1. ಸುದ್ದಿಗಳು

Tomato Price : ಟೊಮೆಟೊ ತಿನ್ನುವುದನ್ನು ನಿಲ್ಲಿಸಿದ್ರೆ ಬೆಲೆ ಇಳಿಯುತ್ತೆ!-ಯುಪಿ ಸಚಿವೆ

Maltesh
Maltesh
UP minister controversial talk about tomato price

ಟೊಮೇಟೊ ಬೆಲೆಯು ಕಳೆದ ತಿಂಗಳಿನಿಂದ  ದೇಶದ ಬಹುಪಾಲು ರಾಜ್ಯಗಳಲ್ಲಿ 200 ರೂಪಾಯಿಯನ್ನು ದಾಟಿ ಮುಂದುವರೆಯುತ್ತಿವೆ. ಬೆಲೆ ಏರಿಕೆಯಿಂದ ಜನ ಸಾಮಾನ್ಯರು ಟೊಮೆಟೋ ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ.

ಈ ಸಂದರ್ಭದಲ್ಲಿ ಉತ್ತರ ಪ್ರದೇಶದ ಸಚಿವೆಯೊಬ್ಬರ ಟೊಮೆಟೊ ಬೆಲೆ ಏರಿಕೆ ಕುರಿತು ಅಚ್ಚರಿಯ ಹೇಳಿಕೆಯೊಂದನ್ನ ನೀಡಿದ್ದಾರೆ.  ಹೌದು ಟೊಮೆಟೊ ಬೆಲೆ ಕಡಿಮೆಯಾಗ ಬೇಕಾದರೆ ಮೊದಲು ಟೊಮೆಟ ತಿನ್ನುವುದನ್ನ ಕಡಿಮೆ ಮಾಡಿ ಎಂದು ಸಚಿವರು ಹೇಳಿದ್ದಾರೆ. ಇನ್ನೊಂದೆಡೆ ಟೊಮೆಟೊ ಬೆಲೆ ಏರಿಕೆ ಕುರಿತು ಸಚಿವರು ಮಾಡಿರುವ ಬೇಜವಾಬ್ದಾರಿ ಹೇಳಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿವೆ.

ಈ ಸಂದರ್ಭದಲ್ಲಿ ಟೊಮೆಟೊ ಕುರಿತು  ಸಾಮಾಜಿಕ ಮಾಧ್ಯಮಗಳಲ್ಲಿ ಮೀಮ್‌ಗಳು ಮತ್ತು ಚರ್ಚೆಗಳು ಮುಂದುವರಿದರೆ, ಬೆಲೆಗಳನ್ನು ನಿಯಂತ್ರಿಸುವ ಸರ್ಕಾರದ ಪ್ರಯತ್ನಗಳು ಮುಂದುವರೆದಿದೆ. ಆದರೆ.. ಬೆಲೆ ಏರಿದ್ದಕ್ಕೆ ಯಾಕೆ ಬೇಸರಗೊಂಡಿದ್ದೀರಿ.. ಸುಮ್ಮನೆ ತಿನ್ನುವುದನ್ನು ನಿಲ್ಲಿಸಿ ಎಂದು ಸಚಿವರು ಕಾಮೆಂಟ್ ಮಾಡಿದ್ದಾರೆ.

ಉತ್ತರ ಪ್ರದೇಶದ ಮಹಿಳಾ ಅಭಿವೃದ್ಧಿ ಮತ್ತು ಮಕ್ಕಳ ಕಲ್ಯಾಣ ಸಚಿವೆ ಪ್ರತಿಭಾ ಶುಕ್ಲತ್ವಾ ಅವರು ನೀವು ನಿಜವಾಗಿಯೂ ಟೊಮೆಟೊ ತಿನ್ನುವುದನ್ನು ನಿಲ್ಲಿಸಿದರೆ, ಬೆಲೆಗಳು ಸ್ವತಃ ಕಡಿಮೆಯಾಗುತ್ತವೆ ಎಂದಿದ್ದಾರೆ.

ಟೊಮೆಟೊ ದರ ಹೆಚ್ಚಾಗಿದ್ದರೆ ಜನರು ಅದನ್ನು ಮನೆಯ ಕೈತೋಟದಲ್ಲಿ ಬೆಳೆಯಲು ಯತ್ನಿಸಬೇಕು. ಆಗ ಬೆಲೆಗಳು ಅನಿವಾರ್ಯವಾಗಿ ಇಳಿಯುತ್ತವೆ. ನೀವು ಟೊಮೆಟೊ ಬದಲಿಗೆ ನಿಂಬೆಹಣ್ಣನ್ನು ಕೂಡ ಅಡುಗೆಯಲ್ಲಿ  ಬಳಸಬಹುದು ಆಗ ಬೆಲೆಗಳು ನಿಯಂತ್ರಣಕ್ಕೆ ಬರುತ್ತವೆ ಎಂದು ಅವರು ಸಲಹೆ ನೀಡಿದ್ದಾರೆ.

ಟೊಮೆಟೊ ಬೆಳೆದು  45 ದಿನದಲ್ಲಿ 4 ಕೋಟಿ ಗಳಿಸಿದ ರೈತ!

ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ 48 ವರ್ಷದ ರೈತ ಮುರಳಿ ಅವರು ಬೆಳೆದ ಟೊಮೆಟೊ ಬೆಳೆಗೆ ಜಾಕ್‌ಪಾಟ್ ಹೊಡೆದಿದೆ. ಹೌದು ಕಳೆದ ವರ್ಷದ ಟೊಮೆಟೊ ಸೀಸನ್‌ನಲ್ಲಿ  50,000 ರೂಪಾಯಿ ಗಳಿಸದ ಮುರಳಿ ಒಂದೇ ದಿನದಲ್ಲಿ 4 ಕೋಟಿ ಗಳಿಸಿದ್ದಾರೆ.

ಮುರಳಿ ಅವರ ಯಶಸ್ಸಿನ ಹಾದಿಯಲ್ಲಿ ಕಷ್ಟಗಳು ಮತ್ತು ಹಿನ್ನಡೆಗಳಿವೆ. ಕಳೆದ ವರ್ಷ, ಟೊಮೆಟೊ ಬೆಲೆ ಕುಸಿತವು ಅವರ ಕುಟುಂಬವನ್ನು ಭಾರೀ ಸಾಲಕ್ಕೆ ತಳ್ಳಿತು. ಆದಾಗ್ಯೂ, ಸುಧಾರಿತ ವಿದ್ಯುತ್ ಸರಬರಾಜು, ಉತ್ತಮ ಬೆಳೆ ಗುಣಮಟ್ಟ ಮತ್ತು ಅನುಕೂಲಕರ ಬೆಲೆಗಳ ಸಂಯೋಜನೆಯು ಅವರ ಅದೃಷ್ಟವನ್ನು ತಿರುಗಿಸಿತು. ಇದರೊಂದಿಗೆ ತಿಂಗಳಲ್ಲೇ ಕೋಟ್ಯಾಧಿಪತಿಯಾದರು.

Published On: 31 July 2023, 11:30 AM English Summary: UP minister controversial talk about tomato price

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.