1. ಸುದ್ದಿಗಳು

ಭೂಮಿಯಲ್ಲಿರುವ ಜೀವಿಗಳಿಗೆ ಅಮೃತವಾಗಲಿದೆ ಜೀವಾಮೃತ

ನೀವು ಕೃಷಿಕರಾಗಿದ್ದು ಸಾವಯವ ಕೃಷಿಯ ಕಡೆಗೆ ಹೆಚ್ಚು ಆಸಕ್ತಿ ವಹಿಸಿದ್ದರೆ ‘ಜೀವಾಮೃತ’ದ ಬಗ್ಗೆ ಕೇಳಿಯೇ ಇರುತ್ತೀರಿ.  ಜೀವಾಮೃತ ಯಾವುದೇ ಕೃಷಿನೆಲಕ್ಕೆ ಅಪೂರ್ವ ಮೌಲಿಕ ಗುಣಗಳನ್ನು ನೀಡುವ ಜೈವಿಕ ಸಂಪತ್ತು. ಈ ಜೀವಾಮೃತವನ್ನು ತಯಾರಿಸುವ ಬಗೆ ಹೇಗೆ?  ಸಾವಯುವ ಕೃಷಿ ಗೆ ಬೇಡಿಕೆ ಹೆಚ್ಚುತ್ತಿರುವ ದಿನಗಳಲ್ಲಿ ನಾವು ಸಾವಯುವ ಕೃಷಿಯಲ್ಲಿ ಮುಖ್ಯ ಲಘು ಪೋಷಕಾಂಶವನ್ನೂ ಒದಗಿಸುವ ಜೀವಾಮೃತದ ಬಗ್ಗೆ ತಿಳಿದುಕೊಳ್ಳೋಣ.

 ಜೀವಮೃತ ತಯಾರಿಸಲು ನಮಗೆ ಬೇಕಾಗುವ ಸಾಮಗ್ರಿಗಳು:

 ದೇಸಿ ಹಸುವಿನ ಸಗಣಿ 10 ಕೆಜಿ

 ದೇಸಿ ಹಸುವಿನ ಗಂಜಲು 10 ಲೀಟರ್

 ದ್ವಿದಳ ಧಾನ್ಯದ ಹಿಟ್ಟು 2 ಕೆಜಿ

 ಬೆಲ್ಲ 2 ಕೆಜಿ

 ಒಂದು ಹಿಡಿ ಶುದ್ಧ ಹಾಗೂ ಫಲವತ್ತಾದ ಮಣ್ಣು.

ಬೀಜಾಮೃತ ತಯಾರಿಕೆ ಪ್ರಕ್ರಿಯೆ:

 ಬೀಜಾಮೃತವನ್ನು ತಯಾರಿಸಲು ನಾವು ಒಂದು ಒಳ್ಳೆಯ ನೆರಳಿನ ಜಾಗವನ್ನು ಹುಡುಕಬೇಕು ಅದು ಗಿಡದ ಕೆಳಗಡೆಯಾದರೆ ತುಂಬಾ ಒಳ್ಳೆಯದು. ಇದನ್ನು ತಯಾರಿಸಲು ಎರಡುನೂರು ಲೀಟರ್  ಬ್ಯಾರೆಲ್ ಅವಶ್ಯಕತೆ ಇದೆ.

 ಮೊದಲಿಗೆ 10 ಕೆಜಿ ದೇಸಿ ಹಸುವಿನ ಸಗಣಿಯನ್ನು ಒಂದು ಬಕೆಟ್ ನಲ್ಲಿ ಚೆನ್ನಾಗಿ ಕಲಿಸಬೇಕು ಯಾವುದೇ ಗಂಟುಗಳು ಇಲ್ಲದ ಹಾಗೆ ಅದನ್ನು ಕಲಿಸಬೇಕು. ಕಲಿಸಿದ ನಂತರ ಇದನ್ನು 200 ಲೀಟರ್ ಬ್ಯಾರೆಲ್ ಗೆ ಹಾಕಬೇಕು, ಆಮೇಲೆ ಇದಕ್ಕೆ 10ಲೀಟರ್ ಗಂಜಲವನ್ನು ಹಾಕಬೇಕು, ಇದಾದ ನಂತರ ಇದಕ್ಕೆ ಎರಡು ಕೆಜಿ ಬೆಲ್ಲ, ಎರಡು ಕೆಜಿ ದ್ವಿದಳ ಧಾನ್ಯದ ಹಿಟ್ಟು, ಒಂದು ಹಿಡಿ ಮಣ್ಣನ್ನು ಹಾಕಿ ಇದಕ್ಕೆ 200 ಲೀಟರ್ ನೀರನ್ನು ಹಾಕಿ ಚೆನ್ನಾಗಿ ತಿರುಗಿಸಬೇಕು.

ಇದನ್ನು ಪ್ರತಿದಿನ ಎರಡು ಬಾರಿ ಒಂದೇ ದಿಕ್ಕಿನಲ್ಲಿ ತಿರುಗಿಸಬೇಕು ಹೀಗೆ ಒಂದು ವಾರದ ನಂತರ ನಿಮ್ಮ ಜೀವಾಮೃತವು ತಯಾರಾಗುತ್ತದೆ. ಇದನ್ನು ತಯಾರಿಸಿದ 8 ನೆ ದಿನದಿಂದ ನೀವು ಬಳಸಬಹುದು.

ಉಪಯೋಗಗಳು:

 ಬೆಳೆಗಳಿಗೆ ಬೇಕಾದ ಲಘು ಪೋಷಕಾಂಶಗಳನ್ನು ಒದಗಿಸುತ್ತದೆ

 ಭೂಮಿಯಲ್ಲಿರುವಂತಹ  ಸಾರಜನಕ ಸ್ಥಿರೀಕರಿಸುವ ಬ್ಯಾಕ್ಟೀರಿಯಾ ಹಾಗೂ ರಂಜಕ ಕರಗಿಸುವ ವ್ಯಕ್ತಿಗಳಿಗೆ ಇದು ಉತ್ತೇಜನ ನೀಡುತ್ತದೆ  ಹಾಗೂ ಅವುಗಳ ಕಾರ್ಯಕ್ಷಮತೆಯನ್ನು ವೃದ್ಧಿಸುತ್ತದೆ.

ದೇಸಿ ಹಸುವಿನ ಸಗಣಿ ಹಾಗೂ ಗಂಜಲು ಲಕ್ಷಾಂತರ ಪ್ರಯೋಜನಕಾರಿ ಸೂಕ್ಷ್ಮಾಣುಜೀವಿಗಳನ್ನು ಹೊಂದಿದೆ ಹೀಗಾಗಿ ನಾವು ಇದನ್ನು ಏಳು ದಿನಗಳ ಕಾಲ ಅದರಲ್ಲಿರುವ ಅಂತಹ ಸೂಕ್ಷ್ಮಾಣುಜೀವಿಗಳನ್ನು ದ್ವಿಗುಣಗೊಳಿಸಿ ಅಥವಾ ತ್ರಿಗುಣ ಗೊಳಿಸಿ ಅದನ್ನು ಹೆಚ್ಚಾಗಿ ವೃದ್ಧಿಸಿ ಬೆಳೆಗಳಿಗೆ ನೀಡುವುದರ ಮೂಲಕ ನಾವು ಬೆಳೆಗಳ  ಬೆಳವಣಿಗೆಯನ್ನು ಪ್ರಚೋದಿಸಬಹುದು.

ಜೀವಾಮೃತದಲ್ಲಿ ಇರುವಂತಹ ಪ್ರಯೋಜನಕಾರಿ ಸೂಕ್ಷ್ಮಾಣುಜೀವಿಗಳು ಬೆಳೆಗಳಲ್ಲಿ ರೋಗಗಳಿಗೆ ಕಾರಣವಾಗುವ ಹಾನಿಕಾರಕ ಸೂಕ್ಷ್ಮಾಣು ಜೀವಿಗಳನ್ನು ಕೊಲ್ಲುತ್ತದೆ.

ಜೀವಾಮೃತವನ್ನು ನಾವು ಮಣ್ಣಿಗೂ ಕೂಡ ಪ್ರಚೋದಿಸಬಹುದು ಇದರ ಮೂಲಕ ಮಣ್ಣಿನಲ್ಲಿರುವ ಸೂಕ್ಷ್ಮ ಜೀವಿಗಳನ್ನು ವೃದ್ಧಿಸುತ್ತದೆ ಹಾಗೂ ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುತ್ತದೆ.

ಲೇಖಕರು: ಚಿನ್ನಪ್ಪ ಎಸ್. ಅಂಗಡಿ

Published On: 17 November 2020, 06:00 AM English Summary: How to prepare jeevamrutha

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.