1. ಸುದ್ದಿಗಳು

Uniform Civil Code | ಏಕರೂಪ ನಾಗರಿಕ ಸಂಹಿತೆ ಅಂದ್ರೇನು, ಈಗ ಎಲ್ಲರಿಗೂ ಒಂದೇ ಕಾನೂನಿಲ್ವಾ ? ಬದಲಾದ್ರೆ ಏನಾಗುತ್ತೆ ಗೊತ್ತಾ!

Hitesh
Hitesh
Uniform Civil Code | What is the Uniform Civil Code, is there one law for all now? You know what will happen if you don't change!

ಏಕರೂಪ ನಾಗರಿಕ ಸಂಹಿತೆ ಈಗ ದೇಶದಲ್ಲಿ ಹೆಚ್ಚು ಚರ್ಚೆಯಾಗುತ್ತಿರುವ ವಿಷಯಗಳಲ್ಲಿ ಒಂದು. ಆಗಿದ್ದರೆ, ಏನಿದು ಏಕರೂಪ ನಾಗರಿಕ ಸಂಹಿತೆ ಇದರ ಹಿನ್ನೆಲೆ ಏನು,

ಏಕರೂಪ ನಾಗರಿಕ ಸಂಹಿತೆಗೆ ಪರ- ವಿರೋಧವೇನು ಎನ್ನುವ ಸಮಗ್ರ ವಿವರ ಇಲ್ಲಿದೆ.

ಕೇಂದ್ರದಲ್ಲಿ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ಹಾಗೂ ಬಂದ ನಂತರದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗೆ ಸಂಬಂಧಿಸಿದಂತೆ ವ್ಯಾಪಕವಾದ ಚರ್ಚೆ ನಡೆಯುತ್ತಿದೆ.

ಕೇಂದ್ರ ಗೃಹ ಸಚಿವ ಅಮಿತ್‌ಶಾ ಸಹ ಏಕರೂಪ ನಾಗರಿಕ ಸಂಹಿತೆಯನ್ನು ಬಿಜೆಪಿ ಜಾರಿ ಮಾಡಲಿದೆ ಎಂದು ಪುನರುಚ್ಚರಿಸಿದ್ದಾರೆ.

ಲೋಕಸಭಾ ಚುನಾವಣೆಗೆ  ಕೇವಲ ಒಂದು ವರ್ಷ ಉಳಿದಿರುವಾಗ ಏಕರೂಪ ನಾಗರಿಕ ಸಂಹಿತೆ ಜಾರಿ ವಿಷಯ ಮತ್ತಷ್ಟು  ಕಾವು ಪಡೆದುಕೊಂಡಿದೆ.

ಏನಿದು ಏಕರೂಪ ನಾಗರಿಕ ಸಂಹಿತೆ ?

ಏಕರೂಪ ನಾಗರಿಕ ಸಂಹಿತೆ ಬಗ್ಗೆ ಸರಳವಾಗಿ ಹೇಳುವುದಾದರೆ, ದೇಶದ ಎಲ್ಲ ಧರ್ಮೀಯರಿಗೂ ಒಂದೇ ಕಾನೂನು ಜಾರಿ ಮಾಡುವುದು.

ಹೌದು ದೇಶದ ಎಲ್ಲ ಧರ್ಮದವರಿಗೂ ಒಂದೇ ಕಾನೂನು ರೂಪಿಸುವುದೇ ಏಕರೂಪ ನಾಗರಿಕ ಸಂಹಿತೆಯ ಉದ್ದೇಶ.

ಒಂದೇ ಕಾನೂನು ಎಂದರೇನು, ಈಗ ಇಲ್ವಾ ?

ದೇಶದಲ್ಲಿ ಎಲ್ಲರಿಗೂ ಒಂದೇ ಕಾನೂನು ಅಂತ ಹೇಳಿದ್ರೇನು. ಈಗ ಇಲ್ವಾ ಅಂತ ನೀವು ಕೇಳಬಹುದು. ನಮ್ಮ ದೇಶದಲ್ಲಿ ಎಲ್ಲ ಧರ್ಮೀಯರಿಗೂ ಒಂದೇ ಕಾನೂನೇನೋ ಇದೆ.

ಆದರೆ, ಎಲ್ಲ ವಿಷಯದಲ್ಲೂ ಅಲ್ಲ. ಹೌದು ನಮ್ಮ ದೇಶದಲ್ಲಿ ಎಲ್ಲರಿಗೂ ಕ್ರಿಮಿನಲ್ ಕಾನೂನು ಮಾತ್ರ ಒಂದೇ ಇದೆ. ಅಂದರೆ, ಸುಲಿಗೆ,ಕೊಲೆ ಹಾಗೂ ದರೋಡೆ ಸೇರಿದಂತೆ

ಯಾವುದೇ ಕ್ರಿಮಿನಲ್‌ ಕೆಲಸ ಮಾಡಿದರೂ, ಒಂದೇ ಮಾದರಿಯ ದಂಡನೆ ಸಿಗಲಿದೆ. ಇದರಲ್ಲಿ ಯಾವುದೇ ಧರ್ಮದವರನ್ನೂ ಪ್ರತ್ಯೇಕಿಸಿ ನೋಡುವುದಿಲ್ಲ.

ಆದರೆ, ವಿವಾಹ, ವಿಚ್ಛೇದನ, ಆಸ್ತಿ ಸೇರಿದಂತೆ ಕೆಲವು ನಿರ್ದಿಷ್ಟ ವಿಷಯಗಳು ಬಂದಾಗ ಎಲ್ಲ ಧರ್ಮೀಯಿರಿಗೂ ಒಂದೇ ಕಾನೂನು ಇಲ್ಲ.

ಈ ಕೆಲವು ನಿರ್ದಿಷ್ಟ ವಿಷಯಗಳಲ್ಲಿ ಹಿಂದೂ ಹಾಗೂ ಮುಸ್ಲಿಂರಿಗೆ ಬೇರೆ ಬೇರೆ ಕಾನೂನು ಇದೆ. ಇದನ್ನು ಉದಾಹರಣೆಯೊಂದಿಗೆ ಹೇಳುವುದಾದರೆ,

ಮುಸ್ಲಿಮರು ಅವರ ಧರ್ಮದ ಕಾನೂನಿಗೆ ಅನುಗುಣವಾಗಿ ಒಂದಕ್ಕಿಂತ ಹೆಚ್ಚು ಮದುವೆ ಮಾಡಿಕೊಳ್ಳಲು ಅವಕಾಶ ಇದೆ.

ಆದರೆ, ಹಿಂದೂಗಳು ಹಿಂದೂ ವಿವಾಹ ಕಾಯ್ದೆ ಅಡಿಯಲ್ಲಿ  ಒಂದು ಮದುವೆ ಮಾಡಿಕೊಳ್ಳಲು ಅವಕಾಶ ಇದೆ.

ಪತ್ನಿ ಬದುಕಿರುವಾಗ ಎರಡನೇ ವಿವಾಹವಾಗಲು ಇದರಲ್ಲಿ ಅವಕಾಶ ಇರುವುದಿಲ್ಲ.

ಈ ರೀತಿ ಭಿನ್ನವಾದ ಕೂನೂನುಗಳನ್ನು ತೆಗೆದು ಏಕರೂಪ ನಾಗರಿಕ ಸಂಹಿತೆ ಜಾರಿಗೆ ಸಿದ್ಧತೆ ಪ್ರಾರಂಭವಾಗಿದೆ.

ಬಿಜೆಪಿಯ ವಾದವೇನು ?

ಒಂದು ದೇಶ ಒಂದು ಕಾನೂನು ಎನ್ನುವುದು ಬಿಜೆಪಿಯ ಪ್ರತಿಪಾದನೆ. ಅಂದರೆ, ಒಂದೊಂದು ಧರ್ಮದವರಿಗೆ ಒಂದೊಂದು ಕಾನೂನು ಬೇಡ.

ಈ ರೀತಿ ಇರುವ ಕಾನೂನುಗಳನ್ನು ನಿರ್ಬಂಧಿಸಿ, ದೇಶದ ಎಲ್ಲ ಧರ್ಮದವರಿಗೂ ಒಂದೇ ಕಾನೂನು ರೂಪಿಸಬೇಕು ಎನ್ನುವುದು ಬಿಜಿಪಿಯ ವಾದ.

ದೇಶದ ಎಲ್ಲರಿಗೂ ಒಂದೇ ಕಾನೂನು ಇರಬೇಕು ಎನ್ನುವುದೇ ಏಕರೂಪ ನಾಗರಿಕ ಸಂಹಿತೆಯಾಗಿದ್ದು, ಸಂವಿಧಾನದ ಆರ್ಟಿಕಲ್ 44ರ ಆಶಯವೂ ಇದೇ ಆಗಿದೆ.

ಒಂದೊಮ್ಮೆ ಏಕರೂಪ ನಾಗರಿಕ ಸಂಹಿತೆ ಜಾರಿಗೆ ಬಂದರೆ,  ಧರ್ಮಾಧಾರಿತ ಕಾನೂನುಗಳು ಅಸ್ತಿತ್ವ ಕಳೆದುಕೊಳ್ಳಲಿದೆ ಎನ್ನುವುದು ಬಿಜೆಪಿಯ ಪ್ರತಿಪಾದನೆ.

ಏಕರೂಪ ನಾಗರಿಕ ಸಂಹಿತೆಗೆ ಸಂಬಂಧಿಸಿದಂತೆ ಈಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಒಂದು ದೇಶದಲ್ಲಿ ಎರಡು ಕಾನೂನು ಇರಲು ಹೇಗೆ ಸಾಧ್ಯ ಎಂದು ಪ್ರಶ್ನೆ ಮಾಡಿದ್ದರು.

ಇದಕ್ಕೆ ಬರುತ್ತಿರುವ ವಿರೋಧವೇನು ?

ಏಕರೂಪ ನಾಗರಿಕ ಸಂಹಿತೆಗೆ ಬಿಜೆಪಿ ಸಿದ್ಧತೆ ಮಾಡಿಕೊಳ್ಳುತ್ತಿರುವ ಸಂದರ್ಭದಲ್ಲಿಯೇ ಇದಕ್ಕೆ ಭಾರೀ ವಿರೋಧವೂ ವ್ಯಕ್ತವಾಗುತ್ತಿದೆ.

ನಮ್ಮ ಸಂವಿಧಾನದ ಆರ್ಟಿಕಲ್ 25 ಮತ್ತು 28ರ ಅಡಿ ದೇಶದ ಯಾವುದೇ ಪ್ರಜೆ ತನ್ನ ಧಾರ್ಮಿಕ ಆಚರಣೆಗಳನ್ನು

ಅನುಸರಿಸುವುದು ಹಾಗೂ ಅದಕ್ಕೆ ಅನುಗುಣವಾಗಿ ನಡೆದುಕೊಳ್ಳಲು ಅವಕಾಶ ನೀಡಲಾಗಿದೆ. ವಿವಾಹವಾಗುವುದು ಹಾಗೂ ವಿಚ್ಛೇದನ ತೆಗೆದುಕೊಳ್ಳುವುದು ಸೇರಿದಂತೆ

ಕೆಲವು ನಿರ್ದಿಷ್ಟ ಆಚರಣೆಗಳು ಧರ್ಮದಲ್ಲೇ  ಬರುವುದರಿಂದ ಎಲ್ಲರಿಗೂ ಒಂದೇ ಕಾನೂನು ಜಾರಿ ಮಾಡಿದರೆ,

ವೈವಿಧ್ಯತೆಗೆ ಕುಂದಾಗುತ್ತದೆ ಎನ್ನುವುದು ಈ ಪ್ರಸ್ತಾವವನ್ನು ವಿರೋಧಿಸುವವರ ವಾದವಾಗಿದೆ.   

ಈ ರಾಜ್ಯದಲ್ಲಿದೆ ಏಕರೂಪ ನಾಗರಿಕ ಸಂಹಿತೆ!

ದೇಶದಲ್ಲಿ ಈಗ ಏಕರೂಪ ನಾಗರಿಕ ಸಂಹಿತೆ ಜೋರಾಗಿದೆ. ಆದರೆ, ದೇಶದ ಈ ರಾಜ್ಯದಲ್ಲಿ ಈಗಾಗಲೇ ಏಕರೂಪ ನಾಗರಿಕ ಸಂಹಿತೆಯನ್ನು ಅಳವಡಿಸಿಕೊಳ್ಳಲಾಗಿದೆ.

ಹೌದು ಗೋವಾದಲ್ಲಿ ಈಗಾಗಲೇ ಏಕರೂಪ ನಾಗರಿಕ ಸಂಹಿತೆ ಜಾರಿಯಲ್ಲಿದೆ. ಗೋವಾದಲ್ಲಿ 1867ರಿಂದ ಏಕರೂಪ ಕಾನೂನನ್ನು ಅಳವಡಿಸಿಕೊಳ್ಳಲಾಗಿದೆ.

ಗೋವಾ ರಾಜ್ಯವು ಪೋರ್ಚುಗೀಸರಿಂದ 1961ರಲ್ಲಿ  ಸ್ವತಂತ್ರ ಪಡೆದು ಭಾರತದಲ್ಲಿ ವಿಲೀವಾದ ನಂತರವೂ ಇಲ್ಲಿ ಏಕರೂಪ ಕಾನೂನು ಮುಂದುವರಿದಿದೆ.   

ಏಕರೂಪ ನಾಗರಿಕ ಸಂಹಿತೆಯ ಸಮಗ್ರ ವಿವರ ನೋಡಲು ಈ ವಿಡಿಯೋ ಲಿಂಕ್‌ ಕ್ಲಿಕ್‌ ಮಾಡಿ 

Published On: 05 July 2023, 05:05 PM English Summary: Uniform Civil Code | What is the Uniform Civil Code, is there one law for all now? You know what will happen if you don't change!

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.