1. ಸುದ್ದಿಗಳು

ಕಾವೇರಿ ನೀರು; ಕೇಂದ್ರ ಸರ್ಕಾರ ಈಗಲಾದರೂ ಮಧ್ಯಪ್ರವೇಶಿಸಲಿ: ಸಿದ್ದರಾಮಯ್ಯ

Hitesh
Hitesh
Cauvery water; Let the central government intervene at least now: Siddaramaiah

ಕಾವೇರಿ ನೀರು (Cauvery water) ಹಂಚಿಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್‌ ಹಾಗೂ ಬಿಜೆಪಿಯ ನಡುವೆ ವಾಕ್ಸಮರ ಮುಂದುವರಿದಿದೆ.

ಇದೀಗ ತಮಿಳುನಾಡಿ (Tamil Nadu) ಗೆ ಮುಂದಿನ ಹದಿನೆಂಟು ದಿನಗಳ ಕಾಲ 3,000 ಕ್ಯೂಸೆಕ್ಸ್ ನೀರು ಹರಿಸಬೇಕೆಂಬ

ಕಾವೇರಿ ನೀರು ನಿಯಂತ್ರಣ ಸಮಿತಿಯ (Cauvery Water Control Committee) ಆದೇಶ ಆಘಾತಕಾರಿಯಾದುದು

ಎಂದು ಮುಖ್ಯಮಂತ್ರಿ (Siddaramaiah) ಸಿದ್ದರಾಮಯ್ಯ ಹೇಳಿದ್ದು, ಕೂಡಲೇ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಬೇಕು ಎಂದಿದ್ದಾರೆ.  

ತಮಿಳುನಾಡಿಗೆ ಮತ್ತೆ ಕಾವೇರಿ ನೀರು ಹರಿಸುವ ಬಗ್ಗೆ ಕಾನೂನು ತಂಡದ ಜೊತೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳಲಿದ್ದೇವೆ.

ಕರ್ನಾಟಕ (Karnataka) ಎದುರಿಸುತ್ತಿರುವ ಮಳೆ ಕೊರತೆಯ ಅಂಕಿ-ಅಂಶ, ಜಲಾಶಯಗಳ ನೀರಿನ ಸಂಗ್ರಹ

ಮತ್ತು ರೈತರ ಬೆಳೆಗೆ ಮತ್ತು ಕುಡಿಯುವ ನೀರು ಪೂರೈಸಲು ಅವಶ್ಯಕತೆ ಇರುವ

ನೀರಿನ ಪ್ರಮಾಣದ ಸಂಪೂರ್ಣ ವಿವರವನ್ನು ನಮ್ಮ ಅಧಿಕಾರಿಗಳು ಸಮಿತಿಗೆ ನೀಡಿದ್ದಾರೆ.

 Cauvery water ಕಾವೇರಿ ನೀರು ಹಂಚಿಕೆ: ಕರ್ನಾಟಕಕ್ಕೆ ಮತ್ತೆ ಕಣ್ಣೀರು!

ಇದರ ನಂತರವೂ ಸಮಿತಿ ಇಂತಹ ನಿರ್ಧಾರಕ್ಕೆ ಬಂದಿರುವುದು ಅಚ್ಚರಿ ಉಂಟು ಮಾಡಿದೆ ಎಂದು ಹೇಳಿದ್ದಾರೆ.

ನೀರು ಹಂಚಿಕೆಗೆ ಸಂಬಂಧಿಸಿದ ವಿವಾದವನ್ನು ಬಗೆಹರಿಸಲು ಕೇಂದ್ರ ಸರ್ಕಾರ ಮಧ್ಯಸ್ಥಿಕೆ ವಹಿಸಬೇಕು ಎಂದು ಅಂತರರಾಜ್ಯ ಜಲವಿವಾದ

ಕಾಯ್ದೆ ಸ್ಪಷ್ಟವಾಗಿ ಹೇಳಿದೆ. ನಾವು ಕಳೆದ ಒಂದು ತಿಂಗಳಿನಿಂದ ಪ್ರಧಾನಿ ಮಧ್ಯಸ್ಥಿಕೆಗಾಗಿ ಮನವಿ ಮಾಡುತ್ತಿದ್ದೇವೆ.

ಅವರ ಭೇಟಿಗಾಗಿ ಅವಕಾಶ ಕೋರಿದ್ದೇವೆ. ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ (Former Prime Minister HD Deve Gowda)

ಅವರು ಕೂಡಾ ಪತ್ರ ಬರೆದಿದ್ದಾರೆ ಎಂದು ಹೇಳಿದ್ದಾರೆ.

ಇದು ಎರಡು ರಾಜ್ಯಗಳಿಗೆ ಸಂಬಂಧಿಸಿದ ವಿವಾದವಾದ ಕಾರಣ ಕೇಂದ್ರ ಸರ್ಕಾರ ಮಾತ್ರ ಮಧ್ಯಸ್ಥಿಕೆ ವಹಿಸಿ ಪರಿಹರಿಸಲು ಸಾಧ್ಯವಿದೆ.

ಹಿಂದೆ ಇಂತಹದ್ದೇ ಪರಿಸ್ಥಿತಿ ಉದ್ಭವಿಸಿದಾಗ ವಾಸ್ತವಾಂಶವನ್ನು ಪರಿಶೀಲಿಸಲು ಕೇಂದ್ರ ಸರ್ಕಾರ ತಜ್ಞರ ತಂಡವನ್ನು ಕಳಿಸಿದ್ದ ನಿದರ್ಶನಗಳಿವೆ.

ಕೇಂದ್ರ ಸರ್ಕಾರ ಈಗಲಾದರೂ ಮಧ್ಯಪ್ರವೇಶ ಮಾಡಿ ಈ ಬಿಕ್ಕಟ್ಟನ್ನು ಪರಿಹರಿಸಬೇಕೆಂದು ಆಗ್ರಹಿಸುತ್ತೇನೆ ಎಂದು ಅವರು ತಿಳಿಸಿದ್ದಾರೆ.  

Kaveri | ಕಾವೇರಿ ನಮ್ಮದು: ಟ್ಟಿಟ್ಟರ್‌ನಲ್ಲಿ ಭಾರೀ ಟ್ರೆಂಡಿಂಗ್‌

Published On: 27 September 2023, 12:42 PM English Summary: Cauvery water; Let the central government intervene at least now: Siddaramaiah

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.