1. ಸುದ್ದಿಗಳು

ಮ್ಯಾಜಿಕ್‌ ಮರ: ಬೃಹತ್‌ ಮರದಿಂದ ಭೊರ್ಗರೆಯುತ್ತಿದೆ ನೀರು..!

Maltesh
Maltesh
Viral Tree

ನಾವು ಈ ಭುಮಿಯ ಮೇಲೆ ಸಾಕಷ್ಟು ವಿಸ್ಮಯವಾದ ಸಂಗತಿಗಳನ್ನು ನೋಡುತ್ತಲೆ ಇರುತ್ತೇವೆ. ಇದರಲ್ಲಿ ಕೆಲವೊಂದು ಅಂದಾಜಿಗೂ ಸಿಗಂದಂತಾ ಹಾಗೂ ತರ್ಕಕ್ಕೆ ನಿಲುಕದ ವಿಸ್ಯಗಳಾಗಿರುತ್ತೇವೆ. ಇತ್ತೀಚಿಗೆ ಬೇವಿನ ಮರದಲ್ಲಿ ಹಾಲಿನ ನೊರೆಯಂತೆ ದ್ರವ್ಯವು ಉಕ್ಕುತ್ತಿರುವುದು ಸೋಷಿಯಲ್‌ ಮೀಡಿಯಾಗಳಲ್ಲಿ ಸಾಕಷ್ಟು ವೈರಲ್ ಆಗಿತ್ತು.

ಅದನ್ನು ಕಂಡ ನೆಟಿಜೆನ್ಸ್‌ ಇದೆನಪ್ಪಾ ಚಮತ್ಕಾರ ಎಂದು ಹೌಹಾರಿದ್ದರು. ಸದ್ಯ ಅದೇ ತೆರನಾದ ಇನ್ನೊಂದು ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸದ್ದು ಮಾಡುತ್ತಿದ್ದು ಈ ಮರದಲ್ಲಿ ನೀರು ಭೊರ್ಗರೆಯುತ್ತಿದೆ..! ಅರೇ ಇದೇನಿದು ಮರದಲ್ಲಿ ನೀರು ಭೊರ್ಗರೆಯುತ್ತಿದೇಯಾ ಎಂದು ನೀವು ಬಾಯಿ ಮೇಲೆ ಬೇರಳಿಟ್ಟುಕೊಂಡರೆ ತಪ್ಪಲ್ಲ ಬಿಡಿ.

ಹಳೆಯದಾದ ಬೃಹತ್‌ ಮರದಿಂದ ನೀರು ರಭಸವಾಗಿ ಹರಿಯುತ್ತಿರುವ ವಿಡಿಯೋವೊಂದನ್ನು ಸ್ಥಳೀಯ ನಿವಾಸಿಯಾದ  ಹೂಡಾಸಿ ಎಂಬುವವವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. ಸದ್ಯ ಈ ವಿಡಿಯೋ ಇದೀಗ ಎಲ್ಲೆಡೆ ವೈರಲ್‌ ಆಗಿದೆ. ಈ ವೀಡಿಯೊವನ್ನು ಏಪ್ರಿಲ್ 3 ರಂದು Instagram  ಅಪ್‌ಲೋಡ್‌ ಮಾಡಲಾಗಿದೆ. ಎಲೆಗಳಿಲ್ಲದೆ ಒಣಗಿ ನಿಂತಿರುವ ಈ ಮಲ್ಬೆರಿ ಮರದ ಕಾಂಡದಿಂದ ನೀರು ಹೊಮ್ಮುತ್ತಿದೆ ಅದು ರಭಸವಾಗಿ..ಮುಂದೆ ಈ ನೀರಿನಿಂದ ವ್ಯಕ್ತಿಯೋರ್ವರು ಮುಖ ತೊಳೆಯುತ್ತಿರುವುದನ್ನು ಕೂಡ ಈ ವಿಡಿಯೋದಲ್ಲಿ ಕಾಣಬಹುದು.

ಪೈಲ್ವಾನ್ ಕಿಚ್ಚ ಸುದೀಪ್ ಕೊಟ್ಟ ಗುನ್ನಾಕೆ ಮಕಾಡೆ ಮಲಗಿದ ಅಜಯ್ ದೇವಗನ್!

ಗುಡ್‌ ನ್ಯೂಸ್‌: ಸಾವಯವ ಕೃಷಿಕರಿಗೆ ಇಲ್ಲಿದೆ ಬರೋಬ್ಬರಿ ರೂ.50,000 ಸಬ್ಸಿಡಿ!

ಈ ವಿಶೇಷ ವಿದ್ಯಮಾನವು ಭೂಮಿಯಲ್ಲಿನ ಬುಗ್ಗೆಗಳಿಂದಾಗಿ ಸಂಭವಿಸುತ್ತೆ ಎಂದು ವಿಜ್ಞಾನಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ವಿಶೇಷವಾಗಿ ಭಾರೀ ಮಳೆಯಾಗಿ ಅದರ ಪರಿಣಾಮ ಒತ್ತಡ ಉಂಟಾದಾಗ ಈ ರೀತಿಯ ವಿದ್ಯಮಾನವು ಏರ್ಪಡುತ್ತದೆ ಎನ್ನಲಾಗುತ್ತಿದೆ.ಇದು ಮರದ ಕಾಂಡದಿಂದ ನೀರನ್ನು ಹೊರ ಹಾಕಲು ಕಾರಣವಾಗುತ್ತದೆ ಎಂದು ಹೇಳಲಾಗುತ್ತಿದೆ.

"ಫೌಂಟೆನ್ ಮರ.. ಈ ಪ್ರದೇಶದಲ್ಲಿ ಸಿಜೆವಾ ನದಿಯು ಇದ್ದು, ಈ ಮರ ಸಹ  ನದಿಯ ತಟದಲ್ಲಿ ಬೆಳೆದಿದೆ, ಹಾಗಾಗಿ ಈ ಮರವು ನೀರನ್ನು ಹೊರ ಹಾಕುತ್ತಿರಬಹುದು" ಎಂದು ಸಾಮಾಜಿಕ ಮಾಧ್ಯಮದ ಬಳಕೆದಾರರು ಪೋಸ್ಟ್ ನ ಕಾಮೆಂಟ್ ವಿಭಾಗದಲ್ಲಿ ಬರೆದಿದ್ದಾರೆ. ಒಟ್ಟಿನಲ್ಲಿ ಈ ಮರದಿಂದ ನೀರು ಹರಿಯುತ್ತಿರುವ ವೀಡಿಯೋ ನೋಡಿ ನೆಟ್ಟಿಗರು ಬೆಚ್ಚಿ ಬಿದ್ದಿದ್ದಾರೆ ಎಂದು ಹೇಳಬಹುದು.

Bengaluru: ತಲೆ ಎತ್ತಲಿದೆ 85 ಕೋಟಿಯ ಕೆಂಪೆಗೌಡರ ಪ್ರತಿಮೆ: ದೆಹಲಿಯಿಂದ ಬೆಂಗಳೂರಿಗೆ 4 ಸಾವಿರ ಕೆ.ಜಿ ತೂಕದ ಖಡ್ಗ!

ಹಾವೇರಿಯಲ್ಲಿ “ಮೀನು ಹಬ್ಬ” ಆರಂಭ: ವಿಶೇಷ ಆಚರಣೆಯ ಬಗ್ಗೆ ನಿಮಗೆ ಗೊತ್ತೆ! ಇಲ್ಲಿದೆ ಕಂಪ್ಲಿಟ್ ಮಾಹಿತಿ.

ಕಾರಂಜಿ ಮರ. ಈ ಪ್ರದೇಶದಲ್ಲಿ ಪ್ರಾಚೀನ ಜಲಚರಗಳು ಇರುವುದರಿಂದ, ಸಿಜೆವಾ ನದಿಯಿಂದ, ಜಲಚರಗಳಲ್ಲಿ ಒಂದಾಗಿ ಬೆಳೆದ ಮರವು ನೀರನ್ನು ಮುಚ್ಚಿತು ಮತ್ತು ಮರದ ಈ ಕುಹರದ ಮೇಲೆ ನೀರು ಹೊರಹೊಮ್ಮಿತು. ಮಳೆಯ ಸಂ ದರ್ಭದಲ್ಲಿ ಮೂಲವನ್ನು ವಿಶೇಷವಾಗಿ ಉಚ್ಚರಿಸಲಾಗುತ್ತದೆ, " ಒಬ್ಬ ಬಳಕೆದಾರರು ಪೋಸ್ಟ್‌ನ ಕಾಮೆಂಟ್ ವಿಭಾಗದಲ್ಲಿ ಬರೆದಿದ್ದಾರೆ.

FaceBook: ನೀವು ಫೇಸಬುಕ್ ಬಳಸುತ್ತಿದ್ದರೇ ಹುಷಾರ್! ನಿಮ್ಮ ಖಾತೆ ಹ್ಯಾಕ್ ಆಗಿರಬಹುದು

Published On: 08 May 2022, 03:27 PM English Summary: viral tree water on the tree social media viraled tree

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2023 Krishi Jagran Media Group. All Rights Reserved.