀಲ ಇತ್ಯಾದಿಗಳನ್ನು ಉಪಯೋಗಿಸಬಾರದು.
 • ಮಣ್ಣಿನ ಮಾದರಿ ಶೇಖರಣೆಯಾದ ನಂತರ, ಲೇಬಲ್ ಮಾಡಬೇಕು. ಇದರಲ್ಲಿ ರೈತನ ಹೆಸರು, ವಿಳಾಸ, ಸರ್ವೆ ನಂಬರ್, ದಿನಾಂಕ ಈ ಮೊದಲು ಬೆಳೆದ ಬೆಳೆ, ಗೊಬ್ಬರ ಹಾಕಿದ ವಿವರ ಇತ್ಯಾದಿಗಳನ್ನು ಬರೆದು ಚೀಲದ ಒಳಗಡೆ ಹಾಕಿ ಪ್ಯಾಕ್ ಮಾಡಬೇಕು. ಮತ್ತು ಇನ್ನೊಂದನ್ನು ಮೇಲೆ ಕಟ್ಟಿ, ಮಣ್ಣು ಪರೀಕ್ಷಾ ಪ್ರಯೋಗಾಲಯಕ್ಕೆ ಕಳುಹಿಸಿಕೊಡಬೇಕು.
 • ಮಣ್ಣು ಪರೀಕ್ಷಾ ಕೇಂದ್ರಗಳಲ್ಲಿ ಮೂರು ಪ್ರಧಾನ ಸಸ್ಯ ಪೋಷಕಾಂಶಗಳಾದ ಸಾರಜನಕ (ಸಾವಯವ ಇಂಗಾಲ), ರಂಜಕ ಮತ್ತು ಪೊಟ್ಯಾಷ್‌ಗಳು ದೊರೆಯುವ ಪ್ರಮಾಣವನ್ನು ನಿರ್ಧರಿಸಲಾಗುವುದು. ಈ ಆಧಾರದ ಮೇಲೆ ಮಣ್ಣನ್ನು ಕಡಿಮೆ, ಮಧ್ಯಮ ಅಥವಾ ಅಧಿಕ ಫಲವತ್ತತೆ ವರ್ಗಗಳಾಗಿ ಈ ಕೆಳಗಿನಂತೆ ವಿಂಗಡಿಸಲಾಗುವುದು. ತಜ್ಞರು ಮಣ್ಣಿನ ಪರೀಕ್ಷೆ ಫಲಿತಾಂಶ ಮತ್ತು ಬೆಳೆಯ ಆಧಾರದ ಮೇಲೆ ಸೂಕ್ತ ರಸಾಯನಿಕ ಗೊಬ್ಬರಗಳ ಪ್ರಮಾಣವನ್ನು ಶಿಫಾರಸ್ಸು ಮಾಡುತ್ತಾರೆ.

 

ದೊರೆಯುವ ಪೋಷಕಾಂಶಗಳು

ಕಡಿಮೆ ಫಲವತ್ತತೆ

ಮಧ್ಯಮ ಫಲವತ್ತತೆ

ಅಧಿಕ ಫಲವತ್ತತೆ

ಸಾವಯವ ಇಂಗಾಲ (ಶೇ.)

<0.5

0.5-0.75

>0.75

ಸಾರಜನಕ (ಕಿ. ಗ್ರಾಂ)

<280

280-560

>560

ರಂಜಕ (ಕಿ. ಗ್ರಾಂ)

<22.5

22.5-55.0

>55.0

ಪೊಟ್ಯಾಷ್ (ಕಿ. ಗ್ರಾಂ)

<125

125-300.0

>300

ಗಂಧಕ (ಕಿ. ಗ್ರಾಂ)

<20

20-40

>40

ಮುಖ್ಯ ಪೋಷಕಾಂಶಗಳು ಯಾವ ಫಲವತ್ತತೆಯ ಗುಂಪಿಗೆ ಸೇರಿವೆ ಎಂದು ನಿರ್ಧರಿಸಿದ ನಂತರ ಶಿಫಾರಸು ಮಾಡಿದ ರಾಸಾಯನಿಕ ಗೊಬ್ಬರಗಳ ಪ್ರಮಾಣದಲ್ಲಿ ಬದಲಾವಣೆ ಮಾಡಬೇಕಾಗುತ್ತದೆ. ಫಲವತ್ತತೆ ಮಧ್ಯಮ ವರ್ಗಕ್ಕೆ ಸೇರಿದರೆ ಶಿಫಾರಸು ಮಾಡಿದ ರಾಸಾಯನಿಕ ಗೊಬ್ಬರಗಳ ಪ್ರಮಾಣದಲ್ಲಿ ಯಾವ ಬದಲಾವಣೆಗಳನ್ನು ಮಾಡುವ ಅವಶ್ಯಕತೆ ಇಲ್ಲ. ಪೋಷಕಾಂಶಗಳು ಕಡಿಮೆ ಅಥವಾ ಅಧಿಕ ಫಲವತ್ತು ಸೇರಿದ್ದರೆ ಈ ಕೆಳಗಿನಂತೆ ರಾಸಾಯನಿಕ ಗೊಬ್ಬರಗಳ ಪ್ರಮಾಣವನ್ನು ಬದಲಾಯಿಸಿಕೊಳ್ಳಬಹುದು.

 

ಪೋಷಕಾಂಶ

ಕಡಿಮೆ ಫಲವತ್ತತೆ ಮಣ್ಣಿನಲ್ಲಿ

ಅಧಿಕ ಫಲವತ್ತತೆ ಮಣ್ಣಿನಲ್ಲಿ

ಸಾರಜನಕ

ನೀರಾವರಿ ಬೆಳೆಗಳಿಗೆ ಶಿಫಾರಸ್ಸಿನ ಶೇ. 50ರಷ್ಟು, ಮಳೆಯಾಶ್ರಿತ ಬೆಳೆಗಳಿಗೆ ಶಿಫಾರಸ್ಸಿನ ಶೇ. 25 ರಷ್ಟು ಹೆಚ್ಚು ಪ್ರಮಾಣ

ನೀರಾವರಿ ಬೆಳೆಗಳಿಗೆ ಶಿಫಾರಸ್ಸಿನ ಶೇ. 50ರಷ್ಟು, ಮಳೆಯಾಶ್ರಿತ ಬೆಳೆಗಳಿಗೆ ಶಿಫಾರಸ್ಸಿನ ಶೇ. 25 ರಷ್ಟು ಕಡಿಮೆ ಪ್ರಮಾಣ

ರಂಜಕ

ನೀರಾವರಿ ಮತ್ತು ಮಳೆಯಾಶ್ರಿತ ಬೆಳೆಗಳಿಗೆ ಶಿಫಾರಸ್ಸಿನ ಶೇ. 25 ರಷ್ಟು ಹೆಚ್ಚು ಪ್ರಮಾಣ

ನೀರಾವರಿ ಮತ್ತು ಮಳೆಯಾಶ್ರಿತ ಬೆಳೆಗಳಿಗೆ ಶಿಫಾರಸ್ಸಿನ ಶೇ. 25 ರಷ್ಟು ಕಡಿಮೆ ಪ್ರಮಾಣ

ಪೊಟ್ಯಾಷ್

ನೀರಾವರಿ ಬೆಳೆಗಳಿಗೆ ಶಿಫಾರಸ್ಸಿನ ಶೇ. 50ರಷ್ಟು, ಮಳೆಯಾಶ್ರಿತ ಬೆಳೆಗಳಿಗೆ ಶಿಫಾರಸ್ಸಿನ ಶೇ. 25 ರಷ್ಟು ಹೆಚ್ಚು ಪ್ರಮಾಣ

ನೀರಾವರಿ ಬೆಳೆಗಳಿಗೆ ಶಿಫಾರಸ್ಸಿನ ಶೇ. 50ರಷ್ಟು, ಮಳೆಯಾಶ್ರಿತ ಬೆಳೆಗಳಿಗೆ ಶಿಫಾರಸ್ಸಿನ ಶೇ. 25 ರಷ್ಟು ಕಡಿಮೆ ಪ್ರಮಾಣ

 

ಮಣ್ಣು ಪರೀಕ್ಷೆಯ ಉಪಯೋಗಗಳು | Uses of soil testing

 1. ಮಣ್ಣು ಪರೀಕ್ಷೆಯಿಂದ ಮಣ್ಣಿನ ಭೌತಿಕ, ರಾಸಾಯನಿಕ ಗುಣಧರ್ಮಗಳನ್ನು ಹಾಗೂ ಫಲವತ್ತತೆಯನ್ನು ತಿಳಿಯಬಹುದು.
 2. ಮಣ್ಣಿನ ಫಲವತ್ತತೆ ಹಾಗೂ ಗುಣಧರ್ಮಕ್ಕನುಸಾರವಾಗಿ ಲಾಭದಾಯಕ ಬೆಳೆಯನ್ನು ಆಯ್ಕೆ ಮಾಡಿ ಬೆಳೆದು ಕೃಷಿಯಿಂದ ಲಾಭ ಗಳಿಸಬಹುದು.
 3. ಅನವಶ್ಯಕ ಅಥವಾ ಹೆಚ್ಚಿನ ಪ್ರಮಾಣದ ಗೊಬ್ಬರ ಬಳಕೆ ತಪ್ಪಿಸಿ ಖರ್ಚು ಕಡಿಮೆ ಮಾಡಬಹುದು.
 4. ಮಣ್ಣು ಪರೀಕ್ಷೆ ಆಧಾರಿತ ಪೋಷಕಾಂಶಗಳ ಬಳಕೆಯಿಂದ ಅಧಿಕ ಇಳುವರಿ ಪಡೆಯಬಹುದು
 5. ಭೂಮಿಯ ಫಲವತ್ತತೆಯನ್ನು ಬಹು ವರ್ಷಗಳವರೆಗೆ ಕಾಪಾಡಿಕೊಳ್ಳಬಹುದು
 6. ಫಲವತ್ತತೆಯ ಅಸಮತೋಲನವನ್ನು ನಿವಾರಿಸಬಹುದು.
Published On: 04 July 2023, 01:01 PM English Summary: What is soil testing method? What are the types of tests for soil?

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.