ನೀವು ನಿಮ್ಮ ಮನೆಯ ಮೇಲೆ ಸೋಲಾರ್ ಅಳವಡಿಸಲು ಯೋಚಿಸುತ್ತಿದ್ದರೆ ಇಲ್ಲಿದೆ ನಿಮಗೊಂದು ಅದ್ಬುತ ಅವಕಾಶ. ಸರ್ಕಾರ ನಿಮಗೆ ಧನ ಸಹಾಯ ಮಾಡಲಿದೆ. ಶೇಕಡ 40 ರಷ್ಟು ಸಬ್ಸಿಡಿ ಕೂಡ ದೊರೆಯಲಿದೆ. ಹೌದು, ಇಲ್ಲಿದೆ ಜನ ಸಾಮಾನ್ಯರಿಗೆ ಒಂದು ಅದ್ಬುತ ಅವಕಾಶ. ಇದರೊಟ್ಟಿಗೆ ನೀವು ಮುಂದೆ ಬಿಸಿನೆಸ್ ಕೂಡ ಮಾಡಬಹುದು. ಇಲ್ಲಿದೆ ಸಂಪೂರ್ಣ ವಿವರ.
ಕೇಂದ್ರ ಸರ್ಕಾರದ ಸೌರಗೃಹ ಯೋಜನೆಯಡಿ ಮನೆಯ ಮೇಲ್ಛಾವಣಿ ಮೇಲೆ ಸೌರ ಫಲಕ ( Solar Panel) ಅಳವಡಿಸಲು ಶೇಕಡ 40 ರಷ್ಟು ಸಬ್ಸಿಡಿ (Subsidy) ದೊರೆಯಲಿದೆ. ವಿದ್ಯುತ್ ದರ ನಿತ್ಯ ಹೆಚ್ಚುತ್ತಿರುವ ಸಂದರ್ಭದಲ್ಲಿ ರೂಫ್ಟಾಪ್ ಸೋಲಾರ್ ಯೋಜನೆ (Solar Rooftop Scheme) ಒಂದು ಉತ್ತಮ ಯೋಜನೆಯಾಗಿದೆ. ಈ ಯೋಜನೆಯಿಂದ ಉಚಿತ ವಿದ್ಯುತ್ ಪಡೆಯುವುದಲ್ಲದೆ, ನಿಯಮಿತ ಆದಾಯವನ್ನೂ ಕೂಡ ಪಡೆಯಬಹುದು.
ಇದನ್ನೂ ಓದಿರಿ:
ಗುಡ್ ನ್ಯೂಸ್: ಸಾವಯವ ಕೃಷಿಕರಿಗೆ ಇಲ್ಲಿದೆ ಬರೋಬ್ಬರಿ ರೂ.50,000 ಸಬ್ಸಿಡಿ!
ರೈತರಿಗೆ ಸಿಹಿಸುದ್ದಿ : ಹಸು-ಎಮ್ಮೆ ಖರೀದಿಗೆ ರೂ.20 ಸಾವಿರ ಸಬ್ಸಿಡಿ! ರಾಜ್ಯ ಸರ್ಕಾರದ ಭರ್ಜರಿ ಕೊಡುಗೆ!
Rooftop Solar Panel ಸಹಾಯಧನ
ಒಂದು ವಸತಿ ಗೃಹ ಅಥವಾ ವಸತಿ ಸಂಕೀರ್ಣದ ಮೇಲೆ ಒಂದು Kilo Watt ನಿಂದ 500 Kilo Watt ವರೆಗೂ ಸೌರ ವಿದ್ಯುತ್ ಉತ್ಪಾದನೆ ಮಾಡಬಹುದು. ಒಂದು ಕಿಲೋ ವ್ಯಾಟ್ ಸಾಮರ್ಥ್ಯದ ಘಟಕಕ್ಕೆ 50 ರಿಂದ 60 ಸಾವಿರ ರೂಪಾಯಿಯವರೆಗೆ ಇರುತ್ತದೆ. ಇದಕ್ಕೆ 20 ರಿಂದ 22 ಸಾವಿರ ರೂಪಾಯಿ ಅಂದರೆ ಶೇ. 40 ರಷ್ಟು ಸಬ್ಸಿಡಿ ಸಿಗಲಿದೆ. ಇದೇ ಸಬ್ಸಿಡಿಯು ಮೂರು ಕಿಲೋ ವ್ಯಾಟ್ ವರೆಗೂ ಸಿಗುತ್ತದೆ. 10 ಕಿಲೋ ವ್ಯಾಟ್ ಘಟಕ ಸ್ಥಾಪಿಸಿದರೆ 3 ಕಿಲೋ ವ್ಯಾಟ್ ವರೆಗೂ ಶೇ. 40 ರಷ್ಟು ಸಬ್ಸಿಡಿ ಹಾಗೂ ನಂತರದ 7 ಕಿಲೋ ವ್ಯಾಟ್ ವರೆಗೆ ಶೇ. 20 ರಷ್ಟು ಸಬ್ಸಿಡಿ ಸಿಗಲಿದೆ. ನಿಮ್ಮ ಬಳಿ ಹಣವಿಲ್ಲದಿದ್ದರೆ ಬ್ಯಾಂಕಿನಿಂದ ಸಾಲಸೌಲಭ್ಯವೂ ಪಡೆಯಬಹುದು.
ಈ ಯೋಜನೆಯಡಿಯಲ್ಲಿ ಗ್ರಾಹಕರು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿದ ನಂತರ ಸಂಬಂಧಿಸಿದ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಖುದ್ದು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಲಿದ್ದಾರೆ. ಈ ವೇಳೆ ಘಟಕ ಸ್ಥಾಪನೆಗೆ ಮನೆಗಳು ಅಥವಾ ಅಪಾರ್ಟ್ ಮೆಂಟ್ ಸೂಕ್ತ ಎನಿಸಿದರೆ, ಯೋಜನೆ ಜಾರಿಗೆ ಮಂಜೂರಾತಿ ನೀಡಲಾಗುವುದು. ಆಯ್ಕೆಯಾದ ಗ್ರಾಹಕರು ಮುಂಗಡವಾಗಿ ಶೇ. 60 ರಷ್ಟು ಹಣ ಪಾವತಿಸಿ ಕಾಮಗಾರಿ ಆರಂಭಿಸಬಹುದು. ಘಟಕ ಸ್ಥಾಪನೆ ಮಾಡಿದ ನಂತರ ಐದು ವರ್ಷಗಳವರೆಗೆ ಉಚಿತವಾಗಿ ಘಟಕಗಳನ್ನು ಉಚಿತವಾಗಿ ನಿರ್ವಹಣೆ ಮಾಡಲಾಗುವುದು.
ಕಿಸಾನ್ ಕ್ರೆಡಿಟ್ ಕಾರ್ಡ್ ನವೀಕರಣ: ಡೈರಿ ರೈತರಿಗೆ 15 ಲಕ್ಷ ಮಂಜೂರು!
PM ಕಿಸಾನ್ ರೈತರಿಗೆ ಬಿಗ್ ನ್ಯೂಸ್: OTP ಮೂಲಕ ಆಧಾರ್ ಕಾರ್ಡ್ e-KYC ರದ್ದು..
ಸಹಾಯಧನಕ್ಕೆ ಅರ್ಜಿ ಸಲ್ಲಿಸುವುದು ಹೇಗೆ?
ಮೇಲ್ಛಾವಣಿಗೆ ಸೌರ ಫಲಕಗಳನ್ನು ಅಳವಡಿಸಲು ಇಚ್ಛಿಸುವವರು ತಮ್ಮ ಪ್ರಾದೇಶಿಕ ವಿದ್ಯುತ್ ವಿತರಣ ಕಂಪನಿಗಳು (ಡಿಸ್ಕಾಂ) ಅಥವಾ ವಿದ್ಯುತ್ ಕಚೇರಿಗಳನ್ನು ಸಂಪರ್ಕಿಸುವ ಮೂಲಕ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ವಿವರಗಳಿಗಾಗಿ, ಸಂಬಂಧಪಟ್ಟ ಡಿಸ್ಕಾಂಗಳನ್ನು ಸಂಪರ್ಕಿಸಿ ಅಥವಾ MNRE ನ Toll Free ಸಂಖ್ಯೆ 1800-180-3333 ಗೆ ಕರೆ ಮಾಡಿ ಮಾಹಿತಿ ಪಡೆಯಬಹುದು. ಅಲ್ಲದೆ, ಕಂಪನಿಯ Website : portal.mpcz.in ಗೆ ಭೇಟಿ ನೀಡಿ ಅಥವಾ ಟೋಲ್ ಫ್ರೀ ಸಂಖ್ಯೆ 1912 ಅನ್ನು ಸಂಪರ್ಕಿಸಿ.
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವುದು ಹೇಗೆ?
ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಗ್ರಾಹಕರು https://solarrooftop.gov.in/ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಕೇಂದ್ರ ಸರ್ಕಾರದ ಸೋಲಾರ್ ಘಟಕದ ವೆಬ್ ಪೇಜ್ ಓಪನ್ ಆಗುತ್ತದೆ. ಅಲ್ಲಿ ಅಪ್ಲೈ ಫಾರ್ ಸೋಲಾರ್ ರೂಫಿಂಗ್ ಮೇಲೆ ಕ್ಲಿಕ್ ಮಾಡಬೇಕು. ನಂತರ ನಿಮ್ಮ ರಾಜ್ಯದ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.ಅಲ್ಲಿ ಸೋಲಾರ್ ಗೃಹ ಯೋಜನೆಯ ಗೈಡ್ ಲೈನ್ಸ್ ಓದಿಕೊಳ್ಳಬೇಕು. ಎಷ್ಟು ವ್ಯಾಟ್ ದವರೆಗೆ ಎಷ್ಟು ಸಬ್ಸಿಡಿ ಸಿಗುತ್ತದೆ, ನೋಂದಣಿ ಶುಲ್ಕ ಸೇರಿದಂತೆ ಎಲ್ಲಾ ಮಾಹಿತಿ ಒದಿಕೊಂಡು ಕೆಳಗಡೆ ಓಕೆ ಮೇಲೆ ಕ್ಲಿಕ್ ಮಾಡಬೇಕು. ಆಗ ಅರ್ಜಿ ಓಪನ್ ಆಗುತ್ತದೆ. ಅಲ್ಲಿ ನಿಮ್ಮ ಕಂಸ್ಯೂಮರ್ ಐಡಿ ನಮೂದಿಸಿ ಫೆಟ್ಚ್ ಮೇಲೆ ಕ್ಲಿಕ್ ಮಾಡಿ ಅಗತ್ಯ ಮಾಹಿತಿಗಳನ್ನು ಭರ್ತಿ ಮಾಡಬೇಕು.
ಉಚಿತ ಸಹಾಯವಾಣಿ (Toll free number for solar panel)
ಸೌರಶಕ್ತಿ ಸಬ್ಸಿಡಿ ಯೋಜನೆಯಾಗಿ ನೀವು ಟೋಲ್ ಫ್ರಿ ನಂಬರ್ 1800 180 3333 ಕರೆ ಮಾಡಿ ಅಗತ್ಯ ಮಾಹಿತಿ ಪಡೆಯಬಹುದು ಅಥವಾ ನಿಮ್ಮ ಹತ್ತಿರದ ಕೆಇಬಿ ಕಚೇರಿಗೆ ಸಂಪರ್ಕಿಸಬಹುದು.
ರೈತರಿಗೆ ಗುಡ್ ನ್ಯೂಸ್: ಸರ್ಕಾರಿ ಭೂಮಿಯಲ್ಲಿ ಕೃಷಿ: ಕೃಷಿ ಆಕಾಂಕ್ಷಿಗಳಿಗೆ ವರದಾನ ಈ ಯೋಜನೆ
TAFE ನಿಂದ ವಿಶ್ವ ದರ್ಜೆಯ ಹೆವಿ ಟ್ರ್ಯಾಕ್ಟರ್ ಪರಿಚಯ!
ಹಣ ಗಳಿಕೆ ಹೇಗೆ?
ಮನೆಯ ಮೇಲ್ಛಾವಣಿಯಲ್ಲಿ ಸೌರ ಸ್ಥಾವರ ಸ್ಥಾಪಿಸುವ ಮೂಲಕ ವಿದ್ಯುತ್ನ್ನು ನೀವು ಮಾರಾಟ ಮಾಡಿ ಹಣ ಗಳಿಸಬಹುದು. ಸ್ಥಳೀಯ ವಿದ್ಯುತ್ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಳ್ಳುವ ಮೂಲಕ ನೀವು ವಿದ್ಯುತ್ ಮಾರಾಟ ಮಾಡಬಹುದು. ಇದಕ್ಕಾಗಿ ನೀವು ಸ್ಥಳೀಯ ವಿದ್ಯುತ್ ಕಂಪನಿಗಳಿಂದ ಪರವಾನಗಿ ಪಡೆಯಬೇಕಾಗುತ್ತದೆ.
ನಿರ್ವಹಣೆ ವೆಚ್ಚ ಕಡಿಮೆ
ಸೌರಶಕ್ತಿ ಫಲಕಗಳ ನಿರ್ವಹಣಾ ವೆಚ್ಚ ತುಂಬಾ ಕಡಿಮೆ ಇರುತ್ತದೆ. ಈ ಫಲಕಗಳ ಬ್ಯಾಟರಿಯನ್ನು ಹತ್ತು ವರ್ಷಗಳಿಗೊಮ್ಮೆ ಬದಲಾಯಿಸಬೇಕಾಗುತ್ತದೆ. ಇದರ ಬೆಲೆ ಸುಮಾರು 20 ಸಾವಿರ ರೂಪಾಯಿ ಇರುತ್ತದೆ. ಸೌರಶಕ್ತಿ ಫಲಕಗಳನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸುಲಭವಾಗಿ ಸಾಗಿಸಬಹುದು.
ಈ ಯೋಜನೆಯಲ್ಲಿ ಕೃಷಿ ಹೊಂಡ ನಿರ್ಮಾಣಕ್ಕೆ ಸಿಗಲಿದೆ ಬರೋಬ್ಬರಿ 37,500 ರೂ ಸಬ್ಸಿಡಿ
ಮಿನಿ ಟ್ರ್ಯಾಕ್ಟರ್, ಟಿಲ್ಲರ್ ಖರೀದಿಗೆ ಸಿಗಲಿದೆ ಬರೋಬ್ಬರಿ ಶೇ. 90 ರಷ್ಟು ಸಬ್ಸಿಡಿ..!
Share your comments