1. ಸುದ್ದಿಗಳು

Bhadra ಭದ್ರಾ ನಾಲೆಗೆ ಹರಿಯಲಿದೆ ನೀರು: ಸರ್ಕಾರದಿಂದ ರೈತರಿಗೆ ತಾತ್ಕಾಲಿಕ ರಿಲೀಫ್‌!

Hitesh
Hitesh
Water will flow to Bhadra canal: temporary relief for farmers!

ಭದ್ರಾ ನಾಲೆಗಳಿಗೆ ನೀರು ಹರಿಸುವ ಸಂಬಂಧ ಸರ್ಕಾರ ತೆಗೆದುಕೊಂಡಿರುವ ನಿರ್ಧಾರ ರೈತರಿಗೆ ತಾತ್ಕಾಲಿಕ ರಿಲೀಫ್‌ ನೀಡಿದೆ

ಅದೇನು ಎನ್ನುವ ವಿವರ ಇಲ್ಲಿದೆ

ವಿಡಿಯೋ ಸ್ಟೋರಿಗಾಗಿ ಇಲ್ಲಿ ಕ್ಲಿಕ್‌ ಮಾಡಿ: Bhadra Nala | ಭದ್ರಾ ನಾಲೆಗೆ ಹರಿಯಲಿದೆ ನೀರು: ರೈತರಿಗೆ ತಾತ್ಕಾಲಿಕ ರಿಲೀಫ್‌! | Davanagere | Bhadra Dam

ಭದ್ರಾ ನಾಲೆಗಳಿಗೆ ಸಮರ್ಪಕವಾಗಿ ನೀರು ಪೂರೈಕೆಯಾಗದೆ ರೈತರು ತೀವ್ರ ಸಂಕಷ್ಟವನ್ನು ಅನುಭವಿಸುವಂತಾಗಿದೆ.

ಭದ್ರಾ ಜಲಾಶಯದಿಂದ ನಾಲೆಗಳಿಗೆ ನೂರು ದಿನಗಳ ಕಾಲ ನೀರು ಹರಿಸಬೇಕು ಎಂದು ಒತ್ತಾಯಿಸಿ  

ಭಾರತೀಯ ರೈತ ಒಕ್ಕೂಟದ ನೇತೃತ್ವದಲ್ಲಿ ದಾವಣಗೆರೆ ಬಂದ್ಗೆ ಕರೆ ನೀಡಲಾಗಿತ್ತು.

ದಾವಣಗೆರೆ ಬಂದ್‌ಗೆ ಜನರಿಂದ ವ್ಯಾಪಕವಾದ ಬೆಂಬಲ ವ್ಯಕ್ತವಾಗಿತ್ತು.

ಈಚೆಗೆ ಡ್ಯಾಂನಿಂದ ನೀರು ಸ್ಥಗಿತಗೊಳಿಸಲಾಗಿತ್ತು.

ನಮಗೆ ಸರ್ಕಾರದ ಪರಿಹಾರ ಬೇಡ, ಭದ್ರಾ ಜಲಾಶಯನದಿಂದ ನೀರು ಹರಿಸಿ, ಎಂದು ರೈತರು ಪಟ್ಟುಹಿಡಿದಿದ್ದರು.

ಜೊತೆಗೆ ಈಗಾಗಲೇ ಭತ್ತ ನಾಟಿ ಮಾಡಿರುರೈತರು ಮಳೆಯೂ ಸುರಿಯದೆ ಇರುವುದರಿಂದ ಬೆಳೆ

ಕೈತಪ್ಪುವ ಆತಂಕಕ್ಕೆ ಒಳಗಾಗಿದ್ದಾರೆ. ಇದೀಗ ಭದ್ರಾ ಬಲದಂಡೆ ಹಾಗೂ ಎಡದಂಡೆ ನಾಲೆಗಳಿಗೆ

ನೀರು ಬಿಡುಗಡೆ ಮಾಡಲು ಸರ್ಕಾರ ಮುಂದಾಗಿದೆ.

2023-24 ನೇ ಸಾಲಿನಲ್ಲಿ ಭದ್ರಾ ಜಲಾಶಯದ ಮುಂಗಾರು ಬೆಳೆಗಳಿಗೆ ಬಲದಂಡೆ ಹಾಗೂ ಎಡದಂಡೆ ನಾಲೆಗಳಿಗೆ

ನೀರನ್ನು ಸರದಿಯನ್ವಯ ಹರಿಸಲಾಗುವುದು ಎಂದು ಕರ್ನಾಟಕ ನೀರಾವರಿ ನಿಗಮ ನಿಯಮಿತ  

ಭದ್ರಾ ಯೋಜನಾ ವೃತ್ತದ ಸುಪ್ರಿಡೆಂಟಲ್‌ ಎಂಜಿನಿಯರ್‌ ಹಾಗೂ ಭದ್ರಾ ಯೋಜನಾ

ನೀರಾವರಿ ಸಲಹಾ ಸಮಿತಿ ಸದಸ್ಯ ಕಾರ್ಯದರ್ಶಿ ಸುಜಾತ  ಅವರು ತಿಳಿಸಿದ್ದಾರೆ.

ಭದ್ರಾ ಬಲದಂಡೆ ನಾಲೆಗಳಿಗೆ ಸೆಪ್ಟೆಂಬರ್ 26 ರಿಂದ ಅಕ್ಟೋಬರ್ 15 ರವರೆಗೆ ಒಟ್ಟು 20 ದಿನಗಳು 

ಹಾಗೂ ಅಕ್ಟೋಬರ್ 26 ರಿಂದ ನವೆಂಬರ್ 17 ರವರೆಗೆ ಒಟ್ಟು 23 ದಿನಗಳು ನೀರನ್ನು ಹರಿಸಲಾಗುವುದು.

ಭದ್ರಾ ಎಡದಂಡೆ ನಾಲೆಗಳಿಗೆ ಈಗಾಗಲೇ ನೀರನ್ನು ಹರಿಸಲಾಗಿದ್ದು, ಅಕ್ಟೋಬರ್ 1 ರವರೆಗೆ ಒಟ್ಟು

15 ದಿನಗಳು ನೀರನ್ನು ಹರಿಸಲಾಗುತ್ತದೆ.

ನಂತರ ಅಕ್ಟೋಬರ್ 12 ರಿಂದ 26 ರವರೆಗೆ ಒಟ್ಟು 15 ದಿನಗಳು ಹಾಗೂ ನವೆಂಬರ್ 6 ರಿಂದ 17 ರವರೆಗೆ

ಒಟ್ಟು 12 ದಿನಗಳು ನೀರನ್ನು ಹರಿಸಲಾಗುದು ಎಂದಿದ್ದಾರೆ.

ಇನ್ನು ಭದ್ರಾ ಡ್ಯಾಂ ನೀರನ್ನೇ ಈ ಭಾಗದ ಅಚ್ಚುಕಟ್ಟು ಪ್ರದೇಶ ಶೇಕಡಾ 70ರಷ್ಟು ಭಾಗ ಅವಲಂಬಿಸಿದೆ

Published On: 27 September 2023, 05:32 PM English Summary: Water will flow to Bhadra canal: temporary relief for farmers!

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.