1. ಸುದ್ದಿಗಳು

ಟ್ವಿಟರ್‌: ಇನ್ಮುಂದೆ ಬ್ಲೂಟಿಕ್‌ಗೂ ಕೊಡ್ಬೇಕಾ ದುಡ್ಡು ?

Hitesh
Hitesh
Elon musk

ಟ್ವಿಟರ್‌ ಅನ್ನು ಪೂರ್ಣ ಪ್ರಮಾಣದಲ್ಲಿ ಖರೀದಿಸಿರುವ ಟೆಸ್ಲಾ ಸಿಇಒ ಎಲಾನ್‌ ಮಸ್ಕ್‌ ಅವರು ಒಂದೊಂದೇ ಬದಲಾವಣೆಯನ್ನು ಪ್ರಾರಂಭಿಸಿದ್ದಾರೆ.

ತಿಂಗಳಲ್ಲಿ 36 ಲಕ್ಷ ಆದಾಯ ಗಳಿಸಿದ ಎಂಬಿಎ ಪದವೀಧರ; ಈ ಯಶೋಗಾಥೆ ನಿಮಗೂ ಪ್ರೇರಣೆ! 

ಟ್ವಿಟರ್‌ ಕಚೇರಿಗೆ ಬಂದ ಮೊದಲ ದಿನವೇ ಅವರು ಕೆಲವು ಸಿಬ್ಬಂದಿಯನ್ನು ಬದಲಾವಣೆ ಮಾಡುವ ಮೂಲಕ ಅಚ್ಚರಿ ಮೂಡಿಸಿದ್ದರು.

ಟ್ವಿಟರ್‌ ಸಿಬ್ಬಂದಿನ್ನು ಮಸ್ಕ್‌ ಅವರು ಬದಲಾಯಿಸಲಿದ್ದಾರೆ ಎನ್ನುವುದು ಮೊದಲೇ ಚರ್ಚೆಯ ಮುನ್ನೆಲೆಗೆ ಬಂದಿತ್ತು.

Pm kisan, ಕಿಸಾನ್ ಪಿಂಚಣಿ ಯೋಜನೆ: 200 ರೂಪಾಯಿ ಹೂಡಿಕೆ ಮಾಡಿ 3 ಸಾವಿರ ಪಿಂಚಣಿ ಗಳಿಸಬಹುದು! 

ಅವರು ಟ್ವಿಟರ್‌ನ ಮುಖ್ಯ ಕಚೇರಿಗೆ ಬರುತ್ತಿದ್ದಂತೆಯೇ ಇದನ್ನು ಸಾಬೀತು ಮಾಡಿದರು. ಇದೀಗ ಟ್ವಿಟರ್‌ನ ಮತ್ತಷ್ಟು ಬದಲಾವಣೆಗೆ ಒಳಪಡಿಸುವ ಬಗ್ಗೆ ಅವರು ಚಿಂತನೆ ನಡೆಸಿದ್ದಾರೆ.  

ಮಸ್ಕ್‌ ಅವರು ಟ್ವಿಟರ್‌ ಖರೀದಿಯ ಪ್ರಕ್ರಿಯೆಗಳನ್ನು ಸಂಪೂರ್ಣ ಮುಕ್ತಾಯ ಮಾಡಿದ ಬೆನ್ನಲ್ಲೇ ಟ್ವಿಟರ್‌ನ ಬ್ಲೂಟಿಕ್‌ಗೆ ಹಣ ಪಾವತಿ ಮಾಡುವ ವಿಷಯವು ಚರ್ಚೆಯ ಮುನ್ನೆಲೆಗೆ ಬಂದಿದೆ.  

ಟ್ವಿಟರ್‌ನ ಖಾತೆದಾರರ ಬ್ಲೂ ಟಿಕ್‌ಗೆ ಶುಲ್ಕ ವಿಧಿಸುವ ಕುರಿತು ಚಿಂತನೆ ನಡೆಸಿದೆ ಎಂದು ಮೂಲಗಳು ತಿಳಿಸಿರುವುದಾಗಿ 'ಪ್ಲಾಟ್‌ಫಾರ್ಮರ್‌' ಎಂಬ ಸಂಸ್ಥೆಯು ವರದಿ ಮಾಡಿದೆ.

Twitter

ಪ್ಲಾಟ್‌ಫಾರ್ಮರ್‌ನ ವರದಿಯ ಪ್ರಕಾರ ಬಳಕೆದಾರರು ಮಾಸಿಕ 411 ರೂಪಾಯಿ ಪಾವತಿಸಿ ಚಂದಾದಾರರಾಗಬೇಕು. ಇಲ್ಲವಾದರೆ, ಬ್ಲೂ ಟಿಕ್‌ ಕಳೆದುಕೊಳ್ಳಬೇಕಾಗುತ್ತದೆ.

ಮಸ್ಕ್‌ ಅವರು ಈ ನಿರ್ಧಾರವನ್ನು ಇನ್ನೂ ಅಂತಿಮಗೊಳಿಸಿಲ್ಲ. ಅವರು ಯೋಜನೆಯನ್ನು ಕೈಬಿಡುವ ಸಾಧ್ಯತೆಯೂ ಇದೆ.  ಆದರೆ, ಬಳಕೆದಾರರ ಖಾತೆ ಪರಿಶೀಲನೆಯು ಬ್ಲೂ ಟಿಕ್‌ನ ಭಾಗವಾಗಿರಲಿದೆ ಎಂದು ಉಲ್ಲೇಖಿಸಲಾಗಿದೆ.

ಇದನ್ನೂ ಓದಿರಿ: ಬೆಂಗಳೂರು ಕೃಷಿ ವಿವಿಯಿಂದ 9 ಹೊಸ ತಳಿಗಳ ಶೋಧ ರೈತರಿಗೆ ಅಧಿಕ ಇಳುವರಿ, ತಳಿಗಳಿಗೆ ರೋಗ ನಿರೋಧಕ ಶಕ್ತಿ 

Twitter

ಏನಿದು ಬ್ಲೂಟಿಕ್‌: ಟ್ವಿಟರ್‌ ಸಂಸ್ಥೆಯು ಗಣ್ಯರು ಹಾಗೂ ಹೆಚ್ಚು ಜನ ಫಾಲೋಮಾಡುವ ಖಾತೆದಾರರ ಗುರುತು ಅಥವಾ ಖಾತೆಯ ಖಚಿತತೆಗಾಗಿ ಖಾತೆಯ ಮುಂದೆ ಬ್ಲೂಟಿಕ್‌ಅನ್ನು ನೀಡುತ್ತದೆ.

ಇದು ಒಬ್ಬ ನಿರ್ದಿಷ್ಟ ವ್ಯಕ್ತಿಯನ್ನು ಫಾಲೋ ಮಾಡಲು ಮತ್ತು ನಿಖರ ಮಾಹಿತಿಗೆ ಸಹಕಾರಿಯಾಗಿದೆ.   

ರಾಜ್ಯದಲ್ಲಿ ಹೆಚ್ಚಾಯ್ತು ಚಳಿ; ಬೆಂಗಳೂರಲ್ಲಿ ದಶಕದಲ್ಲೇ ಕನಿಷ್ಠ ತಾಪಮಾನ!

Published On: 31 October 2022, 12:03 PM English Summary: Twitter: Do you have to pay money for Bluetik?

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.