1. ಸುದ್ದಿಗಳು

ಕೇಂದ್ರ ಸರ್ಕಾರದ 5 ಜನಪ್ರಿಯ ಯೋಜನೆಗಳ ಉಪಯೋಗವನ್ನು ಪಡೆಯುತ್ತಿದ್ದೀರಾ? ರೈತರೇ ಇಲ್ಲಿದೆ ನಿಮಗೆ ಅದರ ಮಾಹಿತಿ

ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ರೈತರಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ.. ಅದರಲ್ಲಿ ಈ ವರ್ಷದ 5 ಜನಪ್ರಿಯ ಯೋಜನೆಗಳ ಬಗ್ಗೆ ನಾವಿದ್ದು ತಿಳಿಸಿಕೊಡಲು ಹೊರಟಿದ್ದೇವೆ. ನೀವೆಲ್ಲರೂ ಅದರ ಉಪಯೋಗವನ್ನು ಪಡೆದುಕೊಂಡಿದ್ದರೆ ಸರಿ ಇಲ್ಲವಾದಲ್ಲಿ ಇನ್ನುಮುಂದಾದರೂ ನೀವು ಕೇಂದ್ರ ಸರ್ಕಾರದ ಐದು ಜನಪ್ರಿಯ ಯೋಜನೆಗಳ ಲಾಭವನ್ನು ಪಡೆದುಕೊಳ್ಳಬೇಕಾಗಿ ನಾವು ರೈತರಲ್ಲಿ ಕಳಕಳಿಯ ವಿನಂತಿ ಮಾಡಿಕೊಳ್ಳುತ್ತಿದ್ದೇವೆ.

1. ಪಿಎಂ ಕಿಸಾನ್ ಯೋಜನೆ
 ಪಿಎಂ ಕಿಸಾನ್ ಯೋಜನೆ ಬಗ್ಗೆ ತಾವೆಲ್ಲ ತಿಳಿದಿದ್ದೀರಾ, ಈ ಯೋಜನೆಯ ಮೂಲಕ ಭಾರತ ದೇಶದ ಪ್ರತಿಯೊಬ್ಬ ರೈತನಿಗೆ ಮೂರು ಕಂತುಗಳಲ್ಲಿ ಅಂದರೆ ವಾರ್ಷಿಕವಾಗಿ ಆರು ಸಾವಿರ ರೂಪಾಯಿಗಳನ್ನು ಜಮೆ ಮಾಡಲಾಗುತ್ತದೆ. ಯೋಜನೆಯು ಡಿಸೆಂಬರ್ 1 2018ರಲ್ಲಿ ಚಾಲ್ತಿಗೆ ಬಂದಿದ್ದು,ಈ ಯೋಜನೆಯು ಎರಡು ವರ್ಷಗಳ ಅವಧಿಯನ್ನು ಪೂರ್ಣಗೊಳಿಸಿದೆ.
2. ಪ್ರಧಾನಮಂತ್ರಿ ಕಿಸಾನ್ ಮಂದನ್ ಯೋಜನೆ
 ಎಲ್ಲ ಸರ್ಕಾರಿ ನೌಕರರಿಗೂ ತಾವು ನಿವೃತ್ತಿ ಹೊಂದಿದ ನಂತರ ಪೆನ್ಷನ್ ಹಣ ಬರುತ್ತದೆ, ಆದರೆ ರೈತರಿಗೂ ಕೂಡ ಪಿಂಚಣಿ ಬರುತ್ತದೆ ಎಂದರೆ ನೀವು ನಂಬುತ್ತೀರಾ? ಹೌದು ನೀವು ನಂಬಲೇಬೇಕು ಯಾಕೆಂದರೆ ಈ ಯೋಜನೆಯ ಮೂಲಕ ರೈತರು 60 ವರ್ಷಗಳ ನಂತರ ರೈತರಿಗೆ ಪೆನ್ಷನ್ ನೀಡುವ ಯೋಜನೆಯಾಗಿದೆ. ಯೋಜನೆಯ ಮೂಲಕ ತಮ್ಮ 60 ವರ್ಷದ ನಂತರ ರೈತರಿಗೆ ಕನಿಷ್ಠ 3000 ರೂಪಾಯಿ ಮಾಸಿಕವಾಗಿ ಪಿಂಚಣಿ ದೊರೆಯುತ್ತದೆ, ಯೋಜನೆಯಲ್ಲಿ ಭಾಗಿಯಾಗಲು ರೈತರು ತಮ್ಮ 18ರಿಂದ 40 ವರ್ಷದ ಒಳಗೆ ಇದು ರೂಪಾಯಿಂದ ಎರಡುನೂರು ರೂಪಾಯಿಗಳವರೆಗೆ ಸರ್ಕಾರಕ್ಕೆ ಪಾವತಿಸಬೇಕಾಗುತ್ತದೆ.
3. ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ
 ಇದು ಒಂದು ಇನ್ಸೂರೆನ್ಸ್ ತರಹದ ಸ್ಕೀಮ ಆಗಿದ್ದು, ರೈತರು ತಾವು ಬೆಳೆದ ಬೆಳೆಗಳಿಗೆ ಯೋಜನೆಯ ಮೂಲಕ ಇನ್ಸೂರೆನ್ಸ್ ಮಾಡಿಸಬಹುದು, ಹಾಗೂ ಮುಂದೆ ಯಾವುದೇ ತರಹದ ಯೋಜನೆಯ ಒಳಪಡುವ ಕಾರಣಗಳಿಂದಾಗಿ ರೈತರ ಬೆಳೆಗಳಿಗೆ ಹಾನಿಯಾಗಿದ್ದರೆ ಅಂತಹ ರೈತರಿಗೆ ಸರ್ಕಾರದಿಂದ ಪರಿಹಾರ ವಿಮೆ ಕ್ಲೇ ಮಾಡುವುದು 
 ಹೆಚ್ಚಿನ ಮಾಹಿತಿಗಾಗಿ www.pmfby ಗೆ ಭೇಟಿ ನೀಡಿ.
4. ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆ
 ಯೋಜನೆಯ ರೈತರಿಗೆ ಸಾಲವನ್ನು ಒದಗಿಸುವ ಯೋಜನೆಯಾಗಿದೆ ಯೋಜನೆಯನ್ನು 1998 ರಲ್ಲಿ ಜಾರಿಗೆ ತರಲಾಯಿತು. ಅಡಿಯಲ್ಲಿ ರೈತರಿಗೆ ಉಪಕರಣಗಳನ್ನು ಖರೀದಿಸಲು ಹಾಗೂ ಅವರ ಇನ್ನಿತರ ಖರ್ಚುಗಳಿಗಾಗಿ ಅಲ್ಪಾವಧಿ ಸಾಲವನ್ನು ನೀಡಲಾಗುವುದು. Sbi, hdfc,axis ಹಾಗೂ ಇನ್ನಿತರ ಬ್ಯಾಂಕುಗಳಲ್ಲಿ ಯೋಜನೆ ಅಡಿಯಲ್ಲಿ ರೈತರಿಗೆ ಸಾಲವನ್ನು ನೀಡಲಾಗುವುದು. ಇದು ರಾಷ್ಟ್ರಾದ್ಯಂತ ದೇಶದ ರೈತರಿಗೆ ಒಂದು ಪ್ರಮುಖ ಯೋಜನೆಯಾಗಿದೆ.
5. ಪಿಎಂ ಕುಸುಮ್ ಯೋಜನೆ
 ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯದಡಿಯಲ್ಲಿ ಯೋಜನೆಯನ್ನು ಜಾರಿಗೆ ತರಲಾಗಿದೆ, ಯೋಜನೆಯ ಮೂಲಕ ಮೋದಿ ಸರ್ಕಾರವು ರೈತರಿಗೆ ಕೃಷಿ ಉದ್ದೇಶಕ್ಕಾಗಿ ಸೈಟ್ಗಳನ್ನು ಖರೀದಿಸಲು ಸಹಾಯಧನವನ್ನು ನೀಡುತ್ತದೆ.

ಇವಿಷ್ಟು  2020ರ ಕೇಂದ್ರ ಸರ್ಕಾರದ ಜನಪ್ರಿಯ ಯೋಜನೆಗಳು, ಆತ್ಮೀಯ ರೈತರೇ ನೀವು ಯೋಜನೆಗಳ ಫಲಾನುಭವಿಗಳಾಗಿದ್ದಾರೆ ನಮಗೆ ಸಂತೋಷವಿದೆ, ಒಂದು ವೇಳೆ ನೀವು ಈ ಯೋಜನೆಗಳ ಸಹಾಯವನ್ನು ಪಡೆದ ಇದ್ದಲ್ಲಿ ನೀವು ಬರುವ ದಿನಗಳಲ್ಲಿ ಯೋಜನೆಗಳ ಸದ್ಬಳಕೆಯನ್ನು ಮಾಡಿಕೊಳ್ಳಬೇಕಾಗಿ ವಿನಂತಿ.

Published On: 27 December 2020, 07:35 AM English Summary: top 5 government schemes giving fund to farmers

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.