1. ಸುದ್ದಿಗಳು

ಕಲ್ಲಂಗಡಿ ಬೇಸಾಯ ತರಬೇತಿ, ಆಹಾರ ಧಾನ್ಯಗಳ ನಷ್ಟ: ಆನ್‌ಲೈನ್‌ ತರಬೇತಿ

ಬಾಗಲಕೋಟೆಯ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾ ಲಯದ ತೋಟಗಾರಿಕೆ ವಿಸ್ತರಣಾ ಶಿಕ್ಷಣ ಘಟಕ ಯಾದಗಿರಿ ವತಿಯಿಂದ ‘ಕಲ್ಲಂಗಡಿ ಹಣ್ಣಿನ ಬೇಸಾಯ ತಂತ್ರಜ್ಞಾನಗಳು’ ಕುರಿತು ತರಬೇತಿ ಕಾರ್ಯಕ್ರಮವನ್ನು ಶುಕ್ರವಾರ ಬೆಳಿಗ್ಗೆ 11 ಗಂಟೆಗೆ ತೋಟಗಾರಿಕೆ ವಿಸ್ತರಣಾ ಶಿಕ್ಷಣ ಘಟಕ ಯಾದಗಿರಿಯಲ್ಲಿ ಹಮ್ಮಿಕೊಳ್ಳಲಾಗಿದೆ.

ಆಸಕ್ತ ರೈತರು ಹಾಗೂ ರೈತ ಮಹಿಳೆಯರು ತೋಟಗಾರಿಕೆ ವಿಸ್ತರಣಾ ಶಿಕ್ಷಣ ಘಟಕ, ಎಪಿಎಂಸಿ ಪ್ರಾಂಗಣ, 2ನೇ ಗೇಟ್, ಹೈದರಾಬಾದ ರಸ್ತೆ, ಯಾದಗಿರಿ – 585 201, ಆಫೀಸ್ ನಂಬರ್‌: 08473-253898 ಮೊ.ನಂ.: 9481060077 ವಿಳಾಸದಲ್ಲಿ ರೈತರು ತಮ್ಮ ಹೆಸರನ್ನು ನೋಂದಾಯಿಸಬಹುದು.

ಆಹಾರ ಧಾನ್ಯಗಳ ನಷ್ಟ: ಆನ್‌ಲೈನ್‌ ತರಬೇತಿ

 ಆಹಾರ ಧಾನ್ಯಗಳ ಕಟಾವಿನ ಬಳಿಕ ಉಂಟಾಗುತ್ತಿರುವ ನಷ್ಟವನ್ನು ತಡೆಗಟ್ಟಲು ಕೈಗೊಳ್ಳಬಹುದಾದ ತಾಂತ್ರಿಕತೆ ಬಗ್ಗೆ ರೈತರಿಗೆ ಮಾಹಿತಿ ನೀಡಲು ದಾವಣಗೆರೆ ಕಾಡಜ್ಜಿಯ ಜಿಲ್ಲಾ ಕೃಷಿ ತರಬೇತಿ ಕೇಂದ್ರದಿಂದ ನವೆಂಬರ್‌ 20ರಂದು ಮಧ್ಯಾಹ್ನ 12.30ರಿಂದ 1.30ರವರೆಗೆ ಆನ್‌ಲೈನ್‌ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ರಾಯಚೂರು ಕೃಷಿ ವಿಶ್ವ ವಿದ್ಯಾಲಯದ ಫುಡ್‌ ಎಂಜಿನಿಯರಿಂಗ್‌ ವಿಭಾಗದ ಮುಖ್ಯಸ್ಥರಾದ ಡಾ. ಉದಯಕುಮಾರ್ ನಿಡೋಣಿ ವಿಷಯ ಮಂಡನೆ ಮಾಡಲಿದ್ದಾರೆ. ರೈತರು ಗೂಗಲ್ ಮೀಟ್ ಲಿಂಕ್ meet.google.com/bcw-epjq-yaw ಬಳಸಿ ತರಬೇತಿಯ ಪ್ರಯೋಜನ ಪಡೆದುಕೊಳ್ಳಬಹುದು. ಮಾಹಿತಿಗಾಗಿ ಸಹಾಯಕ ಕೃಷಿ ನಿರ್ದೇಶಕರು, ಜಿಲ್ಲಾ ಕೃಷಿ ತರಬೇತಿ ಕೇಂದ್ರ, ಕಾಡಜ್ಜಿ, ಮೊ: 9945910090, 8277928964 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

Published On: 19 November 2020, 02:34 PM English Summary: watermelon cultivation training

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.