1. ಯಶೋಗಾಥೆ

ಕಣ್ಮರೆಯಾದ ದೇಶಿ ಬೀಜಗಳ ಸಂರಕ್ಷಣೆಗೆ ಹೆಸರಾಗಿದ್ದಾಳೆ ರಾಹೀಬಾಯಿ ಸೋಮಾಪೊಪರೆ

KJ Staff
KJ Staff
Rahibai

ಭಾರತವು ಅನೇಕ ತರಹದ ಸಸ್ಯಸಂಕುಲಗಳ ತವರಾಗಿದ್ದು, ಮೊದಲಿನಿಂದಲೂ ತನ್ನ ಸಸ್ಯ ವೈವಿಧ್ಯತೆಗೆ ಹೆಸರಾಗಿದೆ. ಈ ಒಂದು ಸಸ್ಯ ಸಂಪತ್ತನ್ನು ಉಳಿಸಲು ಹಲವಾರು ಹೋರಾಟಗಾರರು ಪ್ರಯತ್ನಿಸಿದರೂ ಹೈಬ್ರೀಡ್ ತಳಿಗಳ ಪರಿಣಾಮವಾಗಿ ದೇಸಿ ತಳಿಯ ಅನೇಕ ಸಸ್ಯಗಳು ಕಣ್ಮರೆಯಾದವು. ಆದರೆ ಕೆಲವರ ಸತತವಾದ ಪ್ರಯತ್ನದಿಂದ ಕೆಲವು ಕಡೆಗಳಲ್ಲಿ ದೇಸಿ ಬೀಜಗಳ ಸಂರಕ್ಷಣೆ ಮತ್ತು ಉತ್ಪಾದನೆ ನಡೆಯುತ್ತಿದ್ದು,ಅದಕ್ಕೆ ಉದಾಹರಣೆಯೇ ಮಹಾರಾಷ್ಟ್ರದ ಕೊಂಭಲ್ನೆ ಹಳ್ಳಿಯ ರಾಹೀಬಾಯಿ ಸೋಮಾಪೋಪರೆಯವರು.

ರಾಹೀಬಾಯಿ ಸೋಮಾಪೋಪರೆ ಮೂಲತಃ ಮಹಾರಾಷ್ಟ್ರದ , ಅಹಮದನಗರ ಜಿಲ್ಲೆಯ ಕೊಂಭಾಲ್ನೆಎಂಬ ಹಳ್ಳಿಯವರಾಗಿದ್ದು, ಕೃಷಿಯೇ ಇವರ ಮೂಲ ಉದ್ಯಮವಾಗಿದೆ. ಇವರು ದೇಶಿ ಬೀಜ ಮತ್ತು ಸಸ್ಯಸಂರಕ್ಷಣೆಯಲ್ಲಿ ತೊಡಗಿದ್ದು ಅದರಿಂದಲೇ ಪ್ರಸಿದ್ಧಿಯಾಗಿದ್ದಾರೆ. ಹಾಗೂ ಯಾವುದೇ ಒಂದು ಶಿಕ್ಷಣ ಪಡೆಯದೆ ಇವರು ಸುಮಾರು 80 ತಳಿಯ ಬೀಜಗಳನ್ನು ಸಂರಕ್ಷಣೆಮಾಡಿದ್ದಾರೆ. ಸುಮಾರು ಇಪ್ಪತ್ತು ವರ್ಷಗಳ ಹಿಂದೆ , ಇವರ ಕುಟುಂಬದ ಸದಸ್ಯರೊಬ್ಬರು ರೋಗದಿಂದ ಬಳಲುತ್ತಿದ್ದನ್ನು ಗಮನಿಸಿದ ಇವರು ಅದಕ್ಕೆ ಈಗಿನ ರಾಸಾಯನಿಕ ಯುಕ್ತ ಆಹಾರ ಸೇವನೆಯೆ ಇದಕ್ಕೆ ಕಾರಣ ಎಂದು ತಿಳಿದು, ಅದರ ಬಳಕೆಯನ್ನು ನಿಲ್ಲಿಸಿ ತಮ್ಮಲ್ಲಿನ ಬೀಜಗಳನ್ನು ಬಿತ್ತಿ ಅದರಿಂದ ತಮ್ಮ ಕುಟುಂಬಕ್ಕೆ ಸಾಕಾಗುವಷ್ಟು ತರಕಾರಿಗಳನ್ನು ಬೆಳೆಯುತ್ತಿದ್ದರು. ಇವರದು ಮಳೆ ಆಧಾರಿತ ಜಮೀನು ಆಗಿದ್ದರಿಂದ , ಹತ್ತಿರದ ಕಬ್ಬಿನ ಕಾರ್ಖಾನೆಯಲ್ಲಿಕೆಲಸ ಮಾಡುತ್ತಿದ್ದರು. ಅಲ್ಲಿಯ ಕೆಲಸಕ್ಕೆ ಬೇಸತ್ತು ತಮ್ಮದೇ ಶೈಲಿಯ ಮಳೆ ನೀರು ಸಂಗ್ರಹವಿಧಾನ ರೂಪಿಸಿಕೊಂಡು ಜಮೀನಿನಲ್ಲಿ ಕೃಷಿಹೊಂಡ ನಿರ್ಮಿಸಿಕೊಂಡು ಅದರಲ್ಲೇ ಬೇಸಾಯ ಮಾಡಲು ಪ್ರಾರಂಭಿಸಿದರು.

 ಬಿತ್ತನೆಗಾಗಿ ತಾವೇ ತೆಗೆದಿಟ್ಟ ಬೀಜಗಳನ್ನು ಬಳಸಿ ಯಾವುದೇ ರಾಸಾಯನಿಕ ಬಳಸದೇ ಬೆಳೆಗಳನ್ನು ಬೆಳೆದಾಗ ಅನೇಕ ಸ್ಥಳೀಯರು ಇವರನ್ನು ನೋಡಿ ಮೂದಲಿಸಿದರು , ಕ್ರಮೇಣವಾಗಿ ಇಳುವರಿ ಬಂದಾಗ ಇವರು ಅವರೆಲ್ಲರಿಗಿಂತ 30% ಹೆಚ್ಚಿನಇಳುವರಿ ಪಡೆದಿದ್ದರು. ಇವೆಲ್ಲದರ ನಂತರ ತಾವೇ ಸಾವಿರಾರು ರೈತರಿಗೆ ಬೀಜಗಳ ಆಯ್ಕೆ ಮತ್ತು ಹಲವಾರು ವಿಷಯಗಳ ಬಗ್ಗೆ ತರಬೇತಿ ನೀಡುವುದಲ್ಲದೆ ,ತಾವೂಕಂಡು ಹಿಡಿದ ಹಲವಾರು ಕೀಟ ಮತ್ತು ರೋಗಗಳ ನಿರ್ವಹಣಾ ಮಾರ್ಗಗಳನ್ನು ಸಹ ತಿಳಿಸುವುದಲ್ಲದೆ, ನೈಸರ್ಗಿಕ ಮತ್ತು ಸಾವಯುವ ಕೃಷಿಯಡೆಗೆ ಸಾಗುವಂತೆ ಮಾರ್ಗದರ್ಶನ ನೀಡುತ್ತಿದ್ದಾರೆ. ಇವರು ಹುಟ್ಟು ಹಾಕಿದ ಸೀಡ್ಬ್ಯಾಂಕನಲ್ಲಿ 32ಬೆಳೆಯ 122 ತಳಿಗಳಬೀಜಗಳು ಸಿಗುತ್ತವೆ. ಇದಲ್ಲದೆ ಚೆಮಾಡಿಯೋ ಬಾಬಾ ಮಹಿಳಾ ಬಚತ್ಘಟ್ ಎಂಬ ಸ್ವಸಹಾಯ ಗುಂಪಿನ ಮುಖ್ಯಸ್ಥರಾಗಿದ್ದು , ಇದರ ಮುಖಾಂತರ ಹಲವಾರು ಆರೋಗ್ಯ ಶಿಬಿರ ಮತ್ತು ಸೋಲಾರ್ದೀಪ ವಿತರಣೆ ಮುಂತಾದ ಸಮಾಜಮುಖಿ ಕೆಲಸಗಳನ್ನು ಸಹಮಾಡುತ್ತಿದ್ದಾರೆ.

Cricket player VVS Laxman's tweet

ಲಭಿಸಿದ ಪ್ರಶಸ್ತಿಗಳು: 2018 ರಲ್ಲಿ ಭಾರತ ಸರ್ಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ನೀಡಲಾಗುವ ನಾರಿಶಕ್ತಿ ಪುರಸ್ಕಾರ ಪ್ರಶಸ್ತಿ ಮತ್ತು BAIF development research foundation ನ ಉತ್ತಮ ರೈತ ಮಹಿಳೆ ಪ್ರಶಸ್ತಿ ಹಾಗೂ BBC ವಾಹಿನಿಯ 100 ಸ್ಪೂರ್ತಿದಾಯಕ ಮತ್ತು ಪ್ರಭಾವಿ ಮಹಿಳೆಯರ ಸಾಲಿನಲ್ಲಿ ಇವರನ್ನು ಸೇರಿಸಿ ಗೌರವಿಸಿದೆ. ಮತ್ತು 2020ರಸಾಲಿನ ಪದ್ಮಶ್ರೀ ಪ್ರಶಸ್ತಿ ದೊರೆತಿವೆ. ಹಾಗೂ ಖ್ಯಾತ ವಿಜ್ಞಾನಿ ರಘುನಾಥ್ಮಶ್ಲೇಕ ರ್ ಇವರ ಕೆಲಸವನ್ನು ಪ್ರಶಂಶಿಸಿ ಇವರನ್ನು ಬೀಜಗಳ ತಾಯಿ ಎಂದು ಬಣ್ಣಿಸಿದ್ದಾರೆ.

ಲೇಖನ: ಆತ್ಮಾನಂದ ಹೈಗರ

Published On: 25 January 2021, 09:55 AM English Summary: seed mother Raahibai’s story

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.