ಪಡಿತರ ಪಡೆಯುವವರೆಲ್ಲರಿಗೂ ಗುಡ್ ನ್ಯಸ್ ನೀಡಿದೆ ಕೇಂದ್ರ ಸರ್ಕಾರ. ಇಂದು ಕೇಂದ್ರ ಸರ್ಕಾರವು ಮಂಡಿಸಿದ ಬಜೆಟಿನಲ್ಲಿ ಒಂದು ದೇಶ ಒಂದು ರೇಷನ್ ಕಾರ್ಡನ್ನು ದೇಶದ 32 ರಾಜ್ಯಗಳಲ್ಲಿ ಜಾರಿಗೆ ತರಲಾಗುವುದು ಎಂದು ಘೋಷಿಸಿದೆ.
ಈಗಾಗಲೇ ದೇಶದ ಕೆಲ ರಾಜ್ಯಗಳಲ್ಲಿ ಮಾತ್ರವೇ ಒನ್ ನೇಷನ್ ಒನ್ ರೇಷನ್ ಕಾರ್ಡ್ ಜಾರಿಯಲ್ಲಿದೆ. ಇಂತಹ ಯೋಜನೆಯನ್ನು ಇದೀಗ 32 ರಾಜ್ಯಗಳಲ್ಲಿ ವಿಸ್ತರಿಸಲಾಗಿದೆ.
ಹೀಗಾಗಿ ಪಡಿತರದಾರರು ಒಂದು ರಾಜ್ಯದಿಂದ ಮತ್ತೊಂದು ರಾಜ್ಯಗಳಿಗೆ ತೆರಳಿದ್ರೂ, ಪಡಿತರ ಧಾನ್ಯಗಳನ್ನು ಇರುವ ಸ್ಥಳದಲ್ಲಿಯೇ ಸುಲಭವಾಗಿ ಪಡೆಯಬಹುದು.
ಫೆಬ್ರವರಿ 1 ರಂದು ಸೋಮವಾರ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಮಂಡಿಸಿದ ಬಜೆಟ್ ನಲ್ಲಿ ಒಂದು ದೇಶ ಒಂದು ರೇಷನ್ ಕಾರ್ಡ್ ಘೋಷಣೆ ಮಾಡಿದರು. ಕುಟುಂಬದ ಪ್ರತಿ ಸದಸ್ಯರ ಆಧಾರದ ಮೇಲೆ ಪಡಿತರ ವಿತರಣೆ ಮಾಡಲಾಗುತ್ತಿದೆ.
ಯಾವುದೇ ಪಡಿತರದಾರರಿಗೂ ತೊಂದರೆಯಾಗದಂತೆ ಈಗಾಗಲೇ ಕೆಲ ರಾಜ್ಯಗಳಲ್ಲಿ ಮಾತ್ರವೇ ಒನ್ ನೇಷನ್ ಒನ್ ರೇಷನ್ ಕಾರ್ಡ್ ಜಾರಿಗೆ ತರಲಾಗಿತ್ತು. ಇಂತಹ ಯೋಜನೆಯನ್ನು ದೇಶದ 32 ರಾಜ್ಯಗಳೊಂದಿಗೆ ಕೇಂದ್ರಾಡಳಿತ ಪ್ರದೇಶಗಳಿಗೂ ವಿಸ್ತರಣೆ ಮಾಡಲಾಗುತ್ತಿದೆ ಎಂಬುದಾಗಿ ಘೋಷಿಸಿದರು. ಈ ಮೂಲಕ ಪಡಿತರ ಚೀಟಿದಾರರು ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ತೆರಳಿಪೂ, ಪಡಿತರ ಧಾನ್ಯವನ್ನು ಪಡೆಯುವಂತ ಸೌಲಭ್ಯ ಕಲ್ಪಿಸಲಾಗುತ್ತಿದೆ ಎಂದು ತಿಳಿಸಿದರು.
ಈ ಯೋಜನೆಯ ಮೂಲಕ ಒಂದು ರಾಜ್ಯದಿಂದ ಬೇರೆ ರಾಜ್ಯಕ್ಕೆ ವಲಸೆಹೋಗುವವರಿಗೆ ಅನುಕೂಲವಾಗುತ್ತದೆ. ವಿಶೇಷವಾಗಿ ವಲಸೆ ಕಾರ್ಮಿಕರು ಈ ಯೋಜನೆಯ ಸೌಲಭ್ಯ ಪಡೆಯಬಹುದು.
Share your comments