ಕೃಷಿ ಇನ್ನಷ್ಟು ಉತ್ತಮಗೊಳ್ಳಲು ಸಣ್ಣ ರೈತರ ಮಟ್ಟಿಗೆ ಗ್ರಾಮಾಂತರ ಪ್ರದೇಶಗಳಲ್ಲಿ ಹೊಸ ಪದ್ದತಿಯ ಗೋದಾಮುಗಳನ್ನು ನಿರ್ಮಿಸುವುದಕ್ಕೆ ಸರ್ಕಾರ ಚಿಂತನೆ ಮಾಡುತ್ತಿದೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ತಿಳಿಸಿದ್ದಾರೆ.
ಮನೆ ಕಟ್ಟಿಕೊಳ್ಳುವ ಬಡವರಿಗೆ ಸಿಎಂ ಬೊಮ್ಮಾಯಿಯವರಿಂದ ಸಿಹಿಸುದ್ದಿ!
ಕೃಷಿ ಇನ್ನಷ್ಟು ಉತ್ತಮಗೊಳ್ಳಲು ಸಣ್ಣ ಸಣ್ಣ ರೈತರ ಮಟ್ಟಿಗೆ ಗ್ರಾಮಾಂತರ ಪ್ರದೇಶಗಳಲ್ಲಿ ಹೊಸ ಪದ್ದತಿಯ ಗೋದಾಮುಗಳನ್ನು ನಿರ್ಮಿಸುವುದಕ್ಕೆ ಸರ್ಕಾರ ಚಿಂತನೆ ಮಾಡುತ್ತಿದೆ.
ಈ ಮೂಲಕ ರೈತ ತನ್ನ ಬೆಳೆಗೆ ಬೆಲೆ ಬಂದಾಗ ಮಾರಾಟ ಮಾಡಬಹುದು. ಜೊತೆಗೆ ಸುಗ್ಗಿ ಮಾಡಿದ ನಂತರ ರೈತರಿಗೆ ಸಹಾಯ ಮಾಡುವ ಕೆಲಸ ಮಾಡುತ್ತಿದ್ದೇವೆ ಎಂದರು.
ರಾಜ್ಯದಲ್ಲಿ ಪ್ರಥಮ ಬಾರಿಗೆ 12 ಶೀತಲಾಗಾರಗಳನ್ನು ಸ್ಥಾಪಿಸಲಾಗಿದೆ. ರೈತ ಸಂಜೀವಿನಿ ವಾಹನಗಳು, ಪ್ರಯೋಗಾಲಯಗಳಿಂದ ರೈತರ ಹೊಲಕ್ಕೆ ಸಂಶೋಧನೆಗಳು ಬರುತ್ತಿವೆ.
ಕೃಷಿಯಲ್ಲಿ ಸಾಧನೆ ಮಾಡಿರುವವರನ್ನು ಗುರುತಿಸಿ ಇಂದು ಪ್ರಶಸ್ತಿ ನೀಡಲಾಗುತ್ತಿರುವುದು ಉತ್ತಮ ಬೆಳವಣಿಗೆ ಎಂದರು.
Poly house subsidy: ಪಾಲಿ ಹೌಸ್ ನಿರ್ಮಾಣಕ್ಕೆ ರೈತರಿಂದ ಅರ್ಜಿ ಆಹ್ವಾನ: ಅರ್ಜಿ ಸಲ್ಲಿಕೆಗೆ ಫೆ.10 ಕೊನೆ ದಿನ!
ಕ್ರಾಂತಿಕಾರಿ ಕಾರ್ಯಕ್ರಮ
ರೈತ ಕೂಲಿಕಾರರ ಬಗ್ಗೆ ಯಾರೂ ಈವರೆಗೆ ಚಕಾರ ಎತ್ತಿರಲಿಲ್ಲ. ಧ್ವನಿ ಇಲ್ಲದ ಅವರಿಗೆ ಮನವಿ ನೀಡಬೇಕೆಂದು ಕೂಡ ತಿಳಿಯದ ಈ ದುಡಿಯುವ ವರ್ಗದ ಮಕ್ಕಳೂ ವಿದ್ಯೆ ಕಲಿಯಬೇಕು.
ಅವರೂ ಗುಡಿಸಲಿನಿಂದ ಹೊರಗೆ ಬರಬೇಕು. ಆದ್ದರಿಂದ ಇದು ಕ್ರಾಂತಿಕಾರಿ ಕಾರ್ಯಕ್ರಮವಾಗಿದೆ. ಬದಲಾವಣೆ ಅತ್ಯಂತ ತಳಮಟ್ಟದಿಂದ ಆಗಬೇಕು.
ಕಾರ್ಯಕ್ರಮಗಳನ್ನು ರೂಪಿಸುವಾಗ ಕಟ್ಟಕಡೆಯ ವ್ಯಕ್ತಿಯ ಬದುಕನ್ನು ಗಮನದಲ್ಲಿರಿಸಿಕೊಂಡು ಕಾರ್ಯಕ್ರಮ ರೂಪಿಸಬೇಕು. ಸರ್ಕಾರದ ಆರ್ಥಿಕ ನೆರವಿನಿಂದ ತಮ್ಮ ಮಕ್ಕಳನ್ನು ಓದಿಸಬಹುದೆಂಬ ಆತ್ಮವಿಶ್ವಾಸ ಈ ಕುಟುಂಬಗಳಿಗೆ ಬಂದಿದೆ.
ಕಟ್ಟಡ ಕೂಲಿಕಾರ್ಮಿಕರ 5 ಲಕ್ಷ ವಿದ್ಯಾರ್ಥಿಗಳಿಗೆ ಯೋಜನೆ ತಲುಪಿದೆ. ದುಡಿಯುವ ವರ್ಗಕ್ಕೆ ಬಲ ತುಂಬಬೇಕು ಎಂದರು.
ಫೆಬ್ರುವರಿ 22ರಿಂದ 25ರವರೆಗೆ “ರಾಷ್ಟ್ರೀಯ ತೋಟಗಾರಿಕೆ ಮೇಳ – 2023” ಆಯೋಜನೆ
ಮೂಲ ಸಮಸ್ಯೆಗೆ ಪರಿಹಾರ
33 ಲಕ್ಷ ರೈತರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ ಒದಗಿಸಲಾಗಿದೆ. ಕೃಷಿಯಲ್ಲಿ ಆರ್ಥಿಕ ಬದಲಾವಣೆ ತರಲು ಈ ಬಗ್ಗೆ ಪರಿಣಿತರ ಬಳಿ ಚರ್ಚೆ ಮಾಡುತ್ತಿದ್ದು, ಒಂದು ಎಕರೆ ಜೋಳ ಬೆಳೆದರೆ ಎಷ್ಟು ವೆಚ್ಚವಾಗಲಿದೆ.
ಎಷ್ಟು ಅಂತರವಿದೆ ಎಂದು ಪರಿಶೀಲಿಸಿ, ಬರುವ ದಿನಗಳಲ್ಲಿ ಇದಕ್ಕೆ ವಿಶೇಷ ಕಾರ್ಯಕ್ರಮವನ್ನು ರೂಪಿಸಲಾಗುವುದು. ರೈತ, ಕೂಲಿಕಾರರನ್ನು ಗಟ್ಟಿಗೊಳಿಸಿದರೆ ಈ ನಾಡನ್ನು ಕಟ್ಟಬಹುದು. ದುಡಿಮೆಗೆ ಬೆಲೆ ಬರಲು ಕೃಷಿ ಸಾಲದ ನೀತಿ ಬದಲಾಗಬೇಕು.
ಕೃಷಿ ಉತ್ಪನ್ನ ಪಡೆದ ಮೇಲೆ ಮಾರುಕಟ್ಟೆಯಲ್ಲಿ ದರ ನಿರ್ಧಾರ ಮಾಡುವ ರೀತಿಯಲ್ಲಿ ಆಗಬೇಕು. ರೈತನಿಗೆ ತಾನು ಬೆಳೆದ ಬೆಳೆಯ ಬೆಲೆ ಎಷ್ಟು ಎಂದು ಮುಂಚಿತವಾಗಿಯೇ ತಿಳಿಯುವ ಯೋಜನೆಯನ್ನು ಜಾರಿಗೆ ತರಬೇಕೆಂಬ ಚಿಂತನೆ ಇದೆ.
ಈ ಸರ್ಕಾರಿ ನೌಕರರಿಗೆ ಸಿಹಿಸುದ್ದಿ : ಹಳೆ ಪಿಂಚಣಿ ಮರು ಜಾರಿಗೆ ಸುಪ್ರೀಂ ಕೋರ್ಟ್ ತೀರ್ಪು!
ಬರುವ ದಿನಗಳಲ್ಲಿ ಕೃಷಿಗೆ ಇನ್ನಷ್ಟು ಶಕ್ತಿಯನ್ನು ತುಂಬಲಾಗುವುದು. ಪ್ರಧಾನಮಂತ್ರಿಗಳ ಕಿಸಾನ್ ಸಮ್ಮಾನ್ ಯೋಜನೆಯಡಿ 20 ಲಕ್ಷ ಕೋಟಿಗಳಿಂತ ಹೆಚ್ಚು ಅನುದಾನವನ್ನು ದೇಶದಲ್ಲಿ ನೀಡಿದ್ದಾರೆ.
ಕರ್ನಾಟಕದಲ್ಲಿ 46 ಲಕ್ಷ ಜನ ರೈತರಿಗೆ ಕಳೆದ 5 ವರ್ಷಗಳಿಂದ ಅನುದಾನ ಒದಗಿಸಲಾಗುತ್ತಿದ್ದು, ಕೇಂದ್ರದ ಆರು ಸಾವಿರ ರೂ.ಗಳಿಗೆ ರಾಜ್ಯ ಸರ್ಕಾರದ ನಾಲ್ಕು ಸಾವಿರ ಸೇರಿಸಿ ಒಟ್ಟು ಹತ್ತು ಸಾವಿರ ರೂ.ಗಳನ್ನು ನೀಡಲಾಗುತ್ತಿದೆ.
ಮೂಲ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಕೆಲಸ ಸರ್ಕಾರ ಮಾಡುತ್ತಿದೆ ಎಂದರು.
Share your comments