1. ಸುದ್ದಿಗಳು

Heatwave alert: ರಾಜ್ಯದಲ್ಲಿ ಹೆಚ್ಚಾಗಲಿದೆ ತಾಪಮಾನ: ತಜ್ಞರಿಂದ 40 ಡಿಗ್ರಿ ದಾಟುವ ಸೂಚನೆ!

Kalmesh T
Kalmesh T
Heatwave alert: Temperature will increase in the state: 40 degrees are indicated by experts!

IMD issues heatwave alert: ಈಗಾಗಲೇ ಬೇಸಿಗೆ ಆರಂಭವಾಗಿದ್ದು ರಾಜ್ಯದಲ್ಲಿ ಶಾಖದ ಅಲೆ (Heatwave) ಹೆಚ್ಚಿದೆ. ಬರಲಿರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಪ್ರಮಾಣದ ತಾಪಮಾನ ಹೆಚ್ಚಾಗುವ ಸೂಚನೆಯನ್ನು ನೀಡಿದ್ದಾರೆ ತಜ್ಞರು. ಇದನ್ನೂ ಓದಿರಿ..

IMD issues heatwave alert: ಮುಂಬರುವ ದಿನದಲ್ಲಿ ಕರ್ನಾಟಕ ರಾಜ್ಯದ ಪ್ರಮುಖ ಪ್ರದೇಶಗಳಲ್ಲಿ ತಾಪಮಾನವು ಸುಮಾರು 40 ° C ಗಿಂತ ಹೆಚ್ಚಾಗಲಿದೆ.

ಹವಾಮಾನ ಶಾಸ್ತ್ರಜ್ಞರ ಪ್ರಕಾರ ಕರ್ನಾಟಕವು ತನ್ನ ಗರಿಷ್ಠ ಬೇಸಿಗೆಯ ದಿನಗಳನ್ನು ಸಮೀಪಿಸುತ್ತಿರುವಾಗ ಮುಂದಿನ ಎರಡು ವಾರಗಳಲ್ಲಿ ಗರಿಷ್ಠ ತಾಪಮಾನವು ಸರಾಸರಿ ವ್ಯಾಪ್ತಿಯಿಂದ ಮೂರು ಡಿಗ್ರಿ ಸೆಲ್ಸಿಯಸ್‌ಗಳಷ್ಟು ಏರಿಕೆಯಾಗುವ ನಿರೀಕ್ಷೆಯಿದೆ

ಕರಾವಳಿ ಜಿಲ್ಲೆಗಳಲ್ಲಿ 37-39 ಮತ್ತು ಉತ್ತರ ಕರ್ನಾಟಕದಲ್ಲಿ 39-41 ಡಿಗ್ರಿ ಸೆಲ್ಸಿಯಸ್‌ಗೆ ತಲುಪುತ್ತದೆ  (Temperature will increase in the state) ಎಂದು ಹವಾಮಾನ ಶಾಸ್ತ್ರಜ್ಞರು ತಿಳಿಸಿದ್ದಾರೆ.

ಇದಲ್ಲದೆ, ಹೆಚ್ಚಿನ ಮಟ್ಟದ ಆರ್ದ್ರತೆಯು ಕರಾವಳಿ ಕರ್ನಾಟಕದಲ್ಲಿ ಹೆಚ್ಚು ಅನಾನುಕೂಲತೆಯನ್ನು ಉಂಟುಮಾಡುತ್ತದೆ ಎಂದು ಊಹಿಸಲಾಗಿದೆ.

ಈಗಾಗಲೇ ತೀವ್ರ "ಶಾಖದ ಅಲೆ"ಯಿಂದ ಬಳಲುತ್ತಿರುವ ಕರ್ನಾಟಕದ ವಿವಿಧ ಪ್ರದೇಶಗಳಲ್ಲಿ 38-41 ಡಿಗ್ರಿ ಸೆಲ್ಸಿಯಸ್‌ನಷ್ಟು (High temperature of 38-41 degrees Celsius) ಹೆಚ್ಚಿನ ತಾಪಮಾನ ಕಂಡುಬರುತ್ತಿದೆ.

ಕಳೆದ ಕೆಲವು ದಿನಗಳಿಂದ ಉತ್ತರ ಕರ್ನಾಟಕದ ಕಲಬುರಗಿ, ರಾಯಚೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ತಾಪಮಾನವು ಈಗಾಗಲೇ 40 ಡಿಗ್ರಿ ಸೆಲ್ಸಿಯಸ್ ಮೀರಿದೆ.

ಬೆಂಗಳೂರಿನಲ್ಲಿರುವ ಭಾರತೀಯ ಹವಾಮಾನ ಇಲಾಖೆಯ (IMD) ವಿಜ್ಞಾನಿಗಳು ಮೈಸೂರು ಮತ್ತು ದಕ್ಷಿಣ-ಮಧ್ಯ ಕರ್ನಾಟಕದ ಇತರ ಜಿಲ್ಲೆಗಳಂತಹ ಪ್ರದೇಶಗಳಲ್ಲಿ 37 ರಿಂದ 38 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನವನ್ನು ಅನುಭವಿಸುತ್ತಿದ್ದಾರೆ.

ಇದು  ಸಾಮಾನ್ಯ ತಾಪಮಾನಕ್ಕಿಂತ 2-3 ಡಿಗ್ರಿ ಹೆಚ್ಚಾಗಿದೆ. ಕರಾವಳಿ ಕರ್ನಾಟಕದ ಜಿಲ್ಲೆಗಳಲ್ಲಿ ತಾಪಮಾನವು 2-3 ಡಿಗ್ರಿ ಸೆಲ್ಸಿಯಸ್‌ಗಳಷ್ಟು ಹೆಚ್ಚಾಗುವ ನಿರೀಕ್ಷೆಯಿದೆ.

ಇದು 37-39 ಡಿಗ್ರಿ ಸೆಲ್ಸಿಯಸ್ ಅನ್ನು ಮುಟ್ಟುವ ಸಾಧ್ಯತೆಯಿದೆ, ಈ ಪ್ರದೇಶದಲ್ಲಿ ಶಾಖದ ಅಲೆಯ ಪರಿಸ್ಥಿತಿಗಳನ್ನು ಸೃಷ್ಟಿಸುತ್ತದೆ. ಕರಾವಳಿಯಲ್ಲಿ ಹೆಚ್ಚಿದ ಆರ್ದ್ರತೆಯ ಮಟ್ಟವು ಜನರಲ್ಲಿ. ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ.

ಹೆಚ್ಚಿನ ತಾಪಮಾನದ ಕಾರಣಗಳನ್ನು ಪಟ್ಟಿ ಮಾಡಿದ ಐಎಂಡಿ(IMD) ಬೆಂಗಳೂರು ಪ್ರಕಾರ, "ಪ್ರಮುಖ ಕಾರಣವೆಂದರೆ ನಾವು ಕರ್ನಾಟಕದಾದ್ಯಂತ ಬೇಸಿಗೆಯ ದಿನಗಳಲ್ಲಿ ಗರಿಷ್ಠ ದಿನಗಳನ್ನು ಎದುರಿಸುತ್ತಿದ್ದೇವೆ.

Heat Wave

ಕರಾವಳಿ ಪ್ರದೇಶಗಳಲ್ಲಿ ತಾಪಮಾನವು ಸರಾಸರಿಗಿಂತ 2.5-3 ಡಿಗ್ರಿ ಮತ್ತು ಉತ್ತರ ಮತ್ತು ದಕ್ಷಿಣ ಭಾಗಗಳಲ್ಲಿ ಸಾಮಾನ್ಯಕ್ಕಿಂತ 1.5-2 ಡಿಗ್ರಿಗಳಷ್ಟು ಇರುತ್ತದೆ.

"ಬಿಸಿ ಅಲೆ" (Heat Wave) ಪರಿಸ್ಥಿತಿ ಸೃಷ್ಟಿಯಾಗುವ ಕಾರಣದಿಂದ ಕರಾವಳಿ ಪ್ರದೇಶಗಳಲ್ಲಿ ಮಳೆಯಾಗುವ ಸಾಧ್ಯತೆಗಳಿವೆ.

IMD ಪ್ರಕಾರ, ಉತ್ತರ-ಮಧ್ಯ ಕರ್ನಾಟಕದಲ್ಲಿ ತಾಪಮಾನವು 44-45 ಡಿಗ್ರಿ ಸೆಲ್ಸಿಯಸ್ ಮೀರಿದರೆ ಮಾತ್ರ "ಶಾಖದ ಅಲೆ" ಸ್ಥಿತಿಯನ್ನು ತಲುಪುತ್ತದೆ.

ಪ್ರಸ್ತುತ ಇದು 41-42 ಡಿಗ್ರಿ ಸೆಲ್ಸಿಯಸ್‌ಗೆ ತಲುಪುವ ಮುನ್ಸೂಚನೆ ಇದೆ. ತಾಪಮಾನವು 45 ಡಿಗ್ರಿ ಸೆಲ್ಸಿಯಸ್‌ಗೆ ತಲುಪಿದಾಗ “ಹೀಟ್ ವೇವ್” ಸ್ಥಿತಿ ಎಂದು ಕರೆಯಲಾಗುತ್ತದೆ ಎಂದು ಭಾರತಿಯ ಹವಾಮಾನ ಇಲಾಖೆ ತಿಳಿಸುತ್ತದೆ.

ಬೆಂಗಳೂರು ಮತ್ತು ದಕ್ಷಿಣ-ಮಧ್ಯ ಕರ್ನಾಟಕದ ಸುತ್ತಮುತ್ತಲಿನ ಜಿಲ್ಲೆಗಳು ಮಧ್ಯಂತರದಲ್ಲಿ ಸರಾಸರಿಗಿಂತ 1.5-2 ಡಿಗ್ರಿಗಳಷ್ಟು ಹೆಚ್ಚಿನ ತಾಪಮಾನವನ್ನು ಅನುಭವಿಸುವ ನಿರೀಕ್ಷೆಯಿದೆ.

ಮುಂದಿನ ದಿನಗಳಲ್ಲಿ, ನಗರದಲ್ಲಿ 37 ರಿಂದ 38 ಡಿಗ್ರಿ ಸೆಲ್ಸಿಯಸ್ ತಾಪಮಾನವು 2 ಡಿಗ್ರಿಗಳಷ್ಟು ಹೆಚ್ಚಾಗಲಿದೆ ಎಂದು ಐಎಂಡಿ, ಬೆಂಗಳೂರು ತಿಳಿಸಿದೆ.

ಹೆಚ್ಚಾದ ತಾಪಮಾನದ ಸಂಧರ್ಭದಲ್ಲಿ ವಹಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಿದರೆ ಒಳ್ಳೆಯದು. ಮುಂಗಾರು ಮೂನ್ಸುಚನೆ ಮತ್ತು ತಾಪಮಾನ ಕಡಿಮೆಯಾಗುವ ಬಗ್ಗೆ ಮುಂದಿನ ದಿನಗಳಲ್ಲಿ ಮೂನ್ಸುಚನೆಗಳನ್ನು ನೀಡಲಾಗುತ್ತದೆ.

ಲೇಖನ: ಡಾ. ಅಮಿತ್‌ ಜಿ., ಕೃಷಿ ಹವಾಮಾನ ಶಾಸ್ತ್ರ,

ಐ.ಸಿ.ಎ.ಆರ್ ಕೃಷಿ ವಿಜ್ಞಾನ ಕೇಂದ್ರ (KVK) ಹಗರಿ ಬಳ್ಳಾರಿ.

ಜಿಲ್ಲಾ ಕೃಷಿ ಹವಾಮಾನ ಘಟಕ (DAMU)

Published On: 21 April 2023, 01:42 PM English Summary: Heatwave alert: Temperature will increase in the state: 40 degrees are indicated by experts!

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.