1. ಅಗ್ರಿಪಿಡಿಯಾ

ಒಂದು ಗಿಡದಿಂದ 19 ಕೆಜಿಯವರೆಗೆ ಇಳುವರಿ ಪಡೆಯುವ ಟೊಮ್ಯಾಟೋ ತಳಿ.... ಇಲ್ಲಿದೆ ಮಾಹಿತಿ

Arka Rakshak Tomato

ಒಂದು ಟೊಮ್ಯಾಟೊ ಗಿಡ ಎಷ್ಟು ಇಳುವರಿ ನೀಡಬಲ್ಲದು ಎಂದು ನೀವು ಊಹಿಸಬಲ್ಲಿರಾ? ನಿಮ್ಮ ಊಹೆ ಎಷ್ಟರ ಮಟ್ಟಿಗೆ ತಲುಪಬಹುದು? 5 ಕೆಜಿಯಿಂದ 10 ಕೆ.ಜಿ. ಇನ್ನೂ ಕೆಲವರಿಗೆ ಇದು ಹೆಚ್ಚು ಎನಿಸಬಹುದು. ಆದರೆ ಇಲ್ಲೊಂದು ಟೊಮ್ಯಾಟೋ ತಳಿ 19 ಕೆಜಿಗೆ ಹೆಚ್ಚು ಇಳುವರಿ ನೀಡುತ್ತದೆ ಎಂದು ನಂಬುತ್ತೀರಾ....ಹೌದು ನಂಬಲೇಬೇಕು.

ನಾವು ಇಲ್ಲಿ ಹೇಳುತ್ತಿರುವುದು ಟೊಮ್ಯೋಟಾ ಸಾಧಾರಣ ಗಿಡವಲ್ಲ.  ಇದನ್ನು ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ (ಐಐಎಚ್ ಆರ್) ಈ ಹೊಸ ತಳಿಗಳ ಟೊಮ್ಯಾಟೋವನ್ನು ಅಭಿವೃದ್ಧಿ ಪಡಿಸಿದೆ. ಒಂದೇ ಒಂದು ಗಿಡ  19 ಕೆ.ಜಿಯಷ್ಟು ಟೊಮ್ಯಾಟೋ ಉತ್ಪಾದಿಸಿದೆ. ಈ ಹೊಸ ಉತ್ತಮ ಗುಣಮಟ್ಟದ ಟೊಮ್ಯಾಟೊ ತಳಿಗಳ ಹೆಸರು "ARKA RAKSHAK ಇನ್ನೊಂದು ARKA SAMRAT. ಇವರೆಡು ತಳಿಗಳು 19 ಕೆಜಿಗಿಂತಲೂ ಹೆಚ್ಚು ಇಳುವರಿ ಕೊಡುತ್ತದೆ.

ಅರ್ಕಾ ರಕ್ಷಕ್:

ಅಧಿಕ ಇಳುವರಿ ನೀಡುವ ಈ ಹೈಬ್ರಿಡ್ ತಳಿಗೆ ಮೂರು ರೋಗಗಳನ್ನು (ಎಲೆ ಮುರುಟು, ನಂಜುರೋಗ, ದುಂಡು ರೋಗಾಣುವಿನಿಂದ ಸೊರಗು ಹಾಗೂ ಎಲೆಚುಕ್ಕೆರೋಗ) ನಿರೋಧಿಸುವ ಶಕ್ತಿಯಿದೆ. ಮಧ್ಯಮ ಬೆಳವಣಿಗೆಯ ಈ ತಳಿಯುದಟ್ಟಹಸಿರು ಬಣ್ಣದ ಎಲೆಗಳನ್ನು ಹೊಂದಿದ್ದು, ಸೂರ್ಯನ ಕಿರಣಗಳಿಂದ ಕಾಯಿಗಳಿಗೆ ರಕ್ಷಣೆ ನೀಡುತ್ತದೆ. ನಾಟಿ ಮಾಡಿದ 65 ರಿಂದ 70 ದಿನಗಳ ನಂತರ ಮೊದಲ ಕಟಾವು ಮಾಡಬಹುದು. ಹಣ್ಣುಗಳು 80 ರಿಂದ 90 ಗ್ರಾಂ ಸರಾಸರಿ ತೂಕ ಇರುತ್ತದೆ. ಹಣ್ಣುಗಳು ದಟ್ಟ ಕೆಂಪು ಬಣ್ಣದ್ದಾಗಿರುತ್ತವೆ. ಕಟಾವು ಮಾಡಿದ ನಂತರ 20 ರಿಂದ 25 ದಿನಗಳ ವರೆಗೆ ಇಡಬಹುದು. ಎಲ್ಲಾ ಕಾಲದಲ್ಲಿಯೂ ಬೆಳೆಯಲು ಯೋಗ್ಯವಾಗಿದೆ. ಪ್ರತಿ ಹೆಕ್ಟೇರಿಗೆ 75 ರಿಂದ 80 ಟನ್ ಸರಾಸರಿ ಇಳುವರಿಯನ್ನು 140-145 ದಿನಗಳಲ್ಲಿ ನೀಡುತ್ತದೆ.

ಅರ್ಕಾ ಸಾಮ್ರಾಟ್

ಅಧಿಕ ಇಳುವರಿ ನೀಡುವ ಈ ಹೈಬ್ರಿಡ್ ತಳಿಗೆ ಮೂರು ರೋಗಗಳನ್ನು (ಎಲೆ ಮುರುಟು, ನಂಜುರೋಗ, ದುಂಡು ರೋಗಾಣುವಿನಿಂದ ಸೊರಗು ಹಾಗೂ ಎಲೆಚುಕ್ಕೆರೋಗ) ನಿರೋಧಿಸುವ ಶಕ್ತಿಯಿದೆ. ಮಧ್ಯಮ ಬೆಳವಣಿಗೆಯ ಈ ತಳಿಯುದಟ್ಟಹಸಿರು ಬಣ್ಣದ ಎಲೆಗಳನ್ನು ಹೊಂದಿದ್ದು, ಸೂರ್ಯನ ಕಿರಣಗಳಿಂದ ಕಾಯಿಗಳಿಗೆ ರಕ್ಷಣೆ ನೀಡುತ್ತದೆ. ನಾಟಿ ಮಾಡಿದ 65 ರಿಂದ 70 ದಿನಗಳ ನಂತರ ಮೊದಲ ಕಟಾವು ಮಾಡಬಹುದು.

;

ಹಣ್ಣುಗಳು ಗುಂಡಾಗಿದ್ದು, ಪ್ರತಿ ಹಣ್ಣಿನ ತೂಕ ಸರಾಸರಿ 90 ರಿಂದ 100 ಗ್ರಾಂ ಇರುತ್ತದೆ. ಕಟಾವು ಮಾಡಿದ ನಂತರ 20 ರಿಂದ 25 ದಿನಗಳ ವರೆಗೆ ಇಡಬಹುದು. ಎಲ್ಲಾ ಕಾಲದಲ್ಲಿಯೂ ಬೆಳೆಯಲು ಯೋಗ್ಯವಾಗಿದೆ. ಪ್ರತಿ ಹೆಕ್ಟೇರಿಗೆ 80 ರಿಂದ 85 ಟನ್ ಸರಾಸರಿ ಇಳುವರಿಯನ್ನು 140-145 ದಿನಗಳಲ್ಲಿ ನೀಡುತ್ತದೆ.

Share your comments

Latest feeds

More News
Krishi Jagran Kannada Magazine Subscription Online Subscription
Krishi Jagran Kannada Subscription

CopyRight - 2021 Krishi Jagran Media Group. All Rights Reserved.