1. ಸುದ್ದಿಗಳು

Marimuthu ಧಾರಾವಾಹಿಯ ದೃಶ್ಯ, ಮಾತು ಬದುಕಿನಲ್ಲಿ ಸತ್ಯವಾಯ್ತು !

Hitesh
Hitesh
The scene of the serial, the words became true in life!

ತಮಿಳು ಚಿತ್ರರಂಗದ ಕಿರುತೆರೆ ಹಾಗೂ ಬೆಳ್ಳಿಪರದೆ ಎರಡರಲ್ಲೂ ಮಿಂಚುತ್ತಿದ್ದ G.Marimuthu ಅವರು ಹೃದಯಾಘಾತದಿಂದ ಶುಕ್ರವಾರ ಮೃತಪಟ್ಟಿದ್ದಾರೆ.

ತಮಿಳಿನ Ethirneechal ಧಾರಾವಾಹಿಯ ಮೂಲಕ ಅವರು ಈಚೆಗೆ ಹೆಚ್ಚು ಪ್ರಸಿದ್ಧಿ ಗಳಿಸಿದ್ದರು.

ಅಲ್ಲದೇ ಜೈಲರ್‌ ಚಿತ್ರದಲ್ಲಿಯೂ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

ಶನಿವಾರ ಧಾರಾವಾಹಿಯ ಡಬ್ಬಿಂಗ್‌ ವೇಳೆ ಹೃದಯಾಘಾತವಾಗಿದೆ.

ಸಿನಿಮಾ ನಿರ್ದೇಶನದ ಜೊತೆಗೆ 50ಕ್ಕೂ ಹೆಚ್ಚು ಚಿತ್ರಗಳಲ್ಲಿ ಸಹಾಯಕ ನಿರ್ದೇಶಕನಾಗಿ,

ಧಾರಾವಾಹಿಗಳಲ್ಲಿ ಖಳನಟನಾಗಿ ಅಭಿನಯಿಸಿದ್ದಾರೆ.

Ethirneechal ಧಾರಾವಾಹಿ Hey ma Hey ಎನ್ನುವ ಧ್ವನಿಯೇ ಹೆಚ್ಚು ಜನಮನ್ನಣೆ ಗಳಿಸಿತ್ತು.

Ethirneechal ಧಾರಾವಾಹಿಯಲ್ಲೂ ಅವರಿಗೆ ಹೃದಯಾಘಾತವಾಗುವ ಸೀನ್‌ ಇದೆ.

ಅದು ಸಹ ಕೆಲವೇ ದಿನಗಳ ಹಿಂದೆ ಟೆಲಿಕಾಸ್ಟ್‌ ಆಗಿತ್ತು.

“ನನಗೆ ಈಚೆಗೆ ದೇಹದಲ್ಲಿ ಮುಳ್ಳುಚುಚ್ಚಿದ ಅನುಭವ ಆಗ್ತಿದೆ. ಅದು ದೇಹಕ್ಕೆ ಆಗುತ್ತಿರುವ ನೋವೋ ಮನಸ್ಸಿಗೆ ಆಗುತ್ತಿರುವ ನೋವೋ ಗೊತ್ತಾಗುತ್ತಿಲ್ಲ.

ಈ ನೋವು ನನ್ನನ್ನು ಎಚ್ಚರ್ಸ್ತಿದೆ. ಯಾವುದೋ ಕೆಟ್ಟದರ ಮುನ್ಸೂಚನೆಯಂತೆ ಇದು ನನಗೆ ಕಾಣ್ಸತಿದೆ.

ಅದಕ್ಕೆ ಎದೆನೋವಿರಬೇಕು. ಎದೆಯ ನೋವು ಗಂಟೆಯಂತೆ ಎಚ್ಚರ್ಸ್ತಿದೆ” ಇದು

Ethirneechal  ಧಾರಾವಾಹಿಯಲ್ಲಿ (ಗುಣಶೇಖರ್‌) ಮಾರಿಮುತ್ತು ಅವರು  ಹೇಳಿರುವ ಸಂಭಾಷಣೆ

ಹೇ ಮಾ ಹೇ ಎನ್ನುವ ಧ್ವನಿ ಇನ್ಮುಂದೆ ಕೇಳುವುದಿಲ್ಲ!

ಹೇ ಮಾ ಹೇ ಎನ್ನುವ ಧ್ವನಿಯ ಮೂಲಕವೇ ಈಚೆಗೆ ಮನೆ ಮಾತಾಗಿದ್ದ ಮಾರಿಮುತ್ತು ಅವರ ಸಂಭಾಷಣೆ ಇನ್ಮುಂದೆ ಕೇಳಸಿಗುವುದಿಲ್ಲ.

Ethirneechal ಧಾರಾವಾಹಿಯ ಆಧಾರ ಸ್ತಂಭವೇ ಆ ಧಾರಾವಾಹಿಯ ಖಳನಟರಾದ ಗುಣಶೇಖರ್‌ (ಮಾರಿಮುತ್ತು) ಅವರಾಗಿದ್ದರು.

ಧಾರಾವಾಹಿಯಲ್ಲಿ ಅವರ ನಟನೆಯನ್ನು ಮೆಚ್ಚಿಕೊಳ್ಳದವರೇ ಇಲ್ಲ ಎನ್ನುವಷ್ಟು ಖ್ಯಾತಿಯನ್ನು ಅವರು ಗಳಿಸಿದ್ದರು.

ಅಷ್ಟೇ ಅಲ್ಲದೇ ಟ್ರೋಲ್‌, ಮೀಮ್ಸ್‌ ಸೇರಿದಂತೆ ಹಲವು ಹಾಸ್ಯ ಕಂಟೆಂಟ್‌ಗಳಲ್ಲಿಯೂ

ಅವರ ಸಂಭಾಷಣೆ ಮತ್ತು ಧ್ವನಿ ಹೆಚ್ಚು ಖ್ಯಾತಿ ಗಳಿಸಿತ್ತು.

ಮಾರಿಮುತ್ತು ಅವರ ನಿಧನಕ್ಕೆ ತಮಿಳುಚಿತ್ರರಂಗದ ಗಣ್ಯರು ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದಾರೆ.  

Published On: 08 September 2023, 02:22 PM English Summary: The scene of the serial, the words became true in life!

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.