1. ಸುದ್ದಿಗಳು

ಸದ್ದು ಮಾಡುತ್ತಿರುವ The Kashmir Files ಸಿನಿಮಾ.. ರಾಜ್ಯ ಸರ್ಕಾರದಿಂದ ತೆರಿಗೆ ವಿನಾಯತಿ

KJ Staff
KJ Staff
The Kashmir Files! cinema makes huge sound! state governments giving the tax relief!

The Kashmir Files!

ಈಗಾಗಲೇ ಸಾಕಷ್ಟು ಗುಲ್ಲೆಬ್ಬಿಸಿರುವ  ''ದಿ ಕಾಶ್ಮೀರಿ ಫೈಲ್ಸ್'' ಸಿನಿಮಾ ಬಾಲಿವುಡ್(Bollywood) ಖಾನ್ ತ್ರಯರ ಮೌನದ ನಡುವೆಯೂ ಭರ್ಜರಿ ಕಲೆಕ್ಷನ್ ಮಾಡಿಕೊಳ್ಳುತ್ತಿದೆ . ವಿವೇಕ್ ಅಗ್ನಿಹೋತ್ರಿ(Vivek Agnihotri)ನಿರ್ದೇಶನ(Direction) ಮಾಡಿರುವ ಈ ಸಿನಿಮಾ  ಐತಿಹಾಸಿಕ್ ಘಟನೆಯನ್ನು ಮುಂದಿಟ್ಟುಕೊಂಡು ತೆರೆಗೆ ಬಂದ  ಕಾರಣ ಸಾಕಷ್ಟು ಪರ-ವಿರೋದ ಚರ್ಚೆಗೆ ಗುರಿಯಾಗಿದೆ.

ಇದನ್ನು ಓದಿರಿ:

Ukraine-russia war effect: ಅಡುಗೆ ಎಣ್ಣೆ ರಫ್ತಿನಲ್ಲಿ ಉಕ್ರೇನ್ ಪಾಲೇಷ್ಟು..?

ದಿ ಕಾಶ್ಮೀರ್ ಫೈಲ್ಸ್ (The Kashmir Files) ಸಿನಿಮಾದ ಮುಖ್ಯ ಉದ್ದೇಶ ಮನರಂಜನೆ ಅಲ್ಲವೇ ಅಲ್ಲ. ಕಾಶ್ಮೀರಿ ಪಂಡಿತರ  ಹತ್ಯೆ ಮತ್ತು ವಲಸೆ ಕುರಿತ ಘಟನೆಗಳನ್ನು ಆಧರಿಸಿ ತಯಾರಾದ ಈ ಸಿನಿಮಾದಲ್ಲಿ ಪ್ರೇಕ್ಷಕರು ವಾವ್ ಎನ್ನುವಂತಹ ಅಂಶಗಳು ಸಿಗುವುದಿಲ್ಲ. ಬದಲಿಗೆ, ಶಾಕಿಂಗ್ ಎನಿಸುವಂತಹ ಸಂಗತಿಗಳನ್ನು ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ತೆರೆದಿಟ್ಟಿದ್ದಾರೆ. ಕಾಶ್ಮೀರದ ಬಗೆಗೆ ಇರುವ ಎರಡು ಬೇರೆ-ಬೇರೆ ದೃಷ್ಟಿಕೋನಗಳನ್ನು ಜನರ ಮುಂದಿಟ್ಟಿದ್ದಾರೆ.

ಇದನ್ನು ಓದಿರಿ:

ಭೂ ಒತ್ತುವರಿ..ಭೂ ಕಬಳಿಕೆ; ಗೊಂದಲ ಬೇಡ..ಯಾಮಾರಿದ್ರೆ ಬೀಳುತ್ತೆ ದಂಡ..!

Ukraine-russia war effect: ಅಡುಗೆ ಎಣ್ಣೆ ರಫ್ತಿನಲ್ಲಿ ಉಕ್ರೇನ್ ಪಾಲೇಷ್ಟು..?

ಪ್ರತಿ ಐತಿಹಾಸಿಕ ಘಟನೆಗೂ ಹಲವು ಆಯಾಮಗಳು ಇರುತ್ತವೆ. ಆ ಇತಿಹಾಸವನ್ನು ಯಾರು ಬರೆದರು ಎಂಬುದರ ಮೇಲೆ ಅದರ ಆಯಾಮ ನಿರ್ಧಾರ ಆಗುತ್ತದೆ. ಕಾಶ್ಮೀರಿ ಪಂಡಿತರ ಹತ್ಯೆ ಮತ್ತು ವಲಸೆ ಕುರಿತಂತೆ ಈಗಾಗಲೇ ಹಲವು ಮಾಹಿತಿಗಳು ಲಭ್ಯವಿದೆ. ಆದರೆ ‘ದಿ ಕಾಶ್ಮೀರ್ ಫೈಲ್ಸ್ಸಿನಿಮಾದಲ್ಲಿ ಕಾಶ್ಮೀರಿ ಪಂಡಿತರ ದೃಷ್ಟಿಕೋನದ ಮೂಲಕ ಘಟನೆಗಳನ್ನು ವಿವರಿಸುವ ಪ್ರಯತ್ನ ಮಾಡಲಾಗಿದೆ.

1990ರ ಸಮಯದಲ್ಲಿ ಕಾಶ್ಮೀರದಲ್ಲಿನ ಭಯೋತ್ಪಾದಕರ ಹಿಂಸೆಗೆ ನಲುಗಿ ಪ್ರಾಣ ಕಳೆದುಕೊಂಡ ಒಂದು ಕುಟುಂಬದ ಕಥೆಯನ್ನು ಜನರ ಮುಂದೆ ಇಡಲಾಗಿದೆ. ಅಂತಿಮವಾಗಿ ಹಿಂದೂ ಕುಟುಂಬಗಳ ಪರಿಸ್ಥಿತಿ ಏನಾಯಿತು? ಅಂದಿನ ಸರ್ಕಾರ ಎಡವಿದ್ದು ಎಲ್ಲಿ? ಅಧಿಕಾರಿಗಳು ಮತ್ತು ಪತ್ರಕರ್ತರ ಕೈ ಯಾಕೆ ಕಟ್ಟಿಹೋಯಿತು? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ದೊರಕಿಸಲು ‘ದಿ ಕಾಶ್ಮೀರ್ ಫೈಲ್ಸ್ಸಿನಿಮಾ ಪ್ರಯತ್ನಿಸಿದೆ.

ಮೇಲ್ನೋಟಕ್ಕೆ ‘ದಿ ಕಾಶ್ಮೀರ್ ಫೈಲ್ಸ್ಸಿನಿಮಾದಲ್ಲಿ ಎರಡು ಆಯಾಮದ ನಿರೂಪಣೆ ಇದೆ ಎನಿಸಿದಂತೆ ಭಾಸವಾದರೂ ಕೂಡ ಅಂತಿಮವಾಗಿ ನಿರ್ದೇಶಕರು ತಮ್ಮ ನಿಲುವು ಯಾವುದರ ಪರ ಇದೆ ಎಂಬುದನ್ನು ಎಲ್ಲ ದೃಶ್ಯದಲ್ಲೂ ರುಜುವಾತು ಮಾಡಿದ್ದಾರೆ.

ಇದನ್ನು ಓದಿರಿ:

Agriculture loan: ಯಾವುದೇ ಭದ್ರತೆ ಇಲ್ಲದೆ ಲಕ್ಷ ಲಕ್ಷ ಕೃಷಿ ಸಾಲ..! ಇದು ಇವರಿಗೆ ಮಾತ್ರ ಅನ್ವಯ..

SBI Annuity deposit scheme! ನೀವು Deposit ಮಾಡಿದಂತ ಹಣಕ್ಕೆ ದೊಡ್ಡ ಲಾಭ ಸಿಗಲಿದೆ! ಅದು ಕೂಡ ಪ್ರತಿ ತಿಂಗಳು!

ಮನುಷ್ಯನ ಇತಿಹಾಸದಲ್ಲಿ ಅನೇಕ ಕೆಟ್ಟ ಘಟನೆಗಳಿವೆ. ಅದರಲ್ಲಿ ಯಾರದ್ದು ಸರಿ, ಯಾರದ್ದು ತಪ್ಪು ಎಂಬುದರ ಚರ್ಚೆಗೆ ಅಂತ್ಯವಿಲ್ಲ. ಪ್ರತಿ ಘಟನೆಯಲ್ಲೂ ಎರಡೂ ಕಡೆಯವರು ತಮ್ಮ ನಿಲುವನ್ನು ಸಮರ್ಥಿಸಿಕೊಳ್ಳುತ್ತಾರೆ. ವಸ್ತುನಿಷ್ಠವಾಗಿ ನೋಡಿ ದಾಖಲಿಸಬೇಕಾದ ಮಾಧ್ಯಮದವರು, ಇತಿಹಾಸಕಾರರು, ಅಧಿಕಾರಿಗಳು, ಲೇಖಕರು ಮುಂತಾದವರು ಕೆಲವೊಮ್ಮೆ ಮೌನಕ್ಕೆ ಜಾರುತ್ತಾರೆ.

ಈ ಸಿನಿಮಾದಲ್ಲಿ ಅನುಪಮ್ ಖೇರ್, ಪ್ರಕಾಶ್ ಬೆಳವಾಡಿ, ಮಿಥುನ್ ಚಕ್ರವರ್ತಿ, ಪುನೀತ್ ಇಸಾರ್ ಅವರಂತಹ ಅನುಭವಿ ಕಲಾವಿದರು ಬಣ್ಣ ಹಚ್ಚಿದ್ದಾರೆ. ಎಲ್ಲರೂ ಕೂಡ ಅವರವರ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಪಲ್ಲವಿ ಜೋಶಿ, ದರ್ಶನ್ ಕುಮಾರ್ ಅಭಿನಯ ಗಮನ ಸೆಳೆಯುತ್ತದೆ.

ಇನ್ನಷ್ಟು ಓದಿರಿ:

ಮಾ ೨೧ರಿಂದ ಮತ್ತೆ ಶುರುವಾಗಲಿದೆ ರೈತರ ಪ್ರತಿಭಟನೆ.. ಕಾರಣವೇನು ..?

Gold Price BIG UPDATE! ಚಿನ್ನದ ಬೆಲೆ 2786 ರೂ. ಕಡಿಮೆಯಾಗಿದೆ! ಈಗಲೇ ಹೋಗಿ ಖರೀದಿ ಮಾಡಿ!

Published On: 15 March 2022, 05:22 PM English Summary: The Kashmir Files! cinema makes huge sound! state governments giving the tax relief!

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.