ಇಂದು ಪ್ರಜಾಪ್ರಭುತ್ವದ ಹಬ್ಬ.. ರಾಜ್ಯದ ಕೋಟ್ಯಾಂತರ ಮತದಾನ ಪ್ರಭುಗಳು ಇಂದು ಮತದಾನ ಮಾಡಲು ಮುಂದಾಗಿದ್ದಾರೆ. ಇಂದು ಪ್ರಜಾಪ್ರಭುತ್ವದ ಪ್ರಭುಗಳು ದೂರ ದೂರದ ಊರಿನಿಂದ ತಮ್ಮ ಊರುಗಳಿಗೆ ತೆರಳಿ ಮುಂಜಾನೆ ಆರರಿಂದ ಆರಂಭವಾದ ಮತದಾನದ ಸರತಿ ಸಾಲಿನಲ್ಲಿ ನಿಂತು ಶಾಂತಿಯುತ ಮತದಾನ ಮಾಡುತ್ತಿದ್ದಾರೆ. ಒಟ್ಟು 224 ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಕಣ್ಣು ತಮ್ಮ ಮತದಾರ ಪ್ರಭುವಿನ ಮೇಲೆ ನೆಟ್ಟಿದೆ. ಇನ್ನು ಈ ಹೊತ್ತಲ್ಲಿ ಕೆಲವರು ಮತದಾನ ಮಾಡುವುದರಿಂದ ದೂರ ಉಳಿಯುತ್ತಾರೆ.
ಇನ್ನು ಕೆಲವರು ಸೂಕ್ತ ದಾಖಲಾತಿಯ ಕೊರತೆಯಿಂದ ಮತದಾನದಿಂದ ವಂಚಿತರಾಗುತ್ತಾರೆ. ಇದು ನಮ್ಮ ಸಂವಿಧಾನ ನಮಗೆ ನೀಡಿರುವ ಮೌಲ್ಯಯುತ ಹಕ್ಕು ನಾವು ಇದನ್ನು ನಮಗೆ ಸರಿಯೆನ್ನಿಸುವ ಅಭ್ಯರ್ಥಿಗೆ ನಮ್ಮ ಮತ ನೀಡಿ ನಮ್ಮ ಕರ್ತವ್ಯವನ್ನು ಪಾಲಿಬೇಕು.. ಯಾರು ಮತದಾನದಿಂದ ವಂಚಿತರಾಗಬೇಡಿ ಜೊತೆಗೆ ನಿಮ್ಮ ವೋಟು ವ್ಯಾಪಾರವಾಗದಿರಲಿ ಇದು ನಮ್ಮ ಕಳಕಳಿ.
ಸದ್ಯ Voter ID ಇದ್ದವರು ಮಾತ್ರ ವೋಟ್ ಮಾಡಬಹುದು ಎಂಬ ಮಾತು ಸಹಜವಾಗಿ ಅಲ್ಲಿಂದಿಲ್ಲಿಗೆ ಓಡಾಡುತ್ತಿರುತ್ತದೆ. ಆದ್ರೆ ವಾಸ್ತವವಾಗಿ ನಿಮ್ಮ ಬಳಿ Voter ID ಇಲ್ಲದಿದ್ದರು ನೀವು ನೇರವಾಗಿ ಮತಗಟ್ಟೆಗೆ ತೆರಳಿ ನಿಮ್ಮ ಮತದಾನವನ್ನು ಮಾಡಬಹುದು. ಹೌದು Voter ID ಗೆ ಪರ್ಯಾಯವಾಗಿ ಬೇರೆ ದಾಖಲೆಯಿದ್ದರು ಕೂಡ ಕಾನೂನುಬದ್ಧವಾಗಿ ನಾವು ನಮ್ಮ ಹಕ್ಕನ್ನು ಚಲಾಯಿಸಬಹುದು. ಹಾಗಾದ್ರೆ ಇನ್ನುಳಿದ ದಾಖಲಾತಿಗಳು ಯಾವುವು ಎಂಬುದನ್ನು ನೋಡುವುದಾದರೆ.
ಡ್ರೈವಿಂಗ್ ಲೈಸೆನ್ಸ್ ರಾಜ್ಯ ಸರ್ಕಾರ ಅಥವಾ ಕೇಂದ್ರ ಸರ್ಕಾರ ನೀಡಿರುವ ಲಿಮಿಟೆಡ್ ಕಂಪನಿಯಿಂದ ಉದ್ಯೋಗಿಗಳಿಗೆ ನೀಡಿರುವ ಭಾವಚಿತ್ರವಿರುವ ಸೇವಾ ಗುರುತಿನ ಚೀಟಿಗಳು
ಸ್ಟೇಟ್ ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್ ಖಾತೆಯಲ್ಲಿ ನೀಡಿದ ಭಾವಚಿತ್ರವಿರುವ ಪಾಸ್‌ಬುಕ್
ಪಾಸ್ಪೋರ್ಟ್
PAN ಕಾರ್ಡ್
NPR ಅಡಿಯಲ್ಲಿ RGI ನೀಡಿದ ಸ್ಮಾರ್ಟ್ ಕಾರ್ಡ್
MNREGA ಜಾಬ್ ಕಾರ್ಡ್
ಕಾರ್ಮಿಕ ಸಚಿವಾಲಯದ ಆರೋಗ್ಯ ವಿಮೆ ಸ್ಮಾರ್ಟ್ ಕಾರ್ಡ್
ಭಾವಚಿತ್ರ ಹೊಂದಿರುವ ಪಿಂಚಣಿಯ ದಾಖಲೆಯ ಪ್ರತಿ
ಆಧಾರ್ ಕಾರ್ಡ್
Share your comments