1. ಸುದ್ದಿಗಳು

ಬೆಳ್ಳಿತೆರೆಯ ಮೇಲೆ ಸಿದ್ದರಾಮಯ್ಯ ಜೀವನ ಚರಿತ್ರೆ: ಸಿದ್ದು ಪಾತ್ರದಲ್ಲಿ ನಟಿಸೋರು ಯಾರು ಗೊತ್ತಾ?

Maltesh
Maltesh
Siddaramaiah biopic! who is the hero

ಪ್ರಸಿದ್ಧ ವ್ಯಕ್ತಿಗಳ ಜೀವನಚರಿತ್ರೆ ಸೆಲೆಬ್ರಿಟಿಗಳ ಜೀವನ ಚರಿತ್ರೆಯನ್ನು ಸಿನಿಮಾ ಮಾಡುವ ಟ್ರೆಂಡ್ ಈಗ ಹೆಚ್ಚುತ್ತಿದೆ. ತಮಿಳುನಾಡು ಮುಖ್ಯಮಂತ್ರಿ ದಿವಂಗತ ಜಯಲಲಿತಾ ಸೇರಿದಂತೆ ಕೆಲವು ರಾಜಕೀಯ ಗಣ್ಯರ ಜೀವನ ಚರಿತ್ರೆಯನ್ನು ಸಿನಿಮಾ ಮೂಲಕ ನಾವು ಈಗಾಗಲೇ ಬೆಳ್ಳಿ ತೆರೆಯ ಮೇಲೆ ಕಂಡಿದ್ದೇವೆ. ಇದೀಗ ಈ ಸಾಲಿಗೆ ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೇರ್ಪಡೆಯಾಗುತ್ತಿದ್ದಾರೆ.

ಹೌದು ಇತ್ತೀಚಿಗೆ ಸಿದ್ದರಾಮಯ್ಯ ಅವರ ಬಯೋಪಿಕ್‌ ನಿರ್ಮಾಣವಾಗುತ್ತಿದೆ ಎಂದು ಹೇಳಲಾಗಿತ್ತು. ಅದಕ್ಕೆ ಪುಷ್ಟಿ ಎಂಬಂತೆ ತೆರೆ ಮರೆಯಲ್ಲಿ ಸಿನಿಮಾ ಕುರಿತು ಸಾಕಷ್ಟು ಕೆಲಸಗಳು ನಡೆದಿವೆ. ಸದ್ಯ ಸಿದ್ದರಾಮಯ್ಯ ಅವರ ಬಯೋಪಿಕ್‌ನ ಕುರಿತು ಮತ್ತೊಂದು ಮಹತ್ವದ ಅಪ್‌ಡೇಟ್‌ ಓಡಾಡುತ್ತಿದೆ.

ಕರ್ನಾಟಕದ  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೀವನಾಧಾರಿತ ಚಿತ್ರದಲ್ಲಿ ನಟ ವಿಜಯ್ ಸೇತುಪತಿ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

ಹೌದು ಈ ಚಿತ್ರದ ಕೊನೆಯ 15 ರಿಂದ 20 ನಿಮಿಷಗಳ ಅವಧಿಯಲ್ಲಿ ಸಿದ್ದರಾಮಯ್ಯ ಅವರ ಪಾತ್ರವನ್ನ ಜನಪ್ರಿಯ ತಮಿಳು ನಟ ವಿಜಯ್‌ ಸೇತುಪತಿ ನಿರ್ವಹಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಚಿತ್ರತಂಡ ಇದನ್ನ ಇನ್ನೂ ಅಧಿಕೃತವಾಗಿ ತಿಳಿಸಿಲ್ಲ ಆದರೆ ಗಾಂಧಿನಗರದ ಮೂಲಗ ಪ್ರಕಾರ ಸಿಎಂ ಸಿದ್ದರಾಮಯ್ಯ ಅವರ ಚಿತ್ರದಲ್ಲಿ ವಿಜಯ್‌ ಸೇತುಪತಿ ನಟನೆ ಬಹುತೇಕ ಕನ್ಫರ್ಮ್‌ ಎಂದು ಹೇಳಲಾಗುತ್ತಿದೆ.

ಇನ್ನು ಸಿನಿಮಾವನ್ನು ಸತ್ಯರತ್ನಂ ನಿರ್ದೇಶನ ಮಾಡಲಿದ್ದಾರೆ. ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಹಯಾತ್ ಪೀರ್ ಸಾಬ್ ಅವರ MS ಕ್ರೀಯೆಷನ್ ಬ್ಯಾನರ್ ಅಡಿ ಈ ಚಿತ್ರ ನಿರ್ಮಾಣವಾಗುತ್ತಿದೆ. ಸಿದ್ದರಾಮಯ್ಯ ಅವರ ಬಯೋಪಿಕ್ ಸಿನಿಮಾಗೆ 'ಲೀಡರ್ ರಾಮಯ್ಯ' ಎಂಬ ಹೆಸರಿನಲ್ಲಿ ಬಿಡುಗಡೆ ಮಾಡುವುದಾಗಿ ಚರ್ಚೆಗಳಿದ್ದು  ಕನ್ನಡ, ಹಿಂದಿ, ತಮಿಳು, ತೆಲುಗು ಮತ್ತು ಮಲಯಾಳಂ ಎಂಬ ಐದು ಭಾಷೆಗಳಲ್ಲಿ ಚಿತ್ರ ತಯರಾಗಲಿದೆ.

Published On: 31 July 2023, 01:53 PM English Summary: Siddaramaiah biopic! who is the hero

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.