1. ಯಶೋಗಾಥೆ

ಡಾಕ್ಟರ್ ಮನೆ ಮೇಲೊಂದು ಸಮೃದ್ಧ ತಾರಸಿ ತೋಟ

KJ Staff
KJ Staff
terrace garden

ನಮ್ಮ ಆರೋಗ್ಯ ನಮ್ಮ ಕೈಲಿದೆ ಎಂಬ ಮಾತು ಅಕ್ಷರಶಃ ಸತ್ಯ. ಇನ್ನು ಒಂದು ಕುಟುಂಬದ ವಿಷಯಕ್ಕೆ ಬರುವುದಾದರೆ ಆ ಕುಟುಂಬದ ಆರೋಗ್ಯವು, ಅದರ ನಿರ್ವಹಣೆ ಹೊಣೆ ಹೊತ್ತಿರುವ ಗೃಹಿಣಿಯ ಕೈಯ್ಯಲ್ಲಿರುತ್ತದೆ. ಪುರುಷರೇನೋ ಹೊರಗೆ ಹೋಗಿ ದುಡಿಯುತ್ತಾರೆ. ಮನೆಗೆ ಬೇಕಾದ ದಿನಸಿ, ತರಕಾರಿ, ಹಣ್ನುಗಳನ್ನೆಲ್ಲಾ ಅಂಗಡಿ, ಮಾರುಕಟ್ಟೆಯಿಂದ ತಂದು ಕೊಡುತ್ತಾರೆ. ಗೃಹಿಣಿಯರು ಅವನ್ನೆಲ್ಲಾ ಬಳಸಿಕೊಂಡು ಅಚ್ಚುಕಟ್ಟಾಗಿ, ರುಚಿಯಾದ ಅಡುಗೆ ಮಾಡಿ ಮನೆಯವರನ್ನೆಲ್ಲಾ ತೃಪ್ತಿಪಡಿಸುತ್ತಾರೆ.

ಆದರೆ, ಒಬ್ಬ ಜವಾಬ್ದಾರಿಯುತ ಗೃಹಿಣಿಯ ಹೊಣೆ ಇಷ್ಟಕ್ಕೇ ಮುಗಿಯುವುದಿಲ್ಲ. ಇದಕ್ಕೂ ಮುಂದೆ ಸಾಗಿ ಇಡೀ ಕುಟುಂಬದ ಸದಸ್ಯರು ಆರೋಗ್ಯಕ್ಕೆ ಪೂರಕವಾಗಿರುವ ಆಹಾರವನ್ನೇ ಸೇವಿಸುತ್ತಿದ್ದಾರೆ ಎಂಬುದನ್ನು ಖಾತ್ರಿ ಪಡಿಸಿಕೊಳ್ಳುವುದು ಕೂಡ ಒಬ್ಬ ಉತ್ತಮ ಗೃಹಿಣಿಯ ಲಕ್ಷಣ. ಹಾಗೆ ನೋಡುತ್ತಾ ಹೋದರೆ ನಗರ ಪ್ರದೇಶದಲ್ಲಿನ ಮಹಿಳೆಯರು ಈ ನಿಟ್ಟಿನಲ್ಲಿ ಜಾಗೃತರಾಗಿದ್ದಾರೆ. ಆದರೆ ಅಂಥವರ ಸಂಖ್ಯೆ ಹೆಚ್ಚೇನೂ ಇಲ್ಲ. ಮನೆಯ ಕಾಂಪೌAಡ್ ಒಳಗೆ ಜಾಗವಿದ್ದರೆ ಅಲ್ಲಿ ಆದಷ್ಟು ಸೊಪ್ಪು, ತರಕಾರಿಗಳನ್ನು ಬೆಳೆಯುವ ಕೈತೋಟ ಮಾಡಿಕೊಂಡು, ಮನೆಯ ಅಗತ್ಯಕ್ಕೆ ಬೇಕಿರುವ ತರಕಾರಿಗಳನ್ನು ಅಲ್ಲೇ ಬೆಳೆಯುತ್ತಾರೆ. ಈ ಮೂಲಕ ರಾಸಾಯನಿಕ ಮುಕ್ತ ಸೊಪ್ಪು, ತರಕಾರಿಗಳನ್ನು ತಮ್ಮ ಕುಟುಂಬಕ್ಕೆ ಉಣಬಡಿಸಿ ಆನಂದಿಸುತ್ತಾರೆ.

ವೈದ್ಯರ ತಾರಸಿ ತೋಟ

ಹೀಗೆ ತಮ್ಮ ಕಟುಂಬದ ಆರೋಗ್ಯದ ಬಗ್ಗೆ ಅತೀವ ಕಾಳಜಿ ಹೊಂದಿರುವವರು ದಾವಣಗರೆಯ ನಿವೃತ್ತ ವೈದ್ಯೆ ಡಾ.ಶಾಂತಾ ಭಟ್. ವೃತ್ತಿಯಲ್ಲಿ ವೈದ್ಯರಾಗಿರುವ (ಸ್ತಿçÃರೋಗ ತಜ್ಞರು) ಕಾರಣ ಆರೋಗ್ಯದ ಮಹತ್ವವನ್ನು ಬೇರೆಯವರಿಂದ ಕೇಳಿ ತಿಳಿಯುವ ಅಗತ್ಯವೇ ಇಲ್ಲ. ಇವರು ದಾವಣೆರೆಯ ಎಸ್‌ಎಸ್ ಬಡಾವಣೆÀ ‘ಎ’ ಬ್ಲಾಕ್‌ನ ಒಂದನೇ ಕ್ರಾಸ್‌ನಲ್ಲಿ ಇರುವ ತಮ್ಮ ಮನೆಯ ತಾರಸಿ ಮೇಲೆ ಅಂದವಾದ ಹಾಗೂ ಅಷ್ಟೇ ಸಮೃದ್ಧವಾದ ತಾರಸಿ ತೋಟವೊಂದನ್ನು ಬೆಳೆಸಿಕೊಂಡಿದ್ದಾರೆ. ಪ್ರತಿನಿತ್ಯ ಮನೆಯಲ್ಲಿ ಅಡುಗೆಗೆ ಅತ್ಯಗತ್ಯವಾಗಿ ಬೇಕಾಗುವ ಈರುಳ್ಳಿ, ಟೊಮೇಟೊ, ಹಸಿರು ಮೆಣಸಿನಕಾಯಿ, ಬದನೆಕಾಯಿ, ಎಲೆ ಕೋಸು, ಮೂಲಂಗಿ, ಚರ‍್ರಿ ಟೊಮೇಟೊ, ಅವರೆ, ಬಟಾಣಿ, ಕ್ಯಾರಟ್ ಮತ್ತಿತರ ಕಾಳು ತರಕಾರಿಗಳು, ಕರಿಬೇವು, ಕೊತ್ತುಂಬರಿ, ಬಸಳೆ, ಪಾಲಕ್, ಮೆಂತೆ, ಪುದೀನಾ ಸೇರಿದಂತೆ ವಿವಿಧ ಸೊಪ್ಪುಗಳನ್ನು ಬೆಳೆಯುತ್ತಾರೆ.

ತಾರಸಿ ತೋಟದಲ್ಲಿ ಡಾ.ಶಾಂತಾ ಭಟ್.

ತಾರಸಿ ತೋಟಕ್ಕೆ ಕಾಂಪೋಸ್ಟ್ ನಂಟು

ಡಾ.ಶಾAತಾ ಭಟ್ ಅವರಿಗೀಗ 67 ವರ್ಷ. ವಯಸ್ಸು ಅರವತ್ತೇಳಾದರೂ ಅವರ ಉತ್ಸಾಹಕ್ಕೆ ಮಾತ್ರ ಇನ್ನೂ ಹದಿನೆಂಟರ ಹರೆಯ. ಸ್ತಿçÃರೋಗ ತಜ್ಞರಾಗಿ (ಗೈನಾಕಾಲಜಿಸ್ಟ್) ಕಾರ್ಯನಿರ್ವಹಿಸುತ್ತಿದ್ದ ಡಾ.ಶಾಂತಾ ಭಟ್ ಅವರು ಈಗ್ಗೆ ಆರೇಳು ವರ್ಷಗಳ ಹಿಂದೆ ನಿವೃತ್ತರಾದರು. ಬಳಿಕ ಖಾಸಗಿ ಆಸ್ಪತ್ರೆಗಳು, ಕ್ಲಿನಿಕ್‌ನಲ್ಲಿ ವೃತ್ತಿಯ ಪ್ರಾಕ್ಟೀಸ್ ಮುಂದುವರಿಸಿದರಾದರೂ, ಬಿಡುವಿನ ಸಮಯದಲ್ಲಿ ನಾಲ್ಕಾರು ಜನರಿಗೆ ಉಪಯೋಗವಾಗುವ ಕೆಲಸ ಮಾಡಬೇಕೆಂಬ ತುಡಿತ ಅವರಲ್ಲಿತ್ತು. ಆಗ ಅವರು ಆಯ್ಕೆ ಮಾಡಿಕೊಂಡದ್ದು ಹಸಿ ಕಸ ನಿರ್ವಹಣೆ ಹಾಗೂ ಅದರ ಬಗ್ಗೆ ಜನರಿಗೆ ತಿಳಿವಳಿಕೆ ನೀಡುವುದು. ಆದರೆ ಬೇರೆಯವರಿಗೆ ತ್ಯಾಜ್ಯದಿಂದ ಗೊಬ್ಬರ ತಯಾರಿಸಿ ಎಂದು ಹೇಳುವ ಮೊದಲು ನಾವು ನಮ್ಮ ಮನೆಯಲ್ಲಿ ಆ ಕೆಲಸ ಆರಂಭಿಸಬೇಕು ಎಂದರಿತ ಶಾಂತಾ ಭಟ್ ಅವರು, ಮನೆಯಲ್ಲೇ ಕಾಂಪೋಸ್ಟ್ ತಯಾರಿಸಿದರು. ತಯಾರಿಸಿದ ಗೊಬ್ಬರವನ್ನು ಬೆಳೆಸಲು ತಮ್ಮದೇ ತಾರಸಿ ತೋಟ ಬೆಳೆಸಲಾರಂಭಿಸಿದರು.

ಜನರಿಗೆ ಕಾಂಪೋಸ್ಟ್ ಜಾಗೃತಿ

ನಗರಗಳಲ್ಲಿ ಕಸದ ನಿರ್ವಹಣೆ ದೊಡ್ಡ ತಲೆನೋವು. ಅದರಲ್ಲೂ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಂತೂ ಅದರ ಕಷ್ಟ ಹೇಳತೀರದು. ಕಸ ಸಂಗ್ರಹ ಮಾಡುವವರÀÄ ಬಂದರೆ ಬಂದರು, ಇಲ್ಲದಿದ್ದರೆ ಇಲ್ಲ. ಕೆಲವೊಮ್ಮೆ ನಾಲ್ಕಾರು ದಿನ ಕಸ ಸಂಗ್ರಹಿಸುವವರು ಮನೆಯತ್ತ ಸುಳಿಯುವುದಿಲ್ಲ. ಇಂಥ ಸಂದರ್ಭಗಳಲ್ಲಿ ಹಸಿ ಕಸವನ್ನು ಮನೆಯಲ್ಲಿ ಇರಿಸಿಕೊಳ್ಳುವುದು ಅಸಾಧ್ಯ. ಇದಕ್ಕೆ ಪರಿಹಾರವೇ ಹಸಿ ತ್ಯಾಜ್ಯದಿಂದ ಕಾಂಪೋಸ್ಟ್ ತಯಾರಿಸುವುದು. ಆ ವೇಳೆಗಾಗಲೇ ಮನೆಯಲ್ಲಿ ಸಂಗ್ರಹವಾಗುವ ಹಸಿ ಕಸದಿಂದ ಕಾಂಪೋಸ್ಟ್ ತಯಾರಿಸುತ್ತಿದ್ದ ಡಾಕ್ಟರ್ ಭಟ್, ಆ ಕುರಿತು ದಾವಣಗೆರೆ ಮಹಾನಗರದ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಆರಂಭಿಸಿದರು. ಮೊದಲು ಮನೆ ಸುತ್ತಲ ನಿವಾಸಿಗಳಿಗೆ ತ್ಯಾಜ್ಯ ನಿರ್ವಹಣೆಯ ಮಹತ್ವ ತಿಳಿ ಹೇಳಿದರು. ಬಳಿಕ ಪ್ರತಿ ವಾರಾಂತ್ಯ, ದಿನದ ಬಿಡುವಿನ ಸಮಯದಲ್ಲಿ ನಗರದ ವಿವಿಧ ಬಡಾವಣೆಗಳು, ಸುತ್ತಲ ಗ್ರಾಮಗಳಿಗೆ ತೆರಳಿ ಅಲ್ಲಿನ ಗೃಹಿಣಿಯರಿಗೆ ಕಸದಿಂದ ಕಾಂಪೋಸ್ಟ್ ತಯಾರಿಸುವ ಕುರಿತು ತರಬೇತಿ ನೀಡಲಾರಂಭಿಸಿದರು. ಜೊತೆಗೆ ಮನೆಯಲ್ಲೇ ಸಣ್ಣ ಕೈ ತೋಟ ಬೆಳೆಸಿ ಆ ಗೊಬ್ಬರವನ್ನು ಅಲ್ಲಿನ ಗಿಡಗಳಿಗೆ ಹಾಕುವಂತೆ ಸಲಹೆ ನಿಡಿದರು. ಬೇರೆಯವರಿಗೆ ಹೇಳುವ ಮುನ್ನ ಆ ಕಾರ್ಯವನ್ನು ತಮ್ಮ ಮನೆಯಲ್ಲೇ ಮಾಡುವ ಮೂಲಕ ಡಾ. ಶಾಂತಾ ಭಟ್ ಇತರರಿಗೂ ಮಾದರಿಯಾಗಿದ್ದಾರೆ.

ಮನೆಗೆ ಪರಿಶುದ್ಧ ತರಕಾರಿ

ಮನೆಯಲ್ಲಿ ಸಂಗ್ರಹವಾಗುವ ತರಕಾರಿ ಮತ್ತು ಆಹಾರ ತ್ಯಜ್ಯವನನ್ನು ಬಳಸಿಕೊಂಡು ವರ್ಮಿ ಕಾಂಪೋಸ್ಟ್ ತಯಾರಿಸುವ ಡಾ.ಶಾಂತಾ ಭಟ್ ಅವರು, ತಮ್ಮ ತಾರಸಿ ತೋಟದ ಗಿಡಗಳಿಗೆ ಅದೇ ಗೊಬ್ಬರ ಹಾಕಿ, ಉತ್ತಮ ಗುಣಮಟ್ಟದ, ಪರಿಶುದ್ಧ ಹಾಗೂ ಆರೋಗ್ಯದಾಯಕ ತರಕಾರಿಗಳನ್ನು ಬೆಳೆಯುತ್ತಾರೆ

ತಾರಸಿ ಮೇಲೆ ಪಾಟ್‌ಗಳನ್ನು ಒಪ್ಪವಾಗಿ ಜೋಡಿಸಿ ಅದರಲ್ಲಿ ಹಂತಹAತವಾಗಿ ಸೊಪ್ಪು, ತರಕಾರಿಗಳನ್ನು ಬೆಳೆಸುತ್ತಾರೆ. ಇದರಿಂದ ಮನೆ ಬಳಕೆಗೆ ನಿರಂತರವಾಗಿ ಸೊಪ್ಪು, ತರಕಾರಿ ಸಿಗುತ್ತಿದೆ. ಹಾಗೇ, ತಾರಸಿ ಮೇಲೊಂದು ಜೇನು ಪೆಟ್ಟಿಗೆಯು ಇದೆ. ಇದರೊಂದಿಗೆ ಆಮ್ಲಜನಕವನ್ನು ಹೆಚ್ಚಿನ ಪ್ರಮಾಣದಲ್ಲಿ ಬಿಡುಗಡೆ ಮಾಡುವ ಒಳಾಂಗಣ, ಅಲಂಕಾರಿಕ ಸಸ್ಯಗಳನ್ನು ಮನೆಯ ಕಿಟಕಿ ಪಕ್ಕ ಬೆಳೆಸಿದ್ದಾರೆ. ಇನ್ನು ಮನೆಯ ಕಾಂಪೌAಡ್ ಒಳಗೆ ಸುತ್ತಾಡಿದರೆ ಹುಲುಸಾಗಿ ಬೆಳೆದಿರುವ ಕಬ್ಬು ಗಮನಸೆಳೆಯುತ್ತದೆ. ಈ ಕಬ್ಬು ಅದೆಷ್ಟು ದಪ್ಪವಿದೆ ಎಂದರೆ ಅದನ್ನು ಒಂದು ಕೈನಲ್ಲಿ ಹಿಡಿಯಲಾಗುವುದಿಲ್ಲ. ಜೊತೆಗೆ, ಸೊಗಸಾಗಿ ಬೆಳೆದಿರುವ ಬಾಳೆ ಗಿಡಗಳು ಗೊನೆ ಬಿಟ್ಟಿವೆ. ಇದರೊಂದಿಗೆ 30 ವರ್ಷದ ಬಿಳಿ ಸೂಜಿ ಮಲ್ಲಿಗೆ ಬಳ್ಳಿ (ಹಳದಿ ಹೂವಿನ ಬಳ್ಳಿಯೂ ಇದೆ), ಸುಮಾರು 20 ಅಡಿ ಎತ್ತರ ಬೆಳೆದಿರುವ ಕಣಗಲೆ ಹುವಿನ ಗಿಡ ನೋಡಿದರೆ ಅಚ್ಚರಿಯಾಗುವುದು ಗ್ಯಾರಂಟಿ.

Published On: 09 June 2021, 01:12 PM English Summary: a beautiful garden on doctors terrace

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.