1. ಸುದ್ದಿಗಳು

PUC Exam 2021: ದ್ವಿತೀಯ PUC ವೇಳಾಪಟ್ಟಿ ರಿಲೀಸ್: ಮೇ.24ರಿಂದ ಜೂ.16ರವರೆಗೆ ಎಕ್ಸಾಮ್!

Suresh Kumar

ಪ್ರಸ್ತುತ ಶೈಕ್ಷಣಿಕ ವರ್ಷದ ದ್ವಿತೀಯ  ಪಿಯುಸಿ ಪರೀಕ್ಷೆಗಳ ಅಧಿಕೃತ ವೇಳಾಪಟ್ಟಿಯನ್ನು ಪ್ರಕಟಿಸಿರುವ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ ಕುಮಾರ, ಪಿಯುಪರೀಕ್ಷೆಗಳು ಮೇ. 24 ರಿಂದ ಜೂನ್ 16 ರವರೆಗೆ ನಡೆಯಲಿವೆ ಎಂದು ತಿಳಿಸಿದ್ದಾರೆ.

ಈಗಾಗಲೇ ಬೋರ್ಡ್ ಪರೀಕ್ಷೆಯಾದಂತ ಎಸ್ ಎಸ್ ಎಲ್ ಸಿ ಪರೀಕ್ಷಾ ವೇಳಾಪಟ್ಟಿ ಬಿಡುಗಡೆಯಾಗಿದೆ. ಇದರ ಬೆನ್ನಲ್ಲೇ ದ್ವಿತೀಯ ಪಿಯುಸಿ ಅಂತಿಮ ಪರೀಕ್ಷಾ ವೇಳಾಪಟ್ಟಿ ಕೂಡ ಬಿಡುಗಡೆಗೊಂಡಿದೆ.

ಮೇ.24ರಿಂದ ಜೂನ್ 16ರವರೆಗೆ ದ್ವಿತೀಯ ಪಿಯುಸಿ ಅಂತಿಮ ಪರೀಕ್ಷೆ ನಿಗದಿ ಪಡಿಸಲಾಗಿದೆ. ವಿದ್ಯಾರ್ಥಿಗಳು ಹಾಗೂ ಪೋಷಕರಿಂದ ಬಂದಂತ ಮಾಹಿತಿಯನ್ನು ಆಧರಿಸಿ ಅಂತಿಮ ವೇಳಾಪಟ್ಟಿಯನ್ನು ಪ್ರಕಕಟಿಸಲಾಗುತ್ತಿದೆ ಎಂದರು.

ದ್ವಿತೀಯ ಪಿಯುಸಿ ಅಂತಿಮ ವೇಳಾಪಟ್ಟಿ

ಮೇ.24, ಇತಿಹಾಸ

ಮೇ.26, ಭೂಗೋಳ ಶಾಸ್ತ್ರ

ಮೇ.31, ಇಂಗ್ಲೀಷ್

ಜೂನ್.2, ರಾಜ್ಯಶಾಸ್ತ್ರ

ಜೂನ್.3, ಜೀವಶಾಸ್ತ್ರ

ಜೂನ್.4, ಅರ್ಥಶಾಸ್ತ್ರ

ಜೂನ್.7, ವ್ಯವಹಾರ ಅಧ್ಯಯನ, ಭೌತಶಾಸ್ತ್ರ

ಜೂನ್.10, ಸಮಾಜಶಾಸ್ತ್ರ, ರಾಸಾಯನಶಾಸ್ತ್ರ

ಜೂನ್.12, ಸಂಖ್ಯಾಶಾಸ್ತ್ರ

ಜೂನ್.14, ಲೆಕ್ಕಶಾಸ್ತ್ರ, ಗಣಿತ ಪರೀಕ್ಷೆ

ಜೂನ್.16, ಕನ್ನಡ (ಪ್ರಥಮ ಭಾಷೆ)

ಪ್ರಸ್ತುತ ವರ್ಷದ ಎಸ್.ಎಸ್.ಎಲ್.ಸಿ ಪರೀಕ್ಷೆಗಳ ತಾತ್ಕಾಲಿನ ವೇಳಾಪಟ್ಟಿಗೆ ಆಕ್ಷೆಪಣೆಗಳನ್ನು ಸ್ವೀಕರಿಸಲು ಅವಧಿ ಮುಗಿದ ತಕ್ಷಣವೇ ಅಧಿಕೃತ ವೇಳಾಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ಸಚಿವರು ಇದೇ ಸಂದರ್ಭದಲ್ಲಿ ತಿಳಿಸಿದರು.

Published On: 13 February 2021, 09:47 AM English Summary: 2nd puc timetable announce

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.