ಫಿಫಾ ಪುಟ್ಬಾಲ್ ವಿಶ್ವಕಪ್! ಭಾರತವೂ ಸೇರಿದಂತೆ ಜಗತ್ತಿನ ಕೋಟ್ಯಾಂತರ ಪುಟ್ಬಾಲ್ ಅಭಿಮಾನಿಗಳು ಕಾತರದಿಂದ ಕಾತರ್‌ನತ್ತ ನೋಡಿದ ದಿನಗಳಿದ್ದವು. ಅವೆಲ್ಲಕ್ಕೂ ಇದೀಗ ತೆರೆಬಿದ್ದಿದ್ದು, ಫಿಫಾ ವಿಶ್ವಕಪ್ ಗೆದ್ದ ಅರ್ಜೆಂಟೀನಾದಲ್ಲಿ ಸಂಭ್ರಮ ಮುಗಿಲು ಮುಟ್ಟಿದೆ.
ಅಲ್ಲಿನ ಜನ ಈ ಸಂಭ್ರಮವನ್ನು ಭಿನ್ನವಾಗಿ ಸಂಭ್ರಮಿಸುತ್ತಿದ್ದಾರೆ. ಅದರ ವಿವರ ಇಲ್ಲಿದೆ...
Sugarcane| ಕಬ್ಬು ಬೆಳಗಾರರಿಗೆ 21 ಕೋಟಿ ಪಾವತಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಕತಾರ್ ಲುಸೇಲ್ ಕ್ರೀಡಾಂಗಣದಲ್ಲಿ ನಡೆದ ಫಿಫಾ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಫ್ರಾನ್ಸ್ ವಿರುದ್ಧ ಅರ್ಜೆಂಟೀನಾ ರೋಚಕ ಗೆಲುವು ದಾಖಲಿಸಿದ್ದು, ಈ ಮೂಲಕ ಅರ್ಜೆಂಟೀನಾ 36 ವರ್ಷಗಳ ನಂತರ ಮೂರನೇ ಬಾರಿಗೆ ಫಿಫಾ ವಿಶ್ವಕಪ್ ತನ್ನದಾಗಿಸಿಕೊಂಡಿದೆ. ಅರ್ಜೆಂಟೀನಾ ಮೂರನೇ ಬಾರಿಗೆ ವಿಶ್ವಕಪ್ ಎತ್ತಿಹಿಡಿದಿದೆ.
Sugarcane Growers| ಕಬ್ಬು ಬೆಳೆಗಾರರಿಗೆ ವಂಚನೆ: 21 ಸಕ್ಕರೆ ಕಾರ್ಖಾನೆಗಳ ಮೇಲೆ ದಾಳಿ!
1978ರಲ್ಲಿ ಮೊದಲ ಬಾರಿಗೆ ಫಿಫಾ ವಿಶ್ವಕಪ್ ಗೆದ್ದಿದ್ದ ಅರ್ಜೆಂಟೀನಾ, 1986ರಲ್ಲಿ ಡಿಯೇಗೊ ಮರಡೊನಾ ಅವರ ನೇತೃತ್ವದಲ್ಲಿ ಎರಡನೇ ಬಾರಿ ವಿಶ್ವ ಕಪ್ ಗೆದ್ದಿತ್ತು. ಈಗ ಲಿಯೋನೆಲ್ ಮೆಸ್ಸಿ ಸಾರಥ್ಯದಲ್ಲಿ ಮತ್ತೊಮ್ಮೆ ಟ್ರೋಫಿ ಎತ್ತಿ ಹಿಡಿದು, ವಿಶ್ವಕಪ್ ಇತಿಹಾಸದಲ್ಲಿ ಮೂರನೇ ಬಾರಿ ಚಾಂಪಿಯನ್ಸ್ ಆಗಿದೆ.
ದೋಹಾದ ಲುಸೈಲ್ ಕ್ರೀಡಾಂಗಣದಲ್ಲಿ ಲಯೊನೆಲ್ ಮೆಸ್ಸಿ ಬಳಗ ಫಿಫಾ ವಿಶ್ವಕಪ್ ಫುಟ್‌ಬಾಲ್ ಟೂರ್ನಿಯನ್ನು ಗೆದ್ದು ಟ್ರೋಫಿ ಎತ್ತಿಹಿಡಿದಾಗ, ಅತ್ತ ಅರ್ಜೆಂಟೀನಾದಲ್ಲಿ ಜನರು ಸಂಕಷ್ಟ ಮರೆತು ಸಂಭ್ರಮಿಸಿದ್ದಾರೆ.
ಮತದಾರರ ಗುರುತಿನ ಚೀಟಿಗೆ ಆಧಾರ್ ಸಂಖ್ಯೆ ಜೋಡಣೆ, ಚುನಾವಣಾ ಆಯೋಗ ಹೇಳಿದ್ದೇನು ಗೊತ್ತೆ ?
ದಕ್ಷಿಣ ಅಮೆರಿಕದ ಈ ದೇಶ ಕಳೆದ ಕೆಲವು ವರ್ಷಗಳಿಂದ ಆರ್ಥಿಕ ಹಿಂಜರಿತಕ್ಕೆ ಸಿಲುಕಿ ನಲುಗಿದೆ. ಅಷ್ಟೇ ಅಲ್ಲ ಈ ಭಾಗದಲ್ಲಿ ಆರ್ಥಿಕ ಹಿಂಜೆರಿತ ಯಾವ ಪ್ರಮಾಣದಲ್ಲಿ ಇಲ್ಲಿ ಮುಟ್ಟಿದೆ ಎಂದರೆ, ಇಲ್ಲಿನ ಪ್ರತಿ ಹತ್ತು ಜನರಲ್ಲಿ ನಾಲ್ವರು ಬಡತನದಲ್ಲಿ ಜೀವನ ಸಾಗಿಸುತ್ತಿದ್ದಾರೆ.
1986ರ ಬಳಿಕ ಮೊದಲ ಬಾರಿ ತಮ್ಮ ದೇಶ ವಿಶ್ವಕಪ್ ಜಯಿಸಿದ ಐತಿಹಾಸಿಕ ಸಾಧನೆಯನ್ನು ಇಲ್ಲಿನ ಜನರು ರಾತ್ರಿಯಿಡೀ ಆಚರಿಸಿದ್ದಾರೆ. ಬ್ಯೂನಸ್ ಐರಿಸ್ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಲಕ್ಷಕ್ಕೂ ಅಧಿಕ ಮಂದಿ ರಸ್ತೆಗಳಲ್ಲಿ ಹಾಡು, ನೃತ್ಯದ ಮೂಲಕ ಸಂಭ್ರಮದಲ್ಲಿ ಮಿಂದೆದ್ದರು. ಸ್ಟಾರ್ ಆಟಗಾರ ಮೆಸ್ಸಿ ಗುಣಗಾನ ಮಾಡಿದರು.
ವಿಶ್ವಕಪ್ ಗೆದ್ದ ಹೀರೋಗಳಿಗೆ ಭರ್ಜರಿ ಸ್ವಾಗತ ನೀಡಲು ಬ್ಯೂನಸ್ ಐರಿಸ್‌ನ ಜನರು ಸಿದ್ಧತೆ ನಡೆಸಿದ್ದಾರೆ. ತೆರೆದ ವಾಹನದಲ್ಲಿ ಅದ್ಧೂರಿ ಸ್ವಾಗತಕ್ಕೆ ಬೇಕಾದ ಸಿದ್ಧತೆಗಳನ್ನು ಈಗಾಗಲೇ ಮಾಡಿಕೊಳ್ಳಲಾಗಿದೆ.
Share your comments