1. ಸುದ್ದಿಗಳು

2021ರ ಕೇಂದ್ರ ಬಜೆಟ್ ನಲ್ಲಿ ಪಿಎಂ ಕಿಸಾನ್ ಯೋಜನೆಗೆ 65 ಸಾವಿರ ಕೋಟಿ ಘೋಷಣೆ

Ramlingam
Ramlingam
PM kisan

2021-22ನೇ ಸಾಲಿನ ಬಜೆಟ್ ನಲ್ಲಿ ಹಲವು ಪ್ರಮುಖ ಘೋಷಣೆಗಳಂತೆ ಪಿಎಂ ಕಿಸಾನ್ ಯೋಜನೆಯಡಿ ಹೆಚ್ಚಿನ ಹಣ ಘೋಷಣೆ ಮಾಡಬಹುದೆಂದು ನಿರೀಕ್ಷಿಸಲಾಗಿತ್ತು.  2021-22ನೇ ರ ಸಾಲಿನಲ್ಲಿ 75 ಸಾವಿರ ಕೋಟಿ ನಿರೀಕ್ಷಿಸಲಾಗಿತ್ತು. ಆದರೆ ಈ ಬಾರಿಯ ಬಜೆಟಿನಲ್ಲಿ ಪಿಎಂ ಕಿಸಾನ್ ಗೆ 65 ಸಾವಿರ ಕೋಟಿ ನೀಡಲಾಗಿದೆ.

ಕೇಂದ್ರ ಸರಕಾರ 2021-22ರ ಕೇಂದ್ರ ಬಜೆಟ್ ನಲ್ಲಿ ಪಿಎಂ-ಕಿಸಾನ್ ಬಜೆಟ್ ಹೆಚ್ಚಿಸಬಹುದು ಎಂದು ನಿರೀಕ್ಷಿಸಿದ್ದರು, ಆದರೆ ಇದಕ್ಕೆ ವ್ಯತಿರಿಕ್ತವಾಗಿ ಕತ್ತರಿ ಹಾಕಿತ್ತು. ಮಾಧ್ಯಮ ವರದಿಗಳ ಪ್ರಕಾರ, 2020-21ರ ಬಜೆಟ್ ನಲ್ಲಿ ಸರ್ಕಾರ ನೀಡಿದ ಬಜೆಟ್ ಅನ್ನು ಕೃಷಿ ಸಚಿವಾಲಯ ಇನ್ನೂ ಖರ್ಚು ಮಾಡಿಲ್ಲ, ಅದಕ್ಕಾಗಿಯೇ ಕೇಂದ್ರ ಸರ್ಕಾರ ಈ ಬಾರಿ ಅನುದಾನ ಕಡಿತ ಮಾಡಿದೆ ಎನ್ನಲಾಗುತ್ತಿದೆ.

ಆರ್ಥಿಕ ವರ್ಷ 2020ರ 3ನೇ ಅವಧಿಯಲ್ಲಿ ದೇಶದಲ್ಲಿ 9,42,50,582 ಫಲಾನುಭವಿಗಳಿಗೆ ಹಣ ಸಂದಾಯವಾಗಿದೆ. ಕರ್ನಾಟಕದಲ್ಲಿ 56 ಲಕ್ಷ ಫಲಾನುಭವಿಗಳು ಈ ಯೋಜನೆಯ ಲಾಭ ಪಡೆದಿದ್ದಾರೆ. ಒಟ್ಟು 47,03,752 ರೂಪಾಯಿ ಫಲಾನುಭವಿಗಳಿಗೆ ಪಾವತಿಯಾಗಿದೆ.

Share your comments

Top Stories

View More

Latest feeds

More News
Krishi Jagran Kannada Magazine Subscription Online Subscription
Krishi Jagran Kannada Subscription

CopyRight - 2021 Krishi Jagran Media Group. All Rights Reserved.