1. ಸುದ್ದಿಗಳು

ರಸಗೊಬ್ಬರ ಕೊರತೆ ಇಲ್ಲ; 4 ಸಾವಿರ ಮೆಟ್ರಿಕ್‌ ಟನ್‌ಗೂ ಅಧಿಕ ರಸಗೊಬ್ಬರ ದಾಸ್ತಾನಿಗೆ-ಬಿ.ಸಿ. ಪಾಟೀಲ್‌

Kalmesh T
Kalmesh T
There is no shortage of fertilizer; 4000 metric tonnes of fertilizer Patil

4,085 ಮೆಟಿಕ್‌ ಟನ್‌ನಷ್ಟುಇನ್ನೂ ದಾಸ್ತಾನು ಇದೆ. ವಾಡಿಕೆ ಮಳೆಗಿಂತ ಈ ಬಾರಿ ಹೆಚ್ಚಾಗಿದೆ. (80 ಮಿ.ಮಿ.) ಬಿತ್ತನೆ ಬೀಜ, ಕೀಟನಾಶಕ ಪೂರೈಕೆಯಲಿ ವ್ಯತ್ಯಯವಾಗದಂತೆ ಕ್ರಮವಹಿಸಲಾಗಿದೆ ಎಂದು ಅವರು ತಿಳಿಸಿದರು. ಏ. 25 ರಿಂದ ರಾಗಿ ಖರೀದಿ ಕೇಂದ್ರ ಪುನಾರಂಭವಾಗುತ್ತಿದ್ದು, ನೋಂದಣಿ ಕಾರ್ಯ ಅಂದಿನಿಂದಲೇ ಅರಂಭಗೊಳ್ಳಲಿದೆ ಎಂದು ಈಗಾಗಲೇ ರಾಜ್ಯ ಸರ್ಕಾರ ಬೆಂಬಲ ಬೆಲೆ ಖರೀದಿ ಕೇಂದ್ರದಿಂದ 2 ಲಕ್ಷ ಮೆಟ್ರಿಕ್‌ ಟನ್‌ ರಾಗಿ ಖರೀದಿಸಿತ್ತು. ರೈತರ ಬೇಡಿಕೆ ಮತ್ತು ಒತ್ತಾಯದ ಮೇರೆಗೆ 1.40 ಲಕ್ಷ ಮೆಟ್ರಿಕ್‌ ಟನ್‌ ರಾಗಿ ಖರೀದಿಗೆ ನಿರ್ಧರಿಸಿದ್ದು, ಏ. 25 ರಿಂದ ರಾಜ್ಯಾದ್ಯಂತ ಖರೀದಿ ಕೇಂದ್ರ ಆರಂಭಗೊಳ್ಳಿದ್ದು, ಅಂದಿನಿಂದಲೇ ರೈತರು ನೋಂದಣಿ ಮಾಡಿಸಿಕೊಳ್ಳಬಹುದಾಗಿದೆ ಎಂದರು.

ರೈತರಿಗೆ ಶಾಕಿಂಗ್ ಸುದ್ದಿ: ಈ ವರ್ಷದ ಬೆಳೆಗಳಿಗೆ ಕಾದಿದೆ ಗಂಡಾಂತರ!

ಆತ್ಮಹತ್ಯೆ ಮಾಡಿಕೊಂಡ ರೈತ ಕುಟುಂಬಗಳಿಗೆ ಶೀಘ್ರ ಪರಿಹಾರ ನೀಡುವಂತೆ ಹೈಕೋರ್ಟ್‌ ಸೂಚನೆ

ಜಿಲ್ಲೆಯಲ್ಲಿ ರಸಗೊಬ್ಬರ (Fertilizer) ಕೊರತೆ ಇಲ್ಲ. 4 ಸಾವಿರ ಮೆಟ್ರಿಕ್‌ ಟನ್‌ಗೂ ಅಧಿಕ ರಸಗೊಬ್ಬರ ದಾಸ್ತಾನಿಗೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್‌ (BC Patil) ಹೇಳಿದರು. ಹುಣಸೂರು ಪಟ್ಟಣ ಹೊರವಲಯದ ಗೋವಿಂದನಹಳ್ಳಿ ಗ್ರಾಪಂ ವ್ಯಾಪ್ತಿಯ ರಾಮು ಬಡಾವಣೆಯಲ್ಲಿ 80 ಲಕ್ಷ ರು. ವೆಚ್ಚದಡಿ ನಿರ್ಮಾಣಗೊಂಡಿರುವ ಕೃಷಿ ಇಲಾಖೆ ಉಪನಿರ್ದೇಶಕರ ಕಚೇರಿಯನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನ ಬೇಡಿಕೆ 1.09 ಲಕ್ಷ ಮೆಟ್ರಿಕ್‌ ಟನ್‌ ಆಗಿದ್ದು, ಏಪ್ರಿಲ್‌ ತಿಂಗಳಿನಲ್ಲಿ 13 ಸಾವಿರ ಮೆಟ್ರಿಕ್‌ ಟನ್‌ನಷ್ಟು ರಸಗೊಬ್ಬರ ಬೇಡಿಕೆಯಿದ್ದು, 18 ಸಾವಿರ ಮೆಟ್ರಿಕ್‌ ಟನ್‌ನಷ್ಟುಪೂರೈಸಿದ್ದೇವೆ. 

ಮಣ್ಣು ಪರೀಕ್ಷೆ ಮಾಡಿ ದುಪ್ಪಟ್ಟು ಲಾಭ ಪಡೆಯಿರಿ!

ರೈತರಿಗೆ ಗುಡ್ ನ್ಯೂಸ್: ಸರ್ಕಾರಿ ಭೂಮಿಯಲ್ಲಿ ಕೃಷಿ: ಕೃಷಿ ಆಕಾಂಕ್ಷಿಗಳಿಗೆ ವರದಾನ ಈ ಯೋಜನೆ

ಮಡಿಕೇರಿ, ಬನ್ನೂರು ಮುಂತಾದ ಕಡೆಗಳಲ್ಲಿ ರಸಗೊಬ್ಬರವನ್ನು ಅಕ್ರಮವಾಗಿ ಅಂತರ ರಾಜ್ಯಗಳಿಗೆ ಸಾಗಾಣೆ ಮಾಡುತ್ತಿರುವ ಕುರಿತು ವರದಿಗಳು ಬಂದಿದ್ದು, ಇಲಾಖೆಯ ಜಾಗೃತದಳ ಈ ಎಲ್ಲ ಪ್ರಕರಣಗಳನ್ನು ಪತ್ತೆ ಹಚ್ಚಿ ತಪ್ಪಿತಸ್ಥರ ವಿರುದ್ಧ ಕ್ರಮವಹಿಸಿದೆ. ಚೆಕ್‌ಪೋಸ್ಟ್‌ಗಳಲ್ಲಿ ಜಾಗೃತದಳ ಕ್ರಿಯಾಶೀಲವಾಗಿ ಇಂತಹ ಅಕ್ರಮಗಳನ್ನು ಪತ್ತೆಹಚ್ಚಿ ಕಾನೂನಿನಡಿ ಕ್ರಮವಹಿಸುತ್ತಿದೆ ಎಂದು ಅವರು ಹೇಳಿದರು. ಕೃಷಿ ಇಲಾಖೆ ವತಿಯಿಂದ ರೈತರ ಬೆಳೆ ಹಾಳಾಗದಂತೆ ಕ್ರಮ ವಹಿಸಲು ರಾಜ್ಯದ 13 ಕಡೆ ಕೋಲ್ಡ್‌ ಸ್ಟೋರೇಜ್‌ಗಳನ್ನು ಸ್ಥಾಪಿಸಲಾಗಿದೆ (ತಲಾ 9 ಕೋಟಿ ರು. ವೆಚ್ದದಡಿ). ರೈತರ ಅನುಕೂಲಕ್ಕಾಗಿ ಎಲ್ಲ ರೀತಿಯ ಕ್ರಮವಹಿಸಲಾಗಿದೆ. 

ಮುಂದಿನ 5 ದಿನಗಳ ಕಾಲ ಕೆಲವು ರಾಜ್ಯಗಳಲ್ಲಿ ಭಾರೀ ಮಳೆ ಸಾಧ್ಯತೆ: ಹವಾಮಾನ ಇಲಾಖೆ

ಸಿಡಿಲಿನ ಮುನ್ಸೂಚನೆ ನೀಡಲಿದ್ದಾಳೆ ಈ ದಾಮಿನಿ!

ವಿದ್ಯಾನಿಧಿ ಯೋಜನೆಯಡಿ ಜಿಲ್ಲೆಯ 58 ಸಾವಿರ ವಿದ್ಯಾರ್ಥಿಗಳು ಪೋತ್ಸಾಹಧನ (17.7 ಕೋಟಿ ರು. ಗಳು) ಪಡೆದಿದ್ದಾರೆ. ಪಿಎಂ ಕಿಸಾನ್‌ ಸಮ್ಮಾನ್‌ ಯೋಜನೆಯಡಿ ಒಟ್ಟು 54.75 ಕೋಟಿ ರು. ಗಳು ರೈತರ ಖಾತೆಗೆ ನೇರವಾಗಿ ಜಮೆಯಾಗಿದೆ. ಇವೆಲ್ಲವೂ ನಮ್ಮ ಸರ್ಕಾರದ ಹೆಮ್ಮೆಯ ಯೋಜನೆಯಾಗಿದೆ ಎಂದರು. ಶಾಸಕ ಎಚ್‌.ಪಿ. ಮಂಜುನಾಥ್‌ ಮಾತನಾಡಿ, ರೈತಪರ ಕಾಳಜಿಯಿಂದ ಕಾರ್ಯಕ್ರಮಗಳ ಅನುಷ್ಠಾನಗೊಳ್ಳಬೇಕಿದೆ. ಕೋವಿಡ್‌ ನಂತರದ ದಿನಗಳಲ್ಲಿ ರೈತರು ಹೆಚ್ಚು ಸಂಕಷ್ಟಕ್ಕೆ ಒಳಗಾಗಿದ್ದು, ರಾಗಿ ಖರೀದಿ ಕೇಂದ್ರದ ಮರುಸ್ಥಾಪನೆ ಸ್ವಾಗತಾರ್ಹ ಎಂದರು.

ಭಾರತದ palm oil ಆಮದು ಹೆಚ್ಚಳ!

ಬೇಸಿಗೆಯಲ್ಲಿ ಕರೆಂಟ್ ಬಿಲ್ ಜಾಸ್ತಿ ಬರುತ್ತಿದೆಯೇ..? ಈ ಟ್ರಿಕ್ಸ್ ಬಳಸಿ.. ಹಣ ಉಳಿಸಿ

Published On: 23 April 2022, 05:53 PM English Summary: There is no shortage of fertilizer; 4000 metric tonnes of fertilizer Patil

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.