1. ಸುದ್ದಿಗಳು

ಕೃಷಿ ಕ್ಷೇತ್ರದಲ್ಲಿ ಇಸ್ರೇಲ್ ಸಾಧನೆ- ಇಸ್ರೇಲ್ ರಾಯಭಾರಿಯೊಂದಿಗೆ ನೇರ ಸಂವಾದ:

Israel Agriculture

ವಿಶ್ವದಾದ್ಯಂತ ಇಸ್ರೇಲಿ ತಂತ್ರಜ್ಞಾನವನ್ನು ಅಳವಡಿಸಿಕೊಂಡಿರುವ ಬಗ್ಗೆ ಮಾಹಿತಿಗಳು ಸಾಧನೆಯ ಕಥೆಗಳಂತೆ ಹರಡುತ್ತಿದೆ. ಇದರ ಪ್ರಾಯೋಗಿಕತೆಯು ರೈತರ ಬ್ಯಾಂಕ್ ಖಾತೆಯಲ್ಲಿ ಏರಿಕೆ ಕಂಡು ಬಂದಿರುವುದು ಸ್ಪಷ್ಟವಾಗಿದೆ. ಭಾರತದಲ್ಲಿ ಇಸ್ರೇಲಿ `ತಂತ್ರಜ್ಞಾನದ ಪ್ರಭಾವ` ಕುರಿತು ದೆಹಲಿಯಲ್ಲಿರುವ ಇಸ್ರೇಲ್ ರಾಯಬಾರಿ ಕಚೇರಿಯಲ್ಲಿ 4ವರ್ಷ ಅವಧಿ ಮುಗಿಸಿರುವ ರಾಯಭಾರಿ ಡೇನಿಯಲ್‍ಕಾರ್ಮ್ ನೇರ ಸಂವಾದದಲ್ಲಿ ಪಾಲ್ಗೊಂಡರು. ನವದೆಹಲಿ ಹಾಗೂ ಜೆರುಸೆಲೆಮ್ ರಾಯಭಾರಿ ಕಚೆರಿಗಳ ಸಂಬಂಧ ಯಶಸ್ವಿಯಾಗಿ 70ವರ್ಷ ಪೂರೈಸಿ ಮುಂದುವರೆದಿದೆ. ಈ ಬಾರಿಯ `ಇಸ್ರೇಲ್ ಸ್ಪೆಷಲ್` ಆವೃತಿಯಲ್ಲಿ ಕೃಷಿ ವಿಶ್ವವು `ಡೇನಿಯಲ್‍ಕಾರ್ಮ್‍ರೊಂದಿಗೆ ಸಂವಾದ` ಕಾರ್ಯಕ್ರಮ ಏರ್ಪಡಿಸಿ ಭಾರತ ಮತ್ತು ಇಸ್ರೇಲ್ ನಡುವಿನ ಕೃಷಿ ಅಭಿವೃದ್ಧಿಯಲ್ಲಿ ಸಹಕಾರದ ಆಂತರಿಕತೆಗಳನ್ನು ಹೊರತರುವ ಪ್ರಯತ್ನ ನಡೆಸಿತು.

ಪ್ರಶ್ನೆ: ಇಸ್ರೇಲ್ ದೇಶ ಸ್ವಾತಂತ್ರ್ಯ ಹೊಂದಿದ ನಂತರದಲ್ಲಿ ಸಾಧಿಸಿದ ಕೃಷಿ ಬೆಳವಣಿಗೆಗೆ ಸವೆಸಿದ ಹಾದಿ ಹೇಗಿತ್ತು?

 ಉತ್ತರ: ಇಸ್ರೇಲ್ ದೇಶವು 1948ರಲ್ಲಿ ಸ್ವಾತಂತ್ರ್ಯ ಗಳಿಸಿ ಸ್ವಯಂ ಶಕ್ತಿಯೊಂದಿಗೆ ಬೆಳೆಯುವುದಕ್ಕೆ ಮುಂದಾಯಿತು. ಪ್ರಪಂಚದ ವಿವಿಧ ಭಾಗಗಳಿಂದ ಹಲವು ವಿಭಾಗಗಳ ವ್ಯಕ್ತಿ ಸಮೂಹವನ್ನು ದೇಶಕ್ಕೆ ಕರೆತಂದು ಹೋಸ ಜೀವನ ಹಾಗೂ ಅವರುಗಳಿಗೆ ಹೊಸ ಆಲೋಚನೆಗಳನ್ನು ಕಲಿಸಲು ದೇಶ ಮುಂದಾಯಿತು. ಮೂಲಬೂತ ಸೌಕರ್ಯಗಳಿಗೆ ಆಧ್ಯತೆ, ಉತ್ತಮ ಶಿಕ್ಷಣ ವ್ಯವಸ್ಥೆ, ಆರೋಗ್ಯ, ಆಡಳಿತ ಮುಂತಾದ ಅಗತ್ಯಗಳ ಉನ್ನತೀಕರಣ ಪ್ರಯತ್ನಗಳ ಸಾಕಾರ ಯಶನೀಡುವಂತೆ ಮಾಡಲಾಯಿತು. ವಿಶ್ವದ ನಾನಾ ಭಾಗಗಳಿಂದ 6ಲಕ್ಷ ಮಂದಿಯನ್ನು ಇಸ್ರೇಲ್ ದೇಶದ ಕೃಷಿಯಲ್ಲಿ ತೊಡಗಿಸಿ ಕೇವಲ 5-6ವರ್ಷಗಳಲ್ಲಿ ಈ ಸಂಖ್ಯೆ 28ಲಕ್ಷಕ್ಕೆ ಏರುವಂತೆ ಮಾಡುವುದರ ಜತೆಗೆ ಕೃಷಿ ಉತ್ಪಾದನೆಯ ಹೆಚ್ಚಳದ ಕಡೆಗೆ ಹೆಚ್ಚು ಗಮನ ಹರಿಸಲಾಯಿತು. ಈ ಹಿನ್ನಲೆಯಲ್ಲಿ ಇಸ್ರೇಲ್ ದೇಶದಿಂದ ಹೊರಗಿದ್ದ ಯಹೂದಿಗಳನ್ನು ಮರಳಿ ತರಲು ಇರುವ ನೀತಿ-ಸಮಸ್ಯೆಗಳನ್ನು ನಿವಾರಣೆ ಮಾಡಿ ದೇಶದ ಸರ್ವತೋಮುಖ ವಿಕಸನಕ್ಕೆ ಮುಂದಾಗಲು ನಾಂದಿಯಾಯಿತು.

ಕೃಷಿ ಕ್ಷೇತ್ರದಲ್ಲಿ ಮೊದಲು ಹಣ್ಣು ಮತ್ತು ತರಕಾರಿಗಳು ಹಾಗೂ ಅತ್ಯಂತ ಆಸಕ್ತದಾಯಕವಾದ ಹೈನುಗಾರಿಕೆ ಮತ್ತು ಡೈರಿ ಉದ್ಯಮವನ್ನು ಅಳವಡಿಸಲಾಯಿತು. ಇದೇ ಮಾದರಿಯನ್ನು ವಿಶ್ವದ ಹಲವು ದೇಶಗಳು ಅನುಕರಿಸಿ ಯಶಸ್ವಿಯಾಗಿವೆ. ನೂತನ ಪರಿಕಲ್ಪನೆಯೊಂದಿಗೆ ಡೈರಿ ಉದ್ಯಮವನ್ನು ರೂಪಿಸಿ, ಗೌರವಯುತವಾಗಿ ಜಾನುವಾರು ಮತ್ತು ಪ್ರಾಣಿಗಳ ಆರೋಗ್ಯ ಕಾಪಾಡುವುದು ಡೈರಿ ಉದ್ಯಮದ ಯಶಸ್ವಿಗೆ ಕಾರಣವಾಯಿತು. ಜೆರುಸೆಲಂ ಸ್ವತಂತ್ರ ರಾಜ್ಯವಾಗಿರುವುದರಿಂದ ಆಹಾರ ಭದ್ರತಾ ವಲಯವೂ ಸ್ವತಂತ್ರವಾದರೂ ದೇಶದ ನೀತಿ-ನಿಯಮಗಳ ಚೌಕಟ್ಟಿನಲ್ಲಿ ಅಭಿವೃದ್ಧಿ ಸಾಧಿಸಲು ಸಹಕಾರವಾಗಿದೆ.

ಪ್ರಶ್ನೆ: ಪ್ರಜಾಪ್ರಭುತ್ವವಾದಿ ಮತ್ತು ಸರ್ಕಾರವು ವಾಸ್ತವಾಗಿ ಕೃಷಿ ಜಗತ್ತಿನಲ್ಲಿ ಅತ್ಯಂತ ಆರ್ಥಿಕೊನ್ನತಿಗಾಗಿ ಅಳವಡಿಸಿಕೊಂಡ ನೀತಿ ಪ್ರೇರಣೆಗಳೇನು?

ಉತ್ತರ: ಸಾಮಾನ್ಯವಾಗಿ ತನ್ನ ಬದುಕನ್ನು ರೂಪಿಸಿಕೊಳ್ಳಲು ರೈತ ಮುಂದಾಗುತ್ತಾನೆ. ಇದು ಸ್ವಾಭಾವಿಕವೂ ಹೌದು. ಪಾರದರ್ಶಕತೆ ಮತ್ತು ತಂತ್ರಜ್ಞಾನ ವರ್ಗಾವಣೆಯ(ಅನುಸರಣೆ) ನೀತಿಯಿಂದ ರೈತರು ಲಾಭದಾಯಕ ಕೃಷಿ ಕಡೆಗೆ ಹೆಚ್ಚು ಗಮನಹರಿಸಲು ಮುಂದಾದರು. ದೇಶದ ರೈತರ ಬೆಳವಣಿಗೆಗಾಗಿ ಕೃಷಿ ಮಾಹಿತಿ ಕೇಂದ್ರಗಳ ಸಂಪರ್ಕಕ್ಕೆ ಆಕರ್ಷಣೆ ಮಾಡಿದ್ದರಿಂದ ಕೃಷಿ ವಲಯದ ಬೆಳೆವಣಿಗೆಯ ಪ್ರಮುಖ ಅಂಶವಾಯಿತು.

 ಇಸ್ರೇಲ್‍ನಿಂದ ಹೊರಗಿದ್ದ ಯಹೂದಿ ಸಮುದಾಯವನ್ನು ತವರಿಗೆ ಕರೆತಂದು ಜೀವನ ಮರುನಿರ್ಮಾಣ ಕಲ್ಪನೆಯನ್ನು ಅನುಸರಿಸಿ ಅನುಷ್ಠಾನಗೊಳಿಸಲಾಯಿತು. ಯಹೂದಿಗಳು ದೇಶದಿಂದ ದೂರದ ಬೇರೆ, ಬೇರೆ ನಗರಗಳಿಗೆ ಹೋದಾಗ ಕೃಷಿಯ ಕಡೆಗೆ ಗಮನ ನೀಡದವರಾಗಿದ್ದರಿಂದ ಇವರನ್ನು ಕೃಷಿ ಕಾಯಕಕ್ಕೆ ತೊಡಗಿಸಲು ಕಷ್ಟವಾಯಿತು. ಆದರೂ ಕೃಷಿಯಲ್ಲಿ ತೊಡಗುವಂತೆ ಮಾಡುವಲ್ಲಿ ಸಫಲವಾಯಿತು. ದೇಶದ ಆರ್ಥಿಕತೆಯ ಅಗತ್ಯಗಳನ್ನು ಅರ್ಥೈಸಿಕೊಳ್ಳುವಂತೆ ಪ್ರೇರಿಪಿಸಲಾಯಿತು. ಆಶಾದಾಯಕ ಜೀವನ ವಿಧಾನಕ್ಕಾಗಿ ಇಸ್ರೇಲ್‍ನಲ್ಲಿ ಕಿಬ್ಬುಟ್ಜ್ ಅಭಿವೃದ್ಧಿಪಡಿಸಲಾಯಿತು. ಸಾಂಪ್ರದಾಯಿಕ ಕೃಷಿಯ ಆಧಾರದ ಮೇಲೆ ಇಸ್ರೇಲ್‍ನಲ್ಲಿ ಕಿಬ್ಬುಟ್ಜ್ ಒಂದು ಸಮೂಹ ಸಮುದಾಯವಾಯಿತು. ಇದರಿಂದ ಇತರೆ ಆರ್ಥಿಕ ಶಾಖೆಗಳಿಂದ ಕೃಷಿಯನ್ನು ಭಾಗಶ: ಆಕ್ರಮಿಸಿಕೊಂಡಿತು. ಆದರೆ, ಸಮಾಜದವಾದದ ಸಿದ್ಧಾಂತದ ಆಧಾರದ ಮೇಲೆ ಆದರ್ಶ ಸಮುದಾಯಗಳಂತೆ ಕಾರ್ಯೊನ್ಮುಕವಾಯಿತು.

ಪ್ರಶ್ನೆ: ಕೃಷಿ ಸಹಕಾರ ಚುಟುವಟಿಕೆಗಳಲ್ಲಿ ಭಾರತ ಮತ್ತು ಇಸ್ರೇಲ್ ಕೈಜೋಡಿಸಿಕೊಂಡಿದ್ದು ಎರಡೂ ದೇಶಗಳ ಅನುಭವಗಳೇನು? ಈ ಪ್ರಕ್ರಿಯೆಯಲ್ಲಿ ಇಸ್ರೇಲ್, ಭಾರತೀಯ ಭೂಮಿಯೊಂದಿಗಿನ ಅಭಿವೃದ್ಧಿ ಸಾಕ್ಷೀಕರಣ ಹೇಗಿತ್ತು?

ಉತ್ತರ: ಭಾರತ-ಇಸ್ರೇಲ್ ಸಹಕಾರವು ಹೆಚ್ಚುತ್ತಿರುವ ಉತ್ಪನ್ನಗಳು ಇಸ್ರೇಲ್‍ನ ಶಿಸ್ತು ಪಾಲನೆಗೊಂದು ಉದಾಹರಣೆಯಾಗಿದೆ. ತಾಂತ್ರಕ ಜ್ಞಾನವನ್ನು ಹಂಚಿಕೊಳ್ಳಲು ಮುಂದಾದ ದೆಹಲಿಯೊಂದಿಗಿನ ಸಂಬಂಧಕ್ಕೆ ಜೆರುಸಲೆನ್‍ಗೆ ಹೆಮ್ಮಯಿದೆ. ಅತ್ಯಂತ ಸಂತೋಷದಿಂದ ಕಾರ್ಯನಿರ್ವಹಣೆಗೂ ಮುಂದಾಗಿದೆ. ಕೃಷಿ ವಲಯದಲ್ಲಿ ಇಸ್ರೇಲ್ ಗಳಿಸಿದ್ದ ಪರಿಣಿತಿಯು ಐಐಎಪಿ, ಇಂಡೋ-ಇಸ್ರೇಲ್ ಕೃಷಿ ಉತ್ಪನ್ನಗಳ ರಚನಾತ್ಮಕಗಳನ್ನು ಪುನರಾವರ್ತಿಸಲು ಬಯುಸುತ್ತದೆ. ಕಳೆದ 10ವರ್ಷಗಳಲ್ಲಿ ಕೃಷಿ ಮತ್ತು ಕೃಷಿ ಇಲಾಖಾ ಸಚಿವಾಲಯದೊಂದಿಗೆ ಮಾಶಾವ್ ನೇತೃತ್ವದ ಸಹಕಾರ ರೈತರ ಜೀವನದಲ್ಲಿ ದೃಢವಾದ ಬದಲಾವಣೆಯನ್ನು ತಂದಿದೆ.

 ಭಾರದಲ್ಲಿ ಈವರೆಗೂ 22 ಎಕ್ಸಲೆನ್ಸ್(ಸಿಇಇ)ಸೆಂಟರ್‍ಗಳು ಸಂಪೂರ್ಣವಾಗಿ ಕೃಷಿ ಕ್ಷೇತ್ರದ ಅಭ್ಯುಯಕ್ಕಾಗಿ ಕಾರ್ಯನಿರ್ವಹಿಸುತ್ತಿವೆ. ಕೃಷಿ ಸಹಕಾರಕ್ಕಾಗಿ ಇಸ್ರೇಲ್ ತಂತ್ರಜ್ಞಾನವನ್ನು ಭಾರತೀಯ ಕೃಷಿ ಸಮುದಾಯಕ್ಕೆ ನೀಡುತ್ತಿದೆ. ಈ ತಂತ್ರಜ್ಞಾನಗಳನ್ನು ಬೇರೆಲ್ಲಿಂದಲೂ ನಕಲು ಮಾಡದೆ ಅಗತ್ಯಕ್ಕೆ ತಕ್ಕಂತೆ ಮಾಪ್ರ್ಟಾಟಿನಿಂದ  ಅಳವಡಿಸಲ್ಪಟ್ಟಿವೆ ಎಂಬುದು ವಿಶೇಷ. ಸಿಇಇ ಕೇಂದ್ರದ ಮೂಲಕ ಟೊಮೆಟೊ, ಮಾವಿನಹಣ್ಣು, ಹೂಗಳು ಹಾಗೂ ಜೇನು ಸಾಕಾಣಿಕೆಯಲ್ಲಿ `ಕೀಪಿಂಗ್` ತಂತ್ರಜ್ಞಾನದಿಂದ ವಿವಿಧ ಉತ್ಪನ್ನ ಗಳನ್ನೂ ಅಭಿವೃದ್ಧಿಪಡಿಸಲಾಗುತ್ತಿದೆ. ಉತ್ತರ ಭಾರತದ ರಾಜ್ಯವಾದ ಹರಿಯಾನದಲ್ಲಿ ಡೈರಿ ಫಾರ್ಮ್ ಅಭಿವೃದ್ಧಿಗೆ ವಿಶೇಷ ಸಹಕಾರವನ್ನೂ ನೀಡಲಾಗುತ್ತಿದೆ. ಇಸ್ರೇಲ್‍ನ ಹೊಸ ಹೊಸ ಮಾದರಿ ತಂತ್ರಜ್ಞಾನಗಳನ್ನು ಹೊಸ ಕಲ್ಪನೆಗಳೊಂದಿಗೆ ಭಾರತದಲ್ಲಿ ಅನುಷ್ಟಾನಗೊಳಿಸುವುದು ಮುಖ್ಯ ಉದ್ದೇಶವಾಗಿದೆ. ಈ ಬಗ್ಗೆ ಎರಡೂ ದೇಶಗಳ ಸಂಪೂರ್ಣ ಸಹಕಾರಗಳಿಗೆ ಖಾಸಗಿ ಸಹಭಾಗಿತ್ವವೂ ಬೇಕಿದೆ. 2017ರಲ್ಲಿ ಇಸ್ರೇಲ್ ಹಾಗೂ ಭಾರತದ ಪ್ರಧಾನಮಂತ್ರಿಗಳಿಬ್ಬರೂ ಗುರಾತಿನಲ್ಲಿ ಭೇಟಿಯಾಗಿದ್ದರು. ಇಸ್ರೇಲ್ ತಂತ್ರಜ್ಞಾನದ ಪರವಾಗಿ ಭಾರತೀಯ ರೈತರ ಪ್ರಶಂಷೆಗಳು ಕಂಡುಬಂದಿವೆ. ಇಸ್ರೇಲ್ ತಂತ್ರಜ್ಞಾನವನ್ನು ರೈತ ಸಮೂಹ ತಮ್ಮ ವೃತ್ತಪರತೆಯಲ್ಲಿ ಹೆಚ್ಚಾಗಿ ಅಳವಡಿಸಿಕೊಳ್ಳುವುದರಿಂದ ಆದಾಯವನ್ನು 2-3ಪಟ್ಟು ಹೆಚ್ಚಿಸಿಕೊಳ್ಳಬಹುದಾಗಿದೆ.

ಪ್ರಶ್ನೆ: ಇಸ್ರೇಲ್ ತನ್ನ ಕೃಷಿ ಸಂಶೋದನೆಗಾಗಿಯೇ ಹೆಚ್ಚುವರಿಯಾಗಿ ಹೂಡಿಕೆ ಮಾಡುತ್ತಿರುವುದು ವಿಶ್ವದಲ್ಲೆ ಹೆಸರುಗಳಿಸಿದೆ. ಕೃಷಿಯಲ್ಲಿ ಎಷ್ಟರ ಮಟ್ಟಗೆ ಸಾಧನೆಯಾಗಿದೆ?

 ಉತ್ತರ: ಹೊಸ ಸಂಶೋಧನೆಗಳಲ್ಲಿ ಇಸ್ರೇಲ್ ಹೆಚ್ಚುವರಿಯಾಗಿ ಹೂಡಿಕೆ ಮಾಡುತ್ತಿದೆ. ಪ್ರಸ್ತುತದ ಜಿಡಿಪಿಗಿಂತ ಶೇ4%ರಷ್ಟು ಹೆಚ್ಚಾಗಿ ಹೆಚ್ಚುವರಿ ಸಂಶೋದನೆ ಮತ್ತು ಅಭಿವೃದ್ಧಿಗೆ ಸಂಬಂಧಿಸಿದೆ. ಇದರಲ್ಲಿ ಪ್ರಮುಖವಾಗಿ ಕೃಷಿ ಅಭಿವೃದ್ಧಿಗೆ ಮೊದಲ ಪ್ರಾಶಸ್ಯ. ನೀರಾವರಿ ತಂತ್ರಜ್ಞಾನದ ವಿಕಸನ, ಉತ್ತಮ ತಳಿಗಳ ಅಭಿವೃದ್ಧಿ, ಉತ್ತಮ ಫಸಲು ಮತ್ತು ಮಣ್ಣಿನ ಫಲವತ್ತತೆಗೆ ತಂತ್ರಗಳು, ಕಡಿಮೆ ಭೂಮಿಯಲ್ಲಿ ಕಿನಿಷ್ಟ ನೀರಿನ ಬಳಕೆಯಿಂದ ಹೆಚ್ಚು ಉತ್ಪಾದನೆಗಾಗಿ ಆಯ್ದ ಪ್ರದೇಶಗಳನ್ನು ಗುರುತಿಸಲಾಗಿದೆ. ಇಸ್ರೇಲ್‍ನ ಒಟ್ಟಾರೆ ಅರ್ಥವ್ಯವಸ್ಥೆಯನ್ನು ಗಮನಿಸಿದರೆ, ಇಲ್ಲಿ ಕಡಿಮೆ ಕೊಡುಗೆಯ ತುಲನಾತ್ಮಕ ಫಲಿತಾಂಶಕ್ಕಾಗಿಯೇ ಕೃಷಿ ಸಂಶೋಧನೆ ನಡೆಸಲಾಗುತ್ತಿದೆ. ಇದರ ಅರ್ಥವೇನೆಂದರೆ, ಕೃಷಿ ನಿರ್ವಹಣೆಯಲ್ಲಿ ಅತ್ಯಾಧುನಿಕ ವಿಧಾನಗಳನ್ನು ಬಳಸುವುದು, ಮಾರ್ಗದರ್ಶಿ, ಸಾಧನಗಳು ಮತ್ತು ನಿರ್ವಹಣೆ ಮುಖ್ಯ ಪಾತ್ರವಹಿಸುತ್ತವೆ.

 ದೇಶದ ರೈತರು ಸರ್ಕಾರದ ಭಾಗವಾಗಿರಬೇಕು. ಕೃಷಿ ಕ್ಷೇತ್ರದ ಪರಿಣಿತರು ಒಂದಿಲ್ಲೊಂದು ರೀತಿಯಲ್ಲಿ ಕೃಷಿ ಸೇವೆಗಾಗಿ ಕಾರ್ಯಕ್ರಮ ರೂಪಿಸಿಕೊಡುತ್ತಾರೆ. ಅವು ಕೃಷಿ ಕ್ಷೇತ್ರಕ್ಕೆ ಹೊಸ ತಂತ್ರಜ್ಞಾನಗಳು ಮತ್ತು ಬೆಳವಣಿಗೆಗಳ ಬಗ್ಗೆ ಅರಿವು ಮೂಡಿಸುತ್ತವೆ. ಜತೆಗೆ, ಇಸ್ರೇಲ್ ಕೃಷಿಯಲ್ಲಿ ಮಾನವ ಶಕ್ತಿ ಬಳಕೆ ಅತಿ ಕಡಿಮೆ. ಇವೆಲ್ಲವನ್ನೂ ತುಲನಾತ್ಮಕವಾಗಿ ಚಿಂತನೆ ನಡೆಸಲಾಗುತ್ತದೆ. ಇದರಿಂದ ದೇಶದ ಅಭಿವೃದ್ಧಿಯ ಆರ್ಥಿಕತೆಯ ಭಾಗವಾಗಿಯೂ ಇರುತ್ತದೆ. ಮಾನವಶಕ್ತಿಯನ್ನು ಐಟಿ-ಸೈಬರ್ ಸಂಶೋಧನೆಮ ಸಂವಹನ, ಆರೋಗ್ಯ ಪರಿಹಾರ,.. ಇತರೆಗಳಿಗೆ ಹೊಸ ವಲಯಗಳ ಸೃಷ್ಠಿಗೂ ಸಹಕಾರವಾಗುತ್ತದೆ.

 ಇಸ್ರೇಲ್ ಮರುಭೂಮಿಯಲ್ಲಿ ಹೂಗಳು ಎಂದಾಗ ಆಶ್ಚರ್ಯ, ಅದ್ಭುತ ಎಂದೆನಿಸುವ ಫಲಿತಾಂಶ ಒದಗುತ್ತದೆ. ಉತ್ತಮ ಹಾಗೂ ನವೀನ ನೀರಾವರಿ ವಿಧಾನಗಳು, ಹೊಸ ಜಾತಿ ಪ್ರಭೇದಗಳ ಅಭಿವೃದ್ಧಿಯನ್ನು ಹೆಚ್ಚು ಹೊಂದಿಕೊಳ್ಳಬಲ್ಲವು. ರೈತರ ನಿರೀಕ್ಷೆ ಯಾವಾಗಲೂ ಆಶಾದಾಯಕವಾಗಿರಬೇಕು. ಇಸ್ರೇಲ್‍ನಲ್ಲಿ ಸರಕು ಸಾಗಣೆಗಳು ತಮ್ಮ ಕೇಂದ್ರಗಳಲ್ಲಿ ತಂತ್ರಜ್ಞಾನದ ಮೂಲಕವೇ ಸಂಯೋಜನೆ ಮಾಡಲಾಗಿರುತ್ತದೆ. ದೇಶಕ್ಕೆ ಆಹಾರ ಒದಗಿಸುವ ರೈತರಗಳ ಸಂಖ್ಯೆ ಕ್ಷೀಣಿಸುತ್ತಿದೆ ಎಂಬ ಮಾತು ನಿಜವಾದರೂ ಇಸ್ರೇಲ್‍ಗೆ ಬೇಟಿ ನೀಡುವವರು ದೇಶದ ಹೆಚ್ಚು ಇತ್ಪನ್ನಗಳ ಪ್ರಗತಿಯಾಗುತ್ತಿರುವ ಬಗೆಗಿನ ಪ್ರಶಂಷೆಯ ಮಾತುಗಳು ಸಾಮಾನ್ಯವಾಗಿವೆ.

ಪ್ರಶ್ನೆ: ಭಾರತ ಮತ್ತು ಇಸ್ರೇಲ್ ದೇಶಗಳ ನಡುವಿನ ಕೃಷಿ ವಿನಿಮಯ ಕುರಿತ ಅಭಿಪ್ರಾಯವೇನು?

 ಉತ್ತರ: ಆಹಾರ ಭದ್ರತೆ ಆಯಾ ರಾಜ್ಯದ ಸ್ವಾತಂತ್ರವಾಗಿರುತ್ತದೆ. ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ಒದಗಿಸಲು ಅವಶ್ಯವಾದ ತಂತ್ರಜ್ಞಾನ ಮತ್ತು ವ್ಯವಸ್ಥೆಗಳ ನಿರ್ಮಾಣಗಳ ಅಗತ್ಯವಿರುತ್ತದೆ. ಇಸ್ರೇಲ್‍ನಲ್ಲಿ ಸಂಸ್ಕರಿಸಬೇಕಾದ ಕೆಲವು ಉತ್ಪನ್ನಗಳಿಗಾಗಿ ಅಗತ್ಯ ಘಟಕಗಳನ್ನು ಆಮದು ಮಾಡಿಕೊಳ್ಳುತ್ತದೆ. ಆಮದು ಉತ್ಪನ್ನಗಳಲ್ಲಿ ಮಾಂಸವು ದೊಡ್ಡಪ್ರಮಾಣದ ವಹಿವಾಟಾಗಿದೆ. ಕೆಲವನ್ನು ಹೊರತುಪಡಿಸಿ ಹೆಚ್ಚಿನ ತರಕಾರಿಗಳು ಹಾಗೂ ಹಣ್ಣುಗಳನ್ನು ಇಸ್ರೇಲ್ ದೇಶದಲ್ಲೇ ಬೆಳೆಯಲಾಗುತ್ತಿದೆ.

 ಕೃಷಿ ಕ್ಷೇತ್ರದ ಅಭಿವೃದ್ಧಿಯಲ್ಲಿ ಸದಾ ಕಲಿಕೆ ಮುಖ್ಯ. ಈ ಕ್ಷೇತ್ರ ಎರಡು ದಾರಿಯಲ್ಲಿ ಸಾಗುತ್ತಿದೆ. ಒಂದು ಕಡೆ ಇಸ್ರೇಲ್, ಭಾರತಕ್ಕೆ ಉತ್ತಮ ಹಾಗೂ ಹೊಸ ತಂತ್ರಜ್ಞಾನವನ್ನು ನೀಡುತ್ತದೆ. ಮತ್ತೊಂದೆಡೆ ಭಾರತವು ಮಾವಿನ ಕೃಷಿಯಲ್ಲಿನ ಅನುಭವ ಹಾಗೂ ಪ್ರಭಾವ ಹೊಂದಿರುವ ವಿವಿಧ ರೀತಿಯ ವಿಷಯಗಳು ನಮ್ಮ ದೇಶ ಸದಾ ಕಲಿಯುತ್ತಿರುತ್ತದೆ. ಅನಾನಸ್ ಹಣ್ಣು ಉತ್ಪಾದನೆಯಲ್ಲಿ ಇಸ್ರೇಲ್ ಹೆಸರುಪಡೆದಿದೆ. ಭಾರತವು ಮಾವಿನ ಕೃಷಿಯಲ್ಲಿ ಹೆಸರು ಮಾಡಿದೆ. ಇಸ್ರೇಲ್‍ಗೆ ಬೇಕಾಗಿರುವುದನ್ನು ಭಾರತದಿಂದ ಪಡೆಯುವುದು, ಭಾರತಕ್ಕೆ ಬೇಕಾಗಿರುವುದನ್ನು ಇಸ್ರೇಲ್‍ನಿಂದ ಒದಗಿಸುತ್ತಿರುವುದರಿಂದ ಎರಡೂ ದೇಶದ ನಡುವೆ ಉತ್ತಮ ಹೊಂದಾಣಿಗೆ ಸಾಕ್ಷಿಯಾಗಿದೆ.

Published On: 03 October 2018, 11:47 AM English Summary: Israel's achievement in the field of agriculture - Direct Conversation with the Israeli Embassy

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.