1. ಸುದ್ದಿಗಳು

ಬರೀ ಒಂದೇ ತಿಂಗಳಲ್ಲಿ, ಇಂತಹ ತರಕಾರಿಗಳನ್ನು ಬೆಳೆಸಬಹುದು

ನಿಮಗೆ ಕ್ಯಾರೆಟ್ ಎಂದರೆ ತುಂಬಾ ಇಷ್ಟವೆಂದಿದ್ದರೆ ಆಗ ನೀವು ಇದರಲ್ಲಿ ವೈವಿಧ್ಯವಾಗಿರುವುದನ್ನು ನೋಡಿ, ಬೇಗ ಬೆಳೆಯುವುದನ್ನು ಆಯ್ಕೆ ಮಾಡಿಕೊಳ್ಳಬೇಕು. ನೀವು ಒಂದು ಪ್ಲಾಸ್ಟಿಕ್ ಬಾಲ್ಡಿಯಲ್ಲಿ ಅಥವಾ ನೇರವಾಗಿ ಮಣ್ಣಿನಲ್ಲಿ ಬೇಬಿ ಕ್ಯಾರೆಟ್ ನ್ನು ಬೀಜಗಳನ್ನು ಬಿತ್ತನೆ ಮಾಡಿ. ಬೇಬಿ ಕ್ಯಾರೆಟ್ ನ ಬೀಜಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಇದಕ್ಕೆ ನೀವು ಹೆಚ್ಚಿನ ಆರೈಕೆ ಮಾಡಬೇಕಾದ ಅಗತ್ಯವೂ ಇಲ್ಲ. 2-3 ದಿನಕ್ಕೊಮ್ಮೆ ನೀವು ನೀರು ಹಾಕಿದರೆ ಮುಂದಿನ 30 ದಿನಗಳಲ್ಲಿ ಬೇಬಿ ಕ್ಯಾರೆಟ್ ಬೆಳೆದಿರುವುದು. ನೆನಪಿಡಿ ಕ್ಯಾರೆಟ್‌ಗಳ ಬೆಳವಣಿಗೆಯ ಪ್ರಾಥಮಿಕ ಹ೦ತಗಳಲ್ಲಿ ಅವುಗಳಿಗೆ ಪೂರ್ಣವಾಗಿ ಸೂರ್ಯನ ಬೆಳಕು ದೊರೆಯುವ೦ತೆ ನೋಡಿಕೊಳ್ಳಬೇಕು. ಕೆಲವು ತಳಿಗಳ೦ತೂ ಭಾಗಶ: ಸೂರ್ಯನ ಬೆಳಕಿನಲ್ಲಿಯೂ ಸಹ ಬೆಳೆಯಬಲ್ಲವು. ಆದರೆ, ನಿಮಗೆ ಉತ್ತಮ ಇಳುವರಿ ಬೇಕೆ೦ದಾದಲ್ಲಿ, ನೀವು ಗಿಡಗಳಿಗೆ ಸೂರ್ಯನ ಬೆಳಕು ಪೂರ್ಣಪ್ರಮಾಣದಲ್ಲಿ ಸಿಗುವ೦ತೆ ನೋಡಿಕೊಳ್ಳಬೇಕು. ತುಸು ಆಮ್ಲೀಯವಾಗಿರುವ ಮಣ್ಣಿನಲ್ಲಿ ಕ್ಯಾರೆಟ್‌ಗಳು ಅತ್ಯುತ್ತಮವಾಗಿ ಬೆಳೆಯುತ್ತವೆ. ಬೀಜಗಳನ್ನು ಬಿತ್ತುವ ಮೊದಲು, ಮಣ್ಣು ಸಡಿಲವಾಗಿರುವುದನ್ನು ಖಚಿತಪಡಿಸಿಕೊಳ್ಳಿರಿ. ಅ೦ತೆಯೇ, ಮನತಣಿಸುವಷ್ಟು ಪ್ರಮಾಣದಲ್ಲಿ ಇಳುವರಿಯನ್ನು ಪಡೆಯಲು ಸಾವಯವ ಗೊಬ್ಬರ ಅಥವಾ ಕೊಟ್ಟಿಗೆ ಗೊಬ್ಬರವನ್ನು ಬಳಸುವುದು ತು೦ಬಾ ಅಗತ್ಯ.
 

ಮೂಲಂಗಿ:

ಹಲವಾರು ರೀತಿಯ ಪೋಷಕಾಂಶಗಳನ್ನು ಹೊಂದಿರುವಂತಹ ಮೂಲಂಗಿಯನ್ನು ಭಾರತೀಯರು ಹೆಚ್ಚಾಗಿ ಬಳಸುತ್ತಾರೆ. ಇದನ್ನು ಸಲಾಡ್ ಮತ್ತು ಖಾದ್ಯಗಳಲ್ಲಿ ಬಳಕೆ ಮಾಡಲಾಗುತ್ತದೆ. ಮೂಲಂಗಿ ಬೆಳೆಯಲು ನಿಮಗೆ ಇದೇ ರೀತಿಯ ಹವಾಮಾನ ಬೇಕೆಂದಿಲ್ಲ. ಯಾವುದೇ ಹವಾಮಾನದಲ್ಲೂ ಇದನ್ನು ಬೆಳೆಯಬಹುದು. ಮಣ್ಣಿನಲ್ಲಿ ಮೂಲಂಗಿ ಬೀಜಗಳನ್ನು ಬಿತ್ತನೆ ಮಾಡಿ ಮತ್ತು ಇದಕ್ಕೆ 1-2 ದಿನಕ್ಕೊಮ್ಮೆ ನೀರು ಹಾಕಿ. ಮೂಲಂಗಿಯು 25 ದಿನಗಳಲ್ಲಿ ಬೆಳೆಯುತ್ತದೆ. ಕೆಲವೊಮ್ಮೆ ಇದು 30 ದಿನ ಕೂಡ ತೆಗೆದುಕೊಳ್ಳಬಹುದು.

ಸೌತೆಕಾಯಿ:

ಸೌತೆಕಾಯಿಯನ್ನು ಹೆಚ್ಚಾಗಿ ಹಸಿಯಾಗಿಯೇ ತಿನ್ನಲು ಇಷ್ಟಪಡುವರು. ಇದನ್ನು ಹಾಗೆ ತಿನ್ನಬಹುದು ಅಥವಾ ಬೇರೆ ಖಾದ್ಯಗಳು, ಸಲಾಡ್ ಮಾಡಿ ತಿನ್ನಬಹುದು. ಇದು ವರ್ಷದ ಯಾವುದೇ ಋತುವಿನಲ್ಲೂ ಬೆಳೆಯುವುದು. ಸೌತೆಕಾಯಿಗೆ ಹೆಚ್ಚಿನ ಸ್ಥಳ ಬೇಕಾಗುವುದು. ಕೈದೋಟದಲ್ಲಿ ಸೌತೆಕಾಯಿ ಬಳ್ಳಿ ಹೋಗಲು ನೀವು ಜಾಗ ಮಾಡಿಕೊಡಬೇಕು. 3-4 ವಾರಗಳಲ್ಲಿ ಸೌತೆಕಾಯಿ ಬಳ್ಳಿಯು ಹೂ ಬಿಟ್ಟು ಹಣ್ಣು ನೀಡುವುದನ್ನು ನೋಡಬಹುದು.

ಬಸಲೆ:

ನಿಮ್ಮ ಆಹಾರಕ್ರಮದಲ್ಲಿ ತುಂಬಾ ಆರೋಗ್ಯಕರ ಆಹಾರವಾಗಿರುವಂತಹ ಬಸಲೆಯು 4-5 ವಾರಗಳಲ್ಲಿ ಬೆಳೆಯುವುದು. ಬಸಲೆ ಬೀಜಗಳನ್ನು ತಂದು ಅದನ್ನು ನೀವು ಒಳ್ಳೆಯ ಮಣ್ಣಿನಲ್ಲಿ ಬಿತ್ತನೆ ಮಾಡಿ. ಯಾರಾದರೂ ಬಸಲೆ ಬೆಳೆದಿದ್ದರೆ ಅದರ ತುಂಡನ್ನು ತಂದು ನೆಟ್ಟರೂ ಇದು ಬೆಳೆಯುವುದು. ಆದರ ಪ್ರತಿನಿತ್ಯವೂ ನೀವು ಇದಕ್ಕೆ ನೀರು ಹಾಕಬೇಕು. ನೀವು ಇದನ್ನು ಸರಿಯಾಗಿ ಮಾಡಿಕೊಂಡರೆ ಕೆಲವೇ ವಾರಗಳಲ್ಲಿ ಹಸಿರು ತರಕಾರಿಯು ಬೆಳೆದು ನಿಮ್ಮ ಕಣ್ಣಿಗೆ ಖುಷಿ ನೀಡುವುದು.

ಅವರೆ:

ಬೇರೆ ರೀತಿಯ ಬೀನ್ಸ್ ಗಳಿಗೆ ಹೋಲಿಸಿದರೆ ಅವರೆಯು ಬೇಗನೆ ಬಳೆಯುವುದು ಮತ್ತು ಇದರಲ್ಲಿ ಹಲವಾರು ರೀತಿಯ ಪೋಷಕಾಂಶಗಳು ಇವೆ. ಕೈದೋಟದ ಸೌಂದರ್ಯದ ಬಗ್ಗೆ ನೀವು ಹೆಚ್ಚು ಗಮನಹರಿಸುವಿರಾದರೆ ಆಗ ನೀವು ಖಂಡಿತವಾಗಿಯೂ ಇದನ್ನು ಬೆಳೆಸಲೇಬೇಕು. ಬಿತ್ತನೆ ಮಾಡಿದ 20 ದಿನಗಳಲ್ಲಿ ಇದು ನಿಮ್ಮ ಕೈದೋಟಕ್ಕೆ ಹಸಿರು ಸೌಂದರ್ಯವನ್ನು ನೀಡುವುದು. ಕೈದೋಟದ ಸೌಂದರ್ಯ ಮತ್ತು ತರಕಾರಿಗಳಲ್ಲಿ ಸಿಗುವಂತಹ ಹಲವಾರು ರೀತಿಯ ಪೋಷಕಾಂಶಗಳ ಬಗ್ಗೆ ನೀವು ಚಿಂತೆ ಮಾಡುತ್ತಲಿದ್ದರೆ ಆಗ ನೀವು ಖಂಡಿತವಾಗಿಯೂ ಕೈದೋಟದಲ್ಲಿ ಅವರೆ ಬೆಳೆಯಲೇಬೇಕು.

Published On: 30 September 2018, 06:05 PM English Summary: Vegetables can be grown in just one month

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.