'ರವಿನೇ ಕುಡಿದು ಕಾರು ಓಡಿಸ್ತಿದ್ದ ಎಂಬ ಹೇಳಿಕೆಯಿಂದ ಬಹಳ ನೋವಾಗಿದೆ'..!
ಕುಣಿಗಲ್ನ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಶಾಸಕ ಸಿ.ಟಿ.ರವಿ ಪ್ರಯಾಣಿಸುತ್ತಿದ್ದ ಕಾರು ಡಿಕ್ಕಿ ಹೊಡೆದು ಇಬ್ಬರು ಮೃತಪಟ್ಟ ಘಟನೆಗೆ ಸಂಬಂಧ ರಾಜಕೀಯ ವಲಯದಲ್ಲಿ ಭಾರಿ ಚರ್ಚೆಯಾಗುತ್ತಿದೆ. ಶಾಸಕ ಸಿಟಿ ರವಿ ಅವರು ಮದ್ಯ ಸೇವಿಸಿ ಕಾರು ಚಲಾಯಿಸುತ್ತಿದ್ದರು ಎಂಬ ಮಾತಗಳು ಕೇಳಿಬರುತ್ತಿದೆ.
ಈ ಹಿನ್ನೆಲೆ ಘಟನೆ ಬಗ್ಗೆ ಸಿಟಿ ರವಿ ಪ್ರತಿಕ್ರಿಯೆ ನೀಡಿದ್ದಾರೆ. ರವಿ ಕುಡಿದಿದ್ದ, ಅವನೇ ಕಾರು ಓಡಿಸ್ತಿದ್ದ ಎನ್ನುವ ಆಪಾದನೆಯಿಂದ ಬಹಳ ನೋವಾಗಿದೆ. ಘಟನೆ ಬಗ್ಗೆ ನಿಷ್ಪಕ್ಷವಾದ ತನಿಖೆ ಆಗಲಿ. ತಪ್ಪು ಯಾರದ್ದು ಎಂಬುದು ಗೊತ್ತಾಗಲಿ ಎಂದಿದ್ದಾರೆ.
ಈಗಾಗಲೇ ನಾನು ಮೃತರ ಸಂಬಂಧಿಕರ ಜೊತೆ ಮಾತನಾಡಿದ್ದೇನೆ, ವೈಯಕ್ತಿಕವಾಗಿ ಪರಿಹಾರ ನೀಡಲು ಸಿದ್ದನಿದ್ದೇನೆ. ಈ ರೀತಿಯ ಆಪಾದನೆ ನನ್ನ ಮೇಲೆ ಬಂದಿರಲಿಲ್ಲ. ನಾನು ದೊಡ್ಡ ರಾಜಕೀಯ ಹಿನ್ನೆಲೆಯಿಂದ ಬಂದವನಲ್ಲ, ಮಧ್ಯಮ ವರ್ಗದಿಂದ ಬಂದವನು ಎಂದು ಹೇಳಿದರು.
Published On: 21 February 2019, 09:09 PMEnglish Summary: 'ರವಿನೇ ಕುಡಿದು ಕಾರು ಓಡಿಸ್ತಿದ್ದ ಎಂಬ ಹೇಳಿಕೆಯಿಂದ ಬಹಳ ನೋವಾಗಿದೆ'..!
Share your comments