1. ಸುದ್ದಿಗಳು

ಪಂಚಗವ್ಯ ಬೆಳೆಗಳಿಗೆ ಔಷಧಯುಕ್ತ ಆಹಾರ

ಪಂಚಗವ್ಯವನ್ನು ಹಿಂದೂ ಸಾಂಪ್ರದಾಯಕ ಆಚರಣೆಗಳಲ್ಲಿ ಬಳಸಲಾಗುತ್ತದೆ, ಇದನ್ನು ಶುದ್ಧ ದೇಸಿ ಆಕಳಿನ  ಐದು ಪದಾರ್ಥಗಳನ್ನು ಸೇರಿಸಿ ಮಾಡಲಾಗುತ್ತದೆ ಅವು ಯಾವೆಂದರೆ ಸಗಣಿ, ಗಂಜಲ, ಹಾಲು, ತುಪ್ಪ ಹಾಗೂ ಮೊಸರು. ಇದನ್ನು ಹಲವಾರು ಪೂಜೆ, ಹೋಮ -ಹವನಗಳಲ್ಲಿ ಬಳಸಲಾಗುತ್ತದೆ. ಇದು ಕೇವಲ ಪೂಜೆ ಹೋಮ -ಹವನಗಳಲ್ಲಿ ಅಷ್ಟೇ ಅಲ್ಲದೆ ಕೃಷಿಯಲ್ಲೂ ಕೂಡ ಹೆಚ್ಚು ಪ್ರಯೋಜನ ಹೊಂದಿದೆ, ಹಾಗಾಗಿ ಇದನ್ನು ಕೃಷಿಯಲ್ಲಿ ಹೇಗೆ ಉಪಯೋಗಿಸಲಾಗುವುದು ಎಂದು ತಿಳಿದುಕೊಳ್ಳೋಣ ಬನ್ನಿ.

ಬೇಕಾಗುವ ಪದಾರ್ಥಗಳು:

ಸಗಣಿ =5 ಕೆಜಿ

ಗಂಜಲ =3 ಲೀಟರ್

ಹಾಲು =2 ಲೀಟರ್

ತುಪ್ಪ =1 ಕೆಜಿ

ಮೊಸರು =2 ಲೀಟರ್

ಕಬ್ಬಿನ ಹಾಲು =3 ಲೀಟರ್

ಎಳೆನೀರು ನೀರು -3 ಲೀಟರ್

ಬಾಳೆ ಮಾಗಿದ -12

ತಯಾರಿಸುವ ಪ್ರಕ್ರಿಯೆ:

ಮಣ್ಣು, ಕಾಂಕ್ರೀಟ್ ಅಥವಾ ಪ್ಲಾಸ್ಟಿಕ್ನಿಂದ ಮಾಡಿದ ಅಗಲವಾದ ಪಾತ್ರೆಯಲ್ಲಿ ಪಂಚಗವ್ಯವನ್ನು ಸಿದ್ಧಪಡಿಸಬೇಕು. ಯಾವುದೇ ಲೋಹದ ಪಾತ್ರೆಯಲ್ಲಿ ಇದನ್ನು ತಯಾರಿಸಬಾರದು. ಯಾಕೆಂದರೆ ಇದರಿಂದ ಪಂಚಗವ್ಯ ಹಾಗೂ ಲೋಹದ ಮದ್ಯೆ ಯಾವುದಾದರು ಕ್ರಿಯೆ ನಡೆದು ಅದರ ಶಕ್ತಿ ಕಡಿಮೆಯಾಗಬಹುದು.

ಮೊದಲು ತಾಜಾ ಹಸುವಿನ ಸಗಣಿ ಹಾಗೂ ದೇಸಿ ತುಪ್ಪವನ್ನು ಬೆರಸಬೇಕು, ಇದಕ್ಕೆ  ಮೂರು ದಿನಗಳವರೆಗೆ ಏನೇನು ಸೇರಿಸಬಾರದ, ದಿನಕ್ಕೆ ಎರಡು ಬಾರಿ ಒಂದೇ ದಿಕ್ಕಿನಲ್ಲಿ ತಿರುಗಿಸಬೇಕು, ನಾಲ್ಕನೇ ದಿನ ಉಳಿದ ಪದಾರ್ಥಗಳನ್ನು ಮಿಶ್ರಣ ಮಾಡಿ 15 ದಿನಗಳವರೆಗೆ ದಿನಕ್ಕೆ ಎರಡು ಬಾರಿ ತಿರುಗಿಸಬೇಕು, ಹಾಗೂ ಮಾರನೇ ದಿನದಿಂದ ಪಂಚಗವ್ಯ ಬಳಕೆಗೆ ಸಿದ್ಧವಾಗಿದೆ.

ಉಪಯೋಗಗಳು:

ಇಳುವರಿಯಲ್ಲಿ ಗುಣಮಟ್ಟ ಏರಿಕೆಯಾಗಲಿದೆ. ಪಂಚಗವ್ಯವನ್ನು ನಾವು ಬಳಸುವುದರಿಂದ ಇಳುವರಿಯಲ್ಲೂ ಏರಿಕೆಯಾಗಲಿದೆ ಹಾಗೂ ಬೆಳೆಗಳ ಗುಣಮಟ್ಟವು ವೃದ್ಧಿಸಲಿದೆ.

ಇದು ಒಂದು ಅತ್ಯುತ್ತಮ ಸಾವಯುವ ಕೀಟನಾಶಕವಾಗಿದೆ, ಇದನ್ನು ನಾವು ಪ್ರಾಥಮಿಕ ಹಂತಗಳಲ್ಲಿ ಬಳಸುವದರಿಂದ ಕೀಟಗಳನ್ನು ತಡೆಯಬಹುದು ಹಾಗೂ ಬೆಳೆಯನ್ನು ಆರೋಗ್ಯಕರವಾಗಿ ಇಡಬಹುದು.

ಇದು ಬೆಳೆಗಳ ಬೇರಿನ ಶಕ್ತಿಯನ್ನು ವೃದ್ಧಿಸುತ್ತದೆ ಇದರಿಂದ ಬೆಳೆಗಳು ಭೂಮಿಯಲ್ಲಿರುವ ಪೋಷಕಾಂಶಗಳನ್ನು ಬಳಸಿಕೊಳ್ಳಲು ಸಹಾಯ ಮಾಡುತ್ತದೆ.

ಇದು ಗಿಡಗಳ ಬೆಳವಣಿಗೆಯಲ್ಲಿ ಹೆಚ್ಚು ವ್ಯತ್ಯಾಸವನ್ನು ತೋರಿಸುತ್ತದೆ ಹಾಗೂ ಬೆಳೆಗಳ ಕಾಂಡ ಬೆಳವಣಿಗೆಯಲ್ಲಿ ತುಂಬಾ ಸಹಾಯಕಾರಿಯಾಗುತ್ತದೆ.

ಲೇಖಕರು: ಚಿನ್ನಪ್ಪ ಎಸ್. ಅಂಗಡಿ

Published On: 17 November 2020, 08:46 PM English Summary: Benefits of panchagavya

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.