ನಿಮ್ಮ ಜಮೀನು (ಹೊಲ) ಯಾರ ಹೆಸರ ಮೇಲಿದೆ, ಆ ಪಹಣಿ ಮೇಲೆ ಸಾಲ ತೆಗೆದುಕೊಳ್ಳಲಾಗಿದೆಯೇ ಎಂಬುದು ಸೇರಿದಂತೆ ಜಮೀನಿಗೆ ಸಂಬಂಧಿಸಿದ ಎಲ್ಲಾ ರೀತಿ ಮಾಹಿತಿ ಈಗ ಮನೆಯಲ್ಲಿಯೇ ಕುಳಿತು ಪರಿಶೀಲಿಸಬಹುದು.
ಪಹಣ ಬೇಕಾದರೆ, ಆರ್.ಟಿ.ಸಿ. ಪಡೆಯಲು ಅಥವಾ ನಿಮ್ಮ ಹೋಬಳಿಗೆ ಹೋಗಿ ಪಡೆಯಲಾಗುತ್ತಿತ್ತು. ಈಗ ನೀವು ಸರ್ಕಾರಿ ಕಚೇರಿಗಳಿಗೆ ಅಲೆಯಬೇಕಾಗಿಲ್ಲ, ಮನೆಯಲ್ಲಿಯೇ ಕುಳಿತ ಕ್ಷಣಾರ್ಧರದಲ್ಲಿ ಎಲ್ಲಾ ಮಾಹಿತಿಯನ್ನು ಪಡೆಯಬಹುದು. ಹೌದು ಭೂಮಿ ತಂತ್ರಾಶದಲ್ಲಿ ಈ ಎಲ್ಲಾ ಸೌಲಭ್ಯವನ್ನು ಒದಗಿಸಲಾಗಿದೆ. ಆರ್.ಟಿ.ಸಿ ಪಡೆಯುವುದಕ್ಕಾಗಿ ತಾಲ್ಲೂಕು ಕಚೇರಿಯನ್ನು ಅಥವಾ ನಾಡ ಕಚೇರಿಗಳನ್ನು ನೀವು ಭೇಟಿ ನೀಡಬೇಕಾಗಿಲ್ಲ. ನಿಮ್ಮ ಮನೆಯಲ್ಲಿಯೇ ನೀವು ಅದನ್ನು ಪಡೆಯಬಹುದು.
ಕೃಷಿ ಅಥವಾ ಮತ್ಯಾವುದೇ ರೀತಿಯ ಜಮೀನು ಹೊಂದಿರುವುದು ಎಷ್ಟು ಮುಖ್ಯವೋ ಅಷ್ಟೇ ಪ್ರಮುಖವಾದದ್ದು ಜಮೀನಿನ ದಾಖಲೆ ಬದಲಾಗದಂತೆ ಅಥವಾ ಬದಲಾದರು ಯಾವುದೇ ಸರ್ಕಾರಿ ಕಚೇರಿಗೆ ಹೋಗಿ ಸರದಿಯಲ್ಲಿ ನಿಂತು ಶ್ರಮಹರಣ ಮಾಡುವುದರ ಬದಲು ನಿಮ್ಮ ಅಂಗೈಯಲ್ಲಿನ ಮೊಬೈಲ್‌ನಲ್ಲೇ ಪರಿಶೀಲಿಸಿಕೊಳ್ಳುವ ಅವಕಾಶ ಇದೆ.
ಜಮೀನಿನ ಪಹಣಿ (ಆರ್‌ಟಿಸಿ)ಯಲ್ಲಿರುವ ಜಮೀನಿನ ವಿವರ, ನಾಡಕಚೇರಿ ಅಥವಾ ಆನ್‌ಲೈನ್ ಮೂಲಕ ಮುದ್ರಿಸಿರುವ ಪಹಣೆಯ ನೈಜತೆಯನ್ನು ಪರಿಶೀಲಿಸಿಕೊಳ್ಳಬಹುದಾಗಿದೆ. ಗ್ರಾಮದಲ್ಲಿನ ಎಲ್ಲಾ ರೈತರ ಕೃಷಿ ಜಮೀನಿನ ವಿವರಗಳನ್ನು ಈಗ ಅಲ್ಲೇ ನೋಡಬಹುದು.
http://www.landrecords.karnataka.gov.in ಲಿಂಕ್ ಕ್ಲಿಕ್ ಮಾಡಬೇಕು. ನಿಮಗೆ ಕನ್ನಡದಲ್ಲಿ ನೋಡಬೇಕೋ ಅತವಾ ಇಂಗ್ಲೀಷ ನಲ್ಲಿ ನೋಡಬೇಕು ಎಂಬುದನ್ನು ನಿರ್ಧರಿಸಿ ಕನ್ನಡ ಮೇಲೆ ಕ್ಲಿಕ್ ಮಾಡಿದರೆ ಕನ್ನಡದಲ್ಲಿ ಮಾಹಿತಿ ಕಾಣುತ್ತದೆ. ಇಂಗ್ಲೀಷ್ ನಲ್ಲಿ ಬೇಕಾದರೆ ಇಂಗ್ಲೀಷ್ ಮೇಲೆ ಕ್ಲಿಕ್ ಮಾಡಬೇಕು. ಇಂಗ್ಲೀಷ್ ನಲ್ಲಿ ಬೇಕಾದರೆ ಭೂಮಿ ಚಿತ್ರದ ಮೇಲೆ ಕ್ಲಿಕ್ ಮಾಡಬೇಕು. ಫಾರ್ ಸಿಟಿಜನ್ ಸರ್ವಿಸೆಸ್ ಮೇಲೆ ಕ್ಲಿಕ್ ಮಾಡಿದರೆ ಆರ್ಟಿಸಿ, ರೇವಿನ್ಯೂ ಮ್ಯಾಪ್, ವೀವ್ ಆರ್ಟಿಸಿ ಇನ್ಫಾರ್ಮೆಷನ್, ಸೇರಿದಂತೆ ಇತರ ಸೌಲಭ್ಯಗಳು ಅಲ್ಲಿ ಕಾಣುತ್ತದೆ. ಯಾವುದನ್ನು ಬೇಕೋ ಅದರ ಮೇಲೆ ಕ್ಲಿಕ್ ಮಾಡಿ ಮಾಹಿತಿ ಪಡೆಯಬಹುದು. ಒಂದು ವೇಳೆ ನಿಮಗೆ ಕನ್ನಡದಲ್ಲಿ ಮಾಹಿತಿ ಬೇಕಾದರೆ ಕನ್ನಡ ಕ್ಲಿಕ್ ಮಾಡಿದರೆ ಭೀಮಿ ವೆಬ್ ಸೈಟ್ ಕಾಣುತ್ತದೆ. ನಾಗರಿಕ ಸೇವೆಗಳಿಗಾಗಿ ಬೇಕಾದರೆ ಅಲ್ಲಿ ಕ್ಲಿಕ್ ಮಾಡಬೇಕು.
ಸರ್ವೆನಂಬರ್ ವಾರು ಮುಟೇಷನ್ ಗಳ ಕ್ರೋಢೀಕೃತರ ವರದಿ ಬೇಕಾದರೆ ಅಲ್ಲಿ ಕ್ಲಿಕ್ ಮಾಡಬೇಕು. ಆಗ ನಿಮ್ಮ ಜಿಲ್ಲೆ, ತಾಲೂಕು, ಹೋಬಳಿ, ವಿಲೇಜ್ (ಗ್ರಾಮ) ಆಯ್ಕೆ ಮಾಡಿಕೊಂಡು ಗೆಟ್ ರಿಪೋರ್ಟ್ ಮೇಲೆ ಕ್ಲಿಕ್ ಮಾಡಿದರೆ ಸಾಕು, ನಿಮ್ಮ ಸರ್ವೆನಂಬರ್, ಹಿಸ್ಸಾ ಭರ್ತಿ ಮಾಡಿದರೆ ನೀವು ಮನೆಯಲ್ಲಿಯೇ ಎಲ್ಲಾ ಮಾಹಿತಿಯು ಕ್ಷಣಾರ್ಧದಲ್ಲಿ ಪಡೆಯಬಹುದು.
ನಿಮಗೆ ನೇರವಾಗಿ ಲ್ಯಾಂಡ್ ರೆಕಾರ್ಡ್ ವೆಬ್ ಓಪನ್ ಆಗಬೇಕಾದರೆ https://landrecords.karnataka.gov.in/service2/ ಮೇಲೆ ಕ್ಲಿಕ್ ಮಾಡಿದರೆ ಸಾಕು ಡೈರೆಕ್ಟ್ ಲ್ಯಾಂಡ್ ರೆಕಾರ್ಡ್ ವೆಬ್ ತೆರೆದುಕೊಳ್ಳುತ್ತದೆ. ಇಲ್ಲಿ ನೇರವಾಗಿ ನಿಮ್ಮ ಜಿಲ್ಲೆ. ತಾಲೂಕು, ಹೋಬಳಿ, ಗ್ರಾಮ, ಸರ್ವೆನಂಬರ್ ಕ್ಲಿಕ್ ಮಾಡಿಮಾಹಿತಿ ಪಡೆಯಬಹುದು.
ಗ್ರಾಮವಾರು ಅಥವಾ ವೈಯಕ್ತಿಕ ಜಮೀನಿನ ಖಾತೆ ಬದಲಾವಣೆ, ಹಕ್ಕು ಬದಲಾವಣೆಗೆ ಬಾಕಿ ಇರುವ ವಹಿವಾಟಿನ ವಿವರಗಳು, ವಹಿವಾಟು ಯಾವ ಹಂತದಲ್ಲಿದೆ ಎಂಬ ಮಾಹಿತಿಯನ್ನು ಗಮನಿಸಬಹುದು. ಪಹಣಿ ಗಣಕೀಕೃತಗೊಂಡ ನಂತರದಿಂದ ಜಮೀನಿನ ಮೇಲೆ ಯಾವುದಾದರೂ ವಹಿವಾಟು ನಡೆದಿದ್ದರೆ ಅಂತಹ ವಹಿವಾಟುಗಳ ಸಂಪೂರ್ಣ ಮಾಹಿತಿಯನ್ನು ಒಂದೇ ವರದಿಯಲ್ಲಿ ನೋಡಬಹುದು. ಪಹಣಿ ಮೇಲೆ ಯಾವುದಾದರೂ ಸರ್ಕಾರದ ನಿಬಂಧನೆ ಇದೆಯೇ,ಕೋರ್ಟ್ ವ್ಯಾಜ್ಯ ದಾಖಲಾಗಿದೆಯೇ, ಪೈಕಿ ಪಹಣಿಯಾಗಿದೆಯೇ, ಯಾವುದಾದರೂ ವಹಿವಾಟು ನಡೆಯುತ್ತಿದೆಯೇ ಎಂಬ ಮಾಹಿತಿಯನ್ನು ಪರಿಶೀಲಿಸಿಕೊಳ್ಳಲು ಅವಕಾಶವಿದೆ. ಈ ಮಾಹಿತಿ ಜಮೀನನ್ನು ಮಾರಾಟ ಅಥವಾ ಖರೀದಿಸುವ ಮುನ್ನ ಪರಿಶೀಲಿಸಿ ಮಾಡಬಹುದಾಗಿದೆ.
ಜಮೀನು ಕೃಷಿಯೇತರ ಬಳಕೆಗಾಗಿ ಭೂ ಪರಿವರ್ತನೆಗಾಗಿ ಅರ್ಜಿ ಸಲ್ಲಿಸಿದಲ್ಲಿ ಅರ್ಜಿಯ ಸ್ಥಿತಿಯನ್ನು ವೀಕ್ಷಿಸಬಹುದು ಹಾಗೂ ತಂತ್ರಾಂಶ ಮೂಲಕ ಭೂ ಪರಿವರ್ತನೆಯಾಗಿರುವ ಆದೇಶಗಳನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.
Share your comments