1. ಸುದ್ದಿಗಳು

ಪಶ್ಚಿಮ ಕೇಂದ್ರ ರೈಲ್ವೆಯಲ್ಲಿ ಉದ್ಯೋಗಾವಕಾಶ: ಅರ್ಜಿಗೆ ಫೆ.27 ಕೊನೆ ದಿನ

job

ಪಶ್ಚಿಮ ಕೇಂದ್ರ ರೈಲ್ವೆಯು ವಿವಿಧ ಟ್ರೇಡ್‌ ಅಪ್ರೆಂಟಿಸ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಒಟ್ಟು 561 ಹುದ್ದೆಗಳ ಭರ್ತಿಗೆ ಇಲಾಖೆ ಅಧಿಸೂಚನೆ ಹೊರಡಿಸಿದೆ.

ಈ ಹುದ್ದೆಗಳಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಈ ಕೆಳಗಿನ ಮಾಹಿತಿಗಳನ್ನು ತಿಳಿದು ಆನ್‌ಲೈನ್‌ ಮೂಲಕ ಫೆಬ್ರವರಿ 27, 2021 ರೊಳಗೆ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಪ್ರಕಟಣೆಯಲ್ಲಿ ಸೂಚಿಸಲಾಗಿದೆ. ಪ್ರಮುಖ ದಿನಾಂಕಗಳು, ಶೈಕ್ಷಣಿಕ ಅರ್ಹತೆ, ಹುದ್ದೆಗಳ ವಿವರ, ಇತರೆ ಹೆಚ್ಚಿನ ವಿವರಗಳನ್ನು ಈ ಕೆಳಗಿನಂತೆ ಚೆಕ್‌ ಮಾಡಬಹುದು.

ವೆಸ್ಟ್ ಸೆಂಟ್ರಲ್ ರೈಲ್ವೆಯು ಇಲೆಕ್ಟ್ರಾನಿಕ್, ಫಿಟ್ಟರ್, ಟರ್ನರ್, ವೈಯರ್‌ಮನ್, ಕಾರ್ಪೆಂಟರ್, ಪೇಂಟರ್,  ವೆಲ್ಡರ್, ಗಾರ್ಡೆನರ್, ಸ್ಟೆನೋಗ್ರಾಫರ್, ಕಂಪ್ಯೂಟರ್ ನೆಟ್‌ವರ್ಕಿಂಗ್ ಮ್ಯಾನೇಜರ್,  ಹೌಸ್‌ ಕೀಪರ್ ಸೇರಿದಂತೆ ಒಟ್ಟು 30 ವಿವಿಧ ಟ್ರೇಡ್‌ ಅಪ್ರೆಂಟಿಸ್‌ ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತದೆ.

ಶೈಕ್ಷಣಿಕ ಅರ್ಹತೆ : ಎಸ್‌ಎಸ್‌ಎಲ್‌ಸಿ ಅಥವಾ ಹತ್ತನೇ ತರಗತಿ ಜತೆಗೆ ಸಂಬಂಧಿಸಿದ ಟ್ರೇಡ್‌ನಲ್ಲಿ ಐಟಿಐ ಪಾಸ್‌ ಮಾಡಿರಬೇಕು.

ಆನ್‌ಲೈನ್‌ ಅರ್ಜಿಗೆ ಆರಂಭ ದಿನಾಂಕ : 28-01-2021, ಆನ್‌ಲೈನ್‌ ಅರ್ಜಿಗೆ ಕೊನೆ ದಿನಾಂಕ : 27-02-2021, ಅಪ್ಲಿಕೇಶನ್‌ಗೆ ತಿದ್ದುಪಡಿ ದಿನಾಂಕ : 28-02-2021 ರಿಂದ 02-03-2021 ಆಗಿರುತ್ತದೆ.ಈ ದಿನಾಂಕದೊಳಗೆ ಅಭ್ಯರ್ಥಿಗಳು ತಿದ್ದುಪಡಿ ಮಾಡಿಕೊಳ್ಳಬಹುದು.

ವಯೋಮಿತಿ: ಅರ್ಜಿ ಸಲ್ಲಿಸಲು ಕನಿಷ್ಠ 15 ವರ್ಷ ಆಗಿರಬೇಕು. ಗರಿಷ್ಠ 24 ವರ್ಷ ವಯೋಮಿತಿ ಮೀರಿರಬಾರದು. ಎಸ್‌ಸಿ / ಎಸ್‌ಟಿ / ಒಬಿಸಿ / ಪ್ರವರ್ಗ-ಅಭ್ಯರ್ಥಿಗಳಿಗೆ ಸರ್ಕಾರಿ ನಿಯಮದ ಪ್ರಕಾರ ವಯೋಮಿತಿ ಸಡಿಲಿಕೆ ನಿಯಮಗಳು ಅನ್ವಯವಾಗಲಿವೆ.

ಅಪ್ಲಿಕೇಶನ್‌ ಶುಲ್ಕ:  ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳಿಗೆ ರೂ.170. ಎಸ್‌ಸಿ / ಎಸ್‌ಟಿ / ಪಿಡಬ್ಲ್ಯೂಡಿ / ಮಹಿಳಾ ಅಭ್ಯರ್ಥಿಗಳಿಗೆ 70 ರೂಪಾಯಿ ಆಗಿರುತ್ತದೆ.

Published On: 13 February 2021, 09:57 AM English Summary: west central railway trade apprentice recruitment

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.