1. ಸುದ್ದಿಗಳು

ಕೃಷಿಯಲ್ಲಿ ಮಾಹಿತಿ ತಂತ್ರಜ್ಞಾನದ ಮಹತ್ವ ಕುರಿತು ಜುಲೈ 3ರಂದು ಕಾರ್ಯಾಗಾರ

ಮಾಹಿತಿ ತಂತ್ರಜ್ಞಾನ ಇಂದು ಎಲ್ಲ ಕ್ಷೇತ್ರಗಳನ್ನೂ ಆವರಿಸಿಕೊಂಡಿದೆ. ಹುಟ್ಟಿದ ಮಗುವಿನಿಂದ ಆರಂಭವಾಗಿ ಮೈ ಚರ್ಮ ಸುಕ್ಕಾಗಿರುವ ವೃದ್ಧರವರೆಗೆ ಇಂದು ಎಲ್ಲರಿಗೂ, ಎಲ್ಲೆಡೆಯೂ ಮಾಹಿತಿ ತಂತ್ರಜ್ಞಾನದ ಬಳಕೆ ಅನಿವಾರ್ಯವಾಗಿದೆ. ಹಾಗೇ ಈ ಮಾಹಿತಿ ತಂತ್ರಜ್ಞಾನ ಕೃಷಿ ಕ್ಷೇತ್ರದಲ್ಲೂ ತನ್ನ ಛಾಪು ಮೂಡಿಸದೆ ಬಿಟ್ಟಿಲ್ಲ. ಹೀಗಾಗಿಕೃಷಿ ಕ್ಷೇತ್ರದಲ್ಲಿ ಮಾಹಿತಿ ತಂತ್ರಜ್ಞಾನದ ಮಹತ್ವ’ ಕುರಿತು ಹನುಮನಮಟ್ಟಿಯ ಭಾರತೀಯ ಕೃಷಿ ಅನುಸಂಧಾನ ಪರಿಷತ್ (ಐಸಿಎಆರ್) ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ಜುಲೈ 3ರಂದು ಬೆಳಗ್ಗೆ 10.30ಕ್ಕೆ ಆನ್ಲೈನ್ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ.

ಭಾರತವು ಜಗತ್ತಿನ ಪ್ರಮುಖ ಮಾಹಿತಿ ತಂತ್ರಜ್ಞಾನ ಕೇಂದ್ರಗಳಲ್ಲಿ ಒಂದಾಗಿದ್ದು, ಸರಿಸುಮಾರು ಎರಡು ದಶಕಗಳ ಹಿಂದೆ ದೇಶದಲ್ಲಿ ಮಾಹಿತಿ ತಂತ್ರಜ್ಞಾನ (ಇನ್ಫಾರ್ಮೇಷನ್ ಟೆಕ್ನಾಲಜಿ) ಕ್ರಾಂತಿ ಆರಂಭವಾಗಿತ್ತು. ಕೃಷಿಯಲ್ಲಿ ಭೂಮಿಗೆ ಹಾಕಿದ ಬಿತ್ತನೆ ಬೀಜ ಮೆಲ್ಲಗೆ ಮೊಳಕೆಯೊಡೆಯುವ ರೀತಿಯಲ್ಲೇ ನಿಧಾನ ಗತಿಯಲಲ್ಲಿ ತಲೆಯೆತ್ತಿದ ಐಟಿ ವಲಯ, ನೋಡ ನೋಡುತ್ತಿದ್ದಂತೆ ಭಾರೀ ಇಳುವರಿ ಕೊಡುವ ಬೆಳೆಯಂತೆ ಕಂಗೊಳಿಸತೊಡಗಿತು. ಇದೀಗ ಮಾಹಿತಿ ತಂತ್ರಜ್ಞಾನದ ಸಹವಾಸಕ್ಕೆ ಬಾರದೇ ಇರುವ ಒಂದೇ ಒಂದು ವಲಯವೂ ಸಿಗುವುದಿಲ್ಲ.

ಅಡುಗೆ ಕೋಣೆಯಿಂದ ಹಿಡಿದು, ಬಾತ್ ರೂಮಿನವರೆಗೂ ತಂತ್ರಜ್ಞಾನ ತನ್ನ ಬಾಹುಗಳನನ್ನು ಚಾಚಿದೆ. ಇದರ ನೆರವಿನಿಂದ ಮನುಷ್ಯನ ಕೆಲಸಗಳು ಹಗುರಾಗಿವೆ. ಹಾಗೇ ಕೃಷಿ ವಲಯಕ್ಕೂ ವ್ಯಾಪಿಸಿರುವ ಮಾಹಿತಿ ತಂತ್ರಜ್ಞಾನ, ಇಲ್ಲಿ ಹಲವಾರು ಕ್ರಾಂತಿಕಾರಿ ಬದಲಾವಣೆಗಳಿಗೆ ನಾಂದಿ ಹಾಡಿದೆ. ಮೊದಲೆಲ್ಲಾ ಬೋರ್ವೆಲ್ಗೆ ಅಳವಡಿಸಿದ ಮೋಟರ್ ಸ್ಟಾರ್ಟ್ ಮಾಡಲು ವಿದ್ಯುತ್ ಕಂಪನಿಯವರು ಕರೆಂಟ್ ನೀಡುವುದನ್ನೇ ಕಾದು ಕುಳಿತುಕೊಳ್ಳುತ್ತಿದ್ದ ರೈತರು, ಈಗ ತಮ್ಮ ಫೋನಿನಲ್ಲಿ ಒಂದು ಬಟನ್ ಒತ್ತುವ ಮೂಲಕ ಮೋಟರ್ಗಳನ್ನು ಸ್ಟಾರ್ಟ್ ಮಾಡುತ್ತಿದ್ದಾರೆ. ಹೀಗೆ ಬಹುದೂರ ಸಾಗಿ ಹೋಗಿ ಮಾಡಬೇಕಿದ್ದ ಕೆಲಸವು ಅನ್ನದಾತನ ಅಂಗೈ ಮೇಲೆಯೇ ಆಗುವಂತೆ ಮಾಡಿರುವುದು ಮಾಹಿತಿ ತಂತ್ರಜ್ಞಾನದ ಕೊಡುಗೆಯಾಗಿದೆ.

ಇದೊಂದೇ ಅಲ್ಲದೆ ಕೃಷಿ ವಲಯದಲ್ಲಿ ಪ್ರತಿ ಹಂತದಲ್ಲೂ ಬೆಳೆಯ ಮೇಲ್ವಿಚಾರಣೆ, ನಿರ್ವಹಣೆಗೆ ಮಾಹಿತಿ ತಂತ್ರಜ್ಞಾನದ ಬಳಕೆಯಾಗುತ್ತದೆ. ದೇಶದಲ್ಲಿ ಇಂದು ಹತ್ತಾರು ಕೃಷಿ ಸಂಬಂಧಿ ಆ್ಯಪ್ಗಳಿವೆ. ಆದರೆ, ಭಾರತಕ್ಕಿಂತಲೂ ವಿದೇಶಗಳಲ್ಲಿ ಈ ತಂತ್ರಾAಶಗಳ ಬಳP ಹೆಚ್ಚಾಗಿದೆ. ಪಾಶ್ಚಿಮಾತ್ಯ ದೇಶಗಳಲ್ಲಿ ಬೆಳೆಗಳನ್ನು ಕಟಾವು ಮಾಡುವ ಯಂತ್ರಗಳು ಸ್ವಯಂಚಾಲಿತವಾಗಿ ಕಾರ್ಯನಿರ್ವಹಿಸುತ್ತವೆ. ಅಲ್ಲಿ ಅವುಗಳನ್ನು ಮುನ್ನಡೆಸಲು ಮನುಷ್ಯರ ಅಗತ್ಯವೇ ಇಲ್ಲ. ಮೊದಲೇ ಪ್ರೋಗ್ರಾಂ ಸೆಟ್ ಮಾಡಿ ಬಿಟ್ಟರೆ ತಮ್ಮ ಪಾಡಿಗೆ ತಾವು, ಮಾಗಿದ ಹಣ್ಣುಗಳನ್ನು, ಫಲಕ್ಕೆ ಬಂದ ಫಸಲನ್ನು ಕಟಾವು ಮಾಡಿ ಒಂದೆಡೆ ಶೇಖರಿಸಿಡುತ್ತವೆ. ಅಷ್ಟರ ಮಟ್ಟಿಗೆ ಮಾಹಿತಿ ತಂತ್ರಜ್ಞಾನವು ಕೃಷಿ ಕ್ಷೇತ್ರದಲ್ಲಿ ಬೇರುರಿದೆ.

ಈ ಮಾಹಿತಿ ತಂತ್ರಜ್ಞಾನವು ಕೃಷಿ ಕ್ಷೇತ್ರದಲ್ಲಿ ಮಾಡಿರುವ ಕ್ರಾಂತಿಯ ಕುರಿತು ಕೃಷಿಕರಿಗೆ ಮಾಹಿತಿ ನೀಡುವ ಉದ್ದೇಶದಿಂದ ಹಾಗೂ ಕೃಷಿಯಲ್ಲಿ ತಂತ್ರಜ್ಞಾನ ಬಳಕೆಯಿಂದ ಇರುವ ಪ್ರಯೋಜನಗಳ ಬಗ್ಗೆ ರೈತರಿಗೆ ತಿಳಿಸಿಕೊಡುವ ಗುರಿಯೊಂದಿಗೆ ಹಾವೇರಿ ಜಿಲ್ಲೆಯ ಹನುಮನಮಟ್ಟಿಯಲ್ಲಿರುವ ಭಾರತೀಯ ಕೃಷಿ ಅನುಸಂಧಾನ ಪರಿಷತ್ನ ಕೃಷಿ ವಿಜ್ಞಾನ ಕೇಂದ್ರವು, ಧಾರವಾಡ ಕೃಷಿ ವಿಶ್ವವಿದ್ಯಾಲಯದ ಸಹಭಾಗಿತ್ವದಲ್ಲಿ, ‘ಕೃಷಿ ಕ್ಷೇತ್ರದಲ್ಲಿ ಮಾಹಿತಿ ತಂತ್ರಜ್ಞಾನದ ಮಹತ್ವಕುರಿತು ಜುಲೈ 3ರ ಶನಿವಾರ ಆನ್ಲೈನ್ ತರಬೇತಿ ಕಾರ್ಯಾಗಾರ ಹಮ್ಮಿಕೊಂಡಿದೆ. ಗೂಗಲ್ ಮೀಟ್ ವೇದಿಕೆಯಲ್ಲಿ ನಡೆಯುವ ಕಾರ್ಯಾಗಾರವು ಬೆಳಗ್ಗೆ 10.30ಕ್ಕೆ ಸರಿಯಾಗಿ ಆರಂಭವಾಗಲಿದ್ದು, ಆಸಕ್ತ ರೈತರು https://meet.google.com/mib-nswp-abs ಈ ಲಿಂಕ್ ಬಳಸಿಕೊಂಡು ತರಬೇತಿಯಲ್ಲಿ ಭಾಗವಹಿಸಬಹುದು.

ಕಾರ್ಯಾಗಾರದಲ್ಲಿ ಭಾಗವಹಿಸಲು ಆಸಕ್ತಿ ಉಳ್ಳವರು ಮೊದಲು ತಮ್ಮ ಸ್ಮಾರ್ಟ್ ಫೋನಿನಲ್ಲಿ ಗೂಗಲ್ ಮೀಟ್ ಅಪ್ಲಿಕೇಷನ್ (ಆ್ಯಪ್) ಅನ್ನು ಡೌನ್ಲೋಡ್ ಮಾಡಿಕೊಂಡು, ಬಳಿಕ ಮೇಲೆ ತಿಳಿಸಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿದರೆ ತರಬೇತಿಯಲ್ಲಿ ಭಾಗವಹಿಸಬಹುದು.

ಸೂಚನೆಗಳು: ಗೂಗಲ್ ಮೀಟ್ ವೇದಿಕೆಗೆ ಹಾಜರಾದ ಕೂಡಲೇ ಸದಸ್ಯರು ತಮ್ಮ ಆಡಿಯೋ ಮತ್ತು ವಿಡಿಯೋವನ್ನು ಮ್ಯೂಟ್ ಮಾಡಬೇಕು. ತರಬೇತಿ ಆರಂಭದಲ್ಲಿಪ್ರಸೆಂಟ್ ನೌಮೇಲೆ ಕ್ಲಿಕ್ ಮಾಡದೆ, ‘ಆಸ್ಕ್ ಟು ಜಾಯಿನ್ಮೇಲೆ ಒತ್ತಬೇಕು. ಹೆಚ್ಚಿನ ಮಾಹಿತಿಗೆ ಧಾರವಾಡ ಕೃಷಿ ವಿಶ್ವವಿದ್ಯಾಲಯದ ಅಗ್ರಿ ವಾರ್ ರೂಮ್/ ರೈತ ಚೇತನ ಉಚಿತ ಸಹಾಯವಾಣಿ ಸಂಖ್ಯೆ: 1800-425-1150 ಸಂಪರ್ಕಿಸುವಂತೆ ಹನುಮನಮಟ್ಟಿ ಕೆವಿಕೆ ಮುಖ್ಯಸ್ಥರು ಹಾಗೂ ವಿಜ್ಞಾನಿಗಳು ಕೋರಿದ್ದಾರೆ.

Published On: 01 July 2021, 08:56 PM English Summary: training on importance of IT in agriculture

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.