1. ಸುದ್ದಿಗಳು

ವಿಂಗ್‌ ಕಮಾಂಡರ್‌ ದೀಪಿಕಾ ಮಿಶ್ರಾಗೆ ಶೌರ್ಯ ಪ್ರಶಸ್ತಿ: ಪ್ರಶಸ್ತಿ ಪಡೆದ ಮೊದಲ ಮಹಿಳೆ

Hitesh
Hitesh
Wing Commander Deepika Mishra gets gallantry award: First woman to receive the award

ರೈತರಿಗೆ ಪ್ರಮುಖ ಸುದ್ದಿಗಳನ್ನು ತಲುಪಿಸುವ ಉದ್ದೇಶದಿಂದ ಕೃಷಿ ಜಾಗರಣ ಅಗ್ರಿನ್ಯೂಸ್‌ ಪರಿಚಯಿಸಿದೆ. ಇಂದಿನ ಪ್ರಮುಖ ಸುದ್ದಿಗಳು ಈ ರೀತಿ ಇವೆ. 

  1. ರಾಜ್ಯದ ವಿವಿಧೆಡೆ ಇನ್ನೂ ಎರಡು ದಿನ ಗುಡುಗು ಸಹಿತ ಧಾರಾಕಾರ ಮಳೆ
  2. ದೇಶದ ಶೇ.90 ಭಾಗದಲ್ಲಿ ಉಷ್ಣಹವೆ ಅಪಾಯ: ಕೆಲಸದ ಮೇಲೆ ಪರಿಣಾಮ!
  3. ವಿಂಗ್‌ ಕಮಾಂಡರ್‌ ದೀಪಿಕಾ ಮಿಶ್ರಾಗೆ ಶೌರ್ಯ ಪ್ರಶಸ್ತಿ: ಪ್ರಶಸ್ತಿ ಪಡೆದ ಮೊದಲ ಮಹಿಳೆ
  4. ದ್ವಿತೀಯ ಪಿಯುಸಿ ಫಿಲಿತಾಂಶ ಪ್ರಕಟ; ದಕ್ಷಿಣ ಕನ್ನಡ ಪ್ರಥಮ, ಯಾದಗಿರಿ ಕೊನೆ
  5. ಡ್ರೋನ್‌ ಖರೀದಿಗಾಗಿ 10 ಲಕ್ಷ ರೂವರೆಗೆ ಆರ್ಥಿಕ ಸಹಾಯ!
  6. EPFO ವೇತನದಾರರ ದತ್ತಾಂಶ ಬಿಡುಗಡೆ: 13.96 ಲಕ್ಷ ಸದಸ್ಯರ ಸೇರ್ಪಡೆ

ಸುದ್ದಿಗಳ ವಿವರ ಈ ರೀತಿ ಇದೆ.

1. ರಾಜ್ಯದ ವಿವಿಧೆಡೆ ಮಳೆ ಮುಂದುವರಿದಿದೆ. ಮುಂದಿನ 48 ಗಂಟೆಗಳ ಅವಧಿಯಲ್ಲಿ ಕರಾವಳಿಯ ದಕ್ಷಿಣ ಕನ್ನಡ,

ಉಡುಪಿ, ಉತ್ತರ ಒಳನಾಡಿನ ಬೆಳಗಾವಿ, ಬೀದರ್‌, ಕಲಬುರಗಿ, ರಾಯಚೂರು ಹಾಗೂ ದಕ್ಷಿಣ ಒಳನಾಡಿನ ಚಿಕ್ಕಮಗಳೂರು,

ಹಾಸನ, ಕೊಡಗು, ಬೆಂಗಳೂರು ನಗರ, ಬಳ್ಳಾರಿ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಮಿಂಚುಗುಡುಗು ಸಹಿತ ಧಾರಾಕಾರ ಮಳೆ ಆಗುವ ಸಾಧ್ಯತೆ ಇದೆ.

ಉಳಿದಂತೆ ರಾಜ್ಯದಲ್ಲಿ ಅಲ್ಲಲ್ಲಿ ಒಣಹವೆ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಇನ್ನು ಗರಿಷ್ಠ ಉಷ್ಣಾಂಶವು ದಕ್ಷಿಣ ಒಳನಾಡಿನ ಕೆಲವು ಕಡೆಗಳಲ್ಲಿ ಸಾಮಾನ್ಯಕ್ಕಿಂತ 2 ಡಿಗ್ರಿ ಸೆಲ್ಸಿಯಸ್‌ ವರೆಗೂ ಹೆಚ್ಚಾಗುವ ಸಾಧ್ಯತೆ ಇದೆ.

ಬೆಂಗಳೂರು ನಗರದಲ್ಲಿ ಭಾಗಶಃ ಮೋಡ ಕವಿದ ವಾತಾವರಣವಿರಲಿದ್ದು,

ಸಂಜೆ ಮತ್ತು ರಾತ್ರಿ ವೇಳೆ ಹಗುರದಿಂದ ಮಳೆ ಆಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. 

2. ಭಾರತದಲ್ಲಿ ಇತ್ತೀಚಿನ ದಿನಗಳಲ್ಲಿ ಬಿಸಿಲಿನ ಝಳ ಹೆಚ್ಚಳವಾಗುತ್ತಿದ್ದು, ಇದು ಜನರ ಜೀವನದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ

ಎಂದು ಕೇಂಬ್ರಿಡ್ಜ್ ವಿಶ್ವವಿದ್ಯಾಲಯ ನಡೆಸಿದ ಅಧ್ಯಯನ ವರದಿಯಲ್ಲಿ ಬಹಿರಂಗವಾಗಿದೆ.

ಭಾರತದ ಶೇ.90ರಷ್ಟು ಭಾಗ ಉಷ್ಣಹವೆ ಅಪಾಯದಲ್ಲಿದೆ. ಇದನ್ನು ಡೇಂಜರ್ ಜೋನ್ ಎಂದು ಗುರುತಿಸಲಾಗಿದೆ.

ರಮಿತ್ ದೇಬನಾಥ್ ಹಾಗೂ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಅಧ್ಯಯನ ನಡೆಸಿದ್ದು,

ತೀವ್ರವಾದ ಉಷ್ಣಹವೆ ದೇಶದ ಅಭಿವೃದ್ಧಿಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.

ದೇಶದ ಸುಸ್ಥಿರ ಅಭಿವೃದ್ಧಿಯೂ ಕುಂಠಿತವಾಗುವ ಸಾಧ್ಯತೆ ಇದೆ. ದೇಶದಲ್ಲಿ ತಾಪಮಾನ ಹೆಚ್ಚಾಗುತ್ತಿ

ರುವುದರಿಂದ ಹೊರಗೆ ಕೆಲಸ ಮಾಡುವ ಸಾಮರ್ಥ್ಯ ಶೇ.15 ರಷ್ಟು ಕಡಿಮೆ ಆಗಲಿದ್ದು,

ಅಂದಾಜು 480 ಮಿಲಿಯನ್ ಜನರ ಜೀವನದ ಗುಣಮಟ್ಟ ಕುಸಿಯಲಿದೆ.

ಅಲ್ಲದೇ 2050ರ ವೇಳೆಗೆ ಜಿಡಿಪಿಯ ಶೇ.2.8 ರಷ್ಟು ಕುಸಿತವಾಗಬಹುದು ಎಂದು ವರದಿ ತಿಳಿಸಿದೆ.

----------------

3.ವಿಂಗ್‌ ಕಮಾಂಡರ್ ದೀಪಿಕಾ ಮಿಶ್ರಾ ಅವರು ಶೌರ್ಯ ಪ್ರಶಸ್ತಿಗೆ ಭಾಜನರಾಗಿದ್ದು, ಈ ಗೌರವಕ್ಕೆ ಪಾತ್ರರಾದ

ಭಾರತೀಯ ವಾಯುಪಡೆಯ ಮೊದಲ ಮಹಿಳಾ ಅಧಿಕಾರಿ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.

ವಾಯುಪಡೆ ಮುಖ್ಯಸ್ಥರಾದ ಏರ್‌ ಚೀಫ್‌ ಮಾರ್ಷಲ್ ವಿ.ಆರ್‌.ಚೌಧರಿ ಅವರು ದೆಹಲಿಯ ಸುಬ್ರತೊ ಪಾರ್ಕ್‌ನಲ್ಲಿರುವ

ವಾಯುಪಡೆ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ದೀಪಿಕಾ ಅವರಿಗೆ ವಾಯು ಸೇನಾ ಪದಕವನ್ನು ಪ್ರದಾನ ಮಾಡಿದ್ದಾರೆ.

ದೀಪಿಕಾ ಅವರು ಹೆಲಿಕಾಪ್ಟರ್‌ ಪೈಲಟ್‌ ಆಗಿ ಸೇವೆ ಸಲ್ಲಿಸುತ್ತಿದ್ದು,

ಮಧ್ಯಪ್ರದೇಶದಲ್ಲಿ ಪ್ರವಾಹದ ವೇಳೆ ನಡೆಸಿದ ರಕ್ಷಣಾ ಕಾರ್ಯಕ್ಕಾಗಿ ಅವರಿಗೆ ಈ ಗೌರವ ಸಂದಿದೆ.

----------------

4. ದ್ವಿತೀಯ ಪಿಯುಸಿ ಫಲಿತಾಂಶವು ಶುಕ್ರವಾರ ಪ್ರಕಟವಾಗಿದ್ದು, ರಾಜ್ಯಾದ್ಯಂತ 5.24 ಲಕ್ಷ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ

ಎಂದು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ತಿಳಿಸಿದೆ. ಈ ಬಾರಿಯ ಫಲಿತಾಂಶ ಹೊಸ ದಾಖಲೆಯನ್ನೇ ಸೃಷ್ಟಿಸಿದೆ.

ಇದೇ ಮೊದಲ ಬಾರಿಗೆ ಶೇ.74.67ರಷ್ಟು ಫಲಿತಾಂಶ ಬಂದಿದೆ. ಈ ಬಾರಿ 7,02,067 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು

5,24,209 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಈ ಬಾರಿಯ ಫಲಿತಾಂಶದಲ್ಲಿ ದಕ್ಷಿಣ ಕನ್ನಡ ಮೊದಲ ಸ್ಥಾನ (95.33%)ದಲ್ಲಿದ್ದರೆ,

ಎರಡನೇ ಸ್ಥಾನ( 95.24%)ದಲ್ಲಿ ಉಡುಪಿ, ಮೂರನೇ ಸ್ಥಾನ (90.55%)ದಲ್ಲಿ ಕೊಡಗು ಇದೆ. ಇನ್ನು ಯಾದಗಿರಿ(78.97%) ಕೊನೆಯ ಸ್ಥಾನದಲ್ಲಿದೆ.

ಈ ಬಾರಿಯೂ ಬಾಲಕೀಯರೇ ಮೇಲುಗೈ ಸಾಧಿಸಿದ್ದಾರೆ. ಶೇ80.25% ಬಾಲಕಿಯರು ಉತ್ತೀರ್ಣರಾಗಿದ್ದರೆ, ಶೇ. 69.05% ಬಾಲಕರು ಉತ್ತೀರ್ಣರಾಗಿದ್ದಾರೆ.

ಗ್ರಾಮೀಣ ಭಾಗದ 74.79% ಮಕ್ಕಳು ಹಾಗೂ ನಗರದ 74.63% ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

----------------

5.ರಾಜ್ಯ ಮತ್ತು ಕೇಂದ್ರ ಸರ್ಕಾರದ ಕೃಷಿ ಸಂಸ್ಥೆಗಳು ರೈತರಿಗೆ ಡ್ರೋನ್‌ಗಳ ಪ್ರದರ್ಶನಕ್ಕಾಗಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿರುವ

ಪಿಎಸ್‌ಯುಗಳಿಗೆ ಪ್ರತಿ ಡ್ರೋನ್‌ಗೆ ರೂ.10 ಲಕ್ಷ ರೂ. ದರದಲ್ಲಿ ಹಣಕಾಸಿನ ನೆರವು ನೀಡುತ್ತಿದೆ.

ಕೃಷಿ ಯಾಂತ್ರೀಕರಣದ ಉಪ-ಮಿಷನ್ ಅಡಿಯಲ್ಲಿ 100% ಡ್ರೋನ್ ವೆಚ್ಚವನ್ನು ಭರಿಸಲಾಗುತ್ತಿದೆ ಎಂದು ಪ್ರಕಟಣೆ ತಿಳಿಸಿದೆ.

---------------- 

Epfo

6. ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆಯ (EPFO) ತಾತ್ಕಾಲಿಕ ವೇತನದಾರರ ದತ್ತಾಂಶವನ್ನು ಬಿಡುಗಡೆ ಮಾಡಲಾಗಿದೆ.

ತಾತ್ಕಾಲಿಕ ವೇತನದಾರರ ಈಚೆಗಿನ ದತ್ತಾಂಶದ ಪ್ರಕಾರ,ಇಪಿಎಫ್‌ಒಗೆ 13.96 ಲಕ್ಷ ನಿವ್ವಳ ಸದಸ್ಯರು ಸೇರ್ಪಡೆ ಆಗಿದ್ದಾರೆ.

ಸೇರ್ಪಡೆಯಾದ ಸದಸ್ಯರಲ್ಲಿ, ಸುಮಾರು 7.38 ಲಕ್ಷ ಹೊಸ ಸದಸ್ಯರು ಮೊದಲ ಬಾರಿಗೆ EPFO ವ್ಯಾಪ್ತಿಗೆ ಬಂದಿದ್ದಾರೆ.

ಹೊಸದಾಗಿ ಸೇರ್ಪಡೆಗೊಂಡ ಸದಸ್ಯರಲ್ಲಿ, 2.17 ಲಕ್ಷ ಸದಸ್ಯರು 18ರಿಂದ 21 ವರ್ಷ ವಯಸ್ಸಿನ ಗುಂಪಿಗೆ ಸೇರಿದ್ದಾರೆ.

----------------

7. ಲಿಂಗಾಯತ ಸಮುದಾಯ ಸೇರಿ ಎಲ್ಲಾ ಸಮುದಾಯಕ್ಕೆ ನ್ಯಾಯ ಕೊಡುವಂತಹ ಕೆಲಸ ನಮ್ಮ ಸರ್ಕಾರ ಮಾಡಿದೆ.

ಲಿಂಗಾಯತ ಸೇರಿದಂತೆ ಎಲ್ಲಾ ಸಮುದಾಯಗಳಿಗೂ ಮಾನ್ಯತೆ ನೀಡಿದ್ದು‌ ಬಿಜೆಪಿ ಸರ್ಕಾರ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ತಿಳಿಸಿದ್ದಾರೆ.

ಲಿಂಗಾಯತ ಸಮಾಜವನ್ನ ಒಡೆಯು ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ. ಕಾಂಗ್ರೆಸ್ 50 ವರ್ಷದಿಂದ ಲಿಂಗಾಯತರನ್ನು ಸಿಎಂ ಮಾಡಿಲ್ಲ.

ಕಾಂಗ್ರೆಸ್‌ನಲ್ಲಿ ಎಸ್. ನಿಜಲಿಂಗಪ್ಪ ಹೊರತುಪಡಿಸಿ ಲಿಂಗಾಯತ ಸಿಎಂ ಆಗಿಲ್ಲ. ವಿರೇಂದ್ರ ಪಾಟೀಲರನ್ನ ಎಷ್ಟು ಹೀನಾಯವಾಗಿ ನಡೆಸಿಕೊಂಡಿದ್ದಾರೆ

ಎನ್ನುವುದು ಎಲ್ಲರಿಗೂ ಗೊತ್ತಿದೆ ಎಂದಿದ್ದಾರೆ. ಕಾಂಗ್ರೆಸ್ ಕೇವಲ ಮೊಸಳೆ ಕಣ್ಣೀರು ಹಾಕುತ್ತದೆ.

ಸಮಾಜವನ್ನ ಒಡೆಯುವ ಕೆಲಸವನ್ನು ಮಾಡುತ್ತಿದ್ದು, ಯಾವ ಪಕ್ಷ ಯಾರಿಗೆ ನಾಯಕತ್ವ ಕೊಟ್ಟಿದೆ ಎನ್ನುವುದು ಎಲ್ಲರಿಗೂ ಗೊತ್ತಿದೆ ಎಂದಿದ್ದಾರೆ.

----------------

8. ಟ್ವಿಟ್ಟರ್‌ ಸೆಲೆಬ್ರೆಟಿ ಹಾಗೂ ಖ್ಯಾತನಾಮರಿಗೆ ನೀಡಿದ್ದ ಬ್ಲೂಟಿಕ್‌ ಖಾತೆಯ ಗುರುತನ್ನು ಹಿಂಪಡೆಯಲು ಪ್ರಾರಂಭಿಸಿದೆ.

ವಿವಿಧ ಮಾನದಂಡಗಳನ್ನು ಅನುಸರಿಸಿ, ಅಧಿಕೃತ ಹಾಗೂ ಪರಿಶೀಲನೆಗೆ ಒಳಪಟ್ಟ ಟ್ವಿಟರ್‌ ಖಾತೆಗಳಿಗೆ ಬ್ಲೂಟಿಕ್‌ ನೀಡಲಾಗುತ್ತಿತ್ತು.

ಇದೀಗ ಬ್ಲೂಟಿಕ್‌ ಹೊಂದಿರುವ ಖಾತೆದಾರರು ಬ್ಲೂಟಿಕ್‌ಗಾಗಿ ಹಣ ಪಾವತಿಸಬೇಕಾಗಿದೆ. ಹಣ ಪಾವತಿ ಮಾಡದವರ

ಬ್ಲೂ ಟಿಕ್‌ಗಳನ್ನು ಏಪ್ರಿಲ್ ಆರಂಭದಿಂದಲೇ ತೆಗೆಯಲಾಗುವುದು ಎಂದು ಹೇಳಲಾಗಿತ್ತು. ಇದೀಗ ಈ ಪ್ರಕ್ರಿಯೆ ಪ್ರಾರಂಭವಾಗಿದೆ ಎಂದು ಹೇಳಲಾಗಿದೆ.

ಭಾರತದ ಕ್ರಿಕೆಟ್‌ಗರು ಹಾಗೂ ನಟ,ನಟಿಯರು ಸೇರಿದಂತೆ ಹಲವರ ಟ್ವಿಟ್ಟರ್‌ ಖಾತೆಯ ಬ್ಲೂಟಿಕ್‌ ತೆಗೆದೆರುವುದು ವರದಿ ಆಗಿದೆ.

ಟ್ವಿಟ್ಟರ್‌ನ ಈ ನಿರ್ಧಾರಕ್ಕೆ ಪರ- ವಿರೋಧ ವ್ಯಕ್ತವಾಗಿದೆ.

----------------  

Published On: 21 April 2023, 05:51 PM English Summary: Wing Commander Deepika Mishra gets gallantry award: First woman to receive the award

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.