1. ಸುದ್ದಿಗಳು

Viral: ತಿನ್ನುವ ನೂಡಲ್ಸ್‌ನಿಂದ ರಸ್ತೆ ಗುಂಡಿ ಮುಚ್ಚುತ್ತಿದ್ದಾರೆ ಈ ವ್ಯಕ್ತಿ!

Maltesh
Maltesh

ಭಾರತವಿರಲಿ, ವಿದೇಶವಿರಲಿ, ರಸ್ತೆಯಲ್ಲಿರುವ ಗುಂಡಿಗಳಿಂದ ಎಲ್ಲರಿಗೂ ತೊಂದರೆಯಾಗುತ್ತಿದೆ, ರಸ್ತೆಗಳಲ್ಲಿ ವಾಹನ ಚಲಾಯಿಸುವಾಗ ಗುಂಡಿಗಳು ಹೆಚ್ಚಾಗಿ ಕಂಡುಬರುತ್ತವೆ. ಇಂತಹ ಗುಂಡಿಗಳನ್ನು ವ್ಯಕ್ತಿಯೊಬ್ಬರು ಸ್ವತಃ ತಾವೇ ಮುಚ್ಚಲು ಪ್ರಾರಂಭಿಸಿದರು. ಅವರು ಈ ಗುಂಡಿಗಳನ್ನು ತುಂಬಲು ಮರಳು, ಜಲ್ಲಿ ಅಥವಾ ಸಿಮೆಂಟ್ ಬಳಸಿಲ್ಲ. ಅದರ ಹೊರತಾಗಿ ಅವರು ಬಳಸಿದ್ದು ನಾವು ನೀವು ತಿನ್ನುವ ನೂಡಲ್ಸ್  ಎಂದರೇ ನೀವು ನಂಬಲೇಬೇಕು..!

ಈ ವ್ಯಕ್ತಿ ಮಾಡಿದ್ದೇನು ಗೊತ್ತಾ..?

ಇಲ್ಲಿನ ವ್ಯಕ್ತಿಯ ಬಗ್ಗೆ ಹೇಳುವುದಾದರೆ, ಯುಕೆಯಲ್ಲಿ ವಾಸಿಸುವ ಮಾರ್ಕ್ ಮೊರೆಲ್ ಅವರು ರಸ್ತೆಗಳಲ್ಲಿ ಕಾಣುವ ಗುಂಡಿಗಳ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ. ಗುಂಡಿಗಳಿಂದ ಅವರು ಯಾವಾಗಲೂ ತೊಂದರೆಗೊಳಗಾಗುತ್ತಾರೆ, ಸಮಸ್ಯೆಯ ಕಡೆಗೆ ಅಧಿಕಾರಿಗಳ ಗಮನ ಸೆಳೆಯಲು ಮಾರ್ಕ್ ಈ ರೀತಿ ಮಾಡಿದ್ದಾರೆ. , ಮಾರ್ಕ್ ನೂಡಲ್ಸ್‌ನೊಂದಿಗೆ ಗುಂಡಿಗಳನ್ನು ತುಂಬುತ್ತಿದ್ದಾರೆ. ರಸ್ತೆಯಲ್ಲಿನ ಗುಂಡಿಗಳ ಬಗ್ಗೆ ಚಾಲಕರಿಗೆ ಚೆನ್ನಾಗಿ ತಿಳಿದಿದೆ. ವಾಹನವು ವೇಗದಲ್ಲಿದ್ದರೆ ಮತ್ತು ಗುಂಡಿಗಳ ಮೇಲೆ ಹಾದು ಹೋದರೆ,  ಅಪಘಾತಗಳು ಸಂಭವಿಸುತ್ತವೆ ಇದರಿಂದ ಸಾಕಷ್ಟು ಪ್ರಾಣ ಹಾನಿಗಳು ಸಂಭವಿಸುತ್ತವೆ.

ಗ್ರಾಹಕರೇ ಇಲ್ನೋಡಿ: LPG ಸಿಲಿಂಡರ್‌ ಬೆಲೆಯಲ್ಲಿ ಭಾರೀ ಇಳಿಕೆ..ಹೊಸ ರೇಟ್‌ ಎಷ್ಟು ಗೊತ್ತಾ..?

ಮಾರ್ಕ್ ಮೊದಲು ರಸ್ತೆಯ ಗುಂಡಿಗಳಲ್ಲಿ ರಬ್ಬರ್ ಸೇರಿದಂತೆ ಇತರೆ ವಸ್ತುಗಳಿಂದ ಗುಂಡಿಗಳನ್ನು ಮುಚ್ಚಲು ಆರಂಭಸಿದರು.  ಈ ಯೋಜನೆಗಳು ಫಲಕಾರಿಯಾಗದಿದ್ದಾಗ, ಅವರು ಪಾಟ್ ನೂಡಲ್ಸ್‌ನಿಂದ ಗುಂಡಿಗಳನ್ನು ತುಂಬಲು ನಿರ್ಧರಿಸಿದರು. ಮಾರ್ಕ್ ತನ್ನ ಹುಟ್ಟೂರಾದ ಬ್ರಾಕ್ಲಿಯ ಬೀದಿಗಳಲ್ಲಿನ ಗುಂಡಿಗಳನ್ನು ನೂಡಲ್ಸ್‌ನಿಂದ ತುಂಬಲು ಪ್ರಾರಂಭಿಸಿ ಈ ಮೂಲಕ ಸರ್ಕಾರ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಗಮನ ಸೆಳೆಯಲು ಮುಂದಾಗಿದ್ದಾನೆ.

ಇನ್ನು Mr Pothole ಎಂದೇ ಹೆಸರಾಗಿರುವ ಮಾರ್ಕ್‌ ತಮ್ಮ ಪ್ರತಿಭಟನೆಗೆ ಸಹಕರಿಸುವಂತೆ ನೂಡಲ್ಸ್‌ ಕಂಪನಿಯೊಂದರ ಜೊತೆ ಒಪ್ಪಂದವನ್ನು ಕೂಡ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಈ ಕುರಿತು ಮಾತನಾಡುವ ಮಾರ್ಕ್‌ ಈ ತಮ್ಮ ವಿಶಿಷ್ಟ ಪ್ರತಿಭಟನೆಯಿಂದಾದರು ಸರ್ಕಾರವು ಎಚ್ಚೆತ್ತುಕೊಂಡು ರಸ್ತೆಗಳಲ್ಲಿ ಉಂಟಾಗುವ ಗುಂಡಿಗಳನ್ನು ಮುಚ್ಚುವ ಕೆಲಸವನ್ನು ಮಾಡಲು ಎನ್ನುತ್ತಾರೆ.

ಏಕಾಏಕಿ 80 ಸಾವಿರ ರೇಷನ್‌ ಕಾರ್ಡ್‌ ಕ್ಯಾನ್ಸಲ್‌.. ಕಾರಣ ಏನು ಗೊತ್ತಾ..?

Published On: 02 April 2023, 10:18 AM English Summary: Viral: This man is blocking road potholes by eating noodles!

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.