1. ಸುದ್ದಿಗಳು

ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ; ಆಲ್ ಇಂಡಿಯಾ ಅಗ್ರಿ ಸ್ಟಾರ್ಟ್-ಅಪ್ ಸಮಾವೇಶ – 2022; ಇಂದು, ನಾಳೆ

KJ Staff
KJ Staff

ಬಾಗಲಕೋಟೆಯ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಇಂದು ಮತ್ತು ನಾಳೆ (ಅಕ್ಟೋಬರ್‌ 18 ಮತ್ತು 19ರಂದು) ಆಲ್ ಇಂಡಿಯಾ ಅಗ್ರಿ ಸ್ಟಾರ್ಟ್-ಅಪ್ ಸಮಾವೇಶ ನಡೆಯಲಿದೆ. 

ಇದನ್ನೂ ಓದಿರಿ: ದೇಶದ ರೈತರಿಗೆ ಸಿಹಿಸುದ್ದಿ: ಪಿಎಂ ಕಿಸಾನ್‌ 12ನೇ ಕಂತು ಬಿಡುಗಡೆಗೊಳಿಸಿದ ಪಿಎಂ ಮೋದಿ

ಭಾರತದ ಆರ್ಥಿಕತೆಯಲ್ಲಿ ಕೃಷಿಯು ಪ್ರಮುಖ ಪಾತ್ರ ವಹಿಸುತ್ತದೆ ಮತ್ತು ರಾಷ್ಟ್ರೀಯ ತಲಾ ಆದಾಯಕ್ಕೆ 19%9 (FY 2021) ಮತ್ತು ಭಾರತದಿಂದ ಒಟ್ಟು ರಫ್ತಿಗೆ 10% ಕೊಡುಗೆ ನೀಡುತ್ತದೆ. 

ಅಗ್ರಿ ಸ್ಟಾರ್ಟ್-ಅಪ್‌ಗಳು ಉತ್ತಮವಾದ ಸೃಜನಶೀಲತೆ ಮತ್ತು ಆವಿಷ್ಕಾರಕ್ಕೆ ವೇದಿಕೆ ಕಲ್ಪಿಸುತ್ತದೆ. 

ಅಗ್ರಿ ಸ್ಟಾರ್ಟ್‌ ಅಪ್‌ನ ಮೂಲಕ ಕೃಷಿಯ ದೃಷ್ಟಿಕೋನವನ್ನು ಬದಲಾಯಿಸಬಹುದು.

ಉತ್ಪಾದಕತೆ, ಹವಾಮಾನ ವೈಪರೀತ್ಯಗಳು, ಹವಾಮಾನ ಬದಲಾವಣೆ ಸಮಸ್ಯೆಗಳು, ಸಣ್ಣ ಮತ್ತು ಛಿದ್ರಗೊಂಡ ಭೂ ಹಿಡುವಳಿಗಳು ಮತ್ತು ದೀರ್ಘಕಾಲೀನ ತಂತ್ರಜ್ಞಾನದ ಅಳವಡಿಕೆ ಮುಂತಾದ ರೈತರು ಎದುರಿಸುತ್ತಿರುವ ಸವಾಲುಗಳಿಗೆ ಇಲ್ಲಿ ಪರಿಹಾರಗಳು ಸಿಗಲಿವೆ.

ಸಿಲಿಕಾನ್‌ ಸಿಟಿಯಲ್ಲಿ ಶುರುವಾಯ್ತು ATM ಇಡ್ಲಿ, ವಡೆ, ಸೆಂಟರ್‌..ವಿಡಿಯೋ 

ಸಮಾವೇಶದಲ್ಲಿ ವಿವಿಧ ಸ್ಮಾರ್ಟ್‌ ಅಪ್‌ಗಳ ಪರಿಚಯ ಸಿಗಲಿದೆ. ಅಲ್ಲದೇ ಚಿಲ್ಲರೆ ವ್ಯಾಪಾರದಿಂದ ಡ್ರೋನ್ ಬಳಕೆಯ ವರೆಗಿನ ತಂತ್ರಾಂಶಗಳನ್ನು ಇಲ್ಲಿ ಪರಿಚಯಿಸಲಾಗುತ್ತಿದೆ.

ಹಣ್ಣುಗಳನ್ನು ಮಾರಾಟ ಮಾಡಲು ಬಾಡಿಗೆಗೆ ಉಪಕರಣಗಳು ಮತ್ತು ಆನ್‌ಲೈನ್ ಮೂಲಕ ತರಕಾರಿ ಮಾರಾಟದ ಬಗ್ಗೆ ಚರ್ಚೆ ಆಗಲಿದೆ.

ಸಮಾವೇಶದಲ್ಲಿ ಉದಯೋನ್ಮುಖ ಕೃಷಿಕರು, ಕೈಗಾರಿಕೋದ್ಯಮಿಗಳು, ರೈತರು, ವ್ಯಾಪಾರಸ್ಥರು, ಸಂಶೋಧನಾ ಸಂಸ್ಥೆಗಳು, ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ.

ಗುಡ್‌ನ್ಯೂಸ್‌: ರೈಲು ಪ್ರಯಾಣಿಕರಿಗೆ ನೀರು ಮತ್ತು ಆಹಾರ ಉಚಿತ- ಆದರೆ ಕಂಡಿಶನ್ಸ್‌ ಅಪ್ಲೈ 

ಒಂದೇ ವೇದಿಕೆಯಲ್ಲಿ ಹಲವು ಗಣ್ಯರು ಮತ್ತು ವಿಷಯ ಪರಿಣಿತರು ಭಾಗವಹಿಸಲಿದ್ದಾರೆ.

ಅನುಭವ, ಪರಿಣತಿ, ವ್ಯಾಪಾರ, ಅಗ್ರಿ ಸ್ಟಾರ್ಟ್-ಅಪ್‌ಗಳ ಮಾದರಿಗಳು ಮತ್ತು ಯಶಸ್ಸಿನ ಕಥೆಗಳಿಗೆ ಸಮಾವೇಶವು ವೇದಿಕೆ ಕಲ್ಪಿಸಲಿದೆ.  

ಗುಡ್‌ನ್ಯೂಸ್‌: ರೈಲು ಪ್ರಯಾಣಿಕರಿಗೆ ನೀರು ಮತ್ತು ಆಹಾರ ಉಚಿತ- ಆದರೆ ಕಂಡಿಶನ್ಸ್‌ ಅಪ್ಲೈ

ಸ್ಟಾರ್ಟ್‌ನಲ್ಲಿ ಚರ್ಚೆ ಆಗಲಿರುವ ವಿಷಯಗಳು  

ಕೃಷಿ-ಸ್ಟಾರ್ಟ್‌ಅಪ್‌ಗಳಿಗೆ ಫಾರ್ಮ್ ಇನ್‌ಪುಟ್‌ಗಳು-ಅವಕಾಶಗಳು ಮತ್ತು ಸವಾಲುಗಳು ಹೊಸ ಯುಗದ ಕೃಷಿಕರಿಗೆ ಹೈಟೆಕ್ ಕೃಷಿ  ಕೃಷಿ ಉತ್ಪನ್ನಕ್ಕೆ ಮೌಲ್ಯವರ್ಧನೆ - ಅಗ್ರಿ ಸ್ಟಾರ್ಟ್‌ಅಪ್‌ಗಳಿಗೆ ವರದಾನ ಫಾರ್ಮ್ ಟು ಪ್ಲೇಟ್ - ಕೃಷಿಯಲ್ಲಿ ಪೂರೈಕೆ ಸರಪಳಿ ನಿರ್ವಹಣೆ ಉತ್ತಮಗೊಳಿಸುವುದು.

ಯಾಂತ್ರೀಕರಣ ಮತ್ತು ಆಟೊಮೇಷನ್- ಹೊಸ ಪೀಳಿಗೆಯ ಉದ್ಯಮಿಗಳಿಗೆ ಒಂದು ವರದಾನ ಅಗ್ರಿ-ಸ್ಟಾರ್ಟ್‌ಅಪ್‌ಗಳಿಗಾಗಿ ಮಾರುಕಟ್ಟೆ ಸಂಪರ್ಕಗಳು ಮತ್ತು ನೆಟ್‌ವರ್ಕಿಂಗ್ ಅಂಶಗಳು ಪ್ರತಿ ಚರ್ಚಾಗೋಷ್ಠಿಯಲ್ಲಿಯೂ ಖ್ಯಾತ ಉದ್ಯಮಿಗಳು ಪ್ರಮುಖ ಉಪನ್ಯಾಸಗಳನ್ನು ನೀಡಲಿದ್ದಾರೆ.

ತಜ್ಞರೊಂದಿಗೆ ಸಂವಾದಗಳು ನಡೆಯಲಿವೆ. ಅಲ್ಲದೇ ವಿವಿಧ ಸ್ಪರ್ಧೆಗಳು ಸಹ ನಡೆಯಲಿವೆ ಎಂದು ಪ್ರಕಟಣೆ ತಿಳಿಸಿದೆ.    

Published On: 18 October 2022, 10:34 AM English Summary: University of Horticultural Scientists; All India Agri Start-up Conference – 2022; Today, tomorrow

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.