1. ಅಗ್ರಿಪಿಡಿಯಾ

Green manure: ಹಸಿರು ಗೊಬ್ಬರದ ಪ್ರಯೋಜನ ಹಾಗೂ ಗುಣಗಳು

Kalmesh T
Kalmesh T
Benefits and properties of green manure

ಮಣ್ಣಿನ ಭೌತಿಕ, ರಾಸಾಯನಿಕ ಹಾಗೂ ಜೈವಿಕ ಗುಣಗಳನ್ನು ಉತ್ತಮಪಡಿಸುವಲ್ಲಿ ಹಸಿರು ಗೊಬ್ಬರದ ಪ್ರಯೋಜನ ಹಾಗೂ ಗುಣಗಳು

ಹುಣಸೆ ಹಣ್ಣಿನಲ್ಲಿರುವ ಪೌಷ್ಠಿಕ ಮತ್ತು ಔಷಧೀಯ ಗುಣಗಳು

ಭೌತಿಕ ಗುಣಗಳು:

  • ಮಣ್ಣಿನಲ್ಲಿರುವ ಸಾವಯವ ಅಂಶ ಹೆಚ್ಚಾಗಿ, ಮಣ್ಣಿನ ಫಲವತ್ತತೆ ವೃದ್ಧಿಗೊಳ್ಳುತ್ತದೆ.
  • ಮಣ್ಣಿನ ಕಣಗಳನ್ನು ಸಡಿಲಗೊಳಿಸುವುದರ ಮೂಲಕ ಮಣ್ಣಿನ ಕಣಗಳ ನಡುವಿನ ಜಾಗ ಹೆಚ್ಚಾಗಿ ಗಾಳಿಯಾಡುವಿಕೆ ಹಾಗೂ ನೀರು ಸರಾಗವಾಗಿ ಮಣ್ಣಿನೊಳಗೆ ಇಳಿಯಲು ನೆರವಾಗುತ್ತದೆ.
  • ಮಣ್ಣಿನಲ್ಲಿ ಗಾಳಿ ಮತ್ತು ನೀರಿನ ಸಮತೋಲನ ಉತ್ತಮಗೊಂಡು ಬೆಳೆಗಲ ಬೆಳವಣಿಗೆಯು ಉತ್ತಮವಾಗಿರುತ್ತದೆ.
  • ಕೆಳ ಪದರಗಳಿಂದ ಪೋಷಕಾಂಶಗಳನ್ನು ಮೇಲಕ್ಕೆ ತಂದು, ಬೆಳೆಗಳಿಗೆ ಸುಲಭವಾಗಿ ದೊರಕುವ ರೂಪಕ್ಕೆ ಮಾರ್ಪಡಿಸುತ್ತದೆ.
  • ಮಣ್ಣಿನ ಮೇಲ್ಬಾಗದಲ್ಲಿರುವ ಪೋಷಕಾಂಶಗಳು ಮಳೆ ನೀರಿನಲ್ಲಿ ಕೊಚ್ಚಿ ಹೋಗುವುದನ್ನು ಮತ್ತು ಮಣ್ಣಿನ ಕೆಳಪದರಗಳಲ್ಲಿ ಪೋಷಕಾಂಶಗಳು ಹೊರ ಹೋಗದಂತೆ ತಡೆಗಟ್ಟುತ್ತದೆ.
  • ಹಸಿರು ಗೊಬ್ಬರದ ಪೈರು ಹೊದಿಕೆ ಬೆಳೆಯುವಂತಿದ್ದು, ಮಳೆ ಹಾಗೂ ಗಾಳಿಯಿಂದ ಮಣ್ಣಿನ ಸವಕಳಿಯನ್ನು ತಡೆಯುತ್ತದೆ.
  • ಹಸಿರು ಗೊಬ್ಬರದ ಗಿಡಗಳು ಸಾಮಾನ್ಯವಾಗಿ ಒರಟಾಗಿರುವುದರಿಂದ ಮತ್ತು ಹುಲುಸಾಗಿ ಬೆಳೆಯುವುದರಿಂದ ಕಳೆಗಳಿಗೆ ನೀರು, ಪೋಷಕಾಂಶ, ಬೆಳಕು ಹಾಗೂ ಸ್ಥಳ ಸಿಗದಂತೆ ಮಾಡಿ ಕಳೆಗಳ ಬೆಳವಣಿಗೆಯನ್ನು ಶೀಘ್ರದಲ್ಲಿ ಹತೋಟಿ ಮಾಡುತ್ತದೆ.

ಬೀಜ ಪ್ರಭೇದಗಳಲ್ಲಿ ಸಂಶೋಧನೆ: ಪ್ರವಾಹ/ಬರ ತಡೆದುಕೊಳ್ಳುವ ಬೀಜ ಅಭಿವೃದ್ಧಿ

ರಾಸಾಯನಿಕ ಗುಣಗಳು:

  • ಮಣ್ಣಿನಲ್ಲಿ ಕಳಿತು, ಮಣ್ಣಿನಲ್ಲಿ ಇಂಗಾಲ ಮತ್ತು ಹ್ಯೂಮಸ್ ಅಂಶ ಹೆಚ್ಚಾಗಲು ಸಹಕರಿಸುತ್ತವೆ.
  • ವಾತಾವರಣದಲ್ಲಿ ಅನಿಲ ರೂಪದಲ್ಲಿರುವ ಸಾರಜನಕವನ್ನು ಹೀರಿ ಮಣ್ಣಿನಲ್ಲಿ ಸ್ಥಿರೀಕರಿಸುತ್ತವೆ.
  • ಭೂಮಿಯ ಉತ್ಪಾದನೆಯನ್ನು ಹೆಚ್ಚಿಸುತ್ತವೆ.
  • ಹಸಿರು ಗೊಬ್ಬರ ಸಸ್ಯಗಳು ಮಣ್ಣಿನಲ್ಲಿ ಕಳಿಯುವುದರಿಂದ ರಂಜಕ, ಕ್ಯಾಲ್ಷಿಯಂ ಮತ್ತು ಇತರ ಲಘು ಪೋಷಕಾಂಶಗಳ ಲಭ್ಯತೆಯನ್ನು ಹೆಚ್ಚಿಸುತ್ತವೆ.
  • ಮಣ್ಣಿನ ಧನ ಅಯಾನು (ಸಿ.ಇ.ಸಿ.) ಗಳ ವಿನಿಮಯ ಸಾಮಥ್ರ್ಯವು 2 ರಿಂದ 30 ಪಟ್ಟು ಹೆಚ್ಚಾಗುವುದರಿಂದ ಬೆಳೆಗಳಿಗೆ ಪೋಷಕಾಂಶಗಳ ಪೂರೈಕೆಯ ಸಾಮಥ್ರ್ಯವು ಅಧಿಕಗೊಳ್ಳುತ್ತದೆ.

ಲಾಭದಾಯಕ ಗಂಧದ ಕೃಷಿಯಿಂದ ರೈತರಾಗುತ್ತಾರೆ ಆರ್ಥಿಕ ಸಬಲ

ಜೈವಿಕ ಗುಣಗಳು:

  • ಭೂಮಿಯಲ್ಲಿರುವ ಸೂಕ್ಷ್ಮಾಣು ಜೀವಿಗಳಿಗೆ ಆಹಾರ ದೊರೆತು ಅವುಗಳ ಸಂಖ್ಯೆಯನ್ನು ಗಣನೀಯ ಪ್ರಮಾಣದಲ್ಲಿ ಹೆಚ್ಚಿಸಿ ಮಣ್ಣನ್ನು ಜೀವಂತವಾಗಿಡುವಲ್ಲಿ ಸಹಕಾರಿಯಾಗುತ್ತದೆ.
  • ಸಾವಯವ ಅಂಶವನ್ನೊಳಗೊಂಡ ಮಣ್ಣಿನಲ್ಲಿ ಸೂಕ್ಷ್ಮಾಣು ಜೀವಿಗಳ ಸಂಖ್ಯೆ ಹಾಗೂ ಕ್ರಿಯೆ ಚುರುಕಾಗಿರುತ್ತದೆ.
  • ಜೈವಿಕ ಕ್ರಿಯೆಯ ಚಟುವಟಿಕೆಯನ್ನು ಹೆಚ್ಚಿಸಿ ಪೋಷಕಾಂಶಗಳ ಲಭ್ಯತೆಯನ್ನು ಹೆಚ್ಚಿಸುತ್ತವೆ.
  • ಸೂಕ್ಷ್ಮಾಣು ಜೀವಿಗಳು ನಡೆಸುವ ಕ್ರಿಯೆಗಳಲ್ಲಿ ಸಹಕರಿಸಿ ಮಣ್ಣಿನಲ್ಲಿರುವ ಪೋಷಕಾಂಶಗಳ ಲಭ್ಯತೆಯನ್ನು ಹೆಚ್ಚಿಸುತ್ತವೆ
  • ಹಸಿರೆಲೆ ಗೊಬ್ಬರ ಬೆಳೆ ಬೆಳೆಯುವುದರಿಂದ ಮಣ್ಣನ್ನು ಜೀವಂತವಾಗಿರಿಸಿ ಸುಸ್ಥಿರ ಇಳುವರಿಯನ್ನು ಪಡೆಯಬಹುದು.
Published On: 27 March 2023, 06:57 PM English Summary: Benefits and properties of green manure

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.