1. ಅಗ್ರಿಪಿಡಿಯಾ

ಕೃಷಿ ಭೂಮಿಯನ್ನು ಯೋಜನಾ ಬದ್ಧವಾಗಿ ವಿನ್ಯಾಸ ಮಾಡುವ ಕುರಿತು ಇಲ್ಲಿದೆ ಮಹತ್ವದ ಮಾಹಿತಿ

Kalmesh T
Kalmesh T
How to design your dream farm land

ಕೃಷಿ ಭೂಮಿ ವಿನ್ಯಾಸ ಹೇಗಿರಬೇಕು ಎಂಬುದರ ಕುರಿತು ವಿವರಿಸಿದ್ದಾರೆ ರೈತರು ಮತ್ತು ಕೃಷಿ ಸಲಹೆಗಾರರಾದ ಪ್ರಶಾಂತ್‌ ಜಯರಾಮ್‌ ಅವರು. ಇದನ್ನೂ ಓದಿರಿ..

ಕಬ್ಬಿನ ತ್ಯಾಜ್ಯ ಸುಡದೇ ಮುಚ್ಚಿಗೆ ಹಾಕುವುದರಿಂದ ಹೊಲಕ್ಕೆ ದೊರೆಯಲಿದೆ ಪೋಷಕಾಂಶ

ಕೃಷಿ ಭೂಮಿ ಬಳಕೆಯನ್ನು ಆಹಾರ ಉತ್ಪಾದನೆ ಜೊತೆಗೆ ವಿವಿಧ ಉದ್ದೇಶಗಳಿಗೆ ಪೂರಕವಾಗಿ ಉಪಯೋಗಿಸಿಕೊಳ್ಳುವ ರೀತಿ ಯೋಜನೆ ರೂಪಿಸಿ ವಿನ್ಯಾಸ ಸಿದ್ದಪಡಿಸಿಕೊಳ್ಳುವುದರಿಂದ ಆಹಾರ,ಅನಂದ,ಆರೋಗ್ಯ,ಆರ್ಥಿಕತೆ ಇನ್ನೂ ಹಲವಾರು ಅನುಕೂಲತೆ ಪಡೆದುಕೊಳ್ಳವುದರ ಜೊತೆಗೆ ಕೃಷಿ ಕ್ಷೇತ್ರವನ್ನು ಮತ್ತು ರೈತರನ್ನು ಆರ್ಥಿಕವಾಗಿ ಗಟ್ಟಿಗೊಳಿಸಬಹುದು

ಕೃಷಿ ಭೂಮಿ ವಿನ್ಯಾಸ ಹಲವಾರು ಅವಕಾಶ:

ಕೃಷಿ ಭೂಮಿಯನ್ನು ಯೋಜನಾಬದ್ದವಾಗಿ ರಚನೆ ಮಾಡಿಕೊಳ್ಳುವುದರಿಂದ ಕೃಷಿ ಚಟುವಟಿಕೆ ಜೊತೆಗೆ ಕೃಷಿಗೆ ಪೂರಕವಾದ ಇತರೆ ಸದ್ದುದೇಶಗಳಿಗೆ ಬಳಸಿಕೊಳ್ಳಬಹುದು.

  • ಕಡಿಮೆ ಜಾಗದಲ್ಲಿ  ಹೆಚ್ಚು ಬೆಳೆ ಆಯೋಜನೆ ಮಾಡುವ ಅವಕಾಶ.
  • ಕುರಿ/ಕೋಳಿ/ಹಸು/ಮೀನು ಸಾಕಾಣಿಕೆ.
  • ಕೃಷಿ ಉತ್ಪನ್ನ ಮಾರುಕಟ್ಟೆ.
  • ಕೃಷಿ ಪ್ರವಾಸೋದ್ಯಮ.
  • ಕೃಷಿ ತರಬೇತಿ/ಮಾಹಿತಿ ಕೇಂದ್ರ.
  • ದೇಶಿ ಬೀಜ ಉತ್ಪಾದನೆ ಮತ್ತು ಸಂರಕ್ಷಣೆ ಕೇಂದ್ರ.
  • ಫಾರ್ಮ್ ಸ್ಟೇ.
  • ಫಾರ್ಮ್ ಕಟೇಜ್.
  • ಪರಿಸರ ಕೇಂದ್ರ
  • ಗಿಡಗಳ ನರ್ಸರಿ.
  • ಗುಡಿ ಕೈಗಾರಿಕೆ.
  • ಯೋಗ/ಧ್ಯಾನ/ಧಾರ್ಮಿಕ ಕೇಂದ್ರ.
  • ನೈಸರ್ಗಿಕ/ಪ್ರಕೃತಿ ಚಿಕಿತ್ಸಾ ಕೇಂದ್ರ
  • ಸಭೆ ಸಮಾರಂಭಗಳಿಗೆ ಸ್ಥಳವಕಾಶ

ಹೀಗೆ ಹಲವಾರು ಅವಕಾಶಗಳಿಗೆ ಕೃಷಿ ಭೂಮಿ ಬಳಕೆಯನ್ನು ತೆರೆದಿಡುವುದರಿಂದ ಕೃಷಿ ಭೂಮಿಯನ್ನು ಗರಿಷ್ಠ ಪ್ರಮಾಣದಲ್ಲಿ ಹೆಚ್ಚು ಜನರು ಕನಿಷ್ಠ ಬಾಡಿಗೆ/ಗುತ್ತಿಗೆ /ಖರೀದಿ ಅವಕಾಶಗಳೊಂದಿಗೆ ಕನಿಷ್ಠ ನಿರ್ವಹಣಾ ವೆಚ್ಚದಲ್ಲಿ ಉಪಯೋಗಿಸಿಕೊಳ್ಳುವ ಅವಕಾಶ ಕಲ್ಪಿಸಿಕೊಳ್ಳಬಹುದು.

ಭೂಮಿಯ ಹಿಡುವಳಿದಾರರು ಮತ್ತು ಭೂಮಿಯನ್ನು ಬಾಡಿಗೆ/ಗುತ್ತಿಗೆ ಪಡೆದು ವಿವಿಧ ಉದ್ದೇಶಕ್ಕೆ ಬಳಸುವವರು

  • ಪರಸ್ಪರ ಅನುಕೂಲ ಹೊಂದಬಹುದು.
  • *ಕೃಷಿ ಭೂಮಿ ಹಿಡುವಳಿಗೆ ತಕ್ಕ ರೀತಿ ಪ್ರತ್ಯೇಕ ಪ್ಲಾಟ್(ಭಾಗ) ಮಾಡಿ ವಿನ್ಯಾಸ ಮಾಡುವುದರಿಂದ ಹಲವಾರು ಅನುಕೂಲ ಒದಗಿಸಬಹುದು.
  • *ಪ್ರತಿ ಪ್ಲಾಟ್ ಅನ್ನು ಪ್ರತ್ಯೇಕ ಉದ್ದೇಶಕ್ಕೆ ಬಳಸಬಹುದು.
  • *ಕೃಷಿ ಉಪಕರಣ ಮತ್ತು ಕೃಷಿ ಉತ್ಪನ್ನ ಸಾಗಾಟಕ್ಕೆ ಅನುಕೂಲ.
  • *ಕೃಷಿ ಉತ್ಪನ್ನ ಶೇಖರಣೆ/ಕೋಲ್ಡ್ ಸ್ಟೋರೇಜ್.
  • *ಪ್ರತ್ಯೇಕ ಪ್ಲಾಟ್ ನಲ್ಲಿ ಪ್ರತ್ಯೇಕ ಬೆಳೆ ಆಯೋಜನೆ, ಪ್ರತ್ಯೇಕ ಉದ್ದೇಶಕ್ಕೆ ಬಳಕೆ.
  • *ಭೂಮಿ ಮಾರಾಟ ಅಥವಾ ಭೂಮಿ ವಿಭಾಗ ಮಾಡುವಾಗ ಪ್ರತ್ಯೇಕವಾಗಿ ಪ್ಲಾಟ್ ರೀತಿ ವಿಭಾಗ ಅಥವಾ ಮಾರಾಟ ಮಾಡಲು ಅನುಕೂಲ.
  • *ವಿನ್ಯಾಸ ಮಾಡುವುದರಿಂದ ಪ್ರತಿ ಪ್ಲಾಟ್ ಗೆ ಹೋಗಿಬರಲು ರಸ್ತೆ, ನೀರಾವರಿ ಸಂಪರ್ಕ ಇರುತ್ತದೆ. ನಿರ್ದಿಷ್ಟ ಪ್ಲಾಟ್ ಅನ್ನು ನಿರ್ದಿಷ್ಟ ಉದ್ದೇಶಕ್ಕೆ ಅಂದರೆ
  • ತೋಟದ ಮನೆ, ಕುರಿ /ಕೋಳಿ /ಹಸು ಸಾಕಾಣಿಕೆ,
  • ಫಾರ್ಮ್ ಕಟೇಜ್,ಗುಡಿ ಕೈಗಾರಿಕೆ........ಹೀಗೆ ಹತ್ತಾರು ಉದ್ದೇಶಗಳಿಗೆ ಬಳಸಲು ಅಥವಾ ಬಾಡಿಗೆ/ಗುತ್ತಿಗೆ/ವರ್ಗಯಿಸಲು ಅನುಕೂಲ.

ಪಿಎಂ ಕಿಸಾನ್‌ ಪಟ್ಟಿಯಿಂದ ಈ ರೈತರನ್ನು ಕೈಬಿಟ್ಟ ಸರ್ಕಾರ! ಯಾರನ್ನು ಗೊತ್ತೆ?

*ಕಾರಣಾಂತರಗಳಿಂದ ಹಣದ ಅವಶ್ಯಕತೆ ಬಿದ್ದಾಗ ಇಡೀ ಕೃಷಿ ಭೂಮಿ ಮಾರಾಟ ಮಾಡುವ ಬದಲು ಅವಶ್ಯಕತೆಗೆ ಅನುಗುಣವಾಗಿ ಪ್ರತ್ಯೇಕ ಪ್ಲಾಟ್ ಮಾರಿ ಹಣದ ಅವಶ್ಯಕತೆ ಪೂರೈಸಿಕೊಳ್ಳಬಹುದು.

*ವಿನ್ಯಾಸ,ರಸ್ತೆ ಇಲ್ಲದೇ ಇದ್ದಾಗ ಮಾರಾಟ ಮಾಡುವ ಪ್ಲಾಟ್ ಗೆ ಹೊಸದಾಗಿ ರಸ್ತೆ ಸಂಪರ್ಕ ಕಲ್ಪಿಸಲು ಈಗಾಗಲೇ ಬೆಳೆದಿರುವ ಗಿಡಮರಗಳನ್ನು ಮತ್ತು ಇತರೆ ಮಾರ್ಪಡು ಮಾಡಲು ಸಾಕಷ್ಟು ಆರ್ಥಿಕ ಮತ್ತು ಸಮಯ ನಷ್ಟವಾಗುತ್ತದೆ.

*ಉತ್ತಮ ಪರಿಸರದ ಜೊತೆಗೆ ವಾಸ ಮಾಡಿ ಉತ್ತಮ ಆರೋಗ್ಯ ಪಡೆಯಲು ಮತ್ತು ವಿಷಮುಕ್ತ ಆಹಾರ ಬೆಳೆದುಕೊಳ್ಳುವ ಇಚ್ಛೆ ಇರುವ ಬಹುತೇಕರು ಕೃಷಿ ಭೂಮಿ ಖರೀದಿಸಿ ತಮ್ಮ ಅಸೆ ಪೂರೈಸಿಕೊಳ್ಳಲಾಗುತ್ತಿಲ್ಲ.ಇಂತಹವರು ತಮ್ಮ ಅಗತ್ಯಕ್ಕೆ ತಕ್ಕಂತೆ ಕೃಷಿ ಪ್ಲಾಟ್ ಅನ್ನು ಬಾಡಿಗೆ/ಗುತ್ತಿಗೆ/ಖರೀದಿ ಮಾಡಬಹುದು.

*ನಾಲ್ಕರು ಮಂದಿ ಒಂದೇ ಕೃಷಿ ಭೂಮಿಯಲ್ಲಿ ಪ್ರತ್ಯೇಕ ಪ್ಲಾಟ್ ಪಡೆದು,ಪ್ಲಾಟ್ ನಿರ್ವಹಣೆಗೆ ಒಬ್ಬ ವ್ಯಕ್ತಿ ನೇಮಕ ಮಾಡುವುದರಿಂದ ನಿರ್ವಹಣೆ ಸುಲಭವಾಗುವುದರ ಜೊತೆಗೆ ನಿರ್ವಹಣಾ/ಕೂಲಿ ವೆಚ್ಚ ನಿಭಾಯಿಸಲು ಸುಲಭವಾಗುತ್ತದೆ.

*ಸಣ್ಣ ಕೃಷಿ ಪ್ಲಾಟ್ ಮೂಲಕ "ನಿಮ್ಮ ಆಹಾರವನ್ನು ನೀವೇ ಬೆಳೆಯುವುದು ನಿಮ್ಮ ಹಣವನ್ನು ನೀವೇ ಮುದ್ರಿಸಿಕೊಂಡ ಹಾಗೆ".ಎನ್ನುವ  ರೀತಿ ದೂಡ್ಡ ಮಟ್ಟದಲ್ಲಿ ಉತ್ಪಾದನೆ ಮಾಡುವುದಕ್ಕಿಂತ ಸಣ್ಣ ಮಟ್ಟದಲ್ಲಿ ಉತ್ಪಾದನೆ ಮಾಡುವುದು ಸಾಕಷ್ಟು ಸಮಸ್ಯೆಗಳಿಗೆ ಪರಿಹಾರವಾಗುತ್ತದೆ.

*ಸುಮಾರು 10 ಗುಂಟೆ ಕೃಷಿ ಪ್ಲಟ್ ಖರೀದಿಸಿ ಅಲ್ಲಿಯೇ ವಾಸದ ಮನೆ ಕಟ್ಟಿಕೊಂಡು ಮನೆ ಬಳಕೆಗೆ ಬೇಕಾಗುವ ಆಹಾರ ಪದಾರ್ಥ ಬೆಳೆಯುವುದು, ಇತರೆ ಉದ್ಯೋಗ ಮಾಡುವುದು, ವರ್ಕ್ ಫ್ರಮ್ ಹೋಮ್ ರೀತಿ ವರ್ಕ್ ಫ್ರಮ್ ಫಾರ್ಮ್ ಆಗಿ ಬದಲಾಗುವುದು.

ನಿಮ್ಮ ಕನಸಿನಂತೆ ನಾವು ಕೃಷಿ ಭೂಮಿಯನ್ನು ವಿನ್ಯಾಸಗೊಳಿಸುತ್ತೇವೆ:

ಆರ್ಥಿಕ /ಆಹಾರ/ಔಷಧಿ/ ಮೇವು /ಗೊಬ್ಬರ ಬೆಳೆ ಆಯೋಜನೆ ಮತ್ತು ನಿರ್ವಹಣೆ,ನೀರಾವರಿ ವಿನ್ಯಾಸ, ಬೇಲಿ ನಿರ್ಮಾಣ,ಬೋರ್ವೆಲ್ ರಿಚಾರ್ಜ್ ವಿಧಾನಗಳು,ಇವುಗಳನ್ನು ಕೃಷಿ ಭೂಮಿಯಲ್ಲಿ ಅಳವಡಿಸಲು ಬೇಕಾದ ತಾಂತ್ರಿಕ ಸಲಹೆ,ಅಂದಾಜು ಖರ್ಚು,ಇತರೆ ಕೃಷಿ ಮತ್ತು ತೋಟ ನಿರ್ಮಾಣಕ್ಕೆ ಸಂಬಂಧಪಟ್ಟ ಮಾಹಿತಿ ಮತ್ತು ಸೇವೆಗಳನ್ನು ನನ್ನ 30 ವರ್ಷದ ಕೃಷಿ ಅನುಭವದ ಮೂಲಕ ಪಡೆದುಕೊಳ್ಳುವ ಇಚ್ಛೆಯಿರುವ ಆಸಕ್ತರು ಸಂಪರ್ಕ ಮಾಡಬಹುದು ಮತ್ತು ನಿಮ್ಮ ಕನಸಿನಂತೆ ನಿಮ್ಮ ಕೃಷಿ ಭೂಮಿಯನ್ನು ವಿನ್ಯಾಸ ಮಾಡಿ ಕೊಡಲಾಗುವುದು.

ಲೇಖಕರು : ಪ್ರಶಾಂತ್ ಜಯರಾಮ್

Agriculturist & Agri Consultant.

Mob: 93424 34530

Published On: 31 March 2023, 11:58 AM English Summary: How to design your dream farm land

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.