1. ಅಗ್ರಿಪಿಡಿಯಾ

ಎಲೆ ಕೋಸು (ಕ್ಯಾಬೇಜ್) ಬೆಳೆಯ ಉತ್ಪಾದನಾ ತಾಂತ್ರಿಕತೆಗಳು

cabbage

ಎಲೆಕೋಸು (ಬ್ರಾಸಿಕಾ ಒಲರೇಸಿಯಾ ವರ್.ಕ್ಯಾಪಿಟಾಟಾ) ವಿಶ್ವ ಮತ್ತು ಭಾರತದ ಅತ್ಯಂತ ಜನಪ್ರಿಯ ಹಾಗೂ ವಾಣಿಜ್ಯ ತರಕಾರಿ ಬೆಳೆ, ಜಗತ್ತಿನಲ್ಲಿ ಭಾರತ, ಚೀನಾ, ಫ್ರಾನ್ಸ್, ಇಟಲಿ, ಜರ್ಮನಿ, ಪೋಲ್ಯಾಂಡ್‍ ಮತ್ತು ಸ್ಪೇನ್ ರಾಷ್ಟ್ರಗಳು ಉತ್ಪಾದನೆಯಲ್ಲಿ ಮುಂಚುಣಿಯಲ್ಲಿದೆ.

 ಭಾರತದ ತರಕಾರಿ ಬೆಳೆಗಳ ಪ್ರದೇಶದ ಶೇ.4ರಷ್ಟು ಪ್ರದೇಶ ಆಕ್ರಮಿಸಿಕೊಂಡಿರುವ ಕೋಲ್ ಗುಂಪಿನ ಪ್ರಮುಖ ತರಕಾರಿ ಬೆಳೆ. ಭಾರತದ 4,03,000 ಹೆಕ್ಟೇರ್ ಪ್ರದೇಶವನ್ನು ಆವರಿಸಿದ್ದು, 91,92,000 ಮೆ. ಟನ್.(2018-19)ನಷ್ಟು ಉತ್ಪಾದನೆ ಇದೆ. ದೇಶದ ಎಲ್ಲಾ ಭಾಗಗಳಲ್ಲಿ ಇದರ ಬೇಸಾಯ ಕಂಡು ಬರುತ್ತದೆ ಮುಖ್ಯವಾಗಿ ಪಶ್ಚಿಮ ಬಂಗಾಳ, ಗುಜರಾತ, ಒರಿಸ್ಸಾ, ಬಿಹಾರ, ಅಸ್ಸಾಂ, ಮಧ್ಯ ಪ್ರದೇಶ, ಮಹರಾಷ್ಟ್ರ, ಜಾರ್ಖಂಡ್ ಮತ್ತು ಚತ್ತಿಸಘಡ  ರಾಜ್ಯಗಳು. ಎಲೆಕೊಸನ್ನು ನಾಸಿಕ್‍ನ ಸುತ್ತ ಮುತ್ತ, ಮದರಾಸ್ ಹಾಗೂ ಕೇರಳದ ಕೆಲವು ಭಾಗಗಳಲ್ಲಿ ಮಳೆಗಾಲದ ಬೆಳೆಯಾಗಿ ಬೆಳೆಯಲಾಗುವುದು. ಕರ್ನಾಟಕದಲ್ಲಿ ಎಲೆಕೋಸು ಚಳಿಗಾಲದ ಮುಖ್ಯ ಬೆಳೆಯಾಗಿದೆ.  ಬೆಳಗಾವಿ, ಬಳ್ಳಾರಿ, ಹಾಸನ, ದಕ್ಷಿಣಕನ್ನಡ ಮತ್ತು ಚಿಕ್ಕಮಗಳುರಿನಲ್ಲಿ ಹೆಚ್ಚಾಗಿ ಬೆಳೆಯಲಾಗುತ್ತಿದೆ. ಇದರಲ್ಲಿ ಅಧಿಕ ಪ್ರಮಾಣದ ಶರ್ಕರಪಿಷ್ಟ, ಪ್ರೋಟೀನ್, ನಾರುಮತ್ತುಖನಿಜ ಪದಾರ್ಥ (ಕ್ಯಾಲ್ಸಿಯಂ&ಕಬ್ಬಿಣ) ಗಳಿವೆ ಹಾಗೂ ಎ ಮತ್ತುಸಿ ಅನ್ನಾಂಗಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಒದಗಿಸುತ್ತದೆ. ಎಲೆಗಳ ಸುಹಾಸನೆಗೆ ಸಿನಿಗ್ರಿನ್ ಎಂಬ ಅಂಶಕಾರಣವಾಗಿದೆ. ಆಯುರ್ವೇದ ಚಿಕಿತ್ಸೆಯಲ್ಲಿ ಎಲೆಕೋಸು ಎಲೆಗಳನ್ನು ಕೆಮ್ಮು, ಜ್ವರ, ಚರ್ಮರೋಗಗಳು, ಮೂತ್ರ ವಿಸರ್ಜನೆ, ಮೂಲವಾಧಿ ಮುಂತಾದ ಸಮಸ್ಯೆಗಳಿಗೆ ಔಷಧಿಯಾಗಿ ಸೂಚಿಸಲಾಗುತ್ತದೆ.

ಮಣ್ಣು: ಈ ತರಕಾರಿಯನ್ನು ಎಲ್ಲಾ ತರಹದ ಮಣ್ಣಿನಲ್ಲಿ ಬೆಳೆಯಬಹುದಾಗಿದೆ. ನೀರು ಬಸಿದು ಹೋಗುವಂತಹ ಮಧ್ಯಮ ಕಪ್ಪು ಮತ್ತು ಮರಳು ಮಿಶ್ರಿತ ಮಣ್ಣು ಅತಿ ಸೂಕ್ತ. ಇದಲ್ಲದೇ, ಸವಳು ಮಣ್ಣಿನ ವಿದ್ಯುದ್ವನತೆ 6 ರಿಂದ 8 ಡೆ.ಸೈ./ಮೀ.ಇರುವಲ್ಲಿ ಬೆಳೆಯಬಹುದು. ಜೌಗುಪ್ರದೇಶ ಹಾಗೂ ಹುಳಿ ಮಣ್ಣಿರುವ ಪ್ರದೇಶ ಈ ಬೆಳೆಗೆ ಸೂಕ್ತವಲ್ಲ. ಮಣ್ಣಿನ ರಸಸಾರ (pH) 5.5 ರಂದ 6.6 ವರೆಗೆಇದ್ದರೆ ಸೂಕ್ತ.

ಬಿತ್ತನೆ ಕಾಲ: ಇದು ಪ್ರಮುಖವಾಗಿ ಚಳಿಗಾಲದ ಬೆಳೆಯಾಗಿದ್ದು, ತಂಪಾದ ವಾತಾವರಣ ಸೂಕ್ತ. ಸೌಮ್ಯ ಹವಾಗುಣಇರುವಂತಹ ಪ್ರದೇಶಗಳಲ್ಲಿ ವರ್ಷದ ಯಾವ ಕಾಲದಲ್ಲಾದರು ಬೆಳೆಯಬಹುದು. ಹೆಚ್ಚುಉಷ್ಣಾಂಶವಿರುವ ಒಣಹವೆ ಪ್ರದೇಶದಲ್ಲಿ ಇದರ ಗುಣಮಟ್ಟ ಕಡಿಮೆಯಾಗಿ, ಸುಮಧುರ ವಾಸನೆಯನ್ನು ಕಳೆದುಕೊಳ್ಳುತ್ತದೆ.ಮಣ್ಣಿನ ಉಷ್ಣತೆ 12.8 ಯಿಂದ 15.60ಸೆ.ಇದ್ದರೆ ಬೀಜ ಚೆನ್ನಾಗಿ ಮೊಳೆಯುತ್ತವೆ. ಈ ಬೆಳೆಯನ್ನು ಮುಂಗಾರಿನಲ್ಲಿ (ಜೂನ್-ಜುಲೈ) ಮತ್ತು ಚಳಿಗಾಲದ (ಅಕ್ಟೋಬರ್-ನವೆಂಬರ್) ಪ್ರಾರಂಭದಲ್ಲಿ ಬಿತ್ತನೆ ಮಾಡಬಹುದು. ಚಳಿಗಾಲದಲ್ಲಿ ತಡವಾಗಿ ನಾಟಿ ಮಾಡಿದರೆ ಎಲೆಕೋಸು ಚೆನ್ನಾಗಿ ಬೆಳೆಯುವುದಿಲ್ಲ.

ತಳಿಗಳು : ಗಾತ್ರ ಮತ್ತು ಅವಧಿಗಳಿಗನುಸಾರವಾಗಿ ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ.

ಅಲ್ಫಾವಧಿ ತಳಿಗಳು ಈ ತಳಿಗಳು ನಾಟಿ ಮಾಡುವುದರಿಂದ ಹಿಡಿದು ಗೆಡ್ಡೆಕಟ್ಟಲು  55ರಿಂದ 70 ದಿನಗಳು ತೆಗೆದುಕೊಳ್ಳುತ್ತದೆ. ಗಡ್ಡೆಯ ಸರಾಸರಿ ತೂಕ 0.8 ರಿಂದ 2.5 ಕೆ.ಜಿ.ಇರುತ್ತದೆ. ಈ ಗುಂಪಿನಲ್ಲಿ ಬರುವ ಪ್ರಮುಖ ತಳಿಗಳೆಂದರೆ,

 1. ಪ್ರೈಡ್‍ಆಫ್‍ಇಂಡಿಯಾ: ರಾಜ್ಯದಲ್ಲಿ ಇದೊಂದುಜನಪ್ರಿಯ ತಳಿಯಾಗಿದೆ. ಇದು ಸುಮಾರು 70 ರಿಂದ 90 ದಿವಸಗಳಲ್ಲಿ ಕೊಯ್ಲಿಗೆ ಬರುತ್ತದೆ. ಗಡ್ಡೆಗಳು ಮಧ್ಯಮಗಾತ್ರದ್ದಾಗಿದ್ದು ಸ್ವಲ್ಪಚಪ್ಪಟೆಯಾಕಾರದಲ್ಲಿರುತ್ತವೆ.
 2. ಗೋಲ್ಡನ್‍ಏಕರ್: ಇದು ಬೇಗನೆ ಕಟಾವಿಗೆ ಬರುವ ತಳಿಗಳಲ್ಲಿ ಒಂದಾಗಿದ್ದು, ಸುಮಾರು 70 ರಿಂದ 80 ದಿನಗಳಲ್ಲಿ ಕೊಯ್ಲಿಗೆ ಬರುತ್ತದೆ. ಗಡ್ಡೆಗಳು ದುಂಡಾಗಿದ್ದು ಸಾಧಾರಣ, ಮಧ್ಯಮಗಾತ್ರದ್ದಾಗಿವೆ.
 3. ಅರ್ಲಿಡ್ರಮ್ ಹೆಡ್: ಇದುಅತಿ ಶೀಘ್ರದಲ್ಲಿ (60-70 ದಿನಗಳು) ಕೊಯ್ಲಿಗೆ ಬರುವ ತಳಿಯಾಗಿದೆ. ಚಪ್ಪಟೆಯಾಕಾರದ ಗಡ್ಡೆಗಳೇ ಇದರವೈಶಿಷ್ಟ್ಯ.

ದೀರ್ಘಾವಧಿ ತಳಿಗಳು: ಇವು 85 ರಿಂದ 130 ದಿನಗಳಲ್ಲಿ ಕಟಾವಿಗೆ ಬರುತ್ತವೆ ಹಾಗೂ ಗೆಡ್ಡೆಯ ತೂಕ 3 ರಿಂದ 7 ಕೆ.ಜಿ. ಇರುತ್ತದೆ.ಈ ಗುಂಪಿನಲ್ಲಿ ಬರುವ ಪ್ರಮುಖ ತಳಿಗಳೆಂದರೆ,

 1. ಲೇಟ್‍ಡ್ರಮ್ ಹೆಡ್ :100 ರಿಂದ 120 ದಿನಗಳಿಲ್ಲಿ ಕೊಯ್ಲಿಗೆ ಬರುತ್ತದೆ. ಗಡ್ಡೆಗಳು ದೊಡ್ಡದಾಗಿದ್ದು ಚಪ್ಪಟೆಯಾಕಾರ ಹೊಂದಿವೆ. ಇದು ಚಳಿಗಾಲಕ್ಕೆ ಸೂಕ್ತವಾದ ತಳಿ.
 2. ಡ್ಯಾನಿಷ್ ಬಾಲ್ ಹೆಡ್ : ಇದು ಸಹ ಒಂದು ದೀರ್ಘಾವಧಿ ತಳಿ (100-120 ದಿನಗಳು) ಗಡ್ಡೆಗಳು ಅತಿದೊಡ್ಡದಾಗಿದ್ದು ಚಳಿಗಾಲಕ್ಕೆ ಸೂಕ್ತವಾದ ತಳಿ.
 3. ಪೂಸ ಡ್ರಮ್ ಹೆಡ್: ಎಫ್1 ಹೈಬ್ರಿಡ್, ಇದು ಚಪ್ಪಟೆಯಿಂದ ಗುಂಡಾಗಿದ್ದು, ಕಪ್ಪು ಕಾಂಡರೋಗಕ್ಕೆ ನಿರೋಧಕ ಶಕ್ತಿಯನ್ನು ಹೊಂದಿದೆ.

ಗೋಲ್ಡನ್‍ ಏಕರ್‍ಲೇಟ್‍ ಡ್ರಮ್ ಹೆಡ್‍ಪ್ರೈಡ್‍  ಆಫ್‍ ಇಂಡಿಯಾ ಪೂಸ ಡ್ರಮ್ ಹೆಡ್

ಸಂಕರಣ ತಳಿಗಳು:

 • ನಾಮದಾರಿಸೀಡ್ಸ್: NS-25, NS-151, NS-195
 • ಸಿಜೆನ್‍ಟ ಸೀಡ್ಸ್:

  C-90: ತಂಪಾದ ಮತ್ತು ಒಣ ಹವಾಮಾನಕ್ಕೆ ಸೂಕ್ತವಾಗಿದೆ

 C-79: ವರ್ಷ ಪೂರ್ತಿ ಬೆಳೆಯಲು ಸೂಕ್ತವಾಗಿದ್ದು, ತಂಪಾದ ಮತ್ತು ಶುಷ್ಕ ಋತುವಿನಲ್ಲಿ ಚೆನ್ನಾಗಿರುತ್ತದೆ.

 • ಸಮ್ಮರ್: ಶಾಖ ಮತ್ತುಆದ್ರ್ರ ವಾತಾವರಣಕ್ಕೆ ಸೂಕ್ತವಾಗಿದೆ.
 • ಇಂಡಮ್‍ಸೀಡ್ಸ್: ಇಂಡಮ್ ಕೃಷ್ಣ ಮತ್ತುಇಂಡಮ್‍ರಾಧ
 • ಶ್ರೀ ಗಣೇಶ್‍ಗೋಲ್, ಹರ್‍ರಾಣಿಗೋಲ್, ಮಹರಾಣಿ ಮತ್ತು ಕ್ರಾಂತಿ: ಗಡ್ಡೆಗಳು ಬಿಗುವಾಗಿ ಗುಂಡಾಗಿರುತ್ತವೆ ಮತ್ತು ಇವು ಹಳದಿ ಮತ್ತು ಕಪ್ಪು ಕಾಂಡರೋಗಕ್ಕೆ ನಿರೋಧಕ ಶಕ್ತಿಯನ್ನು ಹೊಂದಿವೆ. ಒಂದು ಹೆಕ್ಟೇರಿಗೆ 30-35 ಟನ್ ಇಳುವರಿ ಪಡೆಯಬಹುದು

ಬೇಸಾಯ ಸಾಮಗ್ರಿಗಳು (ಪ್ರತಿ ಹಕ್ಟೇರಿಗೆ):

1 ಬೀಜಪ್ರಮಾಣ:  500 ಗ್ರಾಂ

2 ಕೊಟ್ಟಿಗೆಗೊಬ್ಬರ: 25 ಟನ್

3 ರಾಸಾಯನಿಕ ಗೊಬ್ಬರಗಳು: ಸಾರಜನಕ 150 ಕಿ. ಗ್ರಾಂ, ರಂಜಕ 100 ಕಿ. ಗ್ರಾಂಮತ್ತು ಪೊಟ್ಯಾಷ್125 ಕಿ. ಗ್ರಾಂ

ಸಸಿಮಡಿ ತಯಾರಿಕೆ: ಒಂದು ಹೆಕ್ಟೇರಿಗೆ ಸಸಿಗಳನ್ನು ಬೆಳೆಸಲು 7.5 ಮೀ. ಉದ್ದ, 1.2 ಮೀ. ಅಗಲ, 10 ಸೆಂ. ಮೀ.ಎತ್ತರದ ಸಸಿ ಮಡಿಗಳನ್ನು ಸಿದ್ಧಪಡಿಸಬೇಕು. ಪ್ರತಿ ಮಡಿಗೂ 30 ಕಿ. ಗ್ರಾಂಕೊಟ್ಟಿಗೆಗೊಬ್ಬರ ಮತ್ತುಅರ್ಧ ಕಿ. ಗ್ರಾಂ 15:15:15 ಸಂಯುಕ್ತಗೊಬ್ಬರವನ್ನುಕೊಟ್ಟು ಮಣ್ಣಿನಲ್ಲಿ ಚೆನ್ನಾಗಿ ಸೇರಿಸಬೇಕು. ಸಸಿ ಮಡಿಯಲ್ಲಿ ಬೀಜ ಬಿತ್ತುವುದಕ್ಕಿಂತ ಮೊದಲು ಪ್ರತಿ ಹೆಕ್ಟೇರಿಗೆ ಬೇಕಾಗುವ ಬೀಜವನ್ನು 1.5 ಗ್ರಾಂ ಪಾದರಸ ಸಂಯುಕ್ತ (ಮರ್‍ಕ್ಯೂರಿಕ್ಲೋರೈಡ್) ವಸ್ತುವನ್ನು 1.5 ಲೀ.ನೀರಿನಲ್ಲಿ ಕರಗಿಸಿದ ದ್ರಾವಣದಲ್ಲಿ 30 ನಿಮಿಷಗಳ ಕಾಲ ಅದ್ದಿ ತೆಗೆದು ನೆರಳಿನಲ್ಲಿ ಒಣಗಿಸಿ ಬಿತ್ತನೆ ಮಾಡಬೇಕು.7.5 ಸೆಂ.ಮೀ.ಅಂತರದ ಸಾಲುಗಳಲ್ಲಿ ಬೀಜಗಳನ್ನು ಬಿತ್ತಿ, ಬೀಜದ ಮೇಲೆ ತೆಳುವಾಗಿ ಮಣ್ಣನ್ನು ಹಾಕಿ ನೀರನ್ನು ಒದಗಿಸಬೇಕು. ಪ್ರತಿ ದಿನ ಮಡಿಗಳಿಗೆ ಮುಂಜಾನೆ ಮತ್ತು ಸಾಯಂಕಾಲ ನೀರನ್ನು ಒದಗಿಸಬೇಕು. ಈ ತರಹ ಬಿತ್ತಿದ ಬೀಜಗಳು 4 ವಾರಗಳಲ್ಲಿ ನಾಟಿಗೆ ಸಿದ್ಧವಾಗುತ್ತದೆ.ಅಥವಾ

ಒಂದುಎಕರೆಗೆ 150 ತಬಕಗಳು (ಟ್ರೇ) ಅಲ್ಪಾವಧಿ ತಳಿಗಳಿಗೆಮತ್ತು 114 ತಬಕಗಳು ದೀರ್ಘಾವಧಿ ತಳಿಗಳಿಗೆ ಬೇಕಾಗುತ್ತವೆ. ತಬಕಕ್ಕೆಕೊಕೊಪೀಟ್ ಹಾಕಿ ಅದಕ್ಕೆ ಕೋಸಿನ ಬೀಜಗಳನ್ನು ಬಿತ್ತನೆ ಮಾಡಬೇಕು.ನಂತರಬೀಜದ ಮೇಲೆ ತೆಳುವಾಗಿ ಕೊಕೊಪೀಟ್‍ಹಾಕಿ ನೀರನ್ನು ಒದಗಿಸಬೇಕು.ಬಿತ್ತಿದ ಬೀಜಗಳು 4 ವಾರಗಳಲ್ಲಿ ನಾಟಿಗೆ ಸಿದ್ಧವಾಗುತ್ತದೆ.

ನಾಟಿ ಮಾಡುವುದು: ಭೂಮಿಯನ್ನು ಹದಮಾಡಿದ ನಂತರ ಶಿಫಾರಸ್ಸು ಮಾಡಿದ ಪೂರ್ತಿ ಪ್ರಮಾಣದಕೊಟ್ಟಿಗೆಗೊಬ್ಬರವನ್ನು ಮಣ್ಣಿನಲ್ಲಿಚೆನ್ನಾಗಿ ಬೆರೆಸಬೇಕು. ಅಲ್ಪಾವಧಿ ತಳಿಗಳು 60 ಘಿ 45 ಸೆಂ.ಮೀ.ಅಂತರದಲ್ಲಿ ಮತ್ತು ದೀರ್ಘಾವಧಿ ತಳಿಗಳಾದಲ್ಲಿ 60 X 60 ಸೆಂ.ಮೀ.ಬೋದು ಮತ್ತು ಹರಿಗಳನ್ನು ತಯಾರಿಸಿ, ಹರಿಗಳಲ್ಲಿ ಶಿಫಾರಸ್ಸು ಮಾಡಿದ ಶೇ.50 ರಷ್ಟು ಸಾರಜನಕ ಮತ್ತು ಪೂರ್ತಿ ಪ್ರಮಾಣದರಂಜಕ, ಪೊಟ್ಯಾಷ್‍ಗೊಬ್ಬರ ಹಾಕಿ ಮಣ್ಣಿನಲ್ಲಿಚೆನ್ನಾಗಿ ಬೆರೆಸಬೇಕು. ನಾಟಿ ಮಾಡುವುದಕ್ಕಿಂತ ಮೊದಲು ಭೂಮಿಗೆ ತೆಳುವಾಗಿ ನೀರನ್ನು ಹಾಯಿಸಬೇಕು. ಪ್ರತಿ 3-4 ದಿನಗಳಿಗೊಮ್ಮೆ ನೀರನ್ನು ಹಾಯಿಸಬೇಕು. ನಾಟಿ ಮಾಡಿದ 4 ವಾರಗಳ ನಂತರ ಶೇ. 50 ರಷ್ಟು ಸಾರಜನಕವನ್ನು ಮೇಲು ಗೊಬ್ಬರವಾಗಿಕೊಡಬೇಕು.

ನಾಟಿ ಮಾಡುವ ಮೊದಲು ಪ್ರತಿ ಹೆಕ್ಟೇರಿಗೆ 1.0 ಟನ್ ಎರೆಹುಳ ಗೊಬ್ಬರವನ್ನು ಮೂರು ದಿನಗಳ ಮೊದಲು ಭೂಮಿಯಲ್ಲಿ ಬೆರೆಸುವುದರಿಂದ ಶಿಫಾರಸ್ಸು ಮಾಡಿದಗೊಬ್ಬರದ ಪ್ರಮಾಣದಲ್ಲಿ ಅರ್ಧದಷ್ಟು ಕಡಿಮೆಗೊಳಿಸಬಹುದು ಅಥವಾ ಸಸಿಗಳ ಬೇರುಗಳನ್ನು ಅಝೊಸ್ಪಿರಲಮ್ (ಎಸಿಡಿ-250 ಗ್ರಾಂ/ಲೀ) ದ್ರಾವಣದಲ್ಲಿ ಅರ್ಧತಾಸು ಅದ್ದುವುದರಿಂದ ಶಿಫಾರಸ್ಸು ಮಾಡಿದ ಸಾರಜನಕದ ಪ್ರಮಾಣದಲ್ಲಿ ಅರ್ಧದಷ್ಟನ್ನು ಕಡಿಮೆಗೊಳಿಸಬಹುದು.

ಕಳೆ ನಿರ್ವವಣೆ

ಏಕದಳ/ದ್ವಿದಳ ಕಳೆಗಳು ಬರುವ ಪೂರ್ವದಲ್ಲಿಅಲಾಕ್ಲೋರ್ (1.5 ಲೀ./ಹೆಕ್ಟೇರ್) ಅಥವಾ ಬೂಟಾಕ್ಲೋರ್ (1.5 ಲೀ./ಹೆಕ್ಟೇರ್‍ಗೆ)ಅನ್ನು ಸಿಂಪಡಿಸಬೇಕು. ಕಪ್ಪು ಫಾಲಿಥೀನ್ ಹೊದಿಕೆಯು ಕಳೆಯನ್ನು ನಿಯಂತ್ರಿಸಲು ಮತ್ತು ತೇವಾಂಶವನ್ನು ಹಿಡಿದಿಟ್ಟುಕೊಳ್ಳಲು ಪರಿಣಾಮಕಾರಿಎಂದು ಸಾಬೀತಾಗಿದೆ.

ನೀರಾವರಿ:ಆರಂಭದಲ್ಲಿ ಬೆಳೆಗೆ 5 ರಿಂದ 6 ದಿನಗಳ ಅಂತರದಲ್ಲಿ ನೀರನ್ನುಕೋಡಬೇಕು.ಪ್ರಮುಖವಾದ ಹಂಗಾಮಿನಲ್ಲಿ ಹಾಗೂ ಅಂತಿಮಘಟ್ಟದಲ್ಲಿ ನೆಟ್ಟ ಬೆಳೆಗೆ 10-15 ದಿನಗಳಿಗೊಮ್ಮೆ ನೀರಾವರಿಒದಗಿಸಬೇಕು.ಗಡ್ಡೆಗಳ ಬೆಳವಣಿಗೆಯ ಸಂದರ್ಭದಲ್ಲಿ ಸಾಕಷ್ಟು ತೇವಾಂಶವಿರುವಂತೆ ನೋಡಿಕೊಳ್ಳಬೇಕು.

ಬೆಳೆ ಪರಿವರ್ತನೆ: ಕೋಸು ಬೆಳೆದ ನಂತರ ಬೀಟರೂಟ್, ಕ್ಯಾರೆಟ್‍ಇಲ್ಲವೇಯಾವುದಾದರೂ ದ್ವಿದಳ ಧಾನ್ಯ ಬೆಳೆಯನ್ನು ಬೆಳೆಯಬೇಕು.

ಕೊಯ್ಲು ಮತ್ತು ಇಳುವರಿ: ಕೋಸು ಪೂರ್ಣಗಾತ್ರಕ್ಕೆ ಬೆಳೆದಾಗ ಮಾತ್ರಕೊಯ್ಲು ಮಾಡಬೇಕು. ಅದುಮಿದರೆ ಕೋಸು ಬಿರುಸಾಗಿರಬೆಕಲ್ಲದೇ, ಸಡಿಲವಾಗಿ ಮೆತ್ತಗೆ ಇರಬಾರದು. ಫಸಲನ್ನುಎರಡು ಮೂರು ಹಂತಗಳಲ್ಲಿ ಕೋಯ್ಲು ಮಾಡುವುದು. ಅಲ್ಪಾವಧಿ ತಳಿಗಳಲ್ಲಿ ಹೆಕ್ಟೇರಿಗೆ 20-25 ಟನ್ ಮತ್ತು ದೀರ್ಘಾವಧಿ ತಳಿಗಳಲ್ಲಿ 25-30 ಟನ್ ಇಳುವರಿಯನ್ನು ಪಡೆಯಬಹುದು. ಎಲೆ ಕೋಸನ್ನು ಸಮಾನ್ಯ ವಾತವರಣದಲ್ಲಿ 4 ರಿಂದ5 ದಿನಗಳ ವರೆಗೆ ಸಂಗ್ರಹಿಸಬಹುದು. 0-1.70ಸೆ. ಉಷ್ಣಾಂಶ ಮತ್ತು 85-87% ಆದ್ರ್ರತೆಯಲ್ಲಿ ಎಲೆ ಕೋಸನ್ನು ಹಲವಾರು ವಾರಗಳವರೆಗೆ ಶೇಖರಿಸಬಹುದು.

ಸಸ್ಯ ಸಂರಕ್ಷಣೆ:

ಸಸ್ಯ ಹೇನು

ಲಕ್ಷಣಗಳು: ಹೇನುಗಳು ಗುಂಪುಗುಂಪಾಗಿ ಎಲೆಗಳಲ್ಲಿ ಕಂಡುಬರುತ್ತವೆ. ಇವುಗಳು ರಸ ಹೀರುವುದರಿಂದ ಎಲೆಗಳು ಹಳದಿಯಾಗಿ ನಂತರಒಣಗುತ್ತವೆ. ಕಪ್ಪು ಬೂಷ್ಟನ ಬೆಳವಣಿಗೆಯಾಗುತ್ತದೆ.

ನಿರ್ವಹಣೆ: ಬಿತ್ತನೆಯಾದ 2 ಮತ್ತು 4 ವಾರಗಳ ನಂತರ ಸಸಿ ಮಡಿಯಲ್ಲಿ ಸಸಿಗಳಿಗೆ 0.5 ಮಿ.ಲೀ. ಫಾಸ್ಫಾಮಿಡಾನ್ 40 ಇ.ಸಿ.ಅಥವಾ 1.7 ಮಿ.ಲೀ. ಆಕ್ಸಿಡೆಮಿಟಾನ್ ಮಿಥೈಲ್ 25 ಇ.ಸಿ. ಪ್ರತಿ ಲೀಟರ್ ನೀರಿಗೆ ಸೇರಿಸಿ ಸಿಂಪಡಿಸಬೇಕು

ವಜ್ರದ ಬೆನ್ನಿನಚಿಟ್ಟೆ (ಡೈಮಂಡ್ ಬ್ಯಾಕ ಮಾಥ್)

ಲಕ್ಷಣಗಳು: ಮೊದಲ ಹಂತದ ಮರಿಹುಳುಗಳು ಎಲೆಗಳ ಮೇಲೆ ಹಸಿರು ಪದಾರ್ಥವನ್ನು ಕೆರೆದುತಿನ್ನುತ್ತವೆ. ಇದರಿಂದ ಎಲೆಗಳ ಮೇಲೆ ಅಲ್ಲಲ್ಲಿ ಬಿಳಿ ಬಿಳಿ ತೆಳುವಾದ ಪದರುಗಳಂತೆಕಾಣುತ್ತದೆ.ನಂತರ ಬೆಳೆದ ಕೀಟಗಳು ಗಡ್ಡೆಗಳನ್ನು ಕೊರೆದುರಂಧ್ರ ಮಾಡಿತಿನ್ನುತ್ತವೆ. ಇದರಿಂದ ಗಡ್ಡೆಗಳು ಹಿಕ್ಕೆಗಳಿಂದ ತುಂಬಿ ಹಾಳಾಗುತ್ತವೆ. ಮರಿಹುಳುಗಳ ದೇಹವು ಎರಡೂ ಕಡೆಚೂಪಾಗಿದ್ದು ಹಸಿರು ಬಣ್ಣದಿಂದಕೂಡಿರುತ್ತದೆ.

ನಿರ್ವಹಣೆ:

 • ಕೋಸು ಗುಂಪಿಗೆ ಸೇರಿದ ತರಕಾರಿಗಳನ್ನು ಮೂರು ವರ್ಷದಲ್ಲಿಒಂದು ಸಾರಿ ಮಾತ್ರ ಬೆಳೆಯಬೇಕು.
 • ಕ್ಯಾಬೇಜ ನಾಟಿ ಮಾಡುವ 15 ದಿನ ಮೊದಲು ಪ್ರತಿ 25 ಸಾಲಿಗೆ ಒಂದು ಸಾಲು ಸಾಸಿವೆ ಮತ್ತು ನಾಟಿ ಮಾಡಿದ 15 ರಿಂದ 25 ದಿನ ನಂತರಇನ್ನೊಂದು ಸಾಲು ಸಾಸಿವೆಯನ್ನು ಬಿತ್ತನೆ ಮಾಡಬೇಕು. ಪಕ್ಷಿಗಳು ಕೂಡಲು ಹೆಕ್ಟೇರಿಗೆ 25 ರಂತೆಕವಲೊಡೆದ ಕಟ್ಟಿಗೆಗಳನ್ನು ಗಟ್ಟಿಯಾಗಿ ನೆಡಬೇಕು.
 • ಸಾಸಿವೆಯ ಮೇಲೆ ಅತೀ ಹೆಚ್ಚಿನ ಪ್ರಮಾಣದಲ್ಲಿ ಹುಳುಗಳು ಕಂಡುಬಂದಾಗ ಪ್ರತೀ ಲೀಟರ್ ನೀರಿಗೆ 0.5 ಮಿ.ಲೀ. ಡೈಕ್ಲೋರೊವಾಸ್ ಸೇರಿಸಿ ಸಾಸಿವೆಗೆ ಮಾತ್ರ ಸಿಂಪರಣೆ ಮಾಡಬೇಕು.
 • ಗಡ್ಡೆ ಆಗುವ ಸಮಯದಲ್ಲಿ ಹುಳುವಿನ ಬಾಧೆಕಂಡುಬಂದರೆ ಎಲೆಕೋಸು ಬೆಳೆಗೆ ಶೇ. 4ರ ಬೇವಿನ ಬೀಜದ ಕಷಾಯಅಥವಾ ಹೊಂಗೆಯ ಸೋಪ್‍ಅಥವಾ ಬೇವಿನ ಸೋಪ್‍ಶೇ. 1 ಅನ್ನು ಸಿಂಪರಣೆ ಮಾಡಬೇಕು. ಹುಳುವಿನ ಬಾಧೆ ಮುಂದುವರೆದರೆ ಪುನಃ ಇದೇ ಸಿಂಪರಣೆಯನ್ನು 15 ದಿನಗಳ ಅಂತರದಲ್ಲಿ ಮಾಡಬಹುದು.
 • ಬೆಳೆಯನ್ನು ಮುಟ್ಟಿದಾಗವಜ್ರದ ಬೆನ್ನಿನ ಚಿಟ್ಟೆಗಳು ಜಾಸ್ತಿ ಹಾರಾಡುವುದುಕಂಡು ಬಂದಾಗಎಕರೆಗೆ 3 ಬೆಳಕಿನ ಬಲೆ (ಲೈಟ್‍ಟ್ರ್ಯಾಪ್) ಗಳನ್ನು ಇಡಬೇಕು.
 • ಈ ಕೀಟಬಾಧೆಯನ್ನು ನಿಯಂತ್ರಿಸಲು, ನೋವಾಲ್ಯುರಾನ್ (0.75ಮಿಲಿ./ಲೀ.) ಅಥವಾಇಂಡಾಕ್ಸಾಕಾರ್ಬ್ (0.5ಮಿ.ಲಿ./ಲೀ) ಅಥವಾ ಅಬಾಮೆಕ್ಟನ್ ಬೆಂಜೋಯೇಟ್(0.25ಗ್ರಾಂ./ಲೀ.)ಅಥವಾಕಾರ್ಟಾಪ್ ಹೈಡ್ರೋಕ್ಲೋರೈಡ್(0.75-1ಗ್ರಾಂ/ಲೀ.) ನಂತಹ ಪರಿಣಾಮಕಾರಿ ಸಂಶ್ಲೇಷಿತ ಕೀಟನಾಶಕವನ್ನು ಸಿಂಪರಣೆ ಮಾಡಬೇಕು.

ಸಮಗ್ರರೋಗ ನಿರ್ವಹಣೆ:

ಅ). ಸಸಿ ಮಡಿತಯಾರಿಕೆಯಲ್ಲಿ:

 • ನೈಲಾನ್ ಪರದೆಅಥವಾ ನೆರಳು ಮನೆಗಳಲ್ಲಿ ಪ್ರೋಟ್ರೇಗಳ ಸಹಾಯದಿಂದ ಸಸಿಗಳನ್ನು ಬೆಳೆಸಬೇಕು.
 • ಕ್ಯಾಪ್ಟಾನ್ / ಥೈರಾಮ್ (0.2%) ಅಥವಾಟ್ರೈಕೊಡಮಾ ಹಾರ್ಜಿಯಾನಮ್‍ಒಂದುಕೆ.ಜಿ. ಬೀಜಕ್ಕೆ 5ಗ್ರಾಂ ನಂತೆ ಬೀಜೋಪಚಾರವನ್ನು ಮಾಡಬೇಕು.
 • ಮೊಳಕೆಯೊಡೆದ 15 ದಿನಗಳ ನಂತರಕಾಪರ್‍ಆಕ್ಸಿಕ್ಲೋರೈಡ್ (3ಗ್ರಾಂ/ಲೀ.) ಅಥವಾ ಮ್ಯಾಂಕೊಜೆಬ್ (2ಗ್ರಾಂ/ಲೀ.) ಎಲೆಗಳ ಮೇಲೆ ಸಿಂಪರಣೆ ಮಾಡಬೇಕು.

ಆ).ನಾಟಿ ಮಾಡುವಾಗ:ಸಸಿಗಳನ್ನು ನೆಡುವ ಮುನ್ನಕಾಪರ್‍ಆಕ್ಸಿಕ್ಲೋರೈಡ್ (3ಗ್ರಾಂ/ಲೀ.)ಅಥವಾಟ್ರೈಕೊಡಮಾ ಹಾರ್ಜಿಯಾನಮ್(2%) ದ್ರಾವಣದಲ್ಲಿಅದ್ದಬೇಕು.

;

ಇ). ಮುಖ್ಯ ಭೂಮಿತಯಾರಿಯಲ್ಲಿ:

 • ಆಲ್ಟರ್ನೇರಿಯಾಎಲೆಸುಡುರೋಗವನ್ನುನಿಯಂತ್ರಿಸಲು ಮ್ಯಾಂಕೊಜೆಬ್‍ಆಥವಾಕ್ಲೋರೋತಲೋನಿಲ್ (0.25%) ಎಲೆಗಳ ಮೇಲೆ ಸಿಂಪರಣೆ ಮಾಡಬೇಕು.
 • ಬೂಜುತುಪ್ಪಟರೋಗÀವನ್ನು ನಿಯಂತ್ರಿಸಲುಮ್ಯಾಂಕೊಜೆಬ್(0.2%)ಆಥವಾಕಾಪರ್‍ಆಕ್ಸಿಕ್ಲೋರೈಡ್ (0.3%) ದ್ರಾವಣವನ್ನು ಎಲೆಗಳ ಮೇಲೆ ಸಿಂಪಡಿಸಬೇಕು.
 • ದುಂಡಾಣುಕಪ್ಪು ಕೊಳೆ ರೋಗಕಂಡು ಬಂದಾಗ, ಸ್ಟ್ರೆಪ್ಟೋಮೈಸಿನ್ ಸಲ್ಫೇಟ್ (0.03%) + ಕಾಪರ್‍ಆಕ್ಸಿಕ್ಲೋರೈಡ್ (0.3%)ಆಥವಾ ಸ್ಟ್ರೆಪ್ಟೋಮೈಸಿನ್ ಸಲ್ಫೇಟ್ (0.03%) +ಕಾಪರ್ ಹೈಡ್ರಾಕ್ಸೈಡ್ (0.2%) ಅನ್ನು 10 ರಿಂದ 15 ದಿನಗಳ ಅಂತರದಲ್ಲಿ ಎಲೆಗಳ ಮೇಲೆ ಸಿಂಪರಣೆ ಮಾಡಬೇಕು.

ಲೇಖನ: ಹೀನಾ ಎಮ್.ಎಸ್., ಸರಸ್ವತಿ ಎಸ್.ಎಸ್., ಆರ್.ಬಿ. ಬೆಳ್ಳಿ,&ಆರ್. ಬಿ. ನೆಗಳೂರು ಕೃಷಿ ವಿಜ್ಞಾನಕೇಂದ್ರಇಂಡಿಮತ್ತು ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ,ವಿಜಯಪುರ
ಮೊ. 7019095720

Share your comments

Latest feeds

More News
Krishi Jagran Kannada Magazine Subscription Online Subscription
Krishi Jagran Kannada Subscription

CopyRight - 2021 Krishi Jagran Media Group. All Rights Reserved.