1. ಸುದ್ದಿಗಳು

ಟ್ವಿಟರ್‌ ಸಿಇಒ ಸ್ಥಾನ ಮುಂದುವರಿಯುವ ಬಗ್ಗೆ ಜನಾಭಿಪ್ರಾಯಕ್ಕೆ ಮುಂದಾದ ಎಲಾನ್‌ ಮಸ್ಕ್‌ !

Hitesh
Hitesh
Twitter CEO Elon Musk is ahead of the referendum!

ಸಂಸ್ಥೆಯ ನಿರ್ವಹಣೆಗೆ ಸಂಬಂಧಿಸಿದಂತೆ ಸದಾ ವಿವಾದದ ಮೂಲಕವೇ ಸುದ್ದಿಯಲ್ಲಿರುವ ಟ್ವಿಟರ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಲಾನ್‌ ಮಸ್ಕ್‌ ಅವರು ಇದೀಗ ಮತ್ತೊಂದು ವಿಷಯಕ್ಕೆ ಸುದ್ದಿಯಲ್ಲಿದ್ದಾರೆ.  

ಕೊರೊನಾಗೆ ತತ್ತರಿಸಿದ ಚೀನಾ; 10 ಲಕ್ಷ ಸಾವು ಸಾಧ್ಯತೆ: ವರದಿ

ಇದೀಗ ನಾನು ಟ್ವಿಟರ್‌ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸ್ಥಾನದಿಂದ ಕೆಳಗಿಳಿಯಬೇಕೇ ಎಂದು ಎಲಾನ್‌ ಮಸ್ಕ್‌ ಅವರು ಸಾಮಾಜಿಕ ಮಾಧ್ಯಮದಲ್ಲಿ ಪ್ರಶ್ನೆ ಮಾಡಿದ್ದಾರೆ. ಜನರು ನೀಡುವ ಉತ್ತರಕ್ಕೆ ತಾವು ಬದ್ಧರಾಗಿರುವುದಾಗಿ ಘೋಷಿಸಿದ್ದಾರೆ. ಇದಕ್ಕಾಗಿ ಅವರು ಟ್ವಿಟರ್‌ನಲ್ಲಿ ಸಮೀಕ್ಷೆ ಪ್ರಾರಂಭಿಸಿದ್ದಾರೆ.

Sugarcane| ಕಬ್ಬು ಬೆಳಗಾರರಿಗೆ 21 ಕೋಟಿ ಪಾವತಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಈಗಾಗಲೇ ನೌಕರರ ರಾಜೀನಾಮೆಗೆ ಸಂಬಂಧಿಸಿದಂತೆ ಹಲವು ವಿಷಯಗಳಿಂದ ಎಲಾನ್‌ ಮಸ್ಕ್‌ ಅವರು ಚರ್ಚೆಗೆ ಗ್ರಾಸವಾಗಿದ್ದಾರೆ. ಎಲಾನ್‌ ಮಸ್ಕ್‌ ಅವರು ಟ್ವಿಟರ್ ಖರೀದಿ ಮಾಡಿದ ನಂತರ ಸಾವಿರಾರು ಜನ ಉದ್ಯೋಗಕ್ಕೆ ರಾಜೀನಾಮೆ ನೀಡಿದ್ದಾರೆ. ಅಲ್ಲದೇ ಉದ್ಯೋಗದ ಅವಧಿಯನ್ನು ಹೆಚ್ಚಳ ಮಾಡುವ ವಿಚಾರಕ್ಕೂ ಅವರ ಟೀಕೆಗೆ ಗುರಿಯಾಗಿದ್ದರು.  

ಇದೀಗ ಹೊಸ ಸಮೀಕ್ಷೆಯನ್ನು ಪ್ರಾರಂಭಿಸಿದ್ದು, ಸ್ಥಾನದಲ್ಲಿ ಮುಂದುವರಿಯುವುದರ ಕುರಿತು ಸಾರ್ವಜನಿಕರಿಂದ ಮಾಹಿತಿ ಸಂಗ್ರಹಿಸಲು ಮುಂದಾಗಿದ್ದಾರೆ. ಟ್ವೀಟರ್‌ನ  ಸಾವಿರಾರು ಜನ ಮಸ್ಕ್‌ ಅವರ ಸಮೀಕ್ಷೆಯಲ್ಲಿ ಪಾಲ್ಗೊಳ್ಳುತ್ತಿದ್ದು, ತಮ್ಮ ಆಲೋಚನೆಗಳನ್ನು ಹಂಚಿಕೊಳ್ಳುತ್ತಿದ್ದಾರೆ.

Twitter CEO Elon Musk

ಜನಪ್ರಿಯ ಯೂಟ್ಯೂಬರ್‌ ಜಿಮ್ಮಿ ಡೊನಾಲ್ಡ್‌ಸನ್ ಅಕಾ ಮಿಸ್ಟರ್‌ಬೀಸ್ಟ್, ನಿಮ್ಮ ಈ ಪ್ರವೃತ್ತಿಯನ್ನು ನೀವು ಹೀಗೇ ಮುಂದುವರಿಸಿಕೊಂಡು ಹೋಗುತ್ತೀರಿ ಎನ್ನುವುದಾದರೆ,  ನನ್ನ ಉತ್ತರ ಹೌದು ಎಂದು ಹೇಳಿದ್ದಾರೆ. ಈಗಾಗಲೇ ಹೊಸ ಸಿಇಒ ಆಯ್ಕೆ ಮಾಡಿದ್ದಾರೆ. ಆಡಳಿತ ಮಂಡಳಿ ಅಥವಾ ಟ್ವೀಟರ್‌ನ ಅಧ್ಯಕ್ಷರಾಗಿ ಮಸ್ಕ್‌ ಇರಲಿದ್ದಾರೆ ಎಂದು ಮತ್ತೊಬ್ಬ ಬಳಕೆದಾರ ಪ್ರತಿಕ್ರಿಯಿಸಿದ್ದಾರೆ.

ಇದಕ್ಕೆ ಉತ್ತರಿಸಿರುವ ಮಸ್ಕ್‌ ನಿಜವಾಗಿಯೂ ಟ್ವಿಟ್ಟರ್ ಅನ್ನು ಜೀವಂತವಾಗಿರಿಸುವ ಕೆಲಸವನ್ನು ಯಾರೂ ಮಾಡುವುದಿಲ್ಲ. ನನ್ನ ಉತ್ತರಾಧಿಕಾರಿಯ ನೇಮಕ ಆಗಿಲ್ಲ  ಎಂದು ಉತ್ತರಿಸಿದ್ದಾರೆ. ಟೆಸ್ಲಾ ಅಥವಾ ಟ್ವಿಟರ್ ಆಗಿರಲಿ... ಯಾವುದೇ ಕಂಪನಿಯ ಸಿಇಒ ಆಗಿರಲು ನಾನು ಬಯಸುವುದಿಲ್ಲ ಎಂದು ಮಸ್ಕ್ ಕಳೆದ ತಿಂಗಳು ಹೇಳಿದ್ದರು.

ಟ್ವಿಟರ್‌ನ ಸಿಇಒ ಆಗಿ ಶಾಶ್ವತವಾಗಿ ಉಳಿಯಲು ಬಯಸುವುದಿಲ್ಲ ಎಂದು ಟೆಸ್ಲಾದ ವಿವಾದಾತ್ಮಕ ವೇತನ ಪರಿಹಾರ ಪ್ಯಾಕೇಜ್‌ಗೆ ಸಂಬಂಧಿಸಿದ ವಿಚಾರಣೆಯ ಸಂದರ್ಭದಲ್ಲಿ ಮಸ್ಕ್‌ ಹೇಳಿದ್ದರು.  

Published On: 19 December 2022, 05:05 PM English Summary: Twitter CEO Elon Musk is ahead of the referendum!

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.